ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಾಮರಾಜನಗರ ಜಿಲ್ಲೆಯಲ್ಲಿ 174 ಹಳ್ಳಿಗಳು ಕೊರೊನಾ ಮುಕ್ತ

By ಚಾಮರಾಜನಗರ ಪ್ರತಿನಿಧಿ
|
Google Oneindia Kannada News

ಚಾಮರಾಜನಗರ, ಮೇ 29: ಚಾಮರಾಜನಗರ ಜಿಲ್ಲೆಯಲ್ಲಿ ಶೇ.70ಕ್ಕೂ ಹೆಚ್ಚು ಕೊರೊನಾ ಸೋಂಕು ಪ್ರಕರಣಗಳು ಗ್ರಾಮೀಣ ಭಾಗದಿಂದಲೇ ವರದಿ ಆಗುತ್ತಿವೆ. ಕೊರೊನಾ ಅಬ್ಬರದ ನಡುವೆಯೂ ಚಾಮರಾಜನಗರ ಜಿಲ್ಲೆಯಲ್ಲಿ 174 ಹಳ್ಳಿಗಳು ಕೊರೊನಾ ಮುಕ್ತವಾಗಿವೆ.

ಸೋಂಕಿನಿಂದ ಗುಣಮುಖರಾಗಿ ಪ್ರಸ್ತುತ ಯಾವುದೇ ಪ್ರಕರಣಗಳಿಲ್ಲದ ಹಾಗೂ ಇದುವರೆಗೂ ಒಂದೇ ಒಂದು ಕೊರೊನಾ ಸೋಂಕಿನ ಪ್ರಕರಣ ದಾಖಲಾಗದ ಗ್ರಾಮಗಳು ಕೂಡ ಇದರಲ್ಲಿ ಸೇರಿವೆ.

ಕಳೆದ ಮೇ 2ರಂದು ಆಕ್ಸಿಜನ್ ಕೊರತೆಯಿಂದಾಗಿ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 24 ಮಂದಿ ರೋಗಿಗಳು ಮೃತಪಟ್ಟಿದ್ದರು. ಇದು ರಾಷ್ಟ್ರಮಟ್ಟದಲ್ಲಿ ಖಂಡನೆಗೂ ಕಾರಣವಾಗಿತ್ತು. ಇದಾದ ನಂತರ ಜಿಲ್ಲಾಡಳಿತ ಅನೇಕ ಕ್ರಮಗಳನ್ನು ತೆಗೆದುಕೊಂಡು ಕೊರೊನಾ ಓಡಿಸಲು ಶ್ರಮಿಸುತ್ತಿದೆ. ಜಿಲ್ಲೆಯ 130 ಗ್ರಾಮ ಪಂಚಾಯತಿಗಳಲ್ಲೂ ಕೊರೊನಾ ಕ್ಯಾಪ್ಟನ್‌ಗಳನ್ನು ನೇಮಿಸಲಾಗಿದೆ. ಇವರು ಕೋವಿಡ್ ಸೋಂಕಿತರಿಗೆ ತುರ್ತು ಔಷಧಿ ನೀಡುವುದರ ಜೊತೆಗೆ ಗ್ರಾಮ ಪಂಚಾಯತಿ ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಗಳೊಂದಿಗೆ ಸಮನ್ವಯ ಸಾಧಿಸಿ ಸೋಂಕಿತರ ಪತ್ತೆ ಮತ್ತು ಚಿಕಿತ್ಸೆಗೆ ಕ್ರಮ ವಹಿಸುತ್ತಿದ್ದಾರೆ.

 Chamarajanagar: 174 Villages Free From Covid-19 Infection

ವಿಶೇಷ ಎಂದರೆ ಬುಡಕಟ್ಟು ಸೋಲಿಗರೇ ವಾಸಿಸುವ ಕಾಡಂಚಿನ ಬಹುತೇಕ ಗ್ರಾಮಗಳಲ್ಲಿ ಇದುವರೆಗೆ ಒಂದೇ ಒಂದು ಕೊರೊನಾ ಸೋಂಕಿನ ಪ್ರಕರಣಗಳು ವರದಿಯಾಗಿಲ್ಲ. ಚಾಮರಾಜನಗರ ತಾಲ್ಲೂಕಿನ 61, ಹನೂರು ತಾಲ್ಲೂಕಿನ 65, ಗುಂಡ್ಲುಪೇಟೆ ತಾಲ್ಲೂಕಿನ 24, ಕೊಳ್ಳೇಗಾಲ ತಾಲ್ಲೂಕಿನ 15 ಹಾಗೂ ಯಳಂದೂರು ತಾಲ್ಲೂಕಿನ 9 ಹಳ್ಳಿಗಳಲ್ಲಿ ಪ್ರಸ್ತುತ ದಿನದವರೆಗೂ ಯಾವುದೇ ಕೊರೊನಾ ಪ್ರಕರಣ ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಾಮರಾಜನಗರ ತಾಲೂಕಿನ 61 ಗ್ರಾಮಗಳು ಕೊರೊನಾ ಮುಕ್ತವಾಗಿದ್ದು, ಅದರಲ್ಲಿ ಕಾಡಂಚಿನಲ್ಲಿರುವ ಪುಣಜನೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬುಡಕಟ್ಟು ಸೋಲಿಗರೇ ಇರುವ ಬೆಜ್ಜಲಪಾಳ್ಯ, ಬಾನವಾಡಿ, ಎತ್ತೆಗೌಡನದೊಡ್ಡಿ, ಕನ್ನೇರಿಕಾಲೋನಿ, ಶ್ರೀನಿವಾಸಪುರ ಕಾಲೋನಿ ಸೇರಿದಂತೆ 20ಕ್ಕೂ ಹೆಚ್ಚು ಗಿರಿಜನರ ಹಾಡಿಗಳು ಕೊರೊನಾ ಮುಕ್ತವಾಗಿವೆ.

