ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂದು ಯೆಸ್‌ ಬ್ಯಾಂಕ್ FPO ಪ್ರಾರಂಭ: ಖರೀದಿಗೂ ಮುನ್ನ ಪ್ರಮುಖ ಮಾಹಿತಿ ತಿಳಿದುಕೊಳ್ಳಿ

|
Google Oneindia Kannada News

ನವದೆಹಲಿ, ಜುಲೈ 15: ಖಾಸಗಿ ವಲಯದ ಯೆಸ್ ಬ್ಯಾಂಕ್ ತನ್ನ ಫಾಲೋ-ಆನ್ ಸಾರ್ವಜನಿಕ ಕೊಡುಗೆಯನ್ನು (ಎಫ್‌ಪಿಒ) ಬುಧವಾರ ಪ್ರಾರಂಭಿಸಲಿದೆ. ಎಫ್‌ಪಿಒ ಮೂಲಕ ಹೊಸ 15,000 ಕೋಟಿ ಬಂಡವಾಳವನ್ನು ಸಂಗ್ರಹಿಸಲು ಬ್ಯಾಂಕ್ ಉದ್ದೇಶಿಸಿದೆ. ಇದು ಯಾವುದೇ ಬ್ಯಾಂಕ್ ಘಟಕದ ಅತಿದೊಡ್ಡ ಮೊತ್ತವಾಗಿದೆ. ಮುಂದಿನ ಎರಡು ವರ್ಷಗಳ ಬೆಳವಣಿಗೆಯ ಅವಶ್ಯಕತೆಗಳಿಗಾಗಿ 15,000 ಕೋಟಿ ರುಪಾಯಿ ಬಂಡವಾಳ ಸಾಕು ಎಂದು ಯೆಸ್ ಬ್ಯಾಂಕ್ ಹೇಳಿದೆ.

ಈಗಾಗಲೇ ಎನ್‌ಪಿಎ ಸಾಲ ಹೆಚ್ಚಾಗಿ ಭಾರೀ ತೊಂದರೆಗೊಳಗಾಗಿರುವ ಯೆಸ್‌ ಬ್ಯಾಂಕ್‌ ಅನ್ನು ಮಾರ್ಚ್‌ನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ), ಎಚ್‌ಡಿಎಫ್‌ಸಿ, ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಕೊಟಕ್ ಮಹೀಂದ್ರಾ ಬ್ಯಾಂಕ್, ಫೆಡರಲ್ ಬ್ಯಾಂಕ್, ಬಂಧನ್ ಬ್ಯಾಂಕ್ ಮತ್ತು ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಬೆಂಬಲಿಸಿದೆ.

ಯೆಸ್ ಬ್ಯಾಂಕ್ ಕೇಸ್; ರಾಣಾಗೆ ಸೇರಿದ ಸಾವಿರಾರು ಕೋಟಿ ಜಪ್ತಿಯೆಸ್ ಬ್ಯಾಂಕ್ ಕೇಸ್; ರಾಣಾಗೆ ಸೇರಿದ ಸಾವಿರಾರು ಕೋಟಿ ಜಪ್ತಿ

ದೇಶಾದ್ಯಂತ ವ್ಯಾಪಿಸಿರುವ ಈ ಬ್ಯಾಂಕ್‌ನಲ್ಲಿ 1,135 ಶಾಖೆಗಳು ಮತ್ತು 1,423 ಎಟಿಎಂಗಳ ಜಾಲವಿದೆ. ಯೆಸ್ ಬ್ಯಾಂಕ್ ಸಿಇಒ ಪ್ರಶಾಂತ್ ಕುಮಾರ್ ಅವರು ಬ್ಯಾಂಕ್ ಫಾಲೋ-ಆನ್ ಪಬ್ಲಿಕ್ ಆಫರ್ (ಎಫ್‌ಪಿಒ) ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಏಕೆಂದರೆ ಕಡಿಮೆ ಬೆಲೆಯಲ್ಲಿ ಷೇರುಗಳನ್ನು ನೀಡಲು ಇದು ನಮ್ಯತೆಯನ್ನು ನೀಡುತ್ತದೆ.

