ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಾಮರಾಜನಗರ ಸರಣಿ ಸಾವಿಗೆ ಹೊಣೆ ಹೊತ್ತು ಸುರೇಶ್ ಕುಮಾರ್ ರಾಜೀನಾಮೆ ಕೊಡ್ತಾರಾ ?

|
Google Oneindia Kannada News

ಬೆಂಗಳೂರು, ಮೇ. 03: ಆಕ್ಸಿಜನ್ ಇಲ್ಲದೇ ಚಾಮರಾಜನಗರ ಸರ್ಕಾರಿ ಆಸ್ಪತ್ರೆಯಲ್ಲಿ 24 ಮಂದಿ ಕೊರೊನಾ ರೋಗಿಗಳು ಸಾವನ್ನಪ್ಪಿದ್ದಾರೆ. ಇದಕ್ಕೆ ಜಿಲ್ಲಾಡಳಿತ ನೇರ ಹೊಣೆ ಎಂದು ಸ್ಥಳೀಯರು ಜಿಲ್ಲಾಡಳಿತದ ಮುಂದೆ ಪ್ರತಿಭಟನೆ ಆರಂಭಿಸಿದ್ದಾರೆ. ರಾಜ್ಯದ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಸುರೇಶ್ ಕುಮಾರ್ ದಿವ್ಯ ನಿರ್ಲಕ್ಷ್ಯತೆ ಎದ್ದು ಕಾಣುತ್ತಿದೆ. ಇದರ ನೇರ ಹೊನೆ ಹೊತ್ತು ಇಬ್ಬರು ರಾಜೀನಾಮೆ ನೀಡುತ್ತಾರಾ ? ಎಂಬ ಪ್ರಶ್ನೆಗಳು ರಾಜಕೀಯ ವಲದಯಲ್ಲಿ ಚರ್ಚೆಗೆ ನಾಂದಿ ಹಾಡಿದೆ.

ಚಾಮರಾಜನಗರ ಜಿಲ್ಲೆಯಲ್ಲಿ 24 ಕೊರೊನಾ ಸೋಂಕಿತರ ಸರಣಿ ಸಾವಿನ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶ ಮಾಡಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಿ ಎಂಬ ಕೂಗು ಕೇಳಿ ಬರುತ್ತಿದೆ. ಕೇವಲ ಏಳು ಮಂದಿಗೆ ಆಕ್ಸಿಜನ್ ಸಿಗದೇ ಸಾವನ್ನಪ್ಪುವ ಕಾರಣಕ್ಕೆ ಜೋರ್ಡನ್‌ನಲ್ಲಿ ಪ್ರಧಾನಿ ಬಿಶೇರ್ ಆಲ್, ಖಾಶ್ವಂತ್ ಅಲ್ಲಿನ ಆರೋಗ್ಯ ಸಚಿವ ನಾದೇರ್ ಒಬೇಯ್ದತ್ ಒಂದೇ ದಿನದಲ್ಲಿ ರಾಜೀನಾಮೆ ನೀಡಿ ನಿರ್ಗಮಿಸುತ್ತಾರೆ. ಸಾವುಗಳಿಗೆ ಹೊಣೆ ಹೊತ್ತು ಅಲ್ಲಿನ ಆರೋಗ್ಯ ಸಚಿವರೇ ಸ್ವತಃ ರಾಜೀನಾಮೆ ನೀಡುತ್ತಾರೆ. ಆದರೆ, ರಾಜ್ಯದಲ್ಲಿ ಸರಣಿ ಮಾರಣ ಹೋಮಗಳು ಸಂಭವಿಸುತ್ತಿವೆ. ಇದೀಗ ಕಡು ಬಡವರು ಇರುವ ಚಾಮರಾಜನಗರ ಜಿಲ್ಲೆಯಲ್ಲಿ ಒಂದೇ ದಿನ 24 ಕೊರೊನಾ ಸೋಂಕಿತರು ಸಾವನ್ನಪ್ಪಿದ್ದಾರೆ. ಇದಕ್ಕೆ ನೇರ ಹೊಣೆ ಹೊತ್ತು ಉಸ್ತುವಾರಿ ಸಚಿವ ಸುರೇಶ್ ಕುಮಾರ್ ರಾಜೀನಾಮೆ ನೀಡಬೇಕಲ್ಲವೇ ?

