ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾಹೂ ತನ್ನ ಬೆಂಗಳೂರು ಕಚೇರಿ ಮುಚ್ಚುತ್ತಿಲ್ಲ

By Mahesh
|
Google Oneindia Kannada News

ಬೆಂಗಳೂರು, ಅ.8: ಯಾಹೂ ಇಂಡಿಯಾ ಸಂಸ್ಥೆಯಿಂದ ಪಿಂಕ್ ಸ್ಲಿಪ್ ಮೇಳ ಜಾರಿಯಲ್ಲಿರುವ ಬೆನ್ನಲ್ಲೇ ಬೆಂಗಳೂರಿನ ಆರ್ ಅಂಡ್ ಡಿ ಕೇಂದ್ರವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗುವುದು ಎಂಬ ಸುದ್ದಿಯನ್ನು ಯಾಹೂ ಸಂಸ್ಥೆ ತಳ್ಳಿ ಹಾಕಿದೆ. ಅದರೆ, ಈಗಾಗಲೇ 400 ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ವಿತರಿಸಿರುವುದು ದೃಢಪಟ್ಟಿದೆ.

ಯಾಹೂ ಇಂಡಿಯಾ ಸಂಸ್ಥೆಯ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರದಲ್ಲಿ ಸುಮಾರು 2000ಕ್ಕೂ ಅಧಿಕ ಉದ್ಯೋಗಿಗಳಿದ್ದಾರೆ. ಈ ಪೈಕಿ 400ಜನರನ್ನು ಮನೆಗೆ ಕಳಿಸಲಾಗಿದೆ. ಕಾರ್ಯಕ್ಷಮತೆ ಹೆಚ್ಚಳ,ಬದಲಾಗುತ್ತಿರುವ ಮಾರುಕಟ್ಟೆ ಸ್ಥಿತಿ ಗತಿಯ ಅನ್ವಯ ಉದ್ಯೋಗ ಕಡಿತ ಅನಿವಾರ್ಯವಾಗಿದೆ ಎಂದು ಯಾಹೂ ಸಂಸ್ಥೆ ಪ್ರಕಟಿಸಿದೆ. ಅದರೆ, ಇನ್ನೂ ಎಷ್ಟು ಮಂದಿಯನ್ನು ಮನೆಗೆ ಕಳಿಸಲಾಗುವುದು ಎಂಬುದರ ಸುಳಿವು ನೀಡಿಲ್ಲ.

ಆದರೆ, ಬೆಂಗಳೂರಿನ ಕಚೇರಿ ಯಾಹೂಗೆ ಬಹುಮುಖ್ಯವಾಗಿದ್ದು, ಕಚೇರಿ ಬಂದ್ ಮಾಡುವ ಅಥವಾ ಅಲ್ಲಿನ ಉದ್ಯೋಗಿಗಳ ಸಂಖ್ಯೆ ಕಡಿತ ಮಾಡುವುದಿಲ್ಲ ಎಂದಿದ್ದಾರೆ.[ಯಾಹೂ WFH ನಿರ್ಬಂಧಕ್ಕೆ ಪ್ರತಿರೋಧ]

Yahoo to trim India headcount

ಫೇಸ್ ಬುಕ್ ಹಾಗೂ ಗೂಗಲ್ ಜೊತೆ ಪೈಪೋಟಿ ನಡೆಸುತ್ತಿರುವ ವೆಬ್ ಲೋಕದ ದೈತ್ಯ ಸಂಸ್ಥೆ ಯಾಹೂ ಈಗ ಸಿಇಒ ಮಾರಿಸ್ಸಾ ಮೇಯರ್ ಅವರ ಹೊಸ ಹೊಸ ಯೋಜನೆಗೆ ಒಗ್ಗಿಕೊಳ್ಳುತ್ತಿದೆ. ಭಾರತದಲ್ಲಿರುವ ಆರ್ ಅಂಡ್ ಡಿ ಕಚೇರಿಯನ್ನು ಯುಎಸ್ ಗೆ ಸ್ಥಳಾಂತರಿಸಲು ಮೇಯರ್ ಚಿಂತಿಸಿದ್ದಾರೆ.

