ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ದರ ಪಟ್ಟಿಯೊಂದಿಗೆ ಪ್ರೇಕ್ಷಕರ ಮುಂದೆ ZEE ವಾಹಿನಿ

|
Google Oneindia Kannada News

ಮುಂಬೈ, ಅಕ್ಟೋಬರ್ 18: ಭಾರತದ ಪ್ರಮುಖ ಮಾಧ್ಯಮ ಮತ್ತು ಮನರಂಜನಾ ಶಕ್ತಿಕೇಂದ್ರ ಎನಿಸಿದ ಜೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್ (ಝೀಲ್) ಭಾರತದಾದ್ಯಂತ ಲಕ್ಷಾಂತರ ವೀಕ್ಷಕರ ವೈವಿಧ್ಯಮಯ ಮನರಂಜನಾ ಆದ್ಯತೆಗಳಿಗೆ ಸೇವೆ ಒದಗಿಸುವ ದೃಷ್ಟಿಯಿಂದ ಬಾಂಬೆ ಹೈಕೋರ್ಟ್ ನ್ಯೂ ಟಾರಿಫ್ ಆರ್ಡರ್ (ಎನ್‍ಟಿಓ) 2.0ಗೆ ಸಂಬಂಧಿಸಿದಂತೆ 30.06.2021ರಂದು ನೀಡಿದ ಆದೇಶಕ್ಕೆ ಅನುಸಾರವಾಗಿ ತನ್ನ ಹೊಸ ಎ-ಲಾ-ಕಾರ್ಟೆ ಚಾನೆಲ್ ಮತ್ತು ಹೊಸ ಟಾರಿಫ್ ಆರ್ಡರ್ (ಎನ್‍ಟಿಓ) 2.0 ಬೆಲೆಗುಚ್ಛ ಶ್ರೇಣಿಯನ್ನು ಬಿಡುಗಡೆ ಮಾಡಿದೆ.

ಪ್ರಮುಖ ಭಾರತೀಯ ಮಾಧ್ಯಮ ಮತ್ತು ಮನರಂಜನಾ ಕಂಪನಿಯಾಗಿರುವ ಝೀಲ್, ಸುಮಾರು ಮೂರು ದಶಕಗಳಲ್ಲಿ ಭಾರತೀಯ ವೀಕ್ಷಕರೊಂದಿಗೆ ಬಲವಾದ ಮತ್ತು ಆಳವಾಗಿ ಬೇರೂರಿದ ಸಂಬಂಧವನ್ನು ನಿರ್ಮಿಸಿದೆ. ಝೀಲ್‍ನ ಹಕ್ಕುಗಳಿಗೆ ಸಂಬಂಧಿಸಿದಂತೆ ಈ ಬೆಲೆನಿಗದಿಯನ್ನು ಯಾವುದೇ ಪೂರ್ವಾಗ್ರಹವಿಲ್ಲದೇ ಬಿಡುಗಡೆ ಮಾಡಲಾಗಿದ್ದು, ಇದು ಘನ ಸುಪ್ರೀಂಕೋರ್ಟನಲ್ಲಿ ನ್ಯೂ ಟಾರೀಫ್ ಆರ್ಡರ್ (ಎನ್‍ಟಿಓ) 2.0ಕ್ಕೆ ಸಂಬಂಧಿಸಿದಂತೆ ಬಾಕಿ ಇರುವ ಅರ್ಜಿಗೆ ಅನುಸಾರವಾಗಿರುತ್ತದೆ.