ಕಾಳಸಂತೆಯಲ್ಲಿ ಮಾರಾಟವಾಯ್ತಾ ಆಕ್ಸಿಜನ್ ಸಿಲಿಂಡರ್?ಕಾಳಸಂತೆಯಲ್ಲಿ ಮಾರಾಟವಾಯ್ತಾ ಆಕ್ಸಿಜನ್ ಸಿಲಿಂಡರ್?

ಚಾಮರಾಜನಗರ ಜಿಲ್ಲೆ ಅತ್ಯಂತ ಬಡವರು ಇರುವ ಜಿಲ್ಲೆ. ಒಬ್ಬರು ಕೂಡ ಖಾಸಗಿ ಆಸ್ಪತ್ರೆಗೆ ಹೋಗುವ ಶಕ್ತಿವಂತರಲ್ಲ. ಇಂತಹ ಜಿಲ್ಲೆಯ ಉಸ್ತುವಾರಿಯನ್ನು ಎಸ್. ಸುರೇಶ್ ಕುಮಾರ್ ಅವರಿಗೆ ವಹಿಸಲಾಗಿದೆ. ಆದರೆ, ಇವರ ಮಹಾ ದಿವ್ಯ ನಿರ್ಲಕ್ಷ್ಯದಿಂದ ಚಾಮರಾಜನಗರದಲ್ಲಿ ಒಂದೇ ದಿನ 24 ಮಂದಿ ಜಿಲ್ಲಾ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ. ಆಕ್ಸಿಜನ್ ಇಲ್ಲದೇ ನರಳಿ- ನರಳಿ ಸಾವನ್ನಪ್ಪಿದ್ದಾರೆ. ಬೆಂಕಿ ಬಿದ್ದ ಮೇಲೆ ಇದೀಗ ಬಾವಿ ತೋಡಲು ಉಸ್ತುವಾರಿ ಸಚಿವರು ಇದೀಗ ಚಾಮರಾಜನಗರ ಜಿಲ್ಲೆಗೆ ಹೊರಟಿದ್ದಾರೆ. ಅಲ್ಲಿಗೆ ಹೋಗಿ ಮತ್ತೆ ತಿಪ್ಪೆ ಸಾರಿಸುವ ಕೆಲಸ ಮಾಡಿ ವಾಪಸು ಬರುತ್ತಾರಾ ನೋಡಬೇಕು.

24 died in Chamarajnagar due t olack of Oxygen: will district in charge Minister Suresh Kumar resign?

ತನ್ನ ಕ್ಷೇತ್ರಕ್ಕೆ ಚೈತನ್ಯ ಕೇಂದ್ರ :

ನಿನ್ನೆಯಷ್ಟೇ ಸಚಿವ ಸುರೇಶ್ ಕುಮಾರ್ ತನ್ನ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ. ರಾಜಾಜಿನಗರದ ಭಾಷ್ಯಂ ವೃತ್ತದಲ್ಲಿ ಖಾಸಗಿ ಆಸ್ಪತ್ರೆಯನ್ನು ಕೋವಿಡ್ ಕೇರ್ ಸೆಂಟರ್ ಮಾಡಿ ಅದಕ್ಕೆ ಚೈತನ್ಯ ಕೇಂದ್ರ ಎಂದು ಸ್ವತಃ ಸುರೇಶ್ ಕುಮಾರ್ ಹೆಸರಿಟ್ಟಿದ್ದಾರೆ. ಆ ಚೈತನ್ಯ ಕೇಂದ್ರಕ್ಕೆ ಬಿಜೆಪಿ ರಾಜಾಜಿನಗರ ವತಿಯಂದ ಆಂಬ್ಯುಲೆನ್ಸ್ ನೀಡಲಾಗಿದೆ. ಸ್ಟೀಮ್ , ಕಷಾಯಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ ಸಚಿವ ಸುರೇಶ್ ಕುಮಾರ್. ಆದರೆ, ಇದರಲ್ಲಿ ಐದು ಪೈಸೆ ಕೆಲಸ ಯಾಕೆ ಚಾಮರಾಜನಗರದಲ್ಲಿ ಮಾಡಲಿಲ್ಲ. ಸುರೇಶ್ ಕುಮಾರ್ ಅವರ ಕ್ಷೇತ್ರದಲ್ಲಿ ಇರುವ ಬಹುತೇಕರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂಥ ಶಕ್ತಿವಂತರು. ಚಾಮರಾಜನಗರ ಜಿಲ್ಲೆ ತೀರ ಕಡು ಬಡುವರು, ಸಚಿವರಾಗಿ ಅಲ್ಲಿಯೇ ಮೊಕ್ಕಾಂ ಹೂಡಿ ಜನರ ನೆರವಿಗೆ ನಿಲ್ಲಬೇಕಿತ್ತು.! ಚಾಮರಾಜನಗರ ಜನತೆಗೆ ಸುರೇಶ್ ಕುಮಾರ್ ಮೋಸ ಮಾಡಿದ್ದು ಯಾಕೆ ? ಅದು ನನ್ನ ಕ್ಷೇತ್ರವಲ್ಲ ಎಂಬ ಒಂದೇ ಕಾರಣಕ್ಕಾಗಿ ಅಲ್ಲವೇ ಎಂಬ ಅನುಮಾನ ಮೂಡಿಸುತ್ತದೆ.

