ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇಕ್ ಇನ್ ಇಂಡಿಯಾದಡಿಯಲ್ಲಿ ಯಮಹಾದಿಂದ ಹೊಸ ಕೀಬೋರ್ಡ್

|
Google Oneindia Kannada News

ಬೆಂಗಳೂರು, ಜೂನ್ 04: ಭಾರತೀಯ ವಾದ್ಯಸಂಗೀತ ಟ್ಯೂನ್‍ಗಳ, ಮೊಟ್ಟಮೊದಲ ಭಾರತೀಯ ನಿರ್ಮಿತ ಪಿಎಸ್‍ಆರ್ 1500 ಕೀ ಬೋರ್ಡ್‍ಅನ್ನು ಯಮಹಾ ಮ್ಯೂಸಿಕ್ ಇಂಡಿಯಾ, ಜಾಗತಿಕ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಯಮಹಾ ಮ್ಯೂಸಿಕ್ ಇಂಡಿಯಾ ಮೊಟ್ಟಮೊದಲ ಭಾರತೀಯ ನಿರ್ಮಿತ ಪಿಎಸ್‍ಆರ್ 1500 ಕೀ ಬೋರ್ಡ್ ಇದಾಗಿದೆ.

ಇದು ಒಂದೆಡೆಯಿಂದ ಇನ್ನೊಂದು ಕಡೆಗೆ ಸುಲಭವಾಗಿ ಒಯ್ಯಬಹುದಾದ ಮಾದರಿ ಕೀಬೋರ್ಡ್ ಆಗಿದ್ದು, ವಾದ್ಯಸಂಗೀತ ಪ್ರಸ್ತುತಪಡಿಸುವುದನ್ನು ಕಲಿಯಲು ಆಸಕ್ತಿ ಇರುವ ಸಂಗೀತಪ್ರಿಯರಿಗೆ ಹೇಳಿ ಮಾಡಿಸಿದಂತಿದೆ. ಈ ಕೀಬೋರ್ಡ್, ಆನ್‍ಬೋರ್ಡ್ ಭಾರತೀಯ ವಾದ್ಯಸಂಗೀತಗಳ ವಿಸ್ತೃತ ನಾದಶ್ರೇಣಿಯನ್ನು ಒಳಗೊಂಡಿದ್ದು, ಇದು ಸ್ವಯಂಚಾಲಿತವಾಗಿ ಸೂಕ್ತವಾಗಿ ಹೊಂದಾಣಿಕೆಯಾಗುವ ಶೈಲಿಯಲ್ಲಿರುತ್ತದೆ. ಇದು ದೇಶದ ಮೂಲೆಮೂಲೆಗಳ ಭಾರತೀಯ ಸಂಗೀತ ದಿಗ್ಗಜರ ನಾದಗಳನ್ನು ಒಳಗೊಂಡಿದೆ.

ಭಾರತ್ ಎಲೆಕ್ಟ್ರಾನಿಕ್ಸ್ ಜತೆ ಭಾರತ್ ಫೋರ್ಜ್ ಒಡಂಬಡಿಕೆಭಾರತ್ ಎಲೆಕ್ಟ್ರಾನಿಕ್ಸ್ ಜತೆ ಭಾರತ್ ಫೋರ್ಜ್ ಒಡಂಬಡಿಕೆ

ಪಿಎಸ್‍ಆರ್ 1500ನಲ್ಲಿ 801 ವಾದ್ಯಸಂಗೀತ ಸ್ವರಗಳು ಒಳಗೊಂಡಿದ್ದು, 40 ಭಾರತೀಯ ಸಂಗೀತವಾದ್ಯಗಳ ಸ್ವರಗಳು ಇದರಲ್ಲಿ ಸೇರಿವೆ. ಈ ಕೀಬೋರ್ಡ್‍ನಲ್ಲಿ ಪಿಯಾನೋದಿಂದ ಹಿಡಿದು ಸಿಂಥೆಸೈಸರ್‍ವರೆಗಿನ ವೈವಿಧ್ಯಮಯ ಸಂಗೀತವಾದ್ಯಗಳು ಸೇರಿವೆ. ಈ ಮೂಲಕ ವೈವಿಧ್ಯಮಯ ಹಾಡುಗಳನ್ನು ಅಂದರೆ ಆರ್ಕೆಸ್ಟ್ರಾ ಕ್ಲಾಸಿಕ್‍ಗಳಿಂದ ಹಿಡಿದು ಎಲೆಕ್ಟ್ರಾನಿಕ್ ಡ್ಯಾನ್ಸ್ ಮ್ಯೂಸಿಕ್‍ವರೆಗೆ ಭಿನ್ನ ಅಗತ್ಯತೆಗೆ ತಕ್ಕಂತೆ ನುಡಿಸಬಹುದಾಗಿದೆ.

