ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವದ ಮೊದಲ RO ವಾಟರ್ ಪ್ಯೂರಿಫೈಯರ್ ಬಿಡುಗಡೆ!

|
Google Oneindia Kannada News

ಬೆಂಗಳೂರು, ಡಿಸೆಂಬರ್ 17: ಭಾರತದ ಅತ್ಯಂತ ವಿಶ್ವಾಸಾರ್ಹವಾದ ವಾಟರ್ ಪ್ಯೂರಿಫೈಯರ್ ಬ್ರಾಂಡ್ ಆಗಿರುವ ಕೆಂಟ್ RO ಇದೇ ಮೊದಲ ಬಾರಿಗೆ ನೀರು ವ್ಯರ್ಥವಾಗದ ತಂತ್ರಜ್ಞಾನವನ್ನು ದೇಶೀಯವಾಗಿ ಬಳಸಿಕೊಂಡು ಹೊಸ ಆರ್‍ಒ ವಾಟರ್ ಪ್ಯೂರಿಫೈಯರ್ ಅನ್ನು ಅಭಿವೃದ್ಧಿಪಡಿಸಿದೆ.

ಇದು ಝೀರೋ ವಾಟರ್ ವೇಸ್ಟೇಜ್ ಆರ್ ಒ ಪ್ಯೂರಿಫೈಯರ್ ಆಗಿದ್ದು, ಈ ಹೊಸ ಉತ್ಪನ್ನವನ್ನು ಆರ್ಟ್ ಆಫ್ ಲಿವಿಂಗ್‍ನ ಶ್ರೀ ರವಿಶಂಕರ್, ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಮತ್ತು ಕೆಂಟ್ ROದ ಸಿಎಚಿಡಿ ಡಾ.ಮಹೇಶ್ ಗುಪ್ತಾ ಅವರ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಯಿತು.

ಈ ಝೀರೋ ವಾಟರ್ ವೇಸ್ಟೇಜ್ ಟೆಕ್ನಾಲಜಿ ಕೆಂಟ್ RO ದಲ್ಲಿ ಒಂದು ಹನಿ ನೀರೂ ಸಹ ವ್ಯರ್ಥವಾಗುವುದಿಲ್ಲ. ಇದರ ಬದಲಿಗೆ ವ್ಯರ್ಥವಾಗುವ ನೀರನ್ನು ಪುನಃ ಶುದ್ಧೀಕರಿಸಲಿದೆ. ಸಾಂಪ್ರದಾಯಿಕವಾದ RO ವಾಟರ್ ಪ್ಯೂರಿಫೈಯರ್ 4:1 ರ ಅನುಪಾತದಲ್ಲಿ ನೀರನ್ನು ಪುನಃ ಪಡೆಯುತ್ತದೆ. 4 ಗ್ಲಾಸ್ ನೀರನ್ನು ಶುದ್ಧೀಕರಿಸಿದರೆ ಅದರಲ್ಲಿ ಕೇವಲ 1 ಗ್ಲಾಸ್ ಶುದ್ಧ ನೀರು ಸಿಗುತ್ತದೆ. ಆದರೆ, ಈ ಹೊಸ ತಂತ್ರಜ್ಞಾನದಿಂದ ಶೇ.50 ರಷ್ಟು ನೀರು ಲಭ್ಯವಾಗುತ್ತದೆ.

4 ಗ್ಲಾಸ್ ನೀರಿಗೆ 2 ಗ್ಲಾಸ್ ಶುದ್ಧ ನೀರು ಸಿಗುತ್ತದೆ

4 ಗ್ಲಾಸ್ ನೀರಿಗೆ 2 ಗ್ಲಾಸ್ ಶುದ್ಧ ನೀರು ಸಿಗುತ್ತದೆ

ಇದರಿಂದ 4 ಗ್ಲಾಸ್ ನೀರಿಗೆ 2 ಗ್ಲಾಸ್ ಶುದ್ಧ ನೀರು ಸಿಗುತ್ತದೆ. ಉಳಿದ ಎರಡು ಗ್ಲಾಸ್ ನೀರು ಮತ್ತೆ ಸಂಸ್ಕರಣೆಯಾಗಿ ಕುಡಿಯಲು ಯೋಗ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ತಂತ್ರಜ್ಞಾನದ ROದಲ್ಲಿ ಒಂದು ಹನಿ ನೀರೂ ಸಹ ವ್ಯರ್ಥವಾಗುವುದಿಲ್ಲ. ಹಲವು ಬಗೆಯ ಸುಧಾರಿತ ಫಿಲ್ಟರೇಶನ್ ಪ್ರಕ್ರಿಯೆಗಳ ಮೂಲಕ ಈ RO ಅನ್ನು ಅಭಿವೃದ್ಧಿಪಡಿಸಲಾಗಿದೆ.