ಕನಿಷ್ಠ 1,000 ಷೇರುಗಳನ್ನು ಖರೀದಿ ಮಾಡಬೇಕು

ಕನಿಷ್ಠ 1,000 ಷೇರುಗಳನ್ನು ಖರೀದಿ ಮಾಡಬೇಕು

ಯೆಸ್ ಬ್ಯಾಂಕ್ ಎಫ್‌ಪಿಒ ಜುಲೈ 15 ರಂದು ತೆರೆಯುತ್ತದೆ ಮತ್ತು ಜುಲೈ 17 ರಂದು ಮುಚ್ಚುತ್ತದೆ. ಕನಿಷ್ಠ 1,000 ಷೇರುಗಳಿಗೆ ಮತ್ತು ನಂತರ 1,000 ಷೇರುಗಳ ಗುಣಾಕಾರಗಳಲ್ಲಿ ಬಿಡ್‌ಗಳನ್ನು ಮಾಡಬಹುದು.

ಬೇಸ್ ಪ್ರೈಸ್ 12 ರುಪಾಯಿ ನಿಗದಿ

ಬೇಸ್ ಪ್ರೈಸ್ 12 ರುಪಾಯಿ ನಿಗದಿ

ಆರಂಭಿಕ ಬೆಲೆಯನ್ನು ಈಕ್ವಿಟಿ ಷೇರಿಗೆ 12 ರುಪಾಯಿ ಎಂದು ನಿಗದಿಪಡಿಸಲಾಗಿದೆ. ಇದು ಮಾರುಕಟ್ಟೆ ಬೆಲೆಗಿಂತ ಸುಮಾರು ಶೇಕಡಾ 50 ರಷ್ಟು ಕಡಿಮೆ. ನೌಕರರ ಮೀಸಲಾತಿ ಭಾಗದಲ್ಲಿ ಬಿಡ್ಡಿಂಗ್ ಮಾಡುವ ನೌಕರರು ಪ್ರತಿ ಷೇರಿಗೆ 1 ರುಪಾಯಿ ರಿಯಾಯಿತಿಗೆ ಅರ್ಹರಾಗಿರುತ್ತಾರೆ.

ತನ್ನ ಉದ್ಯೋಗಿಗಳಿಗೆ ಷೇರು ಕಾಯ್ದಿರಿಸಿದೆ ಯೆಸ್ ಬ್ಯಾಂಕ್

ತನ್ನ ಉದ್ಯೋಗಿಗಳಿಗೆ ಷೇರು ಕಾಯ್ದಿರಿಸಿದೆ ಯೆಸ್ ಬ್ಯಾಂಕ್

ತನ್ನ ಉದ್ಯೋಗಿಗಳಿಗಾಗಿಯೇ ಯೆಸ್‌ ಬ್ಯಾಂಕ್ 200 ಕೋಟಿ ಮೌಲ್ಯದ ಷೇರುಗಳನ್ನು ಚಂದಾದಾರಿಕೆಗಾಗಿ ಕಾಯ್ದಿರಿಸಲಾಗಿದೆ.