ಭಾರತೀಯ ರಾಗಗಳನ್ನು ಹೇಗೆ ಆಲಾಪನೆ

ಭಾರತೀಯ ರಾಗಗಳನ್ನು ಹೇಗೆ ಆಲಾಪನೆ

ಸಂಗೀತಪ್ರಿಯರು ಒಂದೆಡೆಯಿಂದ ಮತ್ತೊಂದು ಕಡೆಗೆ ಸುಲಭವಾಗಿ ಒಯ್ಯಬಹುದಾಗಿದ್ದು ತ್ವರಿತ ಸ್ಯಾಂಪಲಿಂಗ್‍ನಂಥ ವಿಶೇಷ ಕಾರ್ಯನಿರ್ವಹಣೆ ವ್ಯವಸ್ಥೆಯನ್ನು ವೈವಿಧ್ಯಮಯ ಸನ್ನಿವೇಶಗಳಿಗೆ ನುಡಿಸಲು ಅನುವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಇದರ ಜತೆಗೆ ಪಿಎಸ್‍ಆರ್ 1500, ಹಲವಾರು ಪಠ್ಯ ಕಾರ್ಯಗಳನ್ನೂ ಒಳಗೊಂಡಿದ್ದು, ಅಂತರ್ಗತವಾದ ತಬಲಾ/ ಮೃದಂಗ & ರಿಯಾಝ್ ಹೆಸರಿನ ತಂಬೂರಿಯಂಥ ವಿಶೇಷ ವ್ಯವಸ್ಥೆಯನ್ನೂ ಹೊಂದಿದೆ. ಹೇಗೆ ಹಾಡುಗಳನ್ನು ನುಡಿಸಬಹುದು ಅಥವಾ ಸಾಂಪ್ರದಾಯಿಕ ಭಾರತೀಯ ರಾಗಗಳನ್ನು ಹೇಗೆ ಆಲಾಪಿಸಬಹುದು ಎಂದು ಕಲಿಯಲು ಇದು ನೆರವಾಗಲಿದೆ.

ಚೆನ್ನೈ ಘಟಕದಲ್ಲಿ ಅಭಿವೃದ್ಧಿಪಡಿಸಿದ ಕೀ ಬೋರ್ಡ್

ಚೆನ್ನೈ ಘಟಕದಲ್ಲಿ ಅಭಿವೃದ್ಧಿಪಡಿಸಿದ ಕೀ ಬೋರ್ಡ್

ಈ ವಿಶಿಷ್ಟ ಕೀಬೋರ್ಡ್ ಬಿಡುಗಡೆ ಬಗ್ಗೆ ಮಾತನಾಡಿದ ಯಮಹಾ ಮ್ಯೂಸಿಕ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ತಕಾಶಿ ಹಗಾ, "ಭಾರತದಲ್ಲಿ ಅಂದರೆ ನಮ್ಮ ಚೆನ್ನೈ ಘಟಕದಲ್ಲಿ ಅಭಿವೃದ್ಧಿಪಡಿಸಿದ ಕೀ ಬೋರ್ಡ್ ಪ್ರಸ್ತುತಪಡಿಸಲು ಯಮಹಾ ಮ್ಯೂಸಿಕ್ ಇಂಡಿಯಾಗೆ ಹೆಮ್ಮೆ ಎನಿಸುತ್ತಿದೆ. ಮೇಕ್ ಇನ್ ಇಂಡಿಯಾ ಯೋಜನೆಯಡಿ ಇದನ್ನು ವಿನ್ಯಾಸಗೊಳಿಸಲಾಗಿದ್ದು, ಇದನ್ನು ತೀರಾ ವಿಶಿಷ್ಟವಾಗಿ ಮತ್ತು ಇಂದಿನ ಭಾರತೀಯ ಹಾಗೂ ಜಾಗತಿಕ ಸಂಗೀತಪ್ರಿಯರಿಗೆ ಸುಲಭವಾಗಿ ಒಯ್ಯಲು ಅನುಕೂಲವಾಗುವಂತೆ ವಿಶೇಷವಾಗಿ ರೂಪಿಸಲಾಗಿದೆ" ಎಂದು ಹೇಳಿದರು.

