ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟಿಪ್ಪು ಜಯಂತಿ ವಿರೋಧಿಸಿ ಮೆರವಣಿಗೆ: ಕಾರ್ಯಕರ್ತರ ಬಂಧನ

By ಎಸ್.ವೀರಭದ್ರಸ್ವಾಮಿ ‌
|
Google Oneindia Kannada News

ಚಾಮರಾಜನಗರ, ನವೆಂಬರ್, 8: ಟಿಪ್ಪು ಜಯಂತಿ ಆಚರಣೆ ಮಾಡವುದನ್ನು ವಿರೋಧಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದ ಬಿಜೆಪಿ ಮತ್ತು ಆರ್ ಎಸ್ ಎಸ್ ಕಾರ್ಯಕರ್ತರನ್ನು ಚಾಮರಾಜನಗರದಲ್ಲಿ ಬಂಧಿಸಲಾಗಿದೆ.

ಚಾಮರಾಜನಗರದ ಪ್ರಮುಖ ವೃತ್ತಗಳಲ್ಲಿ ಪಕ್ಷದ ನಾಯಕರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು. ಚಾಮರಾಜೇಶ್ವರ ದೇವಾಲಯದ ಮುಂಭಾಗ ಮೆರವಣಿಗೆ ಆರಂಭಿಸಿದ ಕಾರ್ಯಕರ್ತರನ್ನು ಪೊಲೀಸರು ತಡೆದು ಬಂದಿಸಿದರು.

Anti Tippu protesters arrestes in Chamarajnagar

ನಗರದ ಪ್ರಮುಖ ವೃತ್ತಗಳಲ್ಲಿ ಟಿಪ್ಪು ಜಯಂತಿಗೆ ವಿರೋಧ ವ್ಯಕ್ತಪಡಿಸಿ ಧಿಕ್ಕಾರ ಕೂಗಿದ ಹಲವು ಕಾರ್ಯಕರ್ತರನ್ನೂ ಪೊಲೀಸರು ಬಂಧಿಸಿದರು.

ಮತ್ತೊಂದೆಡೆ ಜಿಲ್ಲಾಡಳಿತ ಭವನದಲ್ಲಿ ಹಿಂದೂ ಜಾಗೃತಿ ವೇದೆಕೆ ರಾಜ್ಯ ಸಂಚಾಲಕ ಉಲ್ಲಾಸ್ ಕಾರಂತ್ ಮಾತನಾಡಿ ಮುಸಲ್ಮಾನರೇ ಜಯಂತಿ ವಿರೋದಿಸುತ್ತಿರುವಾಗ ಅವಿವೇಕಿ ಮುಖ್ಯಮಂತ್ರಿ ಯಾಕೆ ಅರ್ಥ ಮಾಡಿಕೊಳ್ಳುತ್ತಿಲ್ಲ. ಓಟ್ ಬ್ಯಾಂಕ್ ಗೆ ಇವರನ್ನೆ ಇವರೆ ಮಾರಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

Anti Tippu protesters arrestes in Chamarajnagar

ಟಿಪ್ಪು ಜಯಂತಿಗೆ ಆಚರಣೆಗೆ ಅವಕಾಶ ಕಲ್ಪಿಸಬಾರದು ಎಂದು ಜಿಲ್ಲಾಧಿಕಾರಿ ಕಚೇರಿಗೆ ಮನವಿಪತ್ರ ಸಲ್ಲಿಸಲು ಕಾರ್ಯಕರ್ತರು ಮುಂದಾದರು ಆದರೆ ಜಿಲ್ಲಾಧಿಕಾರಿಯವರು ಮನವಿಪತ್ರ ಸ್ವೀಕರಿಲಸು ಮುಂದೆ ಬಾರದಿದ್ದರಿಂದ
ಕಚೇರಿಗೆ ಮುತ್ತಿಗೆ ಹಾಕಲು ಕಾರ್ಯಕರ್ತರು ಯತ್ನಿಸಿದರು.

Anti Tippu protesters arrestes in Chamarajnagar

ನಂತರ ಜಿಲ್ಲಾಧಿಕಾರಿಯವರು ಬಂದು ಪ್ರತಿಭಟನಕಾರರ ಮನವಿ ಪತ್ರ ಸ್ವೀಕರಿಸಿ ರಾಷ್ಟ್ರಪತಿಗೆ ಕಳುಹಿಸಿಕೊಡಲಾಗುವುದು ಎಂದು ಹೇಳಿ ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಿದರು.

English summary
Police took all over a hundred workers of BJP and RSS in Chamarajnagar. For condemning the government's decision to celebrate Tipu's birth anniversary in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X