ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಯಾನ್ಸರಿಗೆ ಬಲಿಯಾದ ಯೂಟ್ಯೂಬ್ ಟೆಕ್ಕಿ ವೆಂಕಟ್

By Mahesh
|
Google Oneindia Kannada News

ನವದೆಹಲಿ, ಮೇ.15: ಜನಪ್ರಿಯ ವಿಡಿಯೋ ಹಂಚಿಕೆ ತಾಣ ಯೂ ಟ್ಯೂಬ್ ನಲ್ಲಿ ಉನ್ನತ ಹುದ್ದೆಯಲ್ಲಿದ್ದ ಭಾರತೀಯ ಮೂಲದ ಟೆಕ್ಕಿ ವೆಂಕಟ್ ಪಂಚಪಕೇಶನ್ ಅವರು ಕ್ಯಾನ್ಸರಿಗೆ ಬಲಿಯಾಗಿರುವ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ. ಪತ್ನಿ ಸ್ಯಾಂಡಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಯೂಟ್ಯೂಬ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾಗಿದ್ದ ವೆಂಕಟ್ ಅವರು ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ವಾರದ ಆರಂಭದಲ್ಲೇ ವೆಂಕಟ್ ಅಲಿಯಾಸ್ ವೆಂಕಿ ಅವರ ನಿಧನವಾಗಿದೆ ಎಂದು ತಿಳಿದು ಬಂದಿದೆ.

ತಮಿಳುನಾಡಿನ ಕೊಯಮತ್ತೂರಿನ ಸಿಐಟಿಯಲ್ಲಿ ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಇಂಜಿನಿಯರಿಂಗ್ ಮುಗಿಸಿದ ವೆಂಕಟ್ ಅವರು 90ರ ದಶಕದಲ್ಲೇ ಉನ್ನತ ವ್ಯಾಸಂಗ ಮಾಡಲು ಯುಎಸ್ ಗೆ ತೆರಳಿದ್ದರು. [ವೆಂಕಟ್ ನೆನಪಿಗಾಗಿ ಚೌಡಯ್ಯ ಸ್ಮಾರಕ ಭವನದಲ್ಲಿ ಸಂಗೀತ ಸಂಜೆ]

YouTube engineering chief Venkat Panchapakesan loses battle with cancer

ಬಫೆಲೋನಲ್ಲಿರುವ ಸ್ಟೇಟ್ ಯೂನಿವರ್ಸಿಟಿ ಆಫ್ ನ್ಯೂಯಾರ್ಕ್(SUNY) ನಲ್ಲಿ ಕಂಪ್ಯೂಟರ್ಸ್ ನಲ್ಲಿ ಎಂಎಸ್ ಮಾಡಿದ ವೆಂಕಟ್ ಅವರನ್ನು ಯಾಹೂ ಸಂಸ್ಥೆ ಉದ್ಯೋಗಿಯಾಗಿ ಸೇರಿಸಿಕೊಂಡಿತ್ತು.

ಯಾಹೂ ಸಂಸ್ಥೆಯಲ್ಲಿ 10 ವರ್ಷ ಅನುಭವ ಪಡೆದ ವೆಂಕಿ 2010ರಲ್ಲಿ ಗೂಗಲ್ ಸೇರಿದರು. ಸೇರಿದ ಕೆಲ ತಿಂಗಳಲ್ಲೇ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದರು. ಯೂಟ್ಯೂಬ್ ಸಿಇಒ ಸೂಸನ್ ವೋಜ್ಸಿಕಿಗೆ ನೇರವಾಗಿ ವೆಂಕಟ್ ರಿಫೋರ್ಟ್ ಮಾಡಿಕೊಳ್ಳಬೇಕಾಗಿತ್ತು.

ವೆಂಕಟ್ ಅವರನ್ನು 'ಕೋಡ್ ವಿಜಾರ್ಡ್' ಎಂದು ಕರೆದಿರುವ ಸೂಸನ್ ಅವರು, ಯೂಟ್ಯೂಬ್ ಬೆಳವಣಿಗೆಯಲ್ಲಿ ವೆಂಕಟ್ ಸಿಂಹಪಾಲು ಇದೆ. ಅವರ ಸಾವಿಗೆ ಸಂಸ್ಥೆ ತೀವ್ರ ಸಂತಾಪ ವ್ಯಕ್ತಪಡಿಸುತ್ತದೆ. ವಿಧಿ ತುಂಬಾ ಕ್ರೂರಿ ಎಂದಿದ್ದಾರೆ.

ವೆಂಕಟ್ ಸ್ಮರಣೆಯಲ್ಲಿ ವಿಡಿಯೋ ಚಾನೆಲ್ ಆರಂಭಿಸಲಾಗಿದೆ. ಮೇ.16ರಂದು 10AM PT ಸರಿಯಾಗಿ 'ಸೆಲೆಬ್ರೇಟ್ ಲೈಫ್ ಆಫ್ ವೆಂಕಟ್' ಆರಂಭಗೊಳ್ಳಲಿದೆ.

English summary
A 49-year-old YouTube Engineering Chief Venkat Panchapakesan on Monday evening, May 11, passed away following a months-long battle with cancer in Silicon Valley.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X