ಸೋನಿ ಇಂಡಿಯಾ ತೆಕ್ಕೆಗೆ ಬಿದ್ದ ZEE ಎಂಟರ್‌ಟೇನ್‌ಮೆಂಟ್ಸೋನಿ ಇಂಡಿಯಾ ತೆಕ್ಕೆಗೆ ಬಿದ್ದ ZEE ಎಂಟರ್‌ಟೇನ್‌ಮೆಂಟ್

ಹೊಸ ಎ-ಲಾ-ಕಾರ್ಟೆ ಚಾನೆಲ್ ಮತ್ತು ಹೊಸ ಟಾರಿಫ್ ಆರ್ಡರ್ (ಎನ್‍ಟಿಓ) 2.0 ಬೆಲೆಗುಚ್ಛ ಶ್ರೇಣಿ ಪ್ರಕಟಿಸಿದ ಝೀಲ್ ಭಾರತದಾದ್ಯಂತ ಚಂದಾದಾರರಿಗೆ ಗರಿಷ್ಠ ಸ್ಥಿತಿಸ್ಥಾಪಕತ್ವ ಮತ್ತು ಅನಿಯಮಿತ ಮನರಂಜನೆಯೊಂದಿಗೆ ಅತ್ಯಧಿಕ ಮೌಲ್ಯ ನೀಡುವ ಬದ್ಧತೆಯನ್ನು ಪುನರುಚ್ಚರಿಸಿದೆ.

ಮೂರು ದಶಕಗಳ ಹಿಂದೆ ಆರಂಭವಾದ ಝೀಲ್

ಮೂರು ದಶಕಗಳ ಹಿಂದೆ ಆರಂಭವಾದ ಝೀಲ್

ದೇಶಾದ್ಯಂತ ಎಲ್ಲ ವೀಕ್ಷಕರ ಜತೆ ಮೂರು ದಶಕಗಳ ಹಿಂದೆ ಆರಂಭವಾದಾಗಿನಿಂದಲೂ ಝೀಲ್ ತನ್ನ ಪ್ರಬಲ ಹಾಗೂ ಆಳವಾಗಿ ಬೇರೂರಿದ ಸಂಬಂಧವನ್ನು ಹೊಂದಿದೆ. ಝೀ ಚಾನಲ್ ಸಮೂಹ ಬಹು ವೀಕ್ಷಕ ವಿಭಾಗಗಳು ಮತ್ತು ಪ್ರಕಾರಗಳಲ್ಲಿ ಅತ್ಯುತ್ತಮ ವೈವಿಧ್ಯಮಯ ಮನರಂಜನೆಯನ್ನು ನೀಡುತ್ತಾ ಬಂದಿದ್ದು, 11 ಭಾಷೆಗಳಲ್ಲಿ 67 ಚಾನೆಲ್‍ಗಳ ವಿಶಾಲವಾದ ಜಾಲದ ಹೆಜ್ಜೆಗುರುತನ್ನು ಹೊಂದಿದೆ.

ಭಾರತದಾದ್ಯಂತ ಇರುವ ಜಾಲವು 606 ದಶಲಕ್ಷ ವೀಕ್ಷಕರ ನೆಲೆಯನ್ನು ಹೊಂದಿದ್ದು, ಮತ್ತು ವಾರಕ್ಕೆ 163 ಶತಕೋಟಿ ನಿಮಿಷಗಳಿಗೂ ಅಧಿಕ ಅವಧಿಯ ಕಾರ್ಯಕ್ರಮಗಳು ಬಳಕೆಯಾಗುತ್ತಿವೆ. ಇದು ಮರಾಠಿ, ಬಾಂಗ್ಲಾ, ಕನ್ನಡ, ತೆಲುಗು, ತಮಿಳು, ಮಲಯಾಳಂ, ಭೋಜ್‍ಪುರಿ, ಒಡಿಯಾ, ಪಂಜಾಬಿ ಮತ್ತು ಇಂಗ್ಲಿಷ್, ಹಿಂದಿ ಮತ್ತು ಪ್ರಾದೇಶಿಕ ಭಾಷೆ ಮಾರುಕಟ್ಟೆಗಳಲ್ಲಿ ಜಿಇಸಿ, ಚಲನಚಿತ್ರಗಳು, ಸುದ್ದಿ, ಸಂಗೀತ, ಜೀವನಶೈಲಿ ಮತ್ತು ಎಚ್‍ಡಿ ಪ್ರಕಾರಗಳ ಮೂಲಕ ಅತಿ ಹೆಚ್ಚು ವೀಕ್ಷಕರನ್ನು ಹೊಂದಿದೆ.

