ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಸಿರು ವಲಯದಲ್ಲಿದ್ದ ಚಾಮರಾಜನಗರದಲ್ಲಿ 2 ಕೊರೊನಾವೈರಸ್ ಪತ್ತೆ

|
Google Oneindia Kannada News

ಚಾಮರಾಜನಗರ, ಜೂನ್ 23: ಸತತ 110 ದಿನಗಳವರೆಗೆ ಕೊರೊನಾ ವೈರಸ್ ಮುಕ್ತ ಹಸಿರು ಜಿಲ್ಲೆಯಾಗಿದ್ದ ಚಾಮರಾಜನಗರದಲ್ಲಿ ಈಗ ಎರಡು ಕೊರೊನಾ ವೈರಸ್ ಸೋಂಕು ಪ್ರಕರಣಗಳು ಪತ್ತೆಯಾಗಿವೆ.

Recommended Video

Karnataka government Fixed Charges for COVID-19 Treatment in Private Hospitals | Oneindia Kannada

ಅನ್ ಲಾಕ್ ಬಳಿಕ ಕೊರೊನಾ ವೈರಸ್ ಗೆ ತಲ್ಲಣಿಸುತ್ತಿರುವ ಗಡಿ ಜಿಲ್ಲೆ ಚಾಮರಾಜನಗರವು ಹಸಿರು ವಲಯದಿಂದ ಕೆಂಪು ವಲಯದತ್ತ ಸಾಗುತ್ತಿದೆ. ಚಾಮರಾಜನಗರದಲ್ಲಿ ಎರಡು ಸೋಂಕು ಪ್ರಕರಣಗಳನ್ನು ಜಿಲ್ಲಾಧಿಕಾರಿ ಡಾ.ಎಂ.ಆರ್ ರವಿ ದೃಢಪಡಿಸಿದ್ದಾರೆ.

ಚಾಮರಾಜನಗರಕ್ಕೂ ಕಾಲಿಟ್ಟ ಕೊರೊನಾ ವೈರಸ್ ಸೋಂಕು!ಚಾಮರಾಜನಗರಕ್ಕೂ ಕಾಲಿಟ್ಟ ಕೊರೊನಾ ವೈರಸ್ ಸೋಂಕು!

ಸೋಮವಾರ ಸಂಜೆ ಸರ್ವೆ ಇಲಾಖೆಯ 33 ವರ್ಷದ ಮಹಿಳಾ ನೌಕರಳಲ್ಲಿ ಕೊರೊನಾ ವೈರಸ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಚಾಮರಾಜನಗರ ತಾಲ್ಲೂಕು ಕಚೇರಿಯನ್ನು ಸ್ಯಾನಿಟೈಜ್ ಮಾಡಿ, ಸಾರ್ವಜನಿಕರು ಮತ್ತು ಕಚೇರಿ ಸಿಬ್ಬಂದಿಗಳಿಗೆ ಪ್ರವೇಶ ನಿರ್ಬಂಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

2 Coronavirus Cases Reported In Green Zone District Charamarajanagara

ಅದೇ ರೀತಿ ಸರ್ವೆ ಇಲಾಖೆ ಸಿಬ್ಬಂದಿ ವಾಸವಿದ್ದ ತಾಲ್ಲೂಕು ಕಚೇರಿ ಹಿಂಭಾಗದ ಭಗೀರಥ ನಗರವನ್ನು ಸೀಲ್ ಡೌನ್ ಮಾಡಲಾಗಿದೆ. ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ಮೂಲದ ಸರ್ವೆ ಇಲಾಖೆ ಮಹಿಳಾ ಸಿಬ್ಬಂದಿ ಕೆಲವು ದಿನಗಳ ಹಿಂದೆಯಷ್ಟೇ ತವರಿಗೆ ಹೋಗಿ ಬಂದಿದ್ದರು.

2 Coronavirus Cases Reported In Green Zone District Charamarajanagara

ಸ್ವಾಬ್ ಕಲೆಕ್ಷನ್ ನಂತರ ಕಚೇರಿಯಲ್ಲಿ ಕಾರ್ಯನಿರ್ವಹಿಸಿ, ಜಮೀನೊಂದರ ಸರ್ವೆಗೂ ತೆರಳಿದ್ದ ಮಹಿಳಾ ಸಿಬ್ಬಂದಿ ತೆರಳಿದ್ದರು. ಮಹಿಳಾ ಸಿಬ್ಬಂದಿಯ ಸಹೋದ್ಯೋಗಿಗಳನ್ನ ಹೋಂ ಕ್ವಾರಂಟೈನ್ ಮಾಡಲಾಗಿದೆ. ಹಿಂದುಳಿದ ವರ್ಗದ ಜನತೆಯೇ ಹೆಚ್ಚಾಗಿ ವಾಸಿಸುತ್ತಿರುವ ಭಗೀರಥ ಬಡಾವಣೆಯಲ್ಲಿ ಆತಂಕದ ವಾತಾವರಣವಾಗಿದೆ.

English summary
Two coronavirus infections have now been found in green Zone district Chamarajanagar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X