ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಊಬರ್ ಈಟ್ ಇಂಡಿಯಾ ಜೊಮ್ಯಾಟೊಗೆ ಮಾರಾಟ?

|
Google Oneindia Kannada News

ನವದೆಹಲಿ, ಡಿಸೆಂಬರ್ 17: ಊಬರ್ ಈಟ್ಸ್ ಇಂಡಿಯಾ ಜೊಮ್ಯಾಟೊಗೆ ಮಾರಾಟವಾಗಲಿದೆ?. ಈ ಬಗ್ಗೆ ಪ್ರಾಥಮಿಕ ಮಾತುಕತೆ ಆರಂಭವಾಗಿದ್ದು, ಭಾರತದ ಆಹಾರ ವಿತರಣಾ ಉದ್ಯಮದಲ್ಲಿ ಶೀಘ್ರದಲ್ಲೇ ಹೊಸ ಬೆಳವಣಿಗೆ ನಡೆಯುವ ನಿರೀಕ್ಷೆ ಇದೆ.

207ರಲ್ಲಿ ಊಬರ್ ಈಟ್ಸ್ ಇಂಡಿಯಾ ಆರಂಭಗೊಂಡಿತ್ತು. ಜೊಮ್ಯಾಟೊ ಮತ್ತು ಸ್ವಿಗ್ಗಿ ಜೊತೆ ಪ್ರತಿಸ್ಪರ್ಧೆ ನೀಡಲು ಊಬರ್ ಈಟ್ಸ್‌ಗೆ ಸಾಧ್ಯವಾಗುತ್ತಿಲ್ಲ. ಆದ್ದರಿಂದ, ಜೊಮ್ಯಾಟೊಗೆ ಮಾರಾಟ ಮಾಡುವ ತೀರ್ಮಾನ ಕೈಗೊಳ್ಳಲಾಗಿದೆ.

ಆಹಾ ಇಡ್ಲಿ ವಡೆ ಸಾಂಬಾರ್, ನಾನೇ ಮಾಡೋ ಬಟ್ಲರ್!ಆಹಾ ಇಡ್ಲಿ ವಡೆ ಸಾಂಬಾರ್, ನಾನೇ ಮಾಡೋ ಬಟ್ಲರ್!

ಊಬರ್ ಈಟ್ಸ್ ಮಾರುಕಟ್ಟೆ ಮೌಲ್ಯ 400 ದಶಲಕ್ಷ ಡಾಲರ್ ಎಂದು ಅಂದಾಜಿಸಲಾಗಿದೆ. ಜೊಮ್ಯಾಟೊ ಊಬರ್ ಈಟ್ಸ್‌ನಲ್ಲಿ 150 ರಿಂದ 200 ದಶಲಕ್ಷ ಡಾಲರ್ ಹೂಡಿಕೆ ಮಾಡುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಈ ವರ್ಷದ ಅಂತ್ಯಕ್ಕೆ ಈ ಮಾತುಕತೆ ಅಂತಿಮ ಹಂತಕ್ಕೆ ಬರಬಹುದು.

ಇಂದಿರಾ ಕ್ಯಾಂಟೀನ್‌ಗೆ ಆಹಾರ ಪೂರೈಕೆಗೆ ಆದಮ್ಯ ಚೇತನ ಟೆಂಡರ್ ಇಂದಿರಾ ಕ್ಯಾಂಟೀನ್‌ಗೆ ಆಹಾರ ಪೂರೈಕೆಗೆ ಆದಮ್ಯ ಚೇತನ ಟೆಂಡರ್

Zomato All Set To Buy UberEats India

ಜೊಮ್ಯಾಟೋ ಭಾರತದ ಅತಿ ದೊಡ್ಡ ಆಹಾರ ವಿತರಣೆ ಉದ್ಯಮವಾಗಿದೆ. 1,50,000 ರೆಸ್ಟೋರೆಂಟ್‌ಗಳಿಂದ ಪ್ರತಿದಿನ 1.3 ದಶಲಕ್ಷ ಆರ್ಡರ್‌ಗಳನ್ನು ಇದು ವಿತರಣೆ ಮಾಡುತ್ತಿದ್ದು, ಸ್ವಿಗ್ಗಿ ಜೊತೆ ಸ್ಪರ್ಧೆಗೆ ಇಳಿದಿದೆ.

ಕೊನೆಗೂ ಸಾಕುನಾಯಿ ಪತ್ತೆ! ಸಂಬಂಧವಿಲ್ಲ ಎಂದ ಜೊಮ್ಯಾಟೋಕೊನೆಗೂ ಸಾಕುನಾಯಿ ಪತ್ತೆ! ಸಂಬಂಧವಿಲ್ಲ ಎಂದ ಜೊಮ್ಯಾಟೋ

ವ್ಯಾಪಾರಿ ಸಲಹಾ ಸಂಸ್ಥೆ ಮಾರ್ಕೆಟ್ ರಿಸರ್ಚ್ ಫ್ಯೂಚರ್ ಪ್ರಕಾರ ಭಾರತದ ಆನ್‌ಲೈನ್ ಆಹಾರ ವಿತರಣೆ ಉದ್ಯಮ ವಾರ್ಷಿಕ ಶೇ 16ರ ದರದಲ್ಲಿ ಬೆಳವಣಿಗೆ ಸಾಧಿಸುತ್ತಿದೆ. 2023ರ ವೇಳೆಗೆ ಮಾರುಕಟ್ಟೆ ಮೌಲ್ಯ 17.02 ಶತಕೋಟಿ ಡಾಲರ್‌ಗಳಿಗೆ ಹೆಚ್ಚಳವಾಗಲಿದೆ ಎಂದು ಅಂದಾಜಿಸಲಾಗಿದೆ.

ಊಬರ್ ಇಂಡಿಯಾ ಜೊಮ್ಯಾಟೊಗೆ ಮಾರಾಟವಾದರೆ ದೇಶದ ಆಹಾರ ವಿತರಣಾ ಉದ್ಯಮದಲ್ಲಿ ಹೊಸ ಕ್ರಾಂತಿಯಾಗಲಿದೆ. ಈ ಮಾರಾಟ ಪ್ರಕ್ರಿಯೆ ಅಂತಿಮಗೊಂಡರೆ ಸ್ವಿಗ್ಗಿ ಸಹ ತನ್ನ ಉದ್ಯಮವನ್ನು ವಿಸ್ತರಣೆ ಮಾಡಲು ಹೊಸ ತಂತ್ರವನ್ನು ಅನುಸರಿಸಬೇಕಾಗಿದೆ.

English summary
Uber may sell UberEats India to Zomato. Talks are in first stage the deal may be finalised before the end of the year 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X