ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಮ್ಮ ಹಣ ಸಂಪೂರ್ಣ ಸುರಕ್ಷಿತವಾಗಿದೆ , ಭಯ ಪಡದಿರಿ : ಪೇಟಿಎಂ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 18: ನಿಯಮಗಳ ಉಲ್ಲಂಘನೆಯಲ್ಲಿ ಗೂಗಲ್ ಪ್ಲೇ ಸ್ಟೋರ್‌ನಿಂದ ಹೊರದೂಡಲ್ಪಟ್ಟಿದ್ದ ಯುಪಿಐ ಪಾವತಿ ಆ್ಯಪ್ ಪೇಮೆಂಟ್ ನಿಮ್ಮ ಹಣ ಸುರಕ್ಷಿತವಾಗಿದೆ, ಗಾಬರಿಯಾಗದಿರಿ ಎಂದು ಸಂದೇಶ ನೀಡಿದೆ.

ಪ್ರಮುಖ ಡಿಜಿಟಲ್ ಪಾವತಿ ವೇದಿಕೆ ಪೇಟಿಎಂ ಶುಕ್ರವಾರ ತನ್ನ ಬಳಕೆದಾರರಿಗೆ ಭಯಪಡಬೇಡಿ ಮತ್ತು ಗೂಗಲ್ ಪ್ಲೇ ಸ್ಟೋರ್‌ನಿಂದ ಅಪ್ಲಿಕೇಶನ್ ಅನ್ನು ಕೆಳಗಿಳಿಸಿದರೂ ನಿಮ್ಮ ಹಣವು "ಸಂಪೂರ್ಣವಾಗಿ ಸುರಕ್ಷಿತವಾಗಿದೆ" ಎಂದು ಹೇಳಿದೆ.

ನಿಯಮ ಉಲ್ಲಂಘನೆ, ಗೂಗಲ್ ಪ್ಲೇಸ್ಟೋರಿನಿಂದ ಪೇಟಿಯಂ ಔಟ್ನಿಯಮ ಉಲ್ಲಂಘನೆ, ಗೂಗಲ್ ಪ್ಲೇಸ್ಟೋರಿನಿಂದ ಪೇಟಿಯಂ ಔಟ್

"ಆತ್ಮೀಯ Paytm'ers, ಹೊಸ ಡೌನ್‌ಲೋಡ್‌ಗಳು ಅಥವಾ ನವೀಕರಣಗಳಿಗಾಗಿ Paytm Android ಅಪ್ಲಿಕೇಶನ್ Google ನ ಪ್ಲೇ ಸ್ಟೋರ್‌ನಲ್ಲಿ ತಾತ್ಕಾಲಿಕವಾಗಿ ಲಭ್ಯವಿಲ್ಲ. ಅದು ಶೀಘ್ರದಲ್ಲೇ ಹಿಂತಿರುಗಲಿದೆ. ನಿಮ್ಮ ಎಲ್ಲಾ ಹಣವು ಸಂಪೂರ್ಣವಾಗಿ ಸುರಕ್ಷಿತವಾಗಿದೆ, ಮತ್ತು ನಿಮ್ಮ ಪೇಟಿಎಂ ಅಪ್ಲಿಕೇಶನ್ ಅನ್ನು ನೀವು ಈ ಹಿಂದಿನಂತೆ ಸಾಮಾನ್ಯ ರೀತಿಯಲ್ಲಿ ಬಳಸಬಹುದು" ಎಂದು ಟ್ವಿಟರ್‌ನಲ್ಲಿ ಪೇಟಿಎಂ ತಿಳಿಸಿದೆ.

ತನ್ನ ಫ್ಯಾಂಟಸಿ ಗೇಮಿಂಗ್ ಪ್ಲಾಟ್‌ಫಾರ್ಮ್ ಪೇಟಿಎಂ ಫಸ್ಟ್ ಗೇಮ್ಸ್ ಪ್ರಚಾರಕ್ಕಾಗಿ ಆನ್‌ಲೈನ್ ಜೂಜಾಟ ನೀತಿಗಳನ್ನು ಉಲ್ಲಂಘಿಸಿದೆ ಎಂಬ ಆರೋಪದ ಮೇಲೆ ಗೂಗಲ್ ತನ್ನ ಪ್ಲೇ ಸ್ಟೋರ್‌ನಿಂದ ಆ್ಯಪ್ ಅನ್ನು ವಜಾಗೊಳಿಸಿದ ಹಿನ್ನೆಲೆಯಲ್ಲಿ ಪೇಟಿಎಂನ ಈ ಟ್ವೀಟ್ ಬಂದಿದೆ.

ಡಿಜಿಟಲ್ ವ್ಯಾಲೆಟ್ ಹಾಗೂ ಇ ವಾಣಿಜ್ಯ ಆಪ್ ಬಳಸಿ ಆನ್ ಲೈನ್ ಕ್ಯಾಸಿನೋ ಅಥವಾ ಅನಧಿಕೃತ ಜೂಜು ನಡೆಸುವ ಅಪ್ಲಿಕೇಷನ್ ಗಳನ್ನು ಕಿತ್ತು ಹಾಕಲಾಗಿದೆ ಎಂದು ಗೂಗಲ್ ಸಂಸ್ಥೆ ಹೇಳಿದೆ. ಒಂದು ಅಪ್ಲಿಕೇಷನ್ ನಿಂದ ಇನ್ನೊಂದು ಅಪ್ಲಿಕೇಷನ್ ಗೆ ಅಥವಾ ಇನ್ನೊಂದು ವೆಬ್ಸೈಟ್‌ಗೆ ಗ್ರಾಹಕರನ್ನು ಕರೆದೊಯ್ಯುವುದನ್ನು ಪ್ಲೇಸ್ಟೋರ್ ಅನುಮತಿಸುವುದಿಲ್ಲ.

Your Money Is Completely Safe: Paytm

ಐಪಿಎಲ್‌ನಂತಹ ಪ್ರಮುಖ ಕ್ರೀಡಾ ಪಂದ್ಯಾವಳಿಗಳಿಗೆ ಮುಂಚಿತವಾಗಿ ಈ ಅಪ್ಲಿಕೇಶನ್‌ಗಳಲ್ಲಿ ಆನ್‌ಲೈನ್ ಗೇಮ್‌ಗಳ ಪ್ರಚಾರ ಹೆಚ್ಚಾಗಿ ಕಂಡುಬಂದಿದೆ. ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಸೆಪ್ಟೆಂಬರ್ 19ರಿಂದ ನವೆಂಬರ್ 10ರವರೆಗೆ ನಡೆಯಲಿದೆ.

English summary
Fintech major Paytm on Friday asked its users not to panic and that their money is "completely safe" even though the app has been pulled down from Google Play Store.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X