ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯೆಸ್‌ ಸೆಕ್ಯುರಿಟೀಸ್ ಎಂಡಿ & ಸಿಇಒ ಆಗಿ ಪ್ರಶಾಂತ್ ಪ್ರಭಾಕರನ್ ಆಯ್ಕೆ

|
Google Oneindia Kannada News

ಮುಂಬೈ, ಡಿಸೆಂಬರ್ 23: ಯೆಸ್ ಬ್ಯಾಂಕಿನ ಹೂಡಿಕೆ ಬ್ಯಾಂಕಿಂಗ್, ಮರ್ಚೆಂಟ್ ಬ್ಯಾಂಕಿಂಗ್, ವೆಲ್ತ್ ಬ್ರೋಕಿಂಗ್ ಮತ್ತು ಹೂಡಿಕೆ ಸಲಹಾ ಅಂಗಸಂಸ್ಥೆ ಯೆಸ್ ಸೆಕ್ಯುರಿಟೀಸ್‌ಗೆ ತಕ್ಷಣವೇ ಜಾರಿಗೆ ಬರುವಂತೆ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (ಎಂಡಿ ಮತ್ತು ಸಿಇಒ) ಪ್ರಶಾಂತ್ ಪ್ರಭಾಕರನ್‌ ಅವರನ್ನು ಆಯ್ಕೆ ಮಾಡಿದೆ.

ಪ್ರಶಾಂತ್ ಈ ಹಿಂದೆ ಯೆಸ್ ಸೆಕ್ಯುರಿಟೀಸ್ನ ಜಂಟಿ ವ್ಯವಸ್ಥಾಪಕ ನಿದೇಶಕ ಮತ್ತು ಸಿಇಒ ಆಗಿದ್ದರು. ವೆಲ್ತ್ ಬ್ರೋಕಿಂಗ್ ಮತ್ತು ಇನ್ವೆಸ್ಟ್ಮೆಂಟ್ ಅಡ್ವೈಸರಿ ಮತ್ತು ಇನ್ಸ್ಟಿಟ್ಯೂಶನಲ್ ಇಕ್ವಿಟಿಸ್ ವ್ಯವಹಾರದ ನೇತೃತ್ವ ವಹಿಸಿದ್ದರು.

2020ರ ಟಾಪ್ 10 ಬ್ಯಾಂಕುಗಳು: ಡಿಜಿಟಲ್ ಪಾವತಿಯಲ್ಲಿ ಗೂಗಲ್ ಪೇ ನಂಬರ್ 12020ರ ಟಾಪ್ 10 ಬ್ಯಾಂಕುಗಳು: ಡಿಜಿಟಲ್ ಪಾವತಿಯಲ್ಲಿ ಗೂಗಲ್ ಪೇ ನಂಬರ್ 1

ಬಿಎಫ್‌ಎಸ್‌ಐ ವಲಯದಲ್ಲಿ ಎರಡೂವರೆ ದಶಕಗಳ ಅನುಭವ ಹೊಂದಿರುವ ಪ್ರಶಾಂತ್ ಅವರು, 2017 ರಿಂದ ಯೆಸ್ ಸೆಕ್ಯುರಿಟೀಸ್‌ನೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುಂಚಿತವಾಗಿ ಅವರು ಇಂಡಿಯಾ ಇನ್‌ಫೋಲೈನ್, ಕೊಟಕ್ ಸೆಕ್ಯುರಿಟೀಸ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ನೊಂದಿಗೆ ಕೆಲಸ ಮಾಡಿದ್ದಾರೆ.

YES SECURITIES elevates Prasanth Prabhakaran as MD & CEO

''ಪ್ರಶಾಂತ್ ಪ್ರಭಾಕರನ್ ಅವರು ಯೆಸ್ ಸೆಕ್ಯುರಿಟೀಸ್‌ನ ಎಂಡಿ ಮತ್ತು ಸಿಇಒ ಆಗಿ ಆಯ್ಕೆ ಮಾಡಲು ನಾವು ಸಂತೋಷವಾಗುತ್ತಿದೆ. ಹಣಕಾಸು ಸೇವೆಗಳ ಉದ್ಯಮದಲ್ಲಿ ಒಬ್ಬ ನುರಿತ ನಾಯಕನಾಗಿ, ಮಾರುಕಟ್ಟೆ ಡೈನಾಮಿಕ್ಸ್ ಅನ್ನು ನಿರ್ಣಯಿಸಲು, ಅಪಾಯಗಳನ್ನು ನಿರ್ವಹಿಸಲು ಮತ್ತು ವ್ಯವಹಾರವನ್ನು ಹೆಚ್ಚಿಸಲು ಅವರು ಗಮನಾರ್ಹ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ. ಅವರ ನಾಯಕತ್ವದಲ್ಲಿ, ಯೆಸ್ ಸೆಕ್ಯುರಿಟೀಸ್ ವ್ಯವಹಾರದ ಬೆಳವಣಿಗೆ ಮತ್ತು ವೇಗವನ್ನು ಪಡೆದುಕೊಳ್ಳುತ್ತದೆ ಎಂದು ನನಗೆ ವಿಶ್ವಾಸವಿದೆ'' ಎಂದು ಯೆಸ್ ಬ್ಯಾಂಕ್ ಎಂಡಿ & ಸಿಇಒ ಹಾಗೂ ಯೆಸ್‌ ಸೆಕ್ಯುರಿಟೀಸ್ ಅಧ್ಯಕ್ಷ ಪ್ರಶಾಂತ್ ಕುಮಾರ್ ಹೇಳಿದ್ದಾರೆ.

ಯೆಸ್ ಸೆಕ್ಯುರಿಟೀಸ್, ಯೆಸ್ ಬ್ಯಾಂಕಿನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಗಿದ್ದು, 2013 ರಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಕಂಪನಿಯು ಒಂದು ವಹಿವಾಟಿನ ಬ್ರೋಕರ್‌ನಿಂದ ಬೊಟಿಕ್ ಫೈನಾನ್ಷಿಯಲ್ ಸರ್ವೀಸಸ್ ಆಗಿ ಒಂದು ದಶಕಕ್ಕಿಂತ ಕಡಿಮೆ ಅವಧಿಯಲ್ಲಿ ರೂಪಾಂತರಗೊಂಡಿದೆ.

English summary
YES BANK, announced the elevation of Prasanth Prabhakaran as the Managing Director and Chief Executive Officer (MD & CEO) of YES SECURITIES, with immediate effect.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X