ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Ad ನಿಷೇಧ, 82.3 ಬಿಲಿಯನ್ ಡಾಲರ್ ಕಳೆದುಕೊಂಡ FB

|
Google Oneindia Kannada News

ಬೆಂಗಳೂರು, ಜೂನ್ 28: ಅತ್ಯಂತ ಜನಪ್ರಿಯ ಸಾಮಾಜಿಕ ಜಾಲ ತಾಣ ಫೇಸ್ಬುಕ್ ಜಾಹೀರಾತುಗಳನ್ನು ಅನೇಕ ಕಂಪನಿಗಳು ನಿರ್ಬಂಧಿಸಿದ್ದರಿಂದ ಮಾರ್ಕ್ ಝುಕರ್ಬರ್ಗ್ ಗೆ ವೈಯಕ್ತಿಕವಾಗಿ ಹಾಗೂ ಫೇಸ್ಬುಕ್ ಕಂಪನಿಗೆ ಭಾರಿ ನಷ್ಟವುಂಟಾಗಿದೆ.

ಫೇಸ್ಭುಕ್ ಸ್ಥಾಪಕ ಹಾಗೂ ಸಿಇಒ ಮಾರ್ಕ್ ಝುಕರ್ಬರ್ಗ್ ಸುಮಾರು 7 ಬಿಲಿಯನ್ ಡಾಲರ್ ವೈಯಕ್ತಿಕ ನಷ್ಟ ಅನುಭವಿಸಿದ್ದಲ್ಲದೆ, ಬ್ಲೂಮ್ ಬರ್ಗ್ ಕೋಟ್ಯಧಿಪತಿಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದಾರೆ.

ಕಳೆದ 4 ವರ್ಷದಲ್ಲಿ ಭಾರತದ ಸ್ಟಾರ್ಟ್ ಅಪ್‌ಗಳಲ್ಲಿ ಚೀನಾದ ಹೂಡಿಕೆ 12 ಪಟ್ಟು ಹೆಚ್ಚಳಕಳೆದ 4 ವರ್ಷದಲ್ಲಿ ಭಾರತದ ಸ್ಟಾರ್ಟ್ ಅಪ್‌ಗಳಲ್ಲಿ ಚೀನಾದ ಹೂಡಿಕೆ 12 ಪಟ್ಟು ಹೆಚ್ಚಳ

ಆದರೆ, ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿರುವ ಮಾರ್ಕ್ ಝಕರ್ಬರ್ಗ್ ಅವರು ತಮ್ಮ ಫೇಸ್ಬುಕ್ ವಾಲ್ ನಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

Zuckerberg loses $7 billion in a day as companies boycott Facebook ads

ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಮ್ ನಲ್ಲಿ ದ್ವೇಷಪೂರಿತ ಭಾಷಣಕ್ಕೆ ವೇದಿಕೆ ಒದಗಿಸಿರುವುದರಿಂದ ಫೇಸ್ಬುಕ್ ಒಡೆತನದ ಸಾಮಾಜಿಕ ಜಾಲ ತಾಣಗಳಲ್ಲಿ ಜಾಹೀರಾತು ನೀಡಲು ಅನೇಕ ಕಂಪನಿಗಳು ಹಿಂದೇಟು ಹಾಕಿವೆ.

ಇದರಿಂದಾಗಿ ಫೇಸ್ಬುಕ್ ಷೇರುಗಳು ಕಳೆದ ಮಾರುಕಟ್ಟೆ ವಹಿವಾಟಿನಲ್ಲಿ ಶೇ 8.3 ರಷ್ಟು ಕುಸಿತ ಕಂಡಿತ್ತು. ಮಾರ್ಕ್ ಅವರ ಒಟ್ಟಾರೆ ಆಸ್ತಿ ಮೌಲ್ಯದಲ್ಲಿ 82.3 ಬಿಲಿಯನ್ ಡಾಲರ್ ಇಳಿಕೆಯಾಗಿದೆ.

Three weeks ago, I committed to reviewing our policies ahead of the 2020 elections. That work is ongoing, but today I...

Posted by Mark Zuckerberg onFriday, 26 June 2020

ಚೀನಾ ಸೌರಶಕ್ತಿ ಉತ್ಪನ್ನಗಳ ಮೇಲೆ ಆಮದು ಸುಂಕ ಹೆಚ್ಚಳ! ಚೀನಾ ಸೌರಶಕ್ತಿ ಉತ್ಪನ್ನಗಳ ಮೇಲೆ ಆಮದು ಸುಂಕ ಹೆಚ್ಚಳ!

ಬ್ರಿಟಿಷ್ ಡಚ್ ಸಂಸ್ಥೆ ಕೂಡಾ ಫೇಸ್ಬುಕ್ ಗೆ ಜಾಹೀರಾತು ನೀಡುವುದಿಲ್ಲ ಎಂಬ ಬಳಿಕ 56 ಮಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯ ಕುಸಿದಿದೆ. ವೇರಿಜಾನ್, ಬೆನ್ ಅಂಡ್ ಜೆರಿ, ದಿ ನಾರ್ಥ್ ಫೇಸ್ ಸೇರಿದಂತೆ ಹಲವು ಕಂಪನಿಗಳು #StopHate4Profit ಅಭಿಯಾನ ನಡೆಸಿವೆ. ನಾಗರಿಕ ಹಕ್ಕು ಸಂಘಟನೆಗಳು ಈ ಅಭಿಯಾನಕ್ಕೆ ಕೈಜೋಡಿಸಿವೆ ಹೀಗಾಗಿ, ಟ್ವಿಟ್ಟರಲ್ಲೂ ಫೇಸ್ಬುಕ್ ನಷ್ಟ ಅನುಭವಿಸಿದೆ.

English summary
Facebook CEO Mark Zuckerberg became $7.2 billion poorer on Friday after several firms pulled advertising from Facebook and Instagram citing concerns over the spread of hate speech on their platforms. Shares of Facebook fell 8.3%, pushing Zuckerberg’s net worth down to $82.3 billion, according to Bloomberg. Zuckerberg also moved down one notch to fourth place in the Bloomberg Billionaires Index.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X