ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾಹೂ ಖಾತೆಗೆ ಕನ್ನ, 100 ಕೋಟಿ ಮಂದಿಗೆ ಭೀತಿ!

By Mahesh
|
Google Oneindia Kannada News

ಬೆಂಗಳೂರು, ಡಿಸೆಂಬರ್ 15: ತಂತ್ರಜ್ಞಾನ ಕ್ಷೇತ್ರದಲ್ಲಿ ಬಹುದೊಡ್ಡ ಕನ್ನ ನಡೆದು ಬಿಟ್ಟಿದೆ. ಸರಿ ಸುಮಾರು 100 ಕೋಟಿ(1 ಬಿಲಿಯನ್) ಗೂ ಅಧಿಕ ಯಾಹೂ ಖಾತೆಗಳನ್ನು ಹ್ಯಾಕ್ ಮಾಡಲಾಗಿದೆ ಎಂದು ಯಾಹೂ ಸಂಸ್ಥೆ ಹೇಳಿದೆ.

ಅತ್ಯಂತ ದೊಡ್ಡ ಪ್ರಮಾಣದ ಭದ್ರತಾ ಲೋಪ ಇದಾಗಿದ್ದು, 2013ರಲ್ಲಿ ಸಂಭವಿಸಿದ್ದ ಕಂಪನಿಯ ಖಾತೆಗಳ ಹ್ಯಾಕ್​ನಿಂದ 500 ಮಿಲಿಯನ್ (50 ಕೋಟಿ) ಮಂದಿ ಖಾತೆದಾರರಿಗೆ ತೊಂದರೆಯಾಗಿತ್ತು. ಈಗ ಯಾ
ಹೂ ಕಂಪನಿ ಈ ವಿಷ್ಯದಲ್ಲಿ ತನ್ನದೇ ದಾಖಲೆ ಅಳಿಸಿದೆ.

Yahoo confirms Over 1 Billion User Accounts Hacked

ಕಳೆದ ಜುಲೈನಲ್ಲಿ ಯಾಹೂ ಸಂಸ್ಥೆ, ಟೆಲಿಕಮ್ಯೂನಿಕೇಷನ್ ಸಂಸ್ಥೆ ವೇರಿಜಾನ್ ತೆಕ್ಕೆಗೆ 4.8 ಬಿಲಿಯನ್ ಡಾಲರ್(32,495 ಕೋಟಿ ರು) ಮೊತ್ತದ ಡೀಲ್ ನೊಂದಿಗೆ ಬಿದ್ದಿತ್ತು.

2013ರ ಘಟನೆ ನಂತರ ತನ್ನ ಬಳಕೆದಾರರ ಕ್ರೆಡಿಟ್ ಕಾರ್ಡ್, ಬ್ಯಾಂಕ್ ಖಾತೆ ಸಂಖ್ಯೆಗಳು ಸುರಕ್ಷಿತವಾಗಿವೆ ಎಂದು ಯಹೂ ಹೇಳಿಕೊಂಡಿತ್ತು. ಆದರೆ, ಈಗ ಟೆಲಿಫೋನ್ ಸಂಖ್ಯೆಯಿಂದ ಹಿಡಿದು ಬಳಕೆದಾರರ ಖಾಸಗಿ ಮಾಹಿತಿಗಳು ಕಳ್ಳರ ಪಾಲಾಗುವ ಭೀತಿ ಎದುರಾಗಿದೆ.ಈ ಸುದ್ದಿ ಹೊರಬರುತ್ತಿದ್ದಂತೆ ಜಾಗತಿಕ ಷೇರು ಮಾರುಕಟ್ಟೆಯಲ್ಲಿ ಶೇ 2.7ರಷ್ಟು ಇಳಿಮುಖ ಕಂಡಿದೆ.

English summary
Yahoo confirmed that more than 1 billion user accounts - meaning most of the Internet giant's customers worldwide - were hacked in 2013, leading to the release of user names, telephone numbers, dates of birth and other personal information.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X