ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯೆಸ್ ಬ್ಯಾಂಕ್ ಕೇಸ್: ರಾಣಾಗೆ ಸೇರಿದ 127 ಕೋಟಿ ರು ಆಸ್ತಿ ವಶ

|
Google Oneindia Kannada News

ಲಂಡನ್, ಸೆ. 25: ಯೆಸ್ ಬ್ಯಾಂಕ್ ಹಣಕಾಸು ಅವ್ಯವಹಾರ ಪ್ರಕರಣದಲ್ಲಿ, ಸಂಸ್ಥಾಪಕ ರಾಣಾ ಕಪೂರ್ ಮತ್ತು ಅವರ ಕುಟುಂಬ ಸದಸ್ಯರಿಗೆ ಸೇರಿದ ಬ್ಯಾಂಕ್ ಖಾತೆಗಳನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮತ್ತೊಮ್ಮೆ ಜಪ್ತಿ ಮಾಡಿದ್ದಾರೆ.

ಲಂಡನ್ನಿನ 77 ಸೌತ್ ಆಡ್ಲೆ ಸ್ಟ್ರೀಟ್ ನಲ್ಲಿರ ಯೆಸ್ ಬ್ಯಾಂಕ್ ಸಹ ಸಂಸ್ಥಾಪಕ ರಾಣಾ ಕಪೂರ್ ಅವರಿಗೆ ಸೇರಿರುವ ಸುಮಾರು 127 ಕೋಟಿ ರು ಮೌಲ್ಯ ಫ್ಲ್ಯಾಟ್ ಜಪ್ತಿ ಮಾಡಲಾಗಿದೆ. ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್ ಎ) ಅಡಿ ಜಪ್ತಿ ಮಾಡಲು ನ್ಯಾಯಾಲಯದ ಆದೇಶ ಪಡೆದುಕೊಳ್ಳಲಾಗಿತ್ತು ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹೇಳಿದ್ದಾರೆ.

ಯೆಸ್‌ ಬ್ಯಾಂಕ್ ಹಣಕಾಸು ಅವ್ಯವಹಾರ ಪ್ರಕರಣ: ಮೊದಲ ಚಾರ್ಜ್‌ಶೀಟ್ ಸಲ್ಲಿಸಿದ ಸಿಬಿಐಯೆಸ್‌ ಬ್ಯಾಂಕ್ ಹಣಕಾಸು ಅವ್ಯವಹಾರ ಪ್ರಕರಣ: ಮೊದಲ ಚಾರ್ಜ್‌ಶೀಟ್ ಸಲ್ಲಿಸಿದ ಸಿಬಿಐ

ಈ ವಸತಿ ಕಟ್ಟಡದ ಸದ್ಯ ಮಾರುಕಟ್ಟೆ ಮೌಲ್ಯವು 13.5 ಮಿಲಿಯನ್ ಪೌಂಡ್ (ಸುಮಾರು ₹127 ಕೋಟಿ ರು ). 2017ರಲ್ಲಿ ರಾಣಾ ಕಪೂರ್ ಅವರು DOIT ಕ್ರಿಯೇಷನ್ಸ್ ಜರ್ಸಿ ಲಿಮಿಟೆಡ್ ಹೆಸರಿನಲ್ಲಿ 9.9 ಮಿಲಿಯನ್ ಪೌಂಡ್ ಗೆ ಈ ಆಸ್ತಿಯನ್ನು ಖರೀದಿಸಿದ್ದರು ಎಂಬ ಮಾಹಿತಿ ಸಿಕ್ಕಿದೆ.

Yes Bank case: ED attaches Rana Kapoors ₹127-cr London apartment

ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದ ಬ್ಯಾಂಕರ್‌ನನ್ನು ಮಾರ್ಚ್‌ನಲ್ಲಿ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಯಡಿ ಬಂಧಿಸಲಾಗಿದೆ. ಹಗರಣ ಪೀಡಿತ ದಿವಾನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (ಡಿಎಚ್‌ಎಫ್‌ಎಲ್) ಗೆ ಸಂಬಂಧಿಸಿರುವ ಒಂದು ಸಂಸ್ಥೆಯಿಂದ ಕಪೂರ್, ಅವರ ಪತ್ನಿ ಮತ್ತು ಮೂವರು ಹೆಣ್ಣುಮಕ್ಕಳಿಂದ 600 ಕೋಟಿ ರುಪಾಯಿ ಪಡೆದಿದ್ದರು.

ಕಪೂರ್, ಅವರ ಕುಟುಂಬ ಸದಸ್ಯರು ಮತ್ತು ಇತರರು ಬೃಹತ್ ಸಾಲಗಳನ್ನು ಮಂಜೂರು ಮಾಡಲು ಕಿಕ್‌ಬ್ಯಾಕ್ ಆಗಿ ನಿಯಂತ್ರಿಸುತ್ತಿರುವ ಕಂಪನಿಗಳ ಮೂಲಕ 4,300 ಕೋಟಿ ರುಪಾಯಿ ಪಡೆದಿದ್ದರು.

Recommended Video

Karnataka ಮತ್ತೊಮ್ಮೆ Lockdown ಆಗಲಿದೆಯೇ ? ಕಂಪ್ಲೀಟ್ ವಿವರ | Oneindia Kannada

ಆಸ್ತಿ ಮಾರಲು ಯತ್ನ: ಲಂಡನ್ ನಲ್ಲಿರುವ ಈ ಆಸ್ತಿಯನ್ನು ಮಾರಾಟಲು ಮಧ್ಯವರ್ತಿಯನ್ನು ನೇಮಿಸಿದ್ದರು. ವೆಬ್ ತಾಣಗಳಲ್ಲೂ ಆಸ್ತಿ ವಿವರ ಮಾರಟಕ್ಕಿರುವ ಬಗ್ಗೆ ಜಾಹೀರಾತು ಕಾಣಿಸಿಕೊಂಡಿತ್ತು. ಈ ಬಗ್ಗೆ ತಿಳಿದ ತನಿಖಾ ಸಂಸ್ಥೆ ಲಂಡನ್ ಅಲ್ಲದೆ, ಅಮೆರಿಕ, ದುಬೈ ಮತ್ತು ಆಸ್ಟ್ರೇಲಿಯಾಗಳಲ್ಲಿರುವ ಆಸ್ತಿಗಳನ್ನು ವಶಪಡಿಸಿಕೊಂಡಿದ್ದಾರೆ.

English summary
The Enforcement Directorate (ED) has attached a ₹127-crore flat of Yes Bank co-promoter Rana Kapoor in London in connection with a money laundering investigation against him and others, the central agency said on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X