ಏಷ್ಯಾದ ಪ್ರದೇಶದ ಅಧ್ಯಕ್ಷ ರಾಹುಲ್ ಜೋಹ್ರಿ

ಏಷ್ಯಾದ ಪ್ರದೇಶದ ಅಧ್ಯಕ್ಷ ರಾಹುಲ್ ಜೋಹ್ರಿ

ಹೊಸ ಚಾನೆಲ್ ಬೆಲೆನಿಗದಿಪಡಿಸಿರುವ ಕುರಿತು ವಿವರ ನೀಡಿದ ಝೀಲ್ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್‍ನ ದಕ್ಷಿಣ ಏಷ್ಯಾದ ಪ್ರದೇಶದ ಅಧ್ಯಕ್ಷ ರಾಹುಲ್ ಜೋಹ್ರಿ. "ಝೀಲ್‍ನ ಅಪ್ರತಿಮ ಯಶಸ್ಸು ಭಾರತದಾದ್ಯಂತ ಹರಡಿರುವ ವೀಕ್ಷಕರೊಂದಿಗಿನ ಪ್ರಬಲವಾದ ಬಾಂಧವ್ಯದ ಮತ್ತು ಇಡಿ ಹಕ್ಕುದಾರರ ಸಮುದಾಯದ ಜತೆಗೆ ಇದು ಆಳವಾಗಿ ಬೇರೂರಿರುವ ಸಂಬಂಧದ ಪರಿಣಾಮವಾಗಿದೆ. ಈ ಅಸಾಧಾರಣ ಪಾಲುದಾರಿಕೆಗಳು ಸುಮಾರು ಮೂರು ದಶಕಗಳಿಂದ ಅನೇಕ ಮಾರುಕಟ್ಟೆಗಳಲ್ಲಿ ನಮ್ಮ ನಾಯಕತ್ವಕ್ಕೆ ಕಾರಣವಾಗಿವೆ. ರಾಷ್ಟ್ರೀಯ ಮತ್ತು ಪ್ರಾದೇಶಿಕ ಚಾನೆಲ್‍ಗಳನ್ನು ಸಮೃದ್ಧಗೊಳಿಸುವುದರ ಮೂಲಕ ಮತ್ತು ಆದಾಯ ಗಳಿಕೆಗಾಗಿ ನವೀನ ಪರಿಹಾರಗಳ ಮೂಲಕ ಅತ್ಯಂತ ಮನರಂಜನೆಯ ಮತ್ತು ಅತ್ಯುನ್ನತ ಗುಣಮಟ್ಟದ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸುವ ಮೂಲಕ ನಾವು ಇಡೀ ಪರಿಸರ ವ್ಯವಸ್ಥೆಗೆ ಮೌಲ್ಯ ಸೃಷ್ಟಿಸುವುದನ್ನು ಮುಂದುವರಿಸುತ್ತೇವೆ. ಎನ್‍ಟಿಓ 2.0 ಅನುಷ್ಠಾನದ ನಂತರ, ಝೀ ಚಾನೆಲ್‍ಗಳು ಮಾರುಕಟ್ಟೆಯಲ್ಲಿ ತಮ್ಮ ಬೆಳವಣಿಗೆಯ ವೇಗವನ್ನು ಮುಂದುವರಿಸುತ್ತವೆ ಮತ್ತು ಕಂಪನಿಗೆ ಹೆಚ್ಚಿನ ಮೌಲ್ಯವನ್ನು ಸೃಷ್ಟಿಸುತ್ತವೆ ಎಂದು ನಮಗೆ ವಿಶ್ವಾಸವಿದೆ" ಎಂದು ಹೇಳಿದರು.