ಸುಮಾರು 13 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಸ್ಥಾಪನೆಗೊಂಡ ಯಾಹೂ ಆರ್ ಅಂಡ್ ಡಿ ಕೇಂದ್ರದಿಂದ ಅನೇಕ ಹೊಸ ಉತ್ಪನ್ನಗಳನ್ನು ವೆಬ್ ಲೋಕಕ್ಕೆ ಯಾಹೂ ಪರಿಚಯಿಸಿದೆ. ಯಾಹೂ ಕ್ರಿಕೆಟ್, omg!, ಯಾಹೂ ವಿಡಿಯೋ, ಪಾಲಿಯಾಡ್ಸ್, ಪ್ರಿಡಿಕ್ಟ್ ಮುಂತಾದವು ಇಲ್ಲೇ ಹುಟ್ಟಿ ನಿರ್ವಹಣೆಗೊಳಲ್ಪಡುತ್ತಿರುವ ಉತ್ಪನ್ನಗಳಾಗಿವೆ. ಸೆಪ್ಟೆಂಬರ್ ತಿಂಗಳಿನಲ್ಲಿ ಬೆಂಗಳೂರಿನ ಬುಕ್ ಪ್ಯಾಡ್ ಸಂಸ್ಥೆಯನ್ನು 90 ಕೋಟಿ ರು ಕೊಟ್ಟು ಯಾಹೂ ಖರೀದಿಸಿದ್ದನ್ನು ಇಲ್ಲಿ ಮರೆಯುವಂತಿಲ್ಲ. [ಬೆಂಗಳೂರಿನ ಸಂಸ್ಥೆ ಖರೀದಿಸಿದ ದೈತ್ಯ ಯಾಹೂ]

2009 ರಿಂದ 2013 ಮಾರ್ಚ್ ತನಕ ಆರ್ ಅಂಡ್ ಡಿ ವಿಭಾಗ 500 ಮಂದಿಯಿಂದ 2000 ಉದ್ಯೋಗಿಗಳ ತನಕ ಬೆಳೆದಿತ್ತು. ಶೌವಿಕ್ ಮುಖರ್ಜಿ ಇಲ್ಲಿನ ನಿರ್ವಹಣೆ ನೋಡಿಕೊಳ್ಳುತ್ತಿದ್ದಾರೆ.ಯಾಹೂ ಉಪಾಧ್ಯಕ್ಷ ಹಾಗೂ ಇಂಡಿಯಾದ ಆರ್ ಅಂಡ್ ಡಿ ಕೇಂದ್ರದ ಸಿಇಒ ಮುಖರ್ಜಿ ಅವರನ್ನು ಸನ್ನಿವೇಲ್ ಕ್ಯಾಲಿಫೋರ್ನಿಯಾದ ಕೇಂದ್ರ ಕಚೇರಿಗೆ ಕರೆಸಿಕೊಂಡು ಕನ್ಸೂಮರ್ ಪ್ಲಾಟ್ ಫರ್ಮ್ಸ್ ವಿಭಾಗದ ಉಪಾಧ್ಯಕ್ಷ ಹುದ್ದೆ ನೀಡಲಾಗಿದೆ. ನಿಧಾನಗತಿಯಲ್ಲಿ ಬೆಂಗಳೂರಿನ ಬಾಗ್ಮನೆ ಟೆಕ್ ಪಾರ್ಕ್ ನಿಂದ ಯಾಹೂ! ಕ್ಯಾಲಿಫೋರ್ನಿಯಾಗೆ ಹಾರುವ ಸೂಚನೆಯಂತೂ ಸಿಕ್ಕಿದೆ.

English summary
U.S.-based Internet company Yahoo is planning to lay-off around 250 to 400 of its Indian workforce. According to sources, it initiated the lay-off process on Tuesday. At present, the company employees around 2,000 people in the Bangalore R&D centre.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X