ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಪರೂಪದ ಪಕ್ಷಿಗಳ ಪರಿಚಯ ಮಾಡಿಕೊಡಲಿದೆ 'ಹಕ್ಕಿ ಹಬ್ಬ'

By ಮೈಸೂರು ಪ್ರತಿನಿಧಿ
|
Google Oneindia Kannada News

ಚಾಮರಾಜನಗರ, ಜನವರಿ 05: ಬಿಳಿಗಿರಿರಂಗನಬೆಟ್ಟದಲ್ಲಿ ಬಿಆರ್‌ಟಿ ಹುಲಿ ಯೋಜನೆ ವತಿಯಿಂದ ನಡೆಯುವ 7ನೇ ಆವೃತ್ತಿಯ ಕರ್ನಾಟಕ 'ಹಕ್ಕಿ ಹಬ್ಬ'ಕ್ಕೆ ಚಾಲನೆ ಸಿಕ್ಕಿದೆ. ಮೂರು ದಿನಗಳ ಕಾಲ ಹಕ್ಕಿ ಹಬ್ಬ ನಡೆಯಲಿದೆ.

ಬಿಳಿಗಿರಿರಂಗನಬೆಟ್ಟದ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಆವರಣದಲ್ಲಿ ನಡೆದ ಕರ್ನಾಟಕ ಹಕ್ಕಿಹಬ್ಬದ ವೇದಿಕೆ ಕಾರ್ಯಕ್ರಮವನ್ನು ಶಾಸಕ ಎನ್. ಮಹೇಶ್ ಉದ್ಘಾಟಿಸಿದರು. ವನ್ಯಜೀವಿ ವಿಭಾಗದ ಪಿಸಿಸಿಎಫ್ ಅಜಯ್ ಮಿಶ್ರಾ, ಅರಣ್ಯ ವಿಭಾಗದ ಸರ್ಕಾರದ ಮುಖ್ಯಕಾರ್ಯದರ್ಶಿ ಸಂದೀಪ್ ದಾವೆ, ಚಾಮರಾಜನಗರ ಸಿಸಿಎಫ್ ಮನೋಜ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.

 ಇಂಧೋರ್‌ನಲ್ಲಿ ಕಾಗೆಗಳಲ್ಲಿ ಕಾಣಿಸಿಕೊಂಡ ಹಕ್ಕಿ ಜ್ವರ: ಹೈ ಅಲರ್ಟ್ ಘೋಷಿಸಿದ ಕೇಂದ್ರ ಸರ್ಕಾರ ಇಂಧೋರ್‌ನಲ್ಲಿ ಕಾಗೆಗಳಲ್ಲಿ ಕಾಣಿಸಿಕೊಂಡ ಹಕ್ಕಿ ಜ್ವರ: ಹೈ ಅಲರ್ಟ್ ಘೋಷಿಸಿದ ಕೇಂದ್ರ ಸರ್ಕಾರ

ಅಜಯ್ ಮಿಶ್ರಾ ಮಾತನಾಡಿ, "ಅಳಿವಿನ ಅಂಚಿನಲ್ಲಿರುವ ಅಪರೂಪದ ಪಕ್ಷಿಗಳ ಬಗ್ಗೆ ಜಾಗೃತಿ ಮೂಡಿಸಲು ಹಕ್ಕಿಹಬ್ಬ ಆಚರಣೆ ಪ್ರಮುಖವಾಗಿದೆ. ಬಿಳಿಗಿರಿರಂಗನಬೆಟ್ಟ ಪಶ್ಚಿಮ ಹಾಗೂ ಪೂರ್ವ ಘಟ್ಟಗಳು ಸೇರುವ ಪ್ರದೇಶವಾಗಿದೆ. ಹೀಗಾಗಿ ಇಲ್ಲಿ 250 ಕ್ಕೂ ಹೆಚ್ಚು ವಿವಿಧ ಜಾತಿಯ ಪಕ್ಷಿಗಳನ್ನು ಕಾಣಬಹುದು. ಹೀಗಾಗಿ ಇಲ್ಲಿ ಹಕ್ಕಿಹಬ್ಬವನ್ನು ಹಮ್ಮಿಕೊಳ್ಳಲಾ ಗಿದೆ" ಎಂದರು.

ಮೈಸೂರಿನಲ್ಲಿ ಹಕ್ಕಿ ಜ್ವರ; ಶುಕವನದ 3 ಸಾವಿರ ಗಿಳಿಗಳ ಕಥೆ?ಮೈಸೂರಿನಲ್ಲಿ ಹಕ್ಕಿ ಜ್ವರ; ಶುಕವನದ 3 ಸಾವಿರ ಗಿಳಿಗಳ ಕಥೆ?

7Th Edition Of Hakki Habba Inaugurated

"ಪರಿಸರ ಪ್ರವಾಸೋದ್ಯಮವನ್ನು ಬಲಪಡಿಸುವುದು ಅರಣ್ಯ ಇಲಾಖೆಯ ಬಹುಮುಖ್ಯ ಕಾರ್ಯವಾಗಿದೆ. ಸುಮಾರು 500ಕ್ಕೂ ಹೆಚ್ಚು ವಿವಿಧ ಜಾತಿಯ ಪಕ್ಷಿಗಳಿವೆ. ಈ ಪಕ್ಷಿಗಳ ಬಗ್ಗೆ ಪ್ರತಿಯೊಬ್ಬರಿಗೂ ಅರಿವು ಬಹುಮುಖ್ಯವಾಗಿದೆ" ಎಂದು ಹೇಳಿದರು.

ದಾವಣಗೆರೆಯಲ್ಲಿ ಕೊರೊನಾ ವೈರಸ್ ಜೊತೆ ಹಕ್ಕಿ ಜ್ವರದ ಭೀತಿದಾವಣಗೆರೆಯಲ್ಲಿ ಕೊರೊನಾ ವೈರಸ್ ಜೊತೆ ಹಕ್ಕಿ ಜ್ವರದ ಭೀತಿ

Recommended Video

ಅಮೆರಿಕಾ ಕಿರಿ ಕಿರಿ ಜಾಸ್ತಿ ಆಗ್ತಿದೆ !! | Oneindia Kannada

ಪೂರ್ವ ಮತ್ತು ಪಶ್ಚಿಮ ಘಟ್ಟಗಳು ಸೇರುವ ಪ್ರದೇಶವಾಗಿರುವ ಬಿಳಿಗಿರಿರಂಗನಬೆಟ್ಟದಲ್ಲಿ 7ನೇ ಆವೃತ್ತಿಯ ಹಕ್ಕಿಹಬ್ಬವನ್ನು ಆಯೋಜಿಸಲಾಗಿದೆ. ಹಕ್ಕಿಹಬ್ಬದ ಸ್ಟಾಂಪ್‌ ಅನ್ನು ಸಹ ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗಿದೆ.

English summary
The 7th edition of Karnataka Hakki habba (Birds Festival) inaugurated at Biligirirangana betta. Event would be celebrated 3 days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X