ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಂಡೀಪುರದಲ್ಲಿ "ಮ್ಯಾನ್ v/s ವೈಲ್ಡ್‌" ಚಿತ್ರೀಕರಣ; ಪರಿಸರ ಜಾಗೃತಿ ಮೂಡಿಸಲಿದ್ದಾರೆ ರಜನಿಕಾಂತ್

|
Google Oneindia Kannada News

ಚಾಮರಾಜನಗರ, ಜನವರಿ 29: ಸೂಪರ್ ಸ್ಟಾರ್ ರಜನಿಕಾಂತ್ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮೂಲೆಹೊಳೆ ವಲಯದಲ್ಲಿ ಹೆಸರಾಂತ ವನ್ಯಜೀವಿ ಸಾಕ್ಷ್ಯಚಿತ್ರ ನಿರ್ದೇಶಕ ಬೇರ್ ಗ್ರಿಲ್ಸ್ ನಿರ್ದೇಶನದಲ್ಲಿ ನಡೆದ "ಮ್ಯಾನ್ ವರ್ಸಸ್ ವೈಲ್ಡ್" ಸಾಹಸಮಯ ಸಾಕ್ಷ್ಯಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು.

ಪುತ್ರಿ ಸೌಂದರ್ಯ ಅವರೊಂದಿಗೆ ರಜನಿಕಾಂತ್ ಚಿತ್ರೀಕರಣಕ್ಕೆ ಆಗಮಿಸಿದ್ದರು. ಬೆಂಗಳೂರಿನಿಂದ ಗುಂಡ್ಲುಪೇಟೆಗೆ ಹೆಲಿಕಾಪ್ಟರ್ ನಲ್ಲಿ ಮ್ಯಾನ್ ವರ್ಸಸ್ ವೈಲ್ಡ್ ನಿರ್ದೇಶಕ ಬೇರ್ ಗ್ರಿಲ್ಸ್ ಬಂದಿಳಿದರು. ಬಳಿಕ ಚಿತ್ರೀಕರಣಕ್ಕೆ ನಿರ್ಧರಿಸಿದ್ದ ಬಂಡೀಪುರ ಅರಣ್ಯ ಮೂಲೆಹೊಳೆ ರೇಂಜ್ ಗೆ ನಟ ರಜನಿಕಾಂತ್, ಬೇರ್ ಗ್ರಿಲ್ಸ್ ಅವರನ್ನು ಕರೆದೊಯ್ಯಲಾಯಿತು.

'ಮ್ಯಾನ್ ವರ್ಸಸ್ ವೈಲ್ಡ್' ಚಿತ್ರೀಕರಣ ಮುಗಿಸಿ ರಜನಿ ವಾಪಸ್'ಮ್ಯಾನ್ ವರ್ಸಸ್ ವೈಲ್ಡ್' ಚಿತ್ರೀಕರಣ ಮುಗಿಸಿ ರಜನಿ ವಾಪಸ್

ಈ ನಡುವೆ ಬಂಡೀಪುರದಲ್ಲಿ ಲಂಟಾನಾ ಬೆಳೆದಿರುವುದರಿಂದ ಇಲ್ಲಿ ಡಿಸ್ಕವರಿ ಚಾನಲ್‌ರವರು ರಜನೀಕಾಂತ್ ಅವರ ಸಾಹಸಮಯ ದೃಶ್ಯವನ್ನು ಚಿತ್ರೀಕರಿಸುತ್ತಿದ್ದ ವೇಳೆ ಆಯತಪ್ಪಿ ಬಿದ್ದಿದ್ದರು ಎಂದು ತಿಳಿದುಬಂದಿದೆ. ಹೀಗಾಗಿ ಸಂಜೆ ಅರಣ್ಯದಿಂದ ಹೊರಗೆ ಬಂದ ಅವರು ಸಮೀಪದ ಸರಾಯ್ ರೆಸಾರ್ಟ್‌ಗೆ ತೆರಳಿ ವಿಶ್ರಾಂತಿ ಪಡೆದುಕೊಂಡಿದ್ದಾರೆ. ನಂತರ ಚೆನ್ನೈಗೆ ತೆರಳಿದ್ದಾರೆ.