RO ಸಿಸ್ಟಮ್‍ನ ಅಧ್ಯಕ್ಷ ಮಹೇಶ್ ಗುಪ್ತಾ

RO ಸಿಸ್ಟಮ್‍ನ ಅಧ್ಯಕ್ಷ ಮಹೇಶ್ ಗುಪ್ತಾ

ಈ ಸಂದರ್ಭದಲ್ಲಿ ಮಾತನಾಡಿದ ಕೆಂಟ್ RO ಸಿಸ್ಟಮ್‍ನ ಅಧ್ಯಕ್ಷ ಮಹೇಶ್ ಗುಪ್ತಾ ಅವರು, ''ಸಾಂಪ್ರದಾಯಿಕವಾದ ಪ್ಯೂರಿಫೈಯರ್‍ನಲ್ಲಿ 40 ಲೀಟರ್ ನೀರನ್ನು ಸಂಸ್ಕರಣೆ ಮತ್ತು ಶುದ್ಧೀಕರಣ ಮಾಡಿದರೆ ಕೇವಲ 10 ಲೀಟರ್ ಶುದ್ಧ ಕುಡಿಯುವ ನೀರು ಸಿಗುತ್ತದೆ. ಇದನ್ನು ಗಮನಿಸಿದರೆ ಅಥವಾ ಲೆಕ್ಕಾಚಾರ ಹಾಕಿದರೆ ನೀವು ಎಷ್ಟು ಪ್ರಮಾಣದಲ್ಲಿ ನೀರನ್ನು ಪ್ರತಿದಿನ ವ್ಯರ್ಥ ಮಾಡುತ್ತಿದ್ದೇವೆ ಎಂಬುದು ತಿಳಿಯುತ್ತದೆ. ಈ ವ್ಯರ್ಥವಾಗುವ ನೀರಿನ ಪ್ರಮಾಣವನ್ನು ಗಮನಿಸಿ ಕೆಂಟ್ ಆರ್‍ಒ ಸಿಸ್ಟಮ್ಸ್ ಆವಿಷ್ಕಾರವೆನಿಸುವ 'ಝೀರೋ ವಾಟರ್ ವೇಸ್ಟೇಜ್ ಟೆಕ್ನಾಲಜಿ'ಯನ್ನು ಅಳವಡಿಸಿ ನೀರು ವ್ಯರ್ಥವಾಗುವುದನ್ನು ತಪ್ಪಿಸುವ ಆರ್‍ಒವನ್ನು ಬಿಡುಗಡೆ ಮಾಡುತ್ತಿದೆ'' ಎಂದರು.

ಖನಿಜಾಂಶಗಳನ್ನು ಸೇರಿಸಿ ಶುದ್ಧೀಕರಿಸುತ್ತದೆ

ಖನಿಜಾಂಶಗಳನ್ನು ಸೇರಿಸಿ ಶುದ್ಧೀಕರಿಸುತ್ತದೆ

ಈ ವಿನೂತನವಾದ ತಂತ್ರಜ್ಞಾನವನ್ನು ಕಂಪ್ಯೂಟರ್ ಕಂಟ್ರೋಲ್ಡ್ ಪ್ರೊಸೆಸ್ ಆಗಿ ಬಳಕೆ ಮಾಡಲಾಗುತ್ತಿದ್ದು, ಇದು ಶೇ.50 ರಷ್ಟು ನೀರನ್ನು ಶುದ್ಧೀಕರಿಸುತ್ತದೆ. ಹೊರಗೆ ಹೋಗುವ ಉಳಿದ ನೀರನ್ನು ಪುನಃ ಟ್ಯಾಂಕಿಗೆ ತೆಗೆದುಕೊಂಡು ಶುದ್ಧೀಕರಿಸುತ್ತದೆ. ಇದರ ಮತ್ತೊಂದು ಪ್ರಮುಖ ಅಂಶವೆಂದರೆ ಅತ್ಯಂತ ಕಳಪೆ ನೀರನ್ನೂ ಶುದ್ಧೀಕರಿಸಿ ಅಗತ್ಯ ಖನಿಜಾಂಶಗಳನ್ನು ಸೇರಿಸಿ ಶುದ್ಧೀಕರಿಸುತ್ತದೆ. ಈ ತಂತ್ರಜ್ಞಾನವನ್ನು ಹಲವಾರು ಮಾನ್ಯತೆ ಪಡೆದಿರುವ ಸಂಸ್ಥೆಗಳಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದೆ.

11 ವಿವಿಧ ಸ್ಥಳಗಳ ನೀರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ

11 ವಿವಿಧ ಸ್ಥಳಗಳ ನೀರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ

ಚಂಡೀಗಢ, ಗಾಂಧಿನಗರ, ಪಾಟ್ನ, ಬೆಂಗಳೂರು, ಜಮ್ಮು, ಲಕ್ನೋ, ಚೆನ್ನೈ ಮತ್ತು ಡೆಹ್ರಾಡೂನ್ ಸೇರಿದಂತೆ ದೇಶದ ಬಹುತೇಕ ನಗರಗಳಲ್ಲಿನ ಕೊಳಾಯಿ ನೀರಿನ ಗುಣಮಟ್ಟ ಕಳಪೆಯದ್ದಾಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿಯ 11 ವಿವಿಧ ಸ್ಥಳಗಳ ನೀರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಶುದ್ಧ ಕುಡಿಯುವ ನೀರಿನ ಗುಣಮಟ್ಟಕ್ಕಿಂತ ಕಡಿಮೆ ದರ್ಜೆಯದ್ದಾಗಿದೆ ಎಂದು ವರದಿ ತಿಳಿಸಿದೆ.

English summary
ZERO WATER WASTAGE RO Purifiers. Launched in Bangalore by Sri Sri Ravishankar, founder Art of Living.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X