ಇನ್ನು ಹನೂರು ತಾಲ್ಲೂಕಿನಲ್ಲಿ 65 ಗ್ರಾಮಗಳು ಕೋವಿಡ್-19ಗೆ ಸೆಡ್ಡು ಹೊಡೆದಿದ್ದು, ಇಲ್ಲಿಯೂ ಸಹ ಕಾಡಂಚಿನ ಗ್ರಾಮಗಳು ಹಾಗೂ ಗಿರಿಜನರು ವಾಸಿಸುವ ಹಳ್ಳಿಗಳೇ ಹೆಚ್ಚಾಗಿ ಕೊರೊನಾ ಮುಕ್ತವಾಗಿವೆ. ಹಾಗೆಯೇ ಯಳಂದೂರು ತಾಲೂಕಿನಲ್ಲಿ 9 ಹಳ್ಳಿಗಳು ಕೊರೊನಾ ವೈರಸ್‌ನಿಂದ ಮುಕ್ತವಾಗಿದ್ದು, ಇಲ್ಲಿಯೂ ಸಹ ಕಾಡಂಚಿನ ಹಾಗೂ ಬುಡಕಟ್ಟು ಸೋಲಿಗರೇ ಇರುವ ಗ್ರಾಮಗಳು ಮೇಲುಗೈ ಸಾಧಿಸಿವೆ.

ಗುಂಡ್ಲುಪೇಟೆ ತಾಲ್ಲೂಕಿನ 24 ಹಳ್ಳಿಗಳು ಹಾಗೂ ಕೊಳ್ಳೇಗಾಲ ತಾಲ್ಲೂಕಿನ 15 ಗ್ರಾಮಗಳಲ್ಲಿ ಒಂದೇ ಒಂದು ಪ್ರಕರಣವೂ ವರದಿಯಾಗಿಲ್ಲ. ಇಲ್ಲಿಯೂ ಸಹ ಕಾಡಂಚಿನ ಗ್ರಾಮಗಳೇ ಹೆಚ್ಚಾಗಿ ಕೋವಿಡ್-19ನಿಂದ ಮುಕ್ತವಾಗಿವೆ. ಜಿಲ್ಲೆಯ 130 ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲೂ ಕೊರೊನಾ ಸೋಂಕು ಹಬ್ಬಿದ್ದರೂ, 174 ಗ್ರಾಮಗಳು ಸದ್ಯಕ್ಕೆ ಕೊರೊನಾ ಮುಕ್ತವಾಗಿರುವುದು ಉತ್ತಮ ಬೆಳವಣಿಗೆಯಾಗಿದೆ.

ಕಾಡಿನ ವಾತಾವರಣ, ಕಾಡಂಚಿನ ಜನರ ರೋಗ ನಿರೋಧಕ ಶಕ್ತಿ, ಲಾಕ್‌ಡೌನ್ ಪರಿಣಾಮ ಸಂಪರ್ಕ ಕಡಿತ, ಜಿಲ್ಲಾಡಳಿತ ಇತ್ತೀಚೆಗೆ ಕೈಗೊಂಡಿರುವ ಕೊರೊನಾ ಮುಕ್ತ ಗ್ರಾಮ ಅಭಿಯಾನ, ಇತ್ತೀಚೆಗೆ ಹೋಂ ಐಸೋಲೇಷನ್‌ಗೆ ಹೆಚ್ಚು ಅವಕಾಶ ನೀಡದಿರುವುದು ಇವೇ ಮುಂತಾದ ಕಾರಣಗಳಿಂದ ಈ ಗ್ರಾಮಗಳು ಸದ್ಯಕ್ಕೆ ಕೊರೊನಾ ಮುಕ್ತವಾಗಿರಬಹುದು ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.

Recommended Video

UT Khader Exclusive Interview with lavanya | ಜನ BJP ಅವರಿಗೆ ಬುದ್ಧಿ ಕಲಿಸುತ್ತಾರೆ! | Oneindia Kannada

English summary
174 villages are free of Covid-19 infection In Chamarajanagar district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X