 ಲಂಟಾನ ಕಡ್ಡಿ ಬಡಿದು ರಜನಿಕಾಂತ್ ಗೆ ಗಾಯ

ಲಂಟಾನ ಕಡ್ಡಿ ಬಡಿದು ರಜನಿಕಾಂತ್ ಗೆ ಗಾಯ

ಉರಿ ಬಿಸಿಲಿನಿಂದ ಬಂಡೀಪುರ ಸೇರಿದಂತೆ ಎಲ್ಲಾ ಅರಣ್ಯ ಪ್ರದೇಶ ಬರಡಾಗಿದ್ದು, ಲಂಟಾನಾ ಪೊದೆಗಳು ಸಂಪೂರ್ಣ ಒಣಗಿ ನಿಂತಿವೆ. ಇವುಗಳನ್ನು ಸೀಳಿಕೊಂಡು ಬರುವ ದೃಶ್ಯದ ಚಿತ್ರೀಕರಣದ ವೇಳೆ ರಜನಿಕಾಂತ್ ಅವರ ಬಲ ತೋಳಿಗೆ ಲಂಟಾನದ ಕಡ್ಡಿ ಬಡಿದಿದೆ. ಪರಿಣಾಮ ತೋಳಿಗೆ ಸಣ್ಣದಾಗಿ ಗಾಯಗಳಾಗಿವೆ.

ಹತ್ತಾರು ಕ್ಯಾಮರಾಮನ್ ಗಳು, ಸಹಾಯಕರು ಹಾಗೂ ನೂರಾರು ಮಂದಿ ಎಸ್ಟಿಪಿಎಫ್ ಸಿಬ್ಬಂದಿ (ಸ್ಪೆಷಲ್ ಟೈಗರ್ ಪ್ರೊಟೆಕ್ಷನ್ ಫೋರ್ಸ್) ಭದ್ರತೆಯಲ್ಲಿ ಚಿತ್ರೀಕರಣ ಮಾಡಲಾಯಿತು. ಬೆಳಿಗ್ಗೆಯಿಂದ ಸಂಜೆ 4 ಗಂಟೆಯವರೆಗೂ ಚಮ್ಮನಹಳ್ಳಿ ಎಪಿಸಿ ಬಳಿಯಿಂದ ಹೆಬ್ಬಳ್ಳ ಹಾಗೂ ಟೈಗರ್ ರಸ್ತೆ ವಿವಿಧೆಡೆ ಚಿತ್ರೀಕರಣ ನಡೆಯಿತು.

 ತಂದೆ ಅಭಿಯನವನ್ನು ಕಣ್ತುಂಬಿಕೊಂಡ ಪುತ್ರಿ ಸೌಂದರ್ಯ

ತಂದೆ ಅಭಿಯನವನ್ನು ಕಣ್ತುಂಬಿಕೊಂಡ ಪುತ್ರಿ ಸೌಂದರ್ಯ

ರಜನಿ ಪುತ್ರಿ ಸೌಂದರ್ಯ ಅರಣ್ಯ ಇಲಾಖೆ ಜೀಪ್ ನಲ್ಲಿಯೇ ಕುಳಿದು ತಂದೆ ಅಭಿನಯಿಸುತ್ತಿದ್ದ ಸಾಕ್ಷ್ಯಚಿತ್ರದ ತುಣುಕನ್ನು ಕಣ್ತುಂಬಿಕೊಂಡರು. ಚಿತ್ರೀಕರಣದ ಬಳಿಕ ಸಿಬ್ಬಂದಿಯೊಂದಿಗೆ ಗ್ರೂಪ್ ಫೋಟೋ ತೆಗೆಸಿಕೊಂಡರು. ಒಂದು ದಿನದ ಶೂಟಿಂಗ್ ಗಾಗಿ ಆಗಮಿಸಿದ್ದ ರಜನಿಕಾಂತ್ ಸಂಜೆ 5ಕ್ಕೆ ಮೈಸೂರಿಗೆ ಬಂದು ಚೆನ್ನೈಗೆ ಮರಳಿದ್ದಾರೆ.

