ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಕಷ್ಟದಲ್ಲಿರುವ ಯೆಸ್ ಬ್ಯಾಂಕ್ ಗ್ರಾಹಕರಿಗೊಂದು ಸಿಹಿ ಸುದ್ದಿ

|
Google Oneindia Kannada News

ನವದೆಹಲಿ, ಮಾರ್ಚ್ 8: ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಯೆಸ್ ಬ್ಯಾಂಕನ್ನು ಭಾರತೀಯ ರಿಸರ್ವ್ ಬ್ಯಾಂಕ್ ಸೂಪರ್ ಸೀಡ್ ಮಾಡಿಕೊಂಡಿದೆ. ಇದರಿಂದಾಗಿ ಯೆಸ್ ಬ್ಯಾಂಕ್ ಮೂಲಕ ನಡೆಯುತ್ತಿದ್ದ ಆರ್ಥಿಕ ವ್ಯವಹಾರಕ್ಕೆ ಯೆಸ್ ಬ್ಯಾಂಕ್ ಜೊತೆ ಸಹಭಾಗಿತ್ವ ಹೊಂದಿದ್ದ ಡಿಜಿಟಲ್ ಪೇಮೆಂಟ್ ಆಪ್ಲಿಕೇಷನ್ ಬಳಕೆಗೆ ಬ್ರೇಕ್ ಬಿದ್ದಿದೆ. ಆದರೆ, ಸಂಕಷ್ಟದಲ್ಲಿರುವ ಗ್ರಾಹಕರಿಗೆ ಯೆಸ್ ಬ್ಯಾಂಕ್ ಸಿಹಿ ಸುದ್ದಿ ನೀಡಿದೆ.

ಯೆಸ್ ಬ್ಯಾಂಕ್ ಗ್ರಾಹಕರು ಈಗ ಎಟಿಎಂನಿಂದ ಹಣ ವಿಥ್ ಡ್ರಾ ಮಾಡಿಕೊಳ್ಳಬಹುದಾಗಿದೆ. ಯೆಸ್ ಬ್ಯಾಂಕ್ ಡೆಬಿಟ್ ಕಾರ್ಡನ್ನು ಯೆಸ್ ಬ್ಯಾಂಕ್ ಎಟಿಎಂ ಅಲ್ಲದೆ ಇತರೆ ಎಟಿಎಂ ಬ್ಯಾಂಕ್ ಎಟಿಎಂಗಳಲ್ಲೂ ಬಳಸಬಹುದು ಎಂದು ಯೆಸ್ ಬ್ಯಾಂಕ್ ಅಧಿಕೃತವಾಗಿ ಟ್ವೀಟ್ ಮಾಡಿದೆ.

ಯೆಸ್ ಬ್ಯಾಂಕ್ ಸ್ಥಗಿತ, 3 ಲಕ್ಷ ಕೋಟಿ ನಷ್ಟ, ಡಿಜಿಟಲ್ ಪೇಮೆಂಟ್ ಡೌನ್ಯೆಸ್ ಬ್ಯಾಂಕ್ ಸ್ಥಗಿತ, 3 ಲಕ್ಷ ಕೋಟಿ ನಷ್ಟ, ಡಿಜಿಟಲ್ ಪೇಮೆಂಟ್ ಡೌನ್

ಯೆಸ್ ಬ್ಯಾಂಕ್ ವ್ಯವಹಾರ, ಎಟಿಎಂ ವಿಥ್ ಡ್ರಾ ಕುರಿತಂತೆ ಆರ್ ಬಿಐ ನಿರ್ದೇಶನದಂತೆ ಹಣಕಾಸು ಇಲಾಖೆ ಮಾರ್ಚ್ 5ರಂದು ಹೊರಡಿಸಿದ ಸುತ್ತೋಲೆಯಂತೆ ಹಣ ವಿತ್‌ ಡ್ರಾ ಮಾಡಲು 50,000 ರೂಪಾಯಿಗಳ ಮಿತಿ ಹೇರಲಾಗಿದ್ದು, ಮಾರ್ಚ್ 5ರಿಂದ ಏಪ್ರಿಲ್ 3ರ ವರೆಗೆ ನಿರ್ಬಂಧ ಜಾರಿಯಲ್ಲಿರಲಿದೆ.

ಯೆಸ್ ಬ್ಯಾಂಕ್ ಜೊತೆಗೆ ಡಿಜಿಟಲ್ ಪೇಮೆಂಟ್ ಒಪ್ಪಂದ ಮಾಡಿಕೊಂಡಿದ್ದ ಸಹ ಸಂಸ್ಥೆಗಳ ವ್ಯವಹಾರಕ್ಕೂ ತೊಂದರೆ ಉಂಟಾಗಿದೆ. ಮುಖ್ಯವಾಗಿ ಫೋನ್ ಪೇ ವ್ಯವಹಾರ ಕೂಡಾ ಸರಿಯಾಗಿ ಆಗುತ್ತಿಲ್ಲ. ಈ ಕುರಿತಂತೆ ಮುಖ್ಯ ಕಾರ್ಯಕಾರಿ ಸಮೀರ್ ನಿಗಮ್ ಅವರು ಸ್ಪಷ್ಟಪಡಿಸಿದ್ದಾರೆ.

