ಸಿಸ್ಟಂ ಸ್ಥಗಿತದಿಂದ YONO ಆ್ಯಪ್ನಲ್ಲಿ ತಾಂತ್ರಿಕ ಸಮಸ್ಯೆ ಆಗಿದೆ: ಎಸ್ಬಿಐ
ನವದೆಹಲಿ, ಡಿಸೆಂಬರ್ 03: ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಇಂಡಿಯಾ(ಎಸ್ಬಿಐ) ತನ್ನ ಯೋನೊ ಅಪ್ಲಿಕೇಶನ್ನಿಂದಾಗಿ ಉಂಟಾಗಿರುವ ಸಮಸ್ಯೆ ಕುರಿತು ಗ್ರಾಹಕರ ದೂರಿಗೆ ಉತ್ತರಿಸಿದೆ. ಸಿಸ್ಟಂ ಸ್ಥಗಿತದಿಂದಾಗಿ ಯೋನೊ ಮೊಬೈಲ್ ಆ್ಯಪ್ ಮೇಲೆ ಪರಿಣಾಮ ಬೀರಿದ್ದು, ಮತ್ತೆ ಸೇವೆಗಳನ್ನು ಸರಿಪಡಿಸಲು ಬ್ಯಾಂಕ್ ಕಾರ್ಯನಿರ್ವಹಿಸುತ್ತಿದೆ ಎಂದು ಎಸ್ಬಿಐ ಗುರುವಾರ ಹೇಳಿದೆ.
ಡಿಸೆಂಬರ್ 1 ರ ಮಂಗಳವಾರದಿಂದ ಬ್ಯಾಂಕ್ ಗ್ರಾಹಕರು ತಾಂತ್ರಿಕ ದೋಷವನ್ನು ಎದುರಿದ್ದರು. ಕೆಲವು ಗ್ರಾಹಕರು ಎಸ್ಬಿಐನ ಯೋನೊ ಅಪ್ಲಿಕೇಶನ್ಗೆ ಲಾಗ್ ಇನ್ ಆಗಲು ಸಾಧ್ಯವಾಗುತ್ತಿಲ್ಲ ಎಂದು ದೂರಿದ್ದರು. ಅವರು ಲಾಗ್ ಇನ್ ಮಾಡಿದ ನಂತರ ಡಿಸ್ಪ್ಲೇ ಮೇಲೆ Error ಸಂದೇಶ ಬರುತ್ತಿತ್ತು ಹಾಗೂ ಇದರಿಂದಾಗಿ ವಹಿವಾಟು ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಟ್ವಿಟ್ಟರ್ನಲ್ಲಿ ಬ್ಯಾಂಕ್ಗೆ ಹಿಡಿಶಾಪ ಹಾಕಿದ್ದರು.
ಎಸ್ಬಿಐ YONO ಅಪ್ಲಿಕೇಶನ್ನಲ್ಲಿ ತಾಂತ್ರಿಕ ಸಮಸ್ಯೆ: ಆನ್ಲೈನ್ ವಹಿವಾಟಿನಲ್ಲಿ ತೊಂದರೆ
'' ಯೋನೊ ಅಪ್ಲಿಕೇಶನ್ ನಾನು ಇಲ್ಲಿಯವರೆಗೆ ನೋಡಿದ ಅತ್ಯಂತ ಕೆಟ್ಟ ಬ್ಯಾಂಕಿಂಗ್ ಅಪ್ಲಿಕೇಶನ್ ಆಗಿದೆ. ನೀವು ಯಾಕೆ ಆ್ಯಪ್ ಅಭಿವೃದ್ದಿ ಕಡೆಗೆ ನೋಡಬಾರದು ಮತ್ತು ಸಮಸ್ಯೆ ಪರಿಹರಿಸಬಾರದು " ಎಂದು ಗ್ರಾಹಕರು ಟ್ವೀಟ್ ಮಾಡಿದ್ದರು.
ಆದರೆ ಈಗ ಯೋನೊ ಬ್ಯಾಂಕ್ ಆ್ಯಪ್ನಲ್ಲಿ ತಾಂತ್ರಿಕ ದೋಷಕ್ಕೆ ಸಿಸ್ಟಂ ಸ್ಥಗಿತವೇ ಪ್ರಮುಖ ಕಾರಣ ಎಂದು ಎಸ್ಬಿಐ ಹೇಳಿಕೆಯಿಂದ ತಿಳಿದುಬಂದಿದೆ.