ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿ.29ರ ಬದಲಿಗೆ ಜನವರಿ 31ಕ್ಕೆ ಕೇಬಲ್ ಟಿವಿ ನಿಯಮ ಜಾರಿ

|
Google Oneindia Kannada News

ಬೆಂಗಳೂರು, ಡಿಸೆಂಬರ್ 28: ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಹೊರ ತಂದಿರುವ ಹೊಸ ಕೇಬಲ್ ನೀತಿ ಡಿಸೆಂಬರ್ 29ರಿಂದ ಜಾರಿಯಾಗುತ್ತಿಲ್ಲ. ಡಿ.29ರ ಬದಲಿಗೆ ಜನವರಿ 31, 2019ರವರೆಗೆ ಗ್ರಾಹಕರು ತಮ್ಮ ನೆಚ್ಚಿನ ಚಾನೆಲ್ ಆಯ್ಕೆ ಮಾಡುವ ಅವಕಾಶ ಸಿಗಲಿದೆ.

ಕೇಬಲ್ ಹಾಗೂ ಡಿಟಿಹೆಚ್ ನಿಯಮದಲ್ಲಿ ಬದಲಾವಣೆಗೆ ಇನ್ನಷ್ಟು ಸಮಯ ಸಿಕ್ಕಿರುವುದರಿಂದ ಇದು ಗ್ರಾಹಕರಿಗೆ ಶುಭ ಸುದ್ದಿಯಾಗಿದೆ. ಅಲ್ಲದೆ, ಕೇಬಲ್ ಆಪರೇಟರ್ ಗಳಿಗೂ ಪ್ಯಾಕೇಜ್ ಗಳನ್ನು ಸರಿ ಹೊಂದಿಸಲು ಇನ್ನಷ್ಟು ಸಮಯ ಸಿಕ್ಕಿದೆ.

You have a month to choose your TV channels under new TRAI rule

ಪ್ರಸಾರಕಾರರು, ಡಿಟಿಎಚ್ ಆಪರೇಟರ್ ಗಳು ಮತ್ತು Multi System Operators(ಎಂಎಸ್ಒ)ಗಳ ಜತೆ ಗುರುವಾರದಂದು ಟ್ರಾಯ್ ಅಧಿಕಾರಿಗಳು ಮಹತ್ವದ ಸಭೆ ನಡೆಸಿದ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಟ್ರಾಯ್ ಕಾರ್ಯದರ್ಶಿ ಎಸ್.ಕೆ. ಗುಪ್ತಾ ಹೇಳಿದ್ದಾರೆ.

ಹೊಸ ಕೇಬಲ್ ನೀತಿ ಜಾರಿ, 100 ಚಾನೆಲ್ ಗೆ ಎಷ್ಟು ರೇಟಾಗುತ್ತೆ?ಹೊಸ ಕೇಬಲ್ ನೀತಿ ಜಾರಿ, 100 ಚಾನೆಲ್ ಗೆ ಎಷ್ಟು ರೇಟಾಗುತ್ತೆ?

ಈವರೆಗೆ ಗ್ರಾಹಕರು 250ರಿಂದ 300 ರೂಪಾಯಿ ರಿಚಾರ್ಜ್ ಮಾಡುತ್ತಿದ್ದರು. ಆದರೆ, ಈಗ ದೂರದರ್ಶನದ ಉಚಿತ ಚಾನೆಲ್ ಗಳು ಸೇರಿದಂತೆ 100 ಚಾನೆಲ್ ಗಳ ಪ್ಯಾಕೆಜ್ ಗೆ 184ರು ಗಿಂತ ಹೆಚ್ಚಿನ ಮೊತ್ತವಾಗುವುದಿಲ್ಲ. ಅಲ್ಲದೆ, ಕೇಬಲ್ ಅಪರೇಟರ್ ಗಳು ಸೆಟ್ ಅಪ್ ಬಾಕ್ಸ್ ಅಳವಡಿಕೆ, ಶುಲ್ಕವನ್ನು 500 ರುಗಿಂತ ಹೆಚ್ಚಿಗೆ ಪಡೆಯುವಂತಿಲ್ಲ ಎಂದು ಟ್ರಾಯ್ ಎಚ್ಚರಿಕೆ ನೀಡಿದೆ.

ಗ್ರಾಹಕರಿಗೆ ಅನಗತ್ಯ ಚಾನೆಲ್ ಕಿರಿಕಿರಿಯನ್ನು ತಪ್ಪಿಸಲು ಕೇಂದ್ರ ಸರ್ಕಾರ ಹೊಸ ನೀತಿ ಜಾರಿಗೆ ತರುತ್ತಿದೆ. ಇದರ ಅನ್ವಯ ಚಾನೆಲ್‌ಗಳ ಆಯ್ಕೆ ಗ್ರಾಹಕದ್ದೇ ಆಗಿರುತ್ತದೆ. ಎಷ್ಟು ಚಾನೆಲ್ ಆಯ್ಕೆ ಮಾಡುತ್ತೀರೋ? ಅಷ್ಟಕ್ಕೆ ಮಾತ್ರ ಹಣ ಪಾವತಿ ಮಾಡಿದರೆ ಸಾಕು.

English summary
Telecom regulator Trai has given time till January 31 for consumers to opt for channels of their choice under the new framework for broadcasting and cable services.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X