ಠೇವಣಿ ಹೊಂದಿರುವವರು ಆತಂಕಪಡುವ ಅಗತ್ಯವಿಲ್ಲ

ಠೇವಣಿ ಹೊಂದಿರುವವರು ಆತಂಕಪಡುವ ಅಗತ್ಯವಿಲ್ಲ

ಯೆಸ್ ಬ್ಯಾಂಕ್‌ನಲ್ಲಿ ಠೇವಣಿ ಹೊಂದಿರುವವರು ಆತಂಕಪಡುವ ಅಗತ್ಯವಿಲ್ಲ. ಅವರ ಹಣ ಭದ್ರವಾಗಿದೆ. ಆರ್‌ಬಿಐ ಬ್ಯಾಂಕಿಂಗ್ ರೆಗ್ಯುಲೇಷನ್ ಕಾಯ್ದೆ 1949 ಸೆಕ್ಷನ್ 35ಎ ಅಡಿ ನಿರ್ದೇಶನ ನೀಡಿದೆ. ಲೋನ್ ರಿನ್ಯೂ ಮಾಡುವಂತಿಲ್ಲ. ಆದರೆ ಬಂಡವಾಳ ಹೂಡಬಹುದಾಗಿದೆ.

ಯೆಸ್ ಬ್ಯಾಂಕ್ ಆರ್ಥಿಕ ಬಿಕ್ಕಟ್ಟು ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ರಾಣಾ ಕಪೂರ್ ಬಂಧಿಸಿದೆ. 2004ರಲ್ಲಿ ರಾಣಾ ಕಪೂರ್ ಮತ್ತು ಅಶೋಕ್ ಕಪೂರ್ ಯೆಸ್ ಬ್ಯಾಂಕ್ ಸ್ಥಾಪನೆ ಮಾಡಿದ್ದರು.

ಯೆಸ್ ಬ್ಯಾಂಕ್ ಕೈಹಿಡಿದ ಎಸ್ಬಿಐ

ಯೆಸ್ ಬ್ಯಾಂಕ್ ಕೈಹಿಡಿದ ಎಸ್ಬಿಐ

ಯೆಸ್ ಬ್ಯಾಂಕ್ ನಲ್ಲಿ ಶೇ 49ರಷ್ಟು ಪಾಲನ್ನು 2450 ಕೋಟಿ ರು ಮೊತ್ತಕ್ಕೆ ಖರೀದಿಸುವುದಾಗಿ ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ ಬಿಐ) ಘೋಷಿಸಿದೆ.

ಯೆಸ್ ಬ್ಯಾಂಕ್ 255 ಕೋಟಿ ರು ಮೌಲ್ಯ ಷೇರು ಲಭ್ಯವಿದ್ದು, ಪ್ರತಿ ಷೇರಿಗೆ 2 ರು ದರ ಹೊಂದಿದೆ. ಪ್ರತಿ ಷೇರಿಗೆ 10 ರು ನಂತೆ 2450 ಕೋಟಿ ರು ಮೌಲ್ಯವನ್ನು ಎಸ್ ಬಿಐ ಘೋಷಿಸಿದೆ.

ಎಸ್ ಬಿಐ ಹೂಡಿಕೆ ನಂತರ ಮುಖ್ಯ ಕಾರ್ಯಕಾರಿ, ವ್ಯವಸ್ಥಾಪಕ ನಿರ್ದೇಶಕ, ನಾನ್ ಎಕ್ಸಿಕ್ಯೂಟಿವ್ ಚೇರ್ಮನ್ ಹಾಗೂ ನಾನ್ ಎಕ್ಸಿಕ್ಯೂಟಿವ್ ನಿರ್ದೇಶಕರನ್ನು ಒಳಗೊಂಡ ನಿರ್ದೇಶಕರ ಮಂಡಳಿಯನ್ನು ರಚಿಸಲಾಗುತ್ತದೆ.