ಕಂದಾಯ ಅಧಿಕಾರಿ ಅತುಲ್ ದಾಸ್

ಕಂದಾಯ ಅಧಿಕಾರಿ ಅತುಲ್ ದಾಸ್

ಈ ಘೋಷಣೆ ಬಗ್ಗೆ ಮಾತನಾಡಿದ ಅಂಗಸಂಸ್ಥೆ ಮಾರಾಟ ವಿಭಾಗದ ಮುಖ್ಯ ಕಂದಾಯ ಅಧಿಕಾರಿ ಅತುಲ್ ದಾಸ್, "ಝೀನಲ್ಲಿ, ನಮ್ಮ ಗ್ರಾಹಕರಿಗೆ ಉತ್ತಮ ಮನರಂಜನೆಯನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ. 2019 ರಲ್ಲಿ ಹೊಸ ಬೆಲೆ ಪದ್ಧತಿ ಭಾರತದಲ್ಲಿ ಟೆಲಿವಿಷನ್ ಬಳಕೆ ವಿಧಾನದಲ್ಲಿ ಪ್ರಮುಖ ಬದಲಾವಣೆಯನ್ನು ತಂದಿತು. ಒಂದು ಕಡೆ, ಇದು ಚಾನೆಲ್‍ಗಳ ಎಂಆರ್‌ಪಿ ಬಗ್ಗೆ ಪಾರದರ್ಶಕತೆಯನ್ನು ತಂದರೆ, ಮತ್ತೊಂದೆಡೆ ಗ್ರಾಹಕರು ತಾವು ವೀಕ್ಷಿಸಲು ಬಯಸುವ ಚಾನೆಲ್‍ಗಳನ್ನು ಆಯ್ಕೆಯ ಇಚ್ಛೆಯನ್ನು ನೀಡಿದೆ. ಎನ್‍ಟಿಓ 2.0 ನೊಂದಿಗೆ, ಚಾನಲ್‍ಗಳ ಆಯ್ಕೆಯಲ್ಲಿ ಗ್ರಾಹಕರು ಇನ್ನಷ್ಟು ಸ್ಥಿತಿ ಸ್ಥಾಪಕತ್ವವನ್ನು ಪಡೆಯುತ್ತಾರೆ. ನಾವು ದೇಶಾದ್ಯಂತ ಗ್ರಾಹಕರಿಗೆ ವಿವಿಧ ಬೆಲೆಯಲ್ಲಿ ವಿವಿಧ ಬೆಲೆಗುಚ್ಛ ಶ್ರೇಣಿ ನೀಡುವುದನ್ನು ಮುಂದುವರಿಸುತ್ತೇವೆ. ಝೀ ಕೆಫೆ ಮತ್ತು & ಫ್ಲಿಕ್ಸ್‌ನಂತಹ ಪ್ರಿಮಿಯಂ ಇಂಗ್ಲಿಷ್ ಚಾನೆಲ್‍ಗಳು ಪ್ರತ್ಯೇಕ ಬೆಲೆಗುಚ್ಛದಲ್ಲಿ ಲಭ್ಯವಿರುತ್ತವೆ. ಪ್ರತಿ ಬೆಲೆಗುಚ್ಛವು, ಜಿಇಸಿ, ಚಲನಚಿತ್ರಗಳು, ಸುದ್ದಿ, ಸಂಗೀತ ಮತ್ತು ಜೀವನಶೈಲಿಯ ಪ್ರಕಾರಗಳನ್ನು ಒಳಗೊಂಡ ಚಾನೆಲ್‍ಗಳ ಮಿಶ್ರಣವನ್ನು ಒಳಗೊಂಡಿದೆ. ಸುಗಮ ಪರಿವರ್ತನೆಗಾಗಿ ನಮ್ಮ ಡಿಪಿಒ ಪಾಲುದಾರರೊಂದಿಗೆ ಕಾರ್ಯ ನಿರ್ವಹಿಸುವುದನ್ನು ನಾವು ಎದುರು ನೋಡುತ್ತಿದ್ದೇವೆ" ಎಂದು ಹೇಳಿದರು.

