ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನಲ್ಲಿ ತನ್ನ ತಂತ್ರಜ್ಞಾನ ಕಚೇರಿ ತೆರೆಯಲಿರುವ ಜೂಮ್ ಆ್ಯಪ್: ನೂರಾರು ಉದ್ಯೋಗ ಸೃಷ್ಟಿ

|
Google Oneindia Kannada News

ಬೆಂಗಳೂರು, ಜುಲೈ 21: ಈಗಾಗಲೇ ಮುಂಬೈನಲ್ಲಿ ತನ್ನ ಕಚೇರಿಯನ್ನು ಹೊಂದಿರುವ ಅಮೆರಿಕಾ ಮೂಲದ ವೀಡಿಯೋ ಕಾನ್ಫರೆನ್ಸ್‌ ಆ್ಯಪ್ ಜೂಮ್ ಆ್ಯಪ್ ಕಂಪನಿಯು ಬೆಂಗಳೂರಿನಲ್ಲಿ ತನ್ನ ಮುಖ್ಯ ತಂತ್ರಜ್ಞಾನ ಕಚೇರಿಯನ್ನು ತೆರೆಯಲು ಯೋಜಿಸಿದ್ದು, ಎಷ್ಟು ಜನರನ್ನು ನೇಮಿಸಿಕೊಳ್ಳಲಿದೆ ಎಂದು ಬಹಿರಂಗಪಡಿಸಿಲ್ಲ. ಆದರೆ 'ಸಾಕಷ್ಟು ನೇಮಕಾತಿ' ಇರುತ್ತದೆ ಎಂದು ಹೇಳಲಾಗಿದೆ.

Recommended Video

Drone Prathap ಜೀವನಾಧಾರಿತ ಸಿನಿಮಾ ಎಲ್ಲಿಗೆ ಬಂತು ? | Oneindia Kannada

"ಜೂಮ್ ವಿಶ್ವದ ಅತ್ಯುತ್ತಮ ಏಕೀಕೃತ ಸಂವಹನ ಅನುಭವವನ್ನು ನೀಡುವತ್ತ ಗಮನಹರಿಸಿದೆ ಮತ್ತು ನಮ್ಮ ಸಂವಹನ ವೇದಿಕೆಯ ನಾವೀನ್ಯತೆ ಕೇಂದ್ರವಾಗಲಿರುವ ಬೆಂಗಳೂರಿನಲ್ಲಿ ತಂತ್ರಜ್ಞಾನ ಕೇಂದ್ರವನ್ನು ತೆರೆಯಲು ನಾವು ರೋಮಾಂಚನಗೊಂಡಿದ್ದೇವೆ" ಎಂದು ಜೂಮ್ನ ಉತ್ಪನ್ನ ಮತ್ತು ಎಂಜಿನಿಯರಿಂಗ್ ಅಧ್ಯಕ್ಷ ವೆಲ್ಚಾಮಿ ಶಂಕರಲಿಂಗಂ ಹೇಳಿದರು

Zoom ಬದಲಿಗೆ ಭಾರತೀಯ App ಅನ್ನು ಅಭಿವೃದ್ಧಿಪಡಿಸಲು ಭಾರತ ಸರ್ಕಾರ 10 ಕಂಪನಿಗಳನ್ನು ಪಟ್ಟಿ ಮಾಡಿದೆZoom ಬದಲಿಗೆ ಭಾರತೀಯ App ಅನ್ನು ಅಭಿವೃದ್ಧಿಪಡಿಸಲು ಭಾರತ ಸರ್ಕಾರ 10 ಕಂಪನಿಗಳನ್ನು ಪಟ್ಟಿ ಮಾಡಿದೆ

"ಭಾರತದಲ್ಲಿನ ಪ್ರತಿಭೆ ನಿಜಕ್ಕೂ ಅಸಾಧಾರಣವಾಗಿದೆ ಮತ್ತು ನಾವು ನಮ್ಮ ಕಾರ್ಯಾಚರಣೆಗಳನ್ನು ಅಳೆಯುವಾಗ ನಮ್ಮ ಡೆವೊಪ್ಸ್, ಐಟಿ, ಸೆಕ್ಯುರಿಟಿ ಮತ್ತು ಬಿಸಿನೆಸ್ ಆಪರೇಶನ್‌ಗಳ ತಂಡಗಳನ್ನು ಇಲ್ಲಿ ವಿಸ್ತರಿಸಲು ಎದುರು ನೋಡುತ್ತಿದ್ದೇವೆ."

Zoom Planning To Opening New Technology Centre In Bengaluru

ದೇಶದಲ್ಲಿ ಎರಡು ದತ್ತಾಂಶ ಕೇಂದ್ರಗಳನ್ನು ಹೊಂದಿರುವ ಜೂಮ್ ತನ್ನ ಮುಂಬೈ ಕಚೇರಿಯಲ್ಲಿ ತನ್ನ ಶಕ್ತಿಯನ್ನು ಮೂರು ಪಟ್ಟು ಹೆಚ್ಚಿಸಲು ಯೋಜಿಸುತ್ತಿದೆ ಎಂದು ಹೇಳಿದರು.ಭಾರತದಾದ್ಯಂತ ಬಳಕೆದಾರರ ಬೆಳವಣಿಗೆ ಹೆಚ್ಚುತ್ತಿದ್ದು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

2020 ರ ಜನವರಿಯಿಂದ ಏಪ್ರಿಲ್ ವರೆಗೆ, ಭಾರತದಲ್ಲಿ ಉಚಿತ ಬಳಕೆದಾರರ ಸೈನ್ ಅಪ್‌ಗಳಲ್ಲಿ ಶೇಕಡಾ 6,700 ರಷ್ಟು ಬೆಳವಣಿಗೆ ಕಂಡಿದೆ ಎಂದು ಜೂಮ್ ಹೇಳಿದೆ. ಈ ಪ್ರದೇಶದಲ್ಲಿ ಎಂಜಿನಿಯರ್‌ಗಳು, ಐಟಿ, ಭದ್ರತೆ ಮತ್ತು ವ್ಯವಹಾರ ಕಾರ್ಯಾಚರಣೆಗಳ ಮುಖ್ಯಸ್ಥರನ್ನು ತಕ್ಷಣ ನೇಮಕ ಮಾಡಲು ಪ್ರಾರಂಭಿಸುವುದಾಗಿ ಕಂಪನಿ ತಿಳಿಸಿದೆ.

English summary
US-based Zoom Video Communications on Tuesday announced to expand its presence in India by opening a new technology centre in Bengaluru, where it will hire key talent over the next few years
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X