• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸ್ಟಾರ್ಟ್‌ ಅಪ್ ಸೇಲ್: 300 ದಶಲಕ್ಷ ಡಾಲರ್‌ಗೆ ಮಾರಾಟ ಮಾಡಿದ ಯೋಗ ಟೀಚರ್

|

ಬೆಂಗಳೂರು, ಆಗಸ್ಟ್‌ 07: ಸಿಲಿಕಾನ್ ಸಿಟಿ ಬೆಂಗಳೂರಿನ ಇಂಡಿಯನ್ಸ್‌ ಇನ್ಸಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ತನ್ನ ವಿದ್ಯಾಭ್ಯಾಸ ಮುಗಿಸಿರುವ 41 ವರ್ಷದ ಕರಣ್ ಬಜಾಜ್ ತಮ್ಮ ಸ್ಟಾರ್ಟ್‌ ಅಪ್‌ ಕಂಪನಿ ವೈಟ್‌ಹ್ಯಾಟ್ ಜೂನಿಯರ್ ಅನ್ನು ಬೈಜೂಸ್‌ಗೆ ಬರೋಬ್ಬರಿ 300 ಮಿಲಿಯನ್ ಅಮೆರಿಕನ್ ಡಾಲರ್‌ಗೆ ಮಾರಾಟ ಮಾಡಿದ್ದಾರೆ. (ಭಾರತದ ರೂಪಾಯಿಗಳಲ್ಲಿ ಸುಮಾರು 2,248 ಕೋಟಿ ರೂಪಾಯಿ)

ಚೀನಾ ಗಡಿಯಲ್ಲಿರುವ ಭಾರತದ 'ಟಿಬೆಟ್' ಸೇನೆ ಬಗ್ಗೆ ನಿಮಗೆಷ್ಟು ಗೊತ್ತು?

6-14 ವರ್ಷ ವಯಸ್ಸಿನ ಮಕ್ಕಳನ್ನು ಗುರಿಯಾಗಿಸಿಕೊಂಡು ಶುರುಮಾಡಿದ್ದ ಆನ್‌ಲೈನ್ ಕೋಡಿಂಗ್ ಪ್ಲಾಟ್‌ಫಾರ್ಮ್ ಕೇವಲ 20 ತಿಂಗಳು ಹಳೆಯದಾಗಿದ್ದು, ಇದುವರೆಗೂ 11 ಮಿಲಿಯನ್ ಡಾಲರ್ ಸಂಗ್ರಹಿಸಿದೆ. ಆದರೆ ಇದನ್ನು 300 ಮಿಲಿಯನ್‌ಗೆ ಮಾರಾಟ ಮಾಡಿದ ನಂತರ ದು ಭಾರತದ ಎಜುಕೇಶನ್-ಟೆಕ್ ಜಾಗದಲ್ಲಿ ಅತಿದೊಡ್ಡ ವ್ಯವಹಾರವಾಗಿದೆ.

ಟಿಕ್‌ಟಾಕ್‌ನ ಮಾರಾಟದ ಬೆಲೆಯಲ್ಲಿ ಸರ್ಕಾರಕ್ಕೂ ಪಾಲು ಕೊಡಬೇಕು: ಟ್ರಂಪ್

ಆನ್‌ಲೈನ್ ಕೋಡಿಂಗ್ ವೇದಿಯಾದ ಈ ಸ್ಟಾರ್ಟ್‌ಅಪ್ ಕಂಪನಿಯ ಎಲ್ಲಾ ಹಣವು ಇನ್ನೂ ಬ್ಯಾಂಕಿನಲ್ಲಿದೆ ಮತ್ತು 5 ತಿಂಗಳುಗಳಿಂದ ಹಣದ ಹರಿವು ಸಕಾರಾತ್ಮಕವಾಗಿದೆ. ಬಜಾಜ್ ಇನ್ನೂ ಶೇಕಡಾ 40 ಕ್ಕಿಂತ ಹೆಚ್ಚು ಮಾಲೀಕತ್ವವನ್ನು ಹೊಂದಿದ್ದು, ಎಲ್ಲಾ ನಗದು ಒಪ್ಪಂದದ ನಂತರ ಅವರನ್ನು ಬಹು-ಮಿಲಿಯನೇರ್ ಆಗಿ ಮಾಡಿದೆ. ಮುಖ್ಯವಾಗಿ, ಈ ಸ್ಟಾರ್ಟ್ ಅಪ್ ಕೇವಲ 18 ತಿಂಗಳಲ್ಲಿ ವಾರ್ಷಿಕ 150 ಮಿಲಿಯನ್ ಡಾಲರ್ ದರವನ್ನು ಸಾಧಿಸಿದೆ.

ಯಾರು ಈ ಕರಣ್ ಬಜಾಜ್?

ಅಮೆರಿಕಾದ ಪೌರತ್ವವನ್ನು ಹೊಂದಿರುವ ಕರಣ್‌ ಬಜಾಜ್ ಯೋಗ ಟೀಚರ್ ಅನ್ನೋದು ಒಂದು ವಿಶೇಷ ಸಂಗತಿ. ಎಲ್ಲದಕ್ಕಿಂತ ಹೆಚ್ಚಾಗಿ ಇವರು ಮೂರು ಕಾದಂಬರಿಗಳ ಲೇಖಕ. ಹಾಗೂ ಬಿಟ್ಸ್, ಮೆಸ್ರಾ ಮತ್ತು ಐಐಎಂ ಬೆಂಗಳೂರಿನ ಹಳೆಯ ವಿದ್ಯಾರ್ಥಿಯಾಗಿದ್ದಾರೆ. ಇನ್ನೂ ವಿಶೇಷ ಏನಂದರೆ ಅವರು ಒಂದು ವರ್ಷ ಆಶ್ರಮದಲ್ಲಿ ಯೋಗ ಶಿಕ್ಷಕರಾಗಿ ವಾಸಿಸುತ್ತಿದ್ದರು.

English summary
41-year old Karan Bajaj has become the toast of the startup ecosystem after the sale of his startup, Whitehat Jr to Byjus for $300 Million, making it the biggest deal in India's ed-tech space.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X