ಭಾರತ ಟಾಪ್-50 ಉದ್ಯಮ ಸ್ನೇಹಿ ರ‍್ಯಾಂಕಿಂಗ್‌ಗೆ ಮೋದಿ ಹಂಬಲಭಾರತ ಟಾಪ್-50 ಉದ್ಯಮ ಸ್ನೇಹಿ ರ‍್ಯಾಂಕಿಂಗ್‌ಗೆ ಮೋದಿ ಹಂಬಲ

ವೈವಿಧ್ಯತೆಯ ನಾಡು ಹಾಗೂ ಈ ವಿನೂತನ ಕೀಬೋರ್ಡ್

ವೈವಿಧ್ಯತೆಯ ನಾಡು ಹಾಗೂ ಈ ವಿನೂತನ ಕೀಬೋರ್ಡ್

ಭಾರತ ವೈವಿಧ್ಯತೆಯ ನಾಡು ಹಾಗೂ ಈ ವಿನೂತನ ಕೀಬೋರ್ಡ್, ಎಲ್ಲ ವೈವಿಧ್ಯಮಯ ಹಾಗೂ ಭಿನ್ನ ಅಭಿರುಚಿತ ಗ್ರಾಹಕರ ಅಗತ್ಯತೆಗಳನ್ನು ಪೂರೈಸುವಂತಿದೆ. ಯಮಹಾ ಮ್ಯೂಸಿಕ್ ಇಂಡಿಯಾ ಭಾರತೀಯ ಮಾರುಕಟ್ಟೆಗಾಗಿ ಮಾತ್ರ ಇದನ್ನು ಉತ್ಪಾದಿಸಿಲ್ಲ; ಬದಲಾಗಿ ಭಾರತವನ್ನು ಪ್ರಮುಖ ರಫ್ತು ಹಬ್ ಆಗಿ ಅಭಿವೃದ್ಧಿಪಡಿಸಿದೆ. ವಿಶ್ವಾದ್ಯಂತ ಸಂಗೀತ ಉದ್ಯಮ ವ್ಯಾಪಕವಾಗಿ ಬೆಳೆದಿದ್ದು, ಎಲ್ಲೆಡೆ ವ್ಯಾಪಕ ಬೇಡಿಕೆ ವ್ಯಕ್ತವಾಗುತ್ತಿದೆ.

ಸಂಗೀತ ಕಲಿಕೆಯ ಮಹತ್ವವನ್ನು ಅರಿತಿದ್ದಾರೆ

ಸಂಗೀತ ಕಲಿಕೆಯ ಮಹತ್ವವನ್ನು ಅರಿತಿದ್ದಾರೆ

ಶಾಲೆ ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಕೂಡ ಸಂಗೀತ ಕಲಿಕೆಯ ಮಹತ್ವವನ್ನು ಅರಿತಿದ್ದಾರೆ. ಇಂಥ ವಿಶಿಷ್ಟ ಉತ್ಪನ್ನಗಳಿಗೆ, ಹೆಚ್ಚು ಕ್ಷಮತೆಯ ಹಾಗೂ ವಿಶೇಷ ಅಗತ್ಯತೆಗೆ ಅನುಗುಣವಾಗಿ ರೂಪಿಸಲಾದ ಉತ್ಪನ್ನಗಳು ಅವರನ್ನು ಆಕರ್ಷಿಸುತ್ತವೆ ಎಂಬ ವಿಶ್ವಾಸ ನಮಗಿದೆ. ಇದು ಹಲವಾರು ಮಂದಿ ಸಂಗೀತ ಶಿಕ್ಷಕರು, ವಿದ್ಯಾಥಿಗಳು ಹಾಗೂ ಹವ್ಯಾಸಿ ಮತ್ತು ವೃತ್ತಿಪರರಿಗೆ ಆಕರ್ಷಕವಾಗುತ್ತದೆ ಎಂಬ ವಿಶ್ವಾಸವಿದೆ" ಎಂದು ಹೇಳಿದ್ದಾರೆ. ಪಿಎಸ್‍ಆರ್500 ಕೇವಲ 23,990 ರೂಪಾಯಿ ಬೆಲೆಯಲ್ಲಿ ಲಭ್ಯ ಹಾಗೂ ಭವಿಷ್ಯದಲ್ಲಿ ಇದನ್ನು ಇತರ ದೇಶಗಳಿಗೂ ರಫ್ತು ಮಾಡಲಾಗುತ್ತದೆ.

English summary
Yamaha Music India has launched its first Indian keyboard PSR I500 under the ‘Make in India’ initiative. This new model is an ideal portable keyboard for global music lovers who want to learn and perform.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X