ಪ್ರತಿ ವಾರ 419 ಗಂಟೆಗಳ ಹೊಸ ಕಾರ್ಯಕ್ರಮ

ಪ್ರತಿ ವಾರ 419 ಗಂಟೆಗಳ ಹೊಸ ಕಾರ್ಯಕ್ರಮ

ಲಕ್ಷಾಂತರ ವೀಕ್ಷಕರೊಂದಿಗೆ ಅನುರಣಿಸುವ ಮೂಲ ಕಾರ್ಯಕ್ರಮಗಳನ್ನು ನಿರ್ಮಿಸುವ ಮತ್ತು ಮನರಂಜನೆ ನೀಡುವಲ್ಲಿ ಝೀಲ್‍ನ ಪರಿಣತಿ ಅದರ ಬಲವಾದ ನಾಯಕತ್ವಕ್ಕೆ ಕಾರಣವಾಗಿದೆ. ಸರಾಸರಿ, ಇದು ಪ್ರತಿ ವಾರ 419 ಗಂಟೆಗಳ ಹೊಸ ಕಾರ್ಯಕ್ರಮಗಳನ್ನು ಉತ್ಪಾದಿಸುತ್ತದೆ, ಇದು ಭಾರತದಲ್ಲಿ ಹೆಚ್ಚು ಹೂಡಿಕೆ ಮಾಡಿದ ಗ್ರಾಹಕ ಬ್ರ್ಯಾಂಡ್‍ಗಳಲ್ಲಿ ಒಂದಾಗಿದೆ. ಹಬ್ಬದ ಋತುವಿಗೆ ಸಜ್ಜಾಗುತ್ತಿರುವ ಇದು 40 ಕಾಲ್ಪನಿಕ, 20 ಕಾಲ್ಪನಿಕವಲ್ಲದ ಹೊಸ ಸರಣಿಗಳನ್ನು ಬಹು ಭಾಷೆಗಳಲ್ಲಿ ಆರಂಭಿಸಲು ಅಣಿಯಾಗಿದೆ. ಹಿಂದಿ, ಇಂಗ್ಲಿಷ್ ಮತ್ತು ಪ್ರಾದೇಶಿಕ ಭಾಷೆಗಳಲ್ಲಿ ಅತಿದೊಡ್ಡ ಚಲನಚಿತ್ರ ಚಾನೆಲ್ ಶ್ರೇಣಿಯನ್ನು ಹೊಂದಿದ್ದು, ಇದು ಮುಂದಿನ ಕೆಲವು ತಿಂಗಳುಗಳಲ್ಲಿ 40 ವಿಶ್ವ ಟೆಲಿವಿಷನ್ ಪ್ರಿಮಿಯರ್‍ಗಳನ್ನು ತನ್ನ ಚಾನೆಲ್‍ಗಳಲ್ಲಿ ಪ್ರಸ್ತುತಪಡಿಸುವ ಮೂಲಕ ಇದು ಲಕ್ಷಾಂತರ ಗ್ರಾಹಕರಿಗೆ ಮನರಂಜನೆಯ ಅನಿವಾರ್ಯ ಆಯ್ಕೆಯಾಗುವಂತೆ ಮಾಡಲಿದೆ.

