• search
 • Live TV
ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಿಚ್‌ಗುತ್ ಮಾರಮ್ಮ ದೇವಸ್ಥಾನ ಅ. 20 ರಿಂದ ಆರಂಭ!

|

ಬೆಂಗಳೂರು, ಅ. 08: ಇಡಿ ದೇಶವನ್ನೆ ಬೆಚ್ಚಿ ಬೀಳಿಸಿದ್ದ ಸುಳ್ವಾಡಿ ವಿಷ ಪ್ರಸಾದ ದುರಂತದ ಕೇಂದ್ರ ಬಿಂದು ಕಿಚ್‌ಗುತ್ ಮಾರಮ್ಮ ದೇಗುಲ ತೆರೆಯಲು ದಿನಗಣನೆ ಶುರುವಾಗಿದೆ. 22 ತಿಂಗಳುಗಳ ಬಳಿಕ ಭಕ್ತಿಗರಿಗೆ ಕಿಚ್‌ಗುತ್‌ ಮಾರಮ್ಮ ದರ್ಶನ ನೀಡಲಿದ್ದಾಳೆ. ವಿಷ ಪ್ರಸಾದ ದುರಂತದ ಹಿನ್ನಲೆಯಲ್ಲಿ ಮಾರಮ್ಮ ದೇವಸ್ಥಾನವನ್ನು ರಾಜ್ಯ ಸರ್ಕಾರ ಬಂದ್ ಮಾಡಿತ್ತು.

ಕಳೆದ 2018ರ ಡಿಸೆಂಬರ್ 14 ರಂದು ನಡೆದಿದ್ದ ವಿಷ ಪ್ರಸಾದ ಪ್ರಕರಣದಿಂದ ದೇವಸ್ಥಾನವನ್ನು ಮುಚ್ಚಲಾಗಿತ್ತು. ಅವತ್ತು ದೇಗುಲದಲ್ಲಿ ನೀಡಿದ್ದ ಪ್ರಸಾದವನ್ನು ತಿಂದು 17 ಜನ ಸಾವಿಗಿಡಾಗಿದ್ದರೆ, 125 ಕ್ಕೂ ಹೆಚ್ಚು ಜನ ಅಸ್ವಸ್ಥ ಗೊಂಡು ಸಾವಿನ ದವಡೆಯಿಂದ ಪಾರಾಗಿದ್ದರು.

ಬಾಗಿಲು ಮುಚ್ಚಿದ್ದ ಸುಳ್ವಾಡಿ ಮಾರಮ್ಮನ ದೇಗುಲದಲ್ಲೂ ಆದಾಯ

ಅಂದು ಮುಚ್ಚಿದ್ದ ದೇವಸ್ಥಾನದ ಬಾಗಿಲನ್ನು ಇದೇ ತಿಂಗಳ 20 ರಂದು ತೆರೆಯಲು ಸರ್ಕಾರದ ಸೂಚನೆ ಹಿನ್ನಲೆಯಲ್ಲಿ ಸೀಲ್‌ನ್ನು ಕಂದಾಯ ಇಲಾಖೆ ಅಧಿಕಾರಿಗಳು ತೆರೆದಿದ್ದಾರೆ. ಹೀಗಾಗಿ ಸ್ಥಳೀಯರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ದೇವಸ್ಥಾನದ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಕಳೆದ ವಿಧಾನ ಸಭಾ ಅಧಿವೇಶನದಲ್ಲಿ ಸ್ಥಳೀಯ ಶಾಸಕ ಆರ್ ನರೇಂದ್ರ ಅವರು ದೇಗುಲತೆರೆಯುವ ಕುರಿತು ಸರ್ಕಾರವನ್ನು ಒತ್ತಾಯಿಸಿದ್ದರು.

   Political Popcorn with Lavanya : Satish Jarkiholi, ರಾಗಿ ಮುದ್ದೆ ಗು ಸೈ ಜೋಳದ ರೊಟ್ಟಿಗೆ ಜೈ | part 02

   ಶಾಸಕರ ಪ್ರಶ್ನೆಗೆ ಉತ್ತರಿಸಿದ್ದ ಮುಜರಾಯಿ ಸಚಿವರು ಆಗಮಿಕರನ್ನು ನೇಮಕ ಮಾಡಿಕೊಂಡಿದ್ದು ಅಕ್ಟೋಬರ್ 20 ರ ಬಳಿಕ ನಿರ್ಬಂದ ತೆರವು ಗೊಳಿಸಲಾಗುತ್ತದೆ ಎಂದಿದ್ದರು. ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಸುಳ್ವಾಡಿಯಲ್ಲಿ ಕಿಚ್‌ಗುತ್ ಮಾರಮ್ಮ ದೇವಸ್ಥಾನವಿದೆ.

   English summary
   The day has begun to open the Kichchugutti Maramma Temple, the focal point of the Sulwadi poisoning tragedy that has rocked the entire country. After 22 months, Kichchugutti Maramma will offer Darshana to devotees. The Maramma Temple was built by the state government in the wake of the poisonous tragedy.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X