ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನ ಸಂಸ್ಥೆ ಖರೀದಿಸಿದ ದೈತ್ಯ ಯಾಹೂ

By Mahesh
|
Google Oneindia Kannada News

ಬೆಂಗಳೂರು, ಸೆ.22: ನಗರದ ಯುವ ಇಂಜಿನಿಯರ್ ಗಳ ಪ್ರತಿಭೆ ದೇಶ ವಿದೇಶಗಳ ದೈತ್ಯ ಸಂಸ್ಥೆಗಳನ್ನು ಸೆಳೆದಿರುವ ಉದಾಹರಣೆ ಸಾಕಷ್ಟಿವೆ. ಫೇಸ್ ಬುಕ್ ಹಾಗೂ ಗೂಗಲ್ ನಂತರ ಈಗ ಯಾಹೂ ಸಂಸ್ಥೆ ನಗರ ಸ್ಟಾರ್ಟ್