ಝೀ ಕನ್ನಡ

ಝೀ ಕನ್ನಡ

ಝೀ ಟಿವಿ, ಝೀ ಸಿನಿಮಾ, &ಟಿವಿ ಮತ್ತು & ಪಿಕ್ಚರ್ಸ್ ಮತ್ತು ಜೀ ಅನ್ಮೋಲ್‍ನಂತಹ ಮನೆಯ ಬ್ರಾಂಡ್‍ಗಳೊಂದಿಗೆ ಹಿಂದಿ ಮಾತನಾಡುವ ಮಾರುಕಟ್ಟೆಗಳಲ್ಲಿ ಬಲವಾದ ಸ್ಥಾನವನ್ನು ಹೊಂದಿರುವ ಜತೆಗೆ, ಬಾಂಗ್ಲಾ ಮತ್ತು ಮರಾಠಿ ಮಾರುಕಟ್ಟೆಗಳಲ್ಲಿ ಝೀ ಬಾಂಗ್ಲಾ ಮತ್ತು ಝೀ ಮರಾಠಿಯೊಂದಿಗೆ ದೀರ್ಘಕಾಲದ ನಾಯಕತ್ವವನ್ನು ಹೊಂದಿದೆ. ಇದು ದಕ್ಷಿಣ ರಾಜ್ಯಗಳಲ್ಲಿ ಝೀ ಕನ್ನಡ, ಝೀ ತೆಲುಗು, ಝೀ ತಮಿಳು ಮತ್ತು ಝೀ ಕೇರಳಂನೊಂದಿಗೆ ವ್ಯಾಪಕವಾದ ಅಸ್ತಿತ್ವವನ್ನು ಹೊಂದಿದೆ ಮತ್ತು ಭೋಜ್‍ಪುರಿ, ಪಂಜಾಬಿ, ಒಡಿಯಾದಂತಹ ವೇಗವಾಗಿ ಬೆಳೆಯುತ್ತಿರುವ ಭಾಷೆ ಮಾರುಕಟ್ಟೆಗಳಲ್ಲಿ ಕ್ರಮವಾಗಿ ಝೀ ಬಿಸ್ಕೋಪ್, ಝೀ ಪಂಜಾಬಿ ಮತ್ತು ಝೀ ಸಾರ್ಥಕ್ ಜೊತೆಗೆ ನಾಯಕತ್ವವನ್ನು ಹೆಚ್ಚಿಸಿಕೊಂಡಿದೆ.

ಪ್ರಬಲವಾದ ಚಲನಚಿತ್ರ ಚಾನಲ್ ಶ್ರೇಣಿ

ಪ್ರಬಲವಾದ ಚಲನಚಿತ್ರ ಚಾನಲ್ ಶ್ರೇಣಿ

ಇದರ ಜತೆಗೆ ಕಂಪನಿ ಪ್ರಬಲವಾದ ಚಲನಚಿತ್ರ ಚಾನಲ್ ಶ್ರೇಣಿಯನ್ನೂ ಹೊಂದಿದ್ದು, ಇಂಗ್ಲಿಷ್ ಸಿನಿಮಾ, & ಪಿಕ್ಚರ್ಸ್, ಝೀ ಬಾಲಿವುಡ್, ಝೀ ಆಕ್ಷನ್, ಝೀ ಅನ್ಮೋಲ್ ಸಿನಿಮಾ ಮತ್ತು ಹಿಂದಿ ಮಾತನಾಡುವ ಮಾರುಕಟ್ಟೆಗಳಲ್ಲಿ ಝೀ ಕ್ಲಾಸಿಕ್, ಪಶ್ಚಿಮದಲ್ಲಿ ಝೀ ಟಾಕೀಸ್ ಮತ್ತು ದಕ್ಷಿಣದಲ್ಲಿ ಝೀ ಚಿತ್ರಮಂದಿರ, ಝೀ ಸಿನಿಮಾಲೂ, ಝೀ ಪಿಚ್ಚರ್ ಮತ್ತು ಝೀ ತಿರೈ ಚಾನಲ್‍ಗಳನ್ನು ಹೊಂದಿದೆ. ಪೂರ್ವದಲ್ಲಿ ಝೀ ಬಾಂಗ್ಲಾ ಸಿನಿಮಾ ಮತ್ತು ಝೀ ಬಿಸ್ಕೋಪ್. ಇದಲ್ಲದೆ, ಇದು ಇಂಗ್ಲಿಷ್ ಚಲನಚಿತ್ರ, ಮನರಂಜನೆ ಮತ್ತು ಜೀವನಶೈಲಿ ಚಾನೆಲ್‍ಗಳ ಶ್ರೇಣಿಯಲ್ಲಿ ಝೀ ಕೆಫೆ, ಮತ್ತು ಫ್ಲಿಕ್ಸ್ ಮತ್ತು &ಪ್ರೈವ್‍ಎಚ್‍ಡಿ, ಸಂಗೀತ ಮತ್ತು ಯುವ ಚಾನೆಲ್‍ಗಳಾದ ಜಿಂಗ್, ಜೆಸ್ಟ್ ಮತ್ತು 20 ಎಚ್‍ಡಿ ಚಾನೆಲ್‍ಗಳನ್ನು ನೀಡುತ್ತಿದ್ದು, ಅತ್ಯುತ್ತಮವಾದ ವೀಕ್ಷಣೆಯ ಅನುಭವವನ್ನು ನೀಡುತ್ತದೆ.

ಝೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್ (ಝೀಲ್)

ಝೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್ (ಝೀಲ್)

ಝೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್ ವೈವಿಧ್ಯಮಯ ಪ್ರೇಕ್ಷಕರಿಗೆ ಮನರಂಜನೆಯ ಕಾರ್ಯಕ್ರಮಗಳನ್ನು ನೀಡುವ ಪ್ರಮುಖ ಕಾರ್ಯಕ್ರಮ ಉತ್ಪಾದನಾ ಕಂಪನಿಯಾಗಿದೆ. 190 ಕ್ಕೂ ಹೆಚ್ಚು ದೇಶಗಳಲ್ಲಿ ಮತ್ತು ಪ್ರಪಂಚದಾದ್ಯಂತ 1.3 ಶತಕೋಟಿಗೂ ಹೆಚ್ಚು ಜನರನ್ನು ತಲುಪುವ ಮೂಲಕ, ಝೀಲ್ ಎಲ್ಲ ಪ್ರಕಾರಗಳು, ಭಾಷೆಗಳು ಮತ್ತು ಸಂಯೋಜಿತ ಕಾರ್ಯಕ್ರಮ ವೇದಿಕೆಗಳಲ್ಲಿ ಅತಿದೊಡ್ಡ ಜಾಗತಿಕ ಮಾಧ್ಯಮ ಮತ್ತು ಮನರಂಜನಾ ಕಂಪನಿಗಳಲ್ಲಿ ಒಂದಾಗಿದೆ.

ಝೀ ಕನ್ನಡ ಪ್ಯಾಕೇಜ್

ಝೀ ಕನ್ನಡ ಪ್ಯಾಕೇಜ್

ಝೀ ಕನ್ನಡ GEC ಪ್ಯಾಕೇಜ್ 22 ರು + ಝೀ ಪಿಚ್ಚರ್ ಮೂವೀಸ್ 4.5 ರು

A-la-carte ಬೆಲೆ -ಎಚ್ ಡಿ ವಾಹಿನಿ:
ಝೀ ಕನ್ನಡ GEC HD 25 ರು + ಝೀ ಪಿಚ್ಚರ್ ಮೂವೀಸ್ HD 10 ರು

ಝೀ ಪ್ರೈಮ್ ಪ್ಯಾಕ್ ಕನ್ನಡ ಎಸ್ ಡಿ (5 ವಾಹಿನಿ)
ಝೀ ಜೆಸ್ಟ್, ಝೀ ನ್ಯೂಸ್, ಝೀ ಹಿಂದೂಸ್ತಾನ್, ಝೀ ಸಲಾಮ್, ವಿಯೊನ್
ಝೀ ಪ್ರೈಮ್ ಪ್ಯಾಕ್ ಕನ್ನಡ ಎಸ್ ಡಿ (17 ವಾಹಿನಿ)
ಝೀ ಕೆಫೆ, &flix, ಝೀ ಜೆಸ್ಟ್, ಝೀ ನ್ಯೂಸ್, ಝೀ ಹಿಂದೂಸ್ತಾನ್, ಝೀ ಸಲಾಮ್, ವಿಯೊನ್
ಝೀ ಪ್ರೈಮ್ ಪ್ಯಾಕ್ ಕನ್ನಡ ಎಚ್ ಡಿ (12 ವಾಹಿನಿ)
ಝೀ ಫ್ಯಾಮಿಲಿ ಪ್ಯಾಕ್ ಕನ್ನಡ ಎಚ್ ಡಿ (35 ವಾಹಿನಿ)

English summary
Zee Entertainment Enterprises Ltd. (ZEEL), the leading Indian media and entertainment powerhouse, released its new a-la-carte channel and bouquet pricing in line with the Bombay High Court order dated 30.06.2021 with regard to New Tariff Order (NTO) 2.0, to serve the diverse entertainment preferences of the millions of viewers across India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X