ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಂಡೀಪುರದಲ್ಲಿ ಹುಲಿಗಳನ್ನು ಕಂಡು ಪ್ರವಾಸಿಗರು ಫುಲ್ ಖುಷ್

By ಚಾಮರಾಜನಗರ ಪ್ರತಿನಿಧಿ
|
Google Oneindia Kannada News

ಚಾಮರಾಜನಗರ ಡಿಸೆಂಬರ್ 09: ಇಲ್ಲಿನ ಬಂಡೀಪುರ ಹಸಿರಿನಿಂದ ಕಂಗೊಳಿಸತೊಡಗಿದ್ದು, ಇಲ್ಲಿನ ಸೌಂದರ್ಯವನ್ನು ವನ್ಯ ಪ್ರಾಣಿಗಳು ಇಮ್ಮಡಿಗೊಳಿಸುತ್ತಿವೆ. ಹುಲಿಗಳಿಂದಲೇ ಬಂಡೀಪುರ ಸಫಾರಿ ಮಾಡುವವರಿಗೆ ಫೇವರೆಟ್ ಆಗಿದ್ದು, ಅವುಗಳನ್ನು ಕಾಣಲೆಂದೇ ಪ್ರವಾಸಿಗರು ಬಂಡಿಪುರಕ್ಕೆ ಓಡೋಡಿ ಬರುತ್ತಾರೆ.

ಪ್ರವಾಸಿಗರ ಸಫಾರಿ ವೇಳೆ ಹುಲಿಗಳು ಕಂಡರಂತೂ ಅವರನ್ನು ಹಿಡಿಯುವವರೇ ಇಲ್ಲ. ಕೂಡಲೇ ಕ್ಯಾಮೆರಾ ಅಥವಾ ಮೊಬೈಲ್ ಕೈಗೆತ್ತಿಕೊಂಡು ಫೋಟೋ ಸೆರೆಹಿಡಿದು ಸಂಭ್ರಮಿಸುತ್ತಾರೆ. ಅದರಂತೆ ಪವನ್ ಎಂಬುವರ ಕ್ಯಾಮೆರಾ ಕಣ್ಣಿಗೆ ನಾಲ್ಕು ಹುಲಿಗಳು ಸೆರೆಸಿಕ್ಕಿವೆ.

ವನ್ಯಜೀವಿ ಪ್ರಿಯರಿಗೊಂದು ಸಿಹಿಸುದ್ದಿ ಸಫಾರಿ ಇನ್ನುಮುಂದೆ ಅಗ್ಗ!ವನ್ಯಜೀವಿ ಪ್ರಿಯರಿಗೊಂದು ಸಿಹಿಸುದ್ದಿ ಸಫಾರಿ ಇನ್ನುಮುಂದೆ ಅಗ್ಗ!

ನಾಲ್ಕು ಹುಲಿಗಳು ರಾಜ ಗಾಂಭೀರ್ಯದಿಂದ ಹೆಜ್ಜೆ ಇಡುತ್ತಿರುವುದು ಪವನ್ ಎಂಬುವರ ಕ್ಯಾಮೆರಾ ಕಣ್ಣಿಗೆ ಸೆರೆಸಿಕ್ಕಿದ್ದು, ಇದೀಗ ಆ ಫೋಟೋ ವೈರಲ್ ಆಗಿದೆ.

A 4 tigers photos caught in tourist camera in Bandipur national park, now goes viral

ಬಂಡೀಪುರದ ರಾಯಭಾರಿಯಾಗಿದ್ದ ಪ್ರಿನ್ಸ್ ಹಿಂದೆ ಸಫಾರಿಗೆ ತೆರಳುವ ಪ್ರವಾಸಿಗರಿಗೆ ದರ್ಶನ ನೀಡಿ ಮುದಗೊಳಿಸುತ್ತಿದ್ದನು.

ಆತನ ಸಾವಿನ ನಂತರ ಪ್ರವಾಸಿಗರಿಗೆ ನಿರಾಸೆಯಾಗಿತ್ತು. ಇದೀಗ ತಾಯಿ ಹುಲಿಯೊಂದು ತನ್ನ ಮರಿಗಳೊಂದಿಗೆ ರಾಜ ನಡಿಗೆಯಲ್ಲಿ ತೆರಳುತ್ತಿರುವ ದೃಶ್ಯ ಕಂಡು ಬರುತ್ತಿದ್ದು ಇದನ್ನು ನೋಡಿದವರು ಸಂಭ್ರಮಿಸುತ್ತಿದ್ದಾರೆ.

ಕರ್ನಾಟದಲ್ಲಿಯೇ ಅತೀ ಹೆಚ್ಚು ಹುಲಿಗಳು ಬಂಡೀಪುರದಲ್ಲಿವೆ. ಸದ್ಯ 140 ಹುಲಿಗಳಿವೆ ಎನ್ನಲಾಗಿದ್ದು, ಈ ಪೈಕಿ ಕೆಲವೇ ಕೆಲವು ಹುಲಿಗಳು ಮಾತ್ರ ಕಾಣಸಿಗುತ್ತಿವೆ.

ಒಟ್ಟಾರೆ ಇದೀಗ ಹುಲಿಗಳೊಂದಿಗೆ ಇತರೆ ಪ್ರಾಣಿಗಳು ಕೂಡ ಕಾಣಿಸಿಕೊಳ್ಳುತ್ತಿರುವುದರಿಂದ ಸಫಾರಿಗೆ ತೆರಳುವ ಪ್ರವಾಸಿಗರು ಸಂತಸ ಪಡುತ್ತಿದ್ದಾರೆ.

English summary
A 4 tigers photos caught in tourist camera in Bandipur national park, now the tigres photos goes viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X