ಎಟಿಎಂನಲ್ಲಿ ವಿಥ್ ಡ್ರಾ ಬಗ್ಗೆ ಟ್ವೀಟ್

ಎಟಿಎಂನಲ್ಲಿ ವಿಥ್ ಡ್ರಾ ಬಗ್ಗೆ ಟ್ವೀಟ್ ಮಾಡಿದ್ದು, ಗ್ರಾಹಕರ ಅನೇಕ ಪ್ರಶ್ನೆಗಳಿಗೆ ಟ್ವೀಟ್ ಮೂಲಕ ಉತ್ತರಿಸಲಾಗುತ್ತಿದೆ. ಯೆಸ್ ಬ್ಯಾಂಕ್ ಗ್ರಾಹಕರು ಈಗ ಎಟಿಎಂನಿಂದ ಹಣ ವಿಥ್ ಡ್ರಾ ಮಾಡಿಕೊಳ್ಳಬಹುದಾಗಿದೆ. ಯೆಸ್ ಬ್ಯಾಂಕ್ ಡೆಬಿಟ್ ಕಾರ್ಡನ್ನು ಯೆಸ್ ಬ್ಯಾಂಕ್ ಎಟಿಎಂ ಅಲ್ಲದೆ ಇತರೆ ಎಟಿಎಂ ಬ್ಯಾಂಕ್ ಎಟಿಎಂಗಳಲ್ಲೂ ಬಳಸಬಹುದು ಎಂದು ಯೆಸ್ ಬ್ಯಾಂಕ್ ಅಧಿಕೃತವಾಗಿ ಟ್ವೀಟ್ ಮಾಡಿದೆ.

current ಖಾತೆಯಿಂದ ಹಣ ವಿಥ್ ಡ್ರಾ ಮಾಡುವುದು ಹೇಗೆ ?

current ಖಾತೆಯಿಂದ ಹಣ ವಿಥ್ ಡ್ರಾ ಮಾಡುವುದು ಹೇಗೆ ? ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ್ದು, ನೀವು ಈಗ ಕರೆಂಟ್ ಖಾತೆಯಲ್ಲಿ ಕ್ರೆಡಿಟ್ ಬ್ಯಾಲೆನ್ಸ್ ಇದ್ದರೆ ಹಣ ಪಡೆಯಬಹುದು. ಆದರೆ, ಹಣದ ವಿಥ್ ಡ್ರಾ ಮಿತಿ 50, 000 ರು ದಾಟಬಾರದು. ಈ ಮಿತಿ ಮೀರಿದ ನಂತರ ಮತ್ತೆ ವಿಥ್ ಡ್ರಾ ಸದ್ಯಕ್ಕೆ ಸಾಧ್ಯವಿಲ್ಲ.

50 ಸಾವಿರ ರುಪಾಯಿ ಮಿತಿ ಹೆಚ್ಚಳ ಮಾಡಿ

ನಿಗದಿತ ಅವಧಿಯಲ್ಲಿ ಹಣ ವಿಥ್ ಡ್ರಾ(ಬ್ಯಾಂಕಿಗೆ ತೆರಳಿ ಚೆಕ್ ನೀಡುವ ಮೂಲಕ) ವ್ಯವಸ್ಥೆ ಕಲ್ಪಿಸಿರುವುದು ಒಳ್ಳೆಯದು. ಆದರೆ, 50 ಸಾವಿರ ರುಪಾಯಿ ಮಿತಿ ಹೆಚ್ಚಳ ಮಾಡಿ 1 ಲಕ್ಷ ರುಗೇರಿಸಿ, ಜೊತೆಗೆ ಎನ್ ಇ ಎಫ್ ಟಿ/ ಆರ್ ಟಿ ಜಿಎಸ್ / ಐಎಂಪಿಎಸ್/ ಯುಪಿಐ ಸೌಲಭ್ಯವನ್ನು ನೀಡಿ, ಇದರಿಂದ ಅನುಕೂಲವಾಗಲಿದೆ ಎಂದು ಗ್ರಾಹಕರು ಕೇಳಿಕೊಂಡಿದ್ದಾರೆ.

50 ಸಾವಿರ ರು ಮಿತಿ ಬಗ್ಗೆ ಇನ್ನಷ್ಟು ಸ್ಪಷ್ಟನೆ

ಯೆಸ್ ಬ್ಯಾಂಕ್ ವ್ಯವಹಾರ, ಎಟಿಎಂ ವಿಥ್ ಡ್ರಾ ಕುರಿತಂತೆ ಆರ್ ಬಿಐ ನಿರ್ದೇಶನದಂತೆ ಹಣಕಾಸು ಇಲಾಖೆ ಮಾರ್ಚ್ 5ರಂದು ಹೊರಡಿಸಿದ ಸುತ್ತೋಲೆಯಂತೆ ಹಣ ವಿತ್‌ ಡ್ರಾ ಮಾಡಲು 50,000 ರೂಪಾಯಿಗಳ ಮಿತಿ ಹೇರಲಾಗಿದ್ದು, ಮಾರ್ಚ್ 5ರಿಂದ ಸಂಜೆ 6 ಗಂಟೆಯಿಂದ ಏಪ್ರಿಲ್ 3ರ ವರೆಗೆ ನಿರ್ಬಂಧ ಜಾರಿಯಲ್ಲಿರಲಿದೆ ಎಂದು ಗ್ರಾಹಕರ ಪ್ರಶ್ನೆಗೆ ಬ್ಯಾಂಕ್ ಉತ್ತರಿಸಿದೆ.

English summary
Yes Bank on Friday announced that account holders can withdraw money from other bank ATMs as well.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X