ರಜಿನಿಕಾಂತ್ ಹೇಳಿಕೆ ಎಫೆಕ್ಟ್‌: ಪೆರಿಯಾರ್ ಪ್ರತಿಮೆ ಭಗ್ನರಜಿನಿಕಾಂತ್ ಹೇಳಿಕೆ ಎಫೆಕ್ಟ್‌: ಪೆರಿಯಾರ್ ಪ್ರತಿಮೆ ಭಗ್ನ

ಸೋಮವಾರ ಬೆಳಿಗ್ಗೆ ಚೆನ್ನೈನಿಂದ ಆಗಮಿಸಿದ್ದ ರಜನಿಕಾಂತ್ ಬಂಡೀಪುರ ಅರಣ್ಯದಂಚಿನ ಗ್ರಾಮ ಮಂಗಲ ಬಳಿ ಇರುವ ಸರಾಯಿ ಖಾಸಗಿ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದರು.

 ಪರಿಸರ ಜಾಗೃತಿ ಮೂಡಿಸಲಿರುವ ರಜನಿಕಾಂತ್

ಪರಿಸರ ಜಾಗೃತಿ ಮೂಡಿಸಲಿರುವ ರಜನಿಕಾಂತ್

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮೂರು ದಿನಗಳ ಕಾಲ ಚಿತ್ರೀಕರಣ ನಡೆಸಲೆಂದು ರಜನಿಕಾಂತ್ ನಿನ್ನೆ ಆಗಮಿಸಿದ್ದು, ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಮದ್ದೂರು, ಮೂಳೆಹೊಳೆ, ಕಲ್ಕೆರೆ ವಲಯಗಳಲ್ಲಿ ಚಿತ್ರೀಕರಣಕ್ಕೆ ಅವಕಾಶ ನೀಡಲಾಗಿದೆ. ಈ ಹಿಂದೆ ಗ್ರಿಲ್ಸ್ ಅವರೊಂದಿಗೆ ಪ್ರಧಾನಿ ಮೋದಿ ಕಾಡು ಸುತ್ತಿದ್ದರು. ಇದೀಗ ರಜಿನಿಕಾಂತ್ ಅರಣ್ಯದಲ್ಲಿ ಓಡಾಡಿ ಪರಿಸರ ಜಾಗೃತಿ ಮೂಡಿಸಲಿದ್ದಾರೆ.

 ಹಗಲಿನ ವೇಳೆ ಚಿತ್ರೀಕರಣ

ಹಗಲಿನ ವೇಳೆ ಚಿತ್ರೀಕರಣ

ಚಿತ್ರೀಕರಣವು ಹಗಲಿನ ವೇಳೆಯಲ್ಲಿದ್ದು, ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ಚಿತ್ರೀಕರಣ ನಡೆಸಬೇಕು. ಚಿತ್ರೀಕರಣದ ಸಮಯದಲ್ಲಿ ಯಾವುದೇ ಹಾನಿ, ವನ್ಯಜೀವಿಗಳಿಗೆ ಯಾವುದೇ ತೊಂದರೆಯಾಗಬಾರದು. ವಿದ್ಯುತ್, ಅಗ್ನಿಶಾಮಕ ಯಾವುದೇ ಬಳಕೆಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಿದ್ದು ಸಸ್ಯ ಜೀವನ ಅಥವಾ ವನ್ಯಜೀವಿಗಳಿಗೆ ಹಾನಿ ಉಂಟುಮಾಡುವ ಫ್ಲ್ಯಾಷ್ ‌ಲೈಟ್ ರಿಫ್ಲೆಕ್ಟರ್ ‌ಗಳು, ದೀಪಗಳು, ಧ್ವನಿ ವಸ್ತುಗಳು ಮತ್ತು ಜನರೇಟರ್ ಬಳಸದಂತೆ ಸೂಚನೆ ನೀಡಲಾಗಿದೆ.

English summary
Super Star Rajanikanth came to bandipur tiger reserve forest with director bare grills for Man v/s Wild shooting yesterday
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X