ಕೊರೊನಾ ನೆಪ ಇಟ್ಟುಕೊಂಡು ಇಲ್ಲ ಸಲ್ಲದ ನಿರ್ಬಂಧಗಳನ್ನು ವಿಧಿಸಿ ಒಂದು ಹಂತಕ್ಕೆ ರಾಜ್ಯದ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಮಲಗಿಸಿದ್ದಾರೆ. ಶಾಲಾ ಶುಲ್ಕ, ಶಾಲಾ ಕಾರ್ಯಾರಂಭ, ಎಸ್ಎಸ್ಎಲ್ ಸಿ ಪರೀಕ್ಷೆ ವಿಚಾರದಲ್ಲಿ ತೆಗೆದುಕೊಂಡ ಕೆಲವು ತೀರ್ಮಾನಗಳಿಂದ ಅವರ ಇಲಾಖೆಯ ಅಧಿಕಾರಿಗಳೇ ಎದೆಯುಸಿರು ಬಿಡುತ್ತಿದ್ದಾರೆ. ಇನ್ನೇನು ಒಂದು ವಾರ ಪಿಯುಸಿ ಪರೀಕ್ಷೆ ಇರುವ ಸಂದರ್ಭದಲ್ಲಿ ಪರೀಕ್ಷೆ ಮುಂದೂಡುವ ಬಗ್ಗೆ ಸಭೆ ಕರೆದಿದ್ದರು. ಇದೀಗ ಸರಣಿ ಸಾವಿನ ಹಿನ್ನೆಲೆಯಲ್ಲಿ ಸುರೇಶ್ ಕುಮಾರ್ ಚಾಮರಾಜನಗರಕ್ಕೆ ಓಡಿ ಹೋಗಿದ್ದಾರೆ.

24 died in Chamarajnagar due t olack of Oxygen: will district in charge Minister Suresh Kumar resign?

ಬರೀ ಪ್ರಚಾರ :

ತನ್ನಂತ ನಿಷ್ಠಾವಂತ ಸಚಿವರು ಯಡಿಯೂರಪ್ಪ ಅವರ ಸಂಪುಟದಲ್ಲಿ ಇಲ್ಲ. ಇದು ಸಮಾಜ ಪ್ರತಿ ಕ್ಷಣವೂ ನಂಬಬೇಕು ಎಂಬ ಮನಸ್ಥಿತಿಯಿಂದ ಸಚಿವರು ಹೊರಗೆ ಬಂದಂತಿಲ್ಲ. ಇದಕ್ಕಾಗಿಯೋ ಪ್ರತಿ ಪ್ರವಾಸಕ್ಕೂ ಯಾರನ್ನೋ ಭೇಟಿ ಮಾಡುವುದು, ಅವರ ಬಗ್ಗೆ ಒಂದು ಪೋಸ್ಟ್ ಬರೆದುಕೊಳ್ಳುವುದು ಈ ಮೂಲಕ ಪ್ರಚಾರ ಗಿಟ್ಟಿಸುವ ಬದಲಿಗೆ ಸುರೇಶ್ ಕುಮಾರ್ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇ ಆದಲ್ಲಿ ಚಾಮರಾಜನಗರ ಜಿಲ್ಲೆ ಕರೊನಾ ತಡೆ ವಿಚಾರದಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುತ್ತಿತ್ತು ಅಲ್ಲವೇ ? ಅಂತೂ ಚಾಮರಾಜನಗರ ಜಿಲ್ಲೆಯಲ್ಲಿ ಸಂಭವಿಸಿರುವ ಸರಣಿ ಸಾವು ಕೊಲೆ ಎಂಬ ಟೀಕೆಗಳು ವ್ಯಕ್ತವಾಗಿವೆ.

English summary
24 died in Chamarajnagar due t olack of Oxygen: will district in charge Minister Suresh Kumar resign ?.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X