• search
  • Live TV
ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅನಿಲ್ ಕುಮಾರ್‌ ಸಾವಿಗೆ ಹೃದಯಾಘಾತ ಕಾರಣ, ಆಕ್ಸಿಜನ್ ಕೊರತೆ ಇಲ್ಲ: ಚಾರುಲತಾ ಸೋಮಲ್

By ಚಾಮರಾಜನಗರ ಪ್ರತಿನಿಧಿ
|
Google Oneindia Kannada News

ಚಾಮರಾಜನಗರ, ಸೆಪ್ಟೆಂಬರ್‌, 20: ಪ್ರಮುಖ ಯಾತ್ರಸ್ಥಳವಾದ ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಬಂದಿದ್ದ ಚಿತ್ರದುರ್ಗ ಜಿಲ್ಲೆಯ ಅನಿಲ್‌ ಕುಮಾರ್‌ ಸೂಕ್ತ ಚಿಕಿತ್ಸೆ ಸಿಗದೇ ಮೃತಪಟ್ಟಿದ್ದಾನೆ ಎನ್ನುವ ಆರೋಪ ಕೇಳಿಬಂದಿತ್ತು. ಆದರೆ ಇದೀಗ ಚಿತ್ರದುರ್ಗ ಜಿಲ್ಲೆಯ 32 ವರ್ಷದ ಅನಿಲ್ ಕುಮಾರ್‌ ಅವರ ಸಾವಿಗೆ ಹೃದಯಾಘಾತವೇ ಕಾರಣ. ತುರ್ತು ವಾಹನದ ಆಕ್ಸಿಜನ್ ಕೊರತೆಯಲ್ಲ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಸ್ಪಷ್ಟನೆ
ಉಸಿರಾಟದ ತೊಂದರೆ, ಅತಿಯಾದ ಬೆವರುವಿಕೆ, ಕೈ ಕಾಲುಗಳು ತಣ್ಣಾಗದ ಸ್ಥಿತಿಯಲ್ಲಿ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕು ಬಸವನಪುರ ಗ್ರಾಮದ ಅನಿಲ್ ಕುಮಾರ್‌ ಅವರನ್ನು ತುರ್ತು ಚಿಕಿತ್ಸೆಗಾಗಿ ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿನ್ನೆ ಮಧ್ಯಾಹ್ನ ಸುಮಾರು 3:27ರ ಸುಮಾರಿಗೆ ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಗೆ ಕರೆತರಲಾಗಿತ್ತು. ಕೂಡಲೇ ಇವರಿಗೆ ತುರ್ತು ಘಟಕದಲ್ಲಿ ಇಸಿಜಿ ಹಾಗೂ ವೈದ್ಯಕೀಯ ಪ್ರಮುಖ ಚಿಕಿತ್ಸೆಗಳನ್ನು ಮಾಡಲಾಗಿತ್ತು. ಅವರ ಆರೋಗ್ಯವನ್ನು ಪರೀಕ್ಷಿಸಿ ಆಸ್ಪತ್ರೆಯಲ್ಲಿಯೇ ದಾಖಲು ಮಾಡಲಾಯಿತು. ಮತ್ತು ಇಸಿಜಿಯಲ್ಲಿ ಹೃದಯಾಘಾತ ಆಗಿರುವುದು ದೃಢಪಟ್ಟಿರುತ್ತದೆ. ನಂತರ ಎಲ್ಲಾ ಬಗೆಯ ತುರ್ತು ಔಷಧಗಳನ್ನು ಕೂಡಲೇ ನೀಡಲಾಗಿದೆ. ಕೃತಕ ಉಸಿರಾಟಕ್ಕೆ ಆಕ್ಸಿಜನ್ ವ್ಯವಸ್ಥೆಯನ್ನು ಮಾಡಿದ್ದಾರೆ.

ಮಲೆ ಮಹದೇಶ್ವರ ಬೆಟ್ಟಕ್ಕೆ ಭಾರಿ ವಾಹನಗಳ ಸಂಚಾರಕ್ಕೆ ನಿರ್ಬಂಧಮಲೆ ಮಹದೇಶ್ವರ ಬೆಟ್ಟಕ್ಕೆ ಭಾರಿ ವಾಹನಗಳ ಸಂಚಾರಕ್ಕೆ ನಿರ್ಬಂಧ

ತಕ್ಷಣ ಅವರೊಂದಿಗೆ ಬಂದಿದ್ದವರಿಗೆ ರೋಗಿಯ ಗಂಭೀರ ಸ್ಥಿತಿಯ ಬಗ್ಗೆ ವಿವರವಾಗಿ ತಿಳಿಸಿದ್ದು, ಉನ್ನತ ಆಸ್ಪತ್ರೆಗೆ ಕರೆದೊಯ್ಯಲು ತಿಳಿಸಲಾಯಿತು. ರೋಗಿಯ ಸಂಬಂಧಿಕರ ಒಪ್ಪಿಗೆ ಪಡೆದು ಆಸ್ಪತ್ರೆಯ ತುರ್ತು ವಾಹನದಲ್ಲಿ ಆಕ್ಸಿಜನ್ ಸಮೇತವಾಗಿ ಒಬ್ಬ ವೈದ್ಯಕೀಯ ಸಿಬ್ಬಂದಿ ಜೊತೆ ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೆ ಹೋಗಲು ವ್ಯವಸ್ಥೆ ಮಾಡಿಕೊಡಲಾಯಿತು. ಸರಿ ಸುಮಾರು 4 ಗಂಟೆಯ ವೇಳೆಗೆ ತುರ್ತು ವಾಹನ ಸಿಬ್ಬಂದಿಯು ರೋಗಿಯ ಬಿಪಿ ನಾಡಿ ಮಿಡಿತ ಪರೀಕ್ಷಿಸಿದ್ದು, ಸಹಜ ಉಸಿರಾಟ ಇಲ್ಲವೆಂದು ವಾಪಾಸ್ ಕರೆದುಕೊಂಡು ಬಂದಿದ್ದಾರೆ. ನಂತರ ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕಕ್ಕೆ ಕಳುಹಿಸಿ ವೈದ್ಯಕೀಯ ನಿಯಮದ ಪ್ರಕಾರ ತಕ್ಷಣ ಸಿಪಿಆರ್ ಚಿಕಿತ್ಸೆ ಆರಂಭಿಸಿದ್ದಾರೆ. ಅಲ್ಲಿ ಆಕ್ಸಿಜನ್ ಹಾಗೂ ಎಲ್ಲ ಅವಶ್ಯಕ ಔಷಧಗಳನ್ನು ಕೊಡಲಾಗಿದೆ.

ರೋಗಿಯ ಪ್ರಾಣ ಉಳಿಸಲು ಎಲ್ಲಾ ಪ್ರಯತ್ನವನ್ನು ವೈದ್ಯರು, ಸಿಬ್ಬಂದಿ ಮಾಡಿದ್ದಾರೆ. ಆದರೂ ಎಲ್ಲಾ ಪ್ರಯತ್ನಗಳ ನಂತರವೂ ರೋಗಿಯ ಉಸಿರಾಟ ಮತ್ತು ಹೃದಯ ಬಡಿತ ಸಹಜ ಸ್ಥಿತಿಗೆ ಮರಳಿರುವುದಿಲ್ಲ. ಕೊನೆಯದಾಗಿ ಇಸಿಜಿ ಮಾಡಲಾಗಿದ್ದು, ಅದರಲ್ಲಿ ರೋಗಿಯ ಹೃದಯಬಡಿತ ಸಂಪೂರ್ಣ ಸ್ತಬ್ಧವಾಗಿರುವುದು ದೃಢಪಟ್ಟಿತ್ತು. ಸಂಜೆ 4.30ರ ವೇಳೆಗೆ ರೋಗಿಯ ಸಾವಿಗೆ ಕಾರಣ ಹೃದಯಾಘಾತವೆಂದು ತಿಳಿಸಿ ಅವರ ಸಂಬಂಧಿಕರಿಗೆ ಮೃತ ದೇಹವನ್ನು ಹಸ್ತಾಂತರ ಮಾಡಲಾಯಿತು. ತುರ್ತು ವಾಹನದಲ್ಲಿ ಆಕ್ಸಿಜನ್ ಸಮೇತವಾಗಿ ಚಿಕಿತ್ಸೆ ನೀಡಲಾಗಿದೆ. ರೋಗಿಯ ಸಾವಿಗೆ ಕಾರಣ ಹೃದಯಾಘಾತವೇ ಹೊರತು, ತುರ್ತು ವಾಹನದ ಆಕ್ಸಿಜನ್ ಕೊರತೆಯಿಂದ ಅಲ್ಲವೆಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚಾಮರಾಜನಗರದ ಕಾಡುಗಳ ಅಂದಕ್ಕೆ ಚಂದಕ್ಕೆ ಮನಸೋತಿದ್ದ ಉಮೇಶ್‌ ಕತ್ತಿಚಾಮರಾಜನಗರದ ಕಾಡುಗಳ ಅಂದಕ್ಕೆ ಚಂದಕ್ಕೆ ಮನಸೋತಿದ್ದ ಉಮೇಶ್‌ ಕತ್ತಿ

ಅನಿಲ್‌ ಕುಟುಂಬಸ್ಥರ ಆರೋಪ ಏನು?
ಚಿತ್ರದುರ್ಗ ಮೂಲದ ಅನಿಲ್ (32) ಮೃತಪಟ್ಟ ಯುವಕನಾಗಿದ್ದಾನೆ. ಅನಿಲ್ ಮತ್ತು ಕುಟುಂಬದವರು ನಿನ್ನೆ ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳಿದ್ದು, ದರ್ಶನ ಮುಗಿಸಿ ವಾಪಸ್ ಹಿಂತಿರುಗುವಾಗ ಅನಿಲ್‌ಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಕೂಡಲೇ ಅನಿಲ್‌ನನ್ನು ಆ್ಯಂಬುಲೆನ್ಸ್‌ನಲ್ಲಿ ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಗೆ ಕರೆತಂದಿದ್ದು, ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಗದ ಕಾರಣ ವೈದ್ಯರು ಪ್ರಥಮ ಚಿಕಿತ್ಸೆ ನೀಡಿದ್ದಾರೆ. ನಂತರ ಮೈಸೂರಿನ ಜಯದೇವ ಆಸ್ಪತ್ರೆಗೆ ಕಳುಹಿಸಲು ಪ್ರಯತ್ನಿಸುತ್ತಿದ್ದಾಗ ಅನಿಲ್ ಅಸುನೀಗಿದರು ಎಂದು ಅನಿಲ್ ಪತ್ನಿ ಮತ್ತು ಕುಟುಂಬಸ್ಥರು ಆರೋಪಿಸಿದ್ದರು.

Anil Kumar of Chitradurga district died due to heart attack; Charulata Somal

ನಿನ್ನೆ ವೈದ್ಯಾಧಿಕಾರಿ ನೀಡಿದ ಸ್ಪಷ್ಟನೆ
ಚಿಕಿತ್ಸೆ ಸಿಗದೇ ಯುವಕ ಮೃತಪಟ್ಟಿದ್ದಾನೆ ಎಂಬ ಆರೋಪವನ್ನು ಆಸ್ಪತ್ರೆ ವೈದ್ಯಾಧಿಕಾರಿ ಡಾ.ಮಂಜುನಾಥ್ ಅಲ್ಲಗಳೆದಿದ್ದರು. ಕಾರ್ಡಿಯಕಾರೆಸ್ಟ್ ಆಗಿದೆ. ಆಕ್ಸಿಜನ್ ಕೊಟ್ಟು ಮೈಸೂರಿಗೆ ಕಳುಹಿಸುವ ಸಂದರ್ಭದಲ್ಲಿ ಹೃದಯಾಘಾತ ಆಗಿದ್ದು, ಮತ್ತೆ ಒಳಗೆ ಕರೆದು ಚಿಕಿತ್ಸೆ ನೀಡಿದರೂ ಪ್ರಯೋಜನ ಆಗಲಿಲ್ಲ. ಯುವಕನ ಸಾವಿಗೆ ಆಕ್ಸಿಜನ್ ಕೊರತೆ ಕಾರಣವಲ್ಲ ಎಂದಿದ್ದರು. ಇದೀಗ ಚಾಮರಾಜನಗರ ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ ಅವರು ಪ್ರಕಟಣೆ ಹೊರಡಿಸಿದ್ದು, ತುರ್ತು ವಾಹನದಲ್ಲಿ ಆಕ್ಸಿಜನ್ ಸಮೇತವಾಗಿ ಚಿಕಿತ್ಸೆ ನೀಡಲಾಗಿದೆ. ರೋಗಿಯ ಸಾವಿಗೆ ಕಾರಣ ಹೃದಯಾಘಾತವೇ ಹೊರತು, ತುರ್ತು ವಾಹನದ ಆಕ್ಸಿಜನ್ ಕೊರತೆಯಿಂದ ಅಲ್ಲವೆಂದು ತಿಳಿಸುವ ಮೂಲಕ ಗೊಂದಲಕ್ಕೆ ತೆರೆ ಎಳೆದಿದ್ದಾರೆ.

English summary
Anil Kumar died due to heart attack. District Commissioner Charulata Somal in announcement the death was not due to lack of oxygen in emergency vehicle. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X