ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

zomato-Blinkit ಡೀಲ್: ಜೂನ್ 17ಕ್ಕೆ ಸಭೆ

|
Google Oneindia Kannada News

ಮನೆ ಬಾಗಿಲಿಗೆ ಆಹಾರ ಡೆಲಿವರಿ ಮಾಡುವ ಜೊಮ್ಯಾಟೋ ಆನ್‌ಲೈನ್‌ ಶಾಪಿಂಗ್‌ ಪ್ಲಾಟ್‌ಫಾರ್ಮ್‌ ಬ್ಲಿಂಕಿಟ್‌ಅನ್ನು ವಿಲೀನ ಮಾಡಿಕೊಳ್ಳುವ ಪ್ರಕ್ರಿಯೆಗೆ ಸಹಿ ಹಾಕಲು ಜೂನ್ 17 ರಂದು ಸಭೆ ಸೇರಲಿದೆ ಎಂದು ಮೂಲಗಳಿಂದ ಮಾಹಿತಿ ತಿಳಿದಿದೆ.

ಕಳೆದ ಆಗಸ್ಟ್‌ನಲ್ಲಿ ಜೊಮ್ಯಾಟೋ ಸಾಫ್ಟ್‌ಬ್ಯಾಂಕ್ ಬೆಂಬಲಿತ ಬ್ಲಿಂಕಿಟ್‌ನಲ್ಲಿ 518 ರೂಪಾಯಿಗಳ ($67.77 ಮಿಲಿಯನ್) ಶೇ.9 ಕ್ಕಿಂತ ಹೆಚ್ಚು ಪಾಲನ್ನು ಪಡೆದುಕೊಂಡಿತ್ತು. ಆದರೆ ಮನಿಕಂಟ್ರೋಲ್‌ನ ವರದಿಯ ಪ್ರಕಾರ, ಒಪ್ಪಂದವು ಬ್ಲಿಂಕಿಟ್‌ನೊಂದಿಗೆ $700 ಮಿಲಿಯನ್ ಮೌಲ್ಯದ್ದಾಗಿರಬೇಕಿತ್ತು ಆದರೆ ಈಗ ಕಡಿಮೆಯಾಗುವ ಸಾಧ್ಯತೆಯಿದೆ.

ಭಾರತೀಯ ನೋಟಿನಲ್ಲಿ ಗಾಂಧಿ ಜೊತೆ ಟ್ಯಾಗೋರ್, ಕಲಾಂ ಫೋಟೋ ಹಾಕಲ್ಲಭಾರತೀಯ ನೋಟಿನಲ್ಲಿ ಗಾಂಧಿ ಜೊತೆ ಟ್ಯಾಗೋರ್, ಕಲಾಂ ಫೋಟೋ ಹಾಕಲ್ಲ

ಅಗತ್ಯ ವಸ್ತುಗಳ ತ್ವರಿತ ಪೂರೈಕೆ

ಅಗತ್ಯ ವಸ್ತುಗಳ ತ್ವರಿತ ಪೂರೈಕೆ

ಸ್ಥಳೀಯವಾಗಿ ಪ್ರಾಬಲ್ಯ ಹೊಂದಿ ಬೆಳೆಯುತ್ತಿರುವ ವಾಲ್‌ಮಾರ್ಟ್‌ನ ಫ್ಲಿಪ್‌ಕಾರ್ಟ್ ಹಾಗೂ ಅಮೆಜಾನ್‌ಗೆ ಪೈಪೋಟಿ ನೀಡಲು ದಿನಸಿಯಿಂದ ಹಿಡಿದು ಎಲೆಕ್ಟ್ರಾನಿಕ್ಸ್‌ವರೆಗೆ ಎಲ್ಲಾ ಅಗತ್ಯ ವಸ್ತುಗಳ ಪೂರೈಕೆಯನ್ನು ವೇಗಗೊಳಿಸಲು ಬ್ಲಿಂಕಿಟ್‌ನ ಸಿಇಒ ಅಲ್ಬಿಂದರ್‌ ಧಿಂಡ್ಸಾ ನಿರ್ಧರಿಸಿದ್ದು, ಜೊಮ್ಯಾಟೋ ಜೊತೆ ವಿಲೀನಕ್ಕೆ ಮುಂದಾಗಿದ್ದಾರೆ. ದೇಶಾದ್ಯಂತ 20ಕ್ಕೂ ಹೆಚ್ಚು ಸ್ಥಳಗಳಲ್ಲಿ ಕಾರ್ಯನಿರ್ವಹಿಸುವ ಈ ಸ್ಟಾರ್ಟಪ್ ಸಂಸ್ಥೆ 10 ನಿಮಿಷಗಳಲ್ಲಿ ಗ್ರಾಹಕರಿಗೆ ವಸ್ತುಗಳನ್ನು ವಿತರಣೆ ಮಾಡುತ್ತದೆ. ಇದು ಇತರೆ ಸ್ಪರ್ಧಿಗಳು ತೆಗೆದುಕೊಳ್ಳುವ ಸಮಯಕ್ಕಿಂತ ಕಡಿಮೆ ಇದೆ. ಸ್ವದೇಶಿ ಮೂಲದ ಬ್ಲಿಂಕಿಟ್‌ ಅನ್ನು 2013ರ ಡಿಸೆಂಬರ್‌ 27 ರಂದು ಅಲ್ಬಿಂದರ್‌ ಧಿಂಡ್ಸಾ ಹಾಗೂ ಸೌರಭ್‌ ಕುಮಾರ್‌ ಆರಂಭಿಸಿದ್ದರು.

ರಾಧಿಕಾ ಮರ್ಚೆಂಟ್: ಇವರೇ ನೋಡಿ ಅಂಬಾನಿ ಕುಟುಂಬದ ಕಿರಿಯ ಸೊಸೆರಾಧಿಕಾ ಮರ್ಚೆಂಟ್: ಇವರೇ ನೋಡಿ ಅಂಬಾನಿ ಕುಟುಂಬದ ಕಿರಿಯ ಸೊಸೆ

'ಡಿ ಮಿನಿಮಿಸ್' ವಿನಾಯಿತಿ

'ಡಿ ಮಿನಿಮಿಸ್' ವಿನಾಯಿತಿ

'ಡಿ ಮಿನಿಮಿಸ್' ವಿನಾಯಿತಿಯನ್ನು ಬಳಸಲು ಯೋಜಿಸಿರುವ ಕಾರಣ, ಬ್ಲಿಂಕಿಟ್ ಅನ್ನು ಸ್ವಾಧೀನಪಡಿಸಿಕೊಳ್ಳಲು Zomato ಗೆ ಭಾರತದ ಸ್ಪರ್ಧಾತ್ಮಕ ಆಯೋಗದ (CCI) ಅನುಮತಿ ಅಗತ್ಯವಿಲ್ಲ. ಇದು ಭಾರತೀಯ ಘಟಕವನ್ನು ಖರೀದಿಸುತ್ತದೆ ಮತ್ತು ಸ್ಪೋರ್ ಕಂಪನಿಯನ್ನು ಅಲ್ಲ ಎಂದು ಮನಿ ಕಂಟ್ರೋಲ್ ವರದಿ ಮಾಡಿದೆ.

ಜೊಮ್ಯಾಟೋ ಬ್ಲಿಂಕಿಟ್ ವಿಲೀನ

ಜೊಮ್ಯಾಟೋ ಬ್ಲಿಂಕಿಟ್ ವಿಲೀನ

ಜೊಮ್ಯಾಟೋ ಬ್ಲಿಂಕಿಟ್ (ಹಿಂದೆ ಗ್ರೋಫರ್ಸ್) ಸ್ವಾಧೀನಪಡಿಸಿಕೊಂಡ ಮೇಲೆ, ಜೊಮ್ಯಾಟೋ ಸಿಇಓ ದೀಪಿಂದರ್ ಗೋಯಲ್ ಅವರು ಮಾತನಾಡಿ, "ಸಾಲದ ಬಡ್ಡಿ ದರವು ವರ್ಷಕ್ಕೆ 12 ಪ್ರತಿಶತ ಅಥವಾ ಅದಕ್ಕಿಂತ ಹೆಚ್ಚಾಗಿರುತ್ತದೆ ಮತ್ತು ಒಂದು ವರ್ಷಕ್ಕಿಂತ ಹೆಚ್ಚಿಲ್ಲದ ಅವಧಿಯೊಂದಿಗೆ ಇರುತ್ತದೆ. ಈ ಸಾಲವು ಜಿಐಪಿಎಲ್‌ನ ಬಂಡವಾಳದ ಅವಶ್ಯಕತೆಗಳನ್ನು ಸಮೀಪದ ಅವಧಿಯಲ್ಲಿ ಬೆಂಬಲಿಸುತ್ತದೆ. ಮುಂದಿನ ಎರಡು ವರ್ಷಗಳಲ್ಲಿ ಭಾರತದಲ್ಲಿ ತ್ವರಿತ ವಾಣಿಜ್ಯದಲ್ಲಿ $400 ಮಿಲಿಯನ್ ಹಣವನ್ನು ಹೂಡಿಕೆ ಮಾಡುವ ನಮ್ಮ ಉದ್ದೇಶಿತ ಉದ್ದೇಶಕ್ಕೆ ಅನುಗುಣವಾಗಿದೆ ಎಂದು ಕಂಪನಿಯು ಫೈಲಿಂಗ್‌ನಲ್ಲಿ ತಿಳಿಸಿದೆ'' ಎಂದಿದ್ದಾರೆ.

ಬ್ಲಿಂಕಿಟ್ ಹೊಗಳಿದ ದೀಪಿಂಡರ್ ಗೊಯಲ್

ಬ್ಲಿಂಕಿಟ್ ಹೊಗಳಿದ ದೀಪಿಂಡರ್ ಗೊಯಲ್

ಗೋಯಲ್ ಅವರು, 'ಅವರ ಅಲ್ಪಾವಧಿಯ ಬಂಡವಾಳದ ಅಗತ್ಯಗಳನ್ನು ನಿಧಿಸುವುದಕ್ಕಾಗಿ ನಾವು ಅವರಿಗೆ USD 150 ಮಿಲಿಯನ್ ವರೆಗೆ ಅಲ್ಪಾವಧಿಯ ಸಾಲವನ್ನು ನೀಡಲು ಬದ್ಧರಾಗಿದ್ದೇವೆ' ಎಂದಿದ್ದಾರೆ.


''ವಿಶೇಷವಾಗಿ ನಮ್ಮ ಪ್ರಮುಖ ಆಹಾರ ವಿತರಣಾ ವ್ಯವಹಾರಕ್ಕೆ ಇದು ಸಿನರ್ಜಿಸ್ಟಿಕ್ ಆಗಿದೆ. ಬ್ಲಿಂಕಿಟ್ ಮಾಡಿರುವ ಪ್ರಗತಿಯಿಂದ ಉತ್ಸುಕರಾಗಿದ್ದೇವೆ. ವ್ಯವಹಾರವು ಅದರ ಆರಂಭಿಕ ಹಂತದಲ್ಲಿರುವುದರಿಂದ ಮಾಡಲು ಬಹಳಷ್ಟು ಇದೆ. ಕಳೆದ ಆರು ತಿಂಗಳಲ್ಲಿ Blinkit ಚೆನ್ನಾಗಿ ಬೆಳೆದಿದೆ ಮತ್ತು ಅದರ ಕಾರ್ಯಾಚರಣೆಯ ನಷ್ಟವನ್ನು ಗಣನೀಯವಾಗಿ ಕಡಿಮೆ ಮಾಡಿದೆ' ಎಂದು ಗೋಯಲ್ ಹೇಳಿದ್ದಾರೆ.

ಒಪ್ಪಂದದ ರೂಪುರೇಷೆಗಳನ್ನು ಅಂತಿಮಗೊಳಿಸುತ್ತಿರುವಾಗ, ಜೊಮಾಟೊ ಷೇರುದಾರರು ತಮ್ಮ ಕಂಪನಿಯಲ್ಲಿ ಹೊಂದಿರುವ ಪ್ರತಿಯೊಂದಕ್ಕೂ 10 ಬ್ಲಿಂಕಿಟ್ ಷೇರುಗಳನ್ನು ಪಡೆಯುತ್ತಾರೆ ಎಂದು ನಿರೀಕ್ಷಿಸಲಾಗಿದೆ ಎಂದು ಈ ಹಿಂದೆ ವರದಿ ಮಾಡಲಾಗಿತ್ತು.

(ಒನ್ಇಂಡಿಯಾ ಸುದ್ದಿ)

English summary
Sources say the meeting will be held on June 17 to sign up for the merger of Zomato online shopping platform Blinkkit, a food delivery to the doorstep.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X