ಈಗಾಗಲೇ 4,100 ಕೋಟಿ ರುಪಾಯಿ ಸಂಗ್ರಹ

ಈಗಾಗಲೇ 4,100 ಕೋಟಿ ರುಪಾಯಿ ಸಂಗ್ರಹ

ಪ್ರಮುಖ ಹೂಡಿಕೆದಾರರಿಗೆ ಎಫ್‌ಪಿಎ ಇಂದು ತೆರೆಯಲಾಗಿದೆ. ಎಫ್‌ಪಿಒ ತೆರೆಯುವ ಮುನ್ನ ಮುಖ್ಯ ಹೂಡಿಕೆದಾರರಿಂದ ಬ್ಯಾಂಕ್ ಸುಮಾರು, 4,100 ಕೋಟಿ ಸಂಗ್ರಹಿಸಿದೆ. ಆಂಕರ್ ಹೂಡಿಕೆದಾರರಿಗೆ ಈಕ್ವಿಟಿ ಷೇರುಗಳನ್ನು ಪ್ರತಿ ಷೇರಿಗೆ 12 ರುಪಾಯಿಯಂತೆ ಹಂಚಿಕೊಳ್ಳಲು ಯೆಸ್‌ ಬ್ಯಾಂಕ್ ಮಂಡಳಿ ಅನುಮೋದನೆ ನೀಡಿದೆ. ಖಾಸಗಿ ಬ್ಯಾಂಕ್ ಒಟ್ಟು 14 ಪ್ರಮುಖ ಹೂಡಿಕೆದಾರರಿಗೆ 3,41,53,84,614 ಈಕ್ವಿಟಿ ಷೇರುಗಳನ್ನು ಹಂಚಿಕೆ ಮಾಡಿದ್ದಾರೆ.

ಯೆಸ್‌ ಬ್ಯಾಂಕ್ ಹಂಚಿಕೆಯ ಇತರೆ ಹೂಡಿಕೆದಾರರು

ಯೆಸ್‌ ಬ್ಯಾಂಕ್ ಹಂಚಿಕೆಯ ಇತರೆ ಹೂಡಿಕೆದಾರರು

ಪ್ರಮುಖ ಹಂಚಿಕೆಯಲ್ಲಿ ಭಾಗವಹಿಸಿದ ಇತರ ಹೂಡಿಕೆದಾರರು ಎಚ್‌ಡಿಎಫ್‌ಸಿ ಲೈಫ್ ಇನ್ಶುರೆನ್ಸ್, ಅಮಾನ್ಸ ಹೋಲ್ಡಿಂಗ್ಸ್, ಜುಪಿಟರ್ ಇಂಡಿಯಾ ಫಂಡ್, ಬಜಾಜ್ ಅಲಿಯಾನ್ಸ್ ಲೈಫ್ ಇನ್ಶುರೆನ್ಸ್, ಐಸಿಐಸಿಐ ಲೊಂಬಾರ್ಡ್ ಜನರಲ್ ಇನ್ಶುರೆನ್ಸ್, ರಿಲಯನ್ಸ್ ಜನರಲ್ ಇನ್ಶುರೆನ್ಸ್, ಆರ್‌ಬಿಎಲ್‌ ಬ್ಯಾಂಕ್, ಎಡೆಲ್‌ವೀಸ್ ಕ್ರಾಸ್ಒವರ್ ಆಪರ್ಚುನಿಟೀಸ್ ಫಂಡ್, ಇಸಿಎಲ್ ಫೈನಾನ್ಸ್, ಎಲಾರಾ ಕ್ಯಾಪಿಟಲ್ ಮತ್ತು ಹಿಂದೂಜಾ ಲೇಲ್ಯಾಂಡ್ ಫೈನಾನ್ಸ್.

ಭಾರತದ ಬೃಹತ್ ಬ್ಯಾಂಕ್‌ SBIನಿಂದಲೂ ಹೂಡಿಕೆ

ಭಾರತದ ಬೃಹತ್ ಬ್ಯಾಂಕ್‌ SBIನಿಂದಲೂ ಹೂಡಿಕೆ

ಭಾರತದ ಅತಿದೊಡ್ಡ ಸಾರ್ವಜನಿಕ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಯೆಸ್ ಬ್ಯಾಂಕಿನ ಎಫ್‌ಪಿಒ ಪ್ರಸ್ತಾಪದಲ್ಲಿ 1,760 ಕೋಟಿ ರುಪಾಯಿ ಹೂಡಿಕೆಗೆ ತನ್ನ ಮಂಡಳಿ ಅನುಮೋದನೆ ನೀಡಿದೆ ಎಂದು ಹೇಳಿದೆ.

English summary
Yes bank will launch its follow-on public offering (FPO) on Wednesday. The bank aims to raise a fresh capital of ₹15,000 crore through FPO, the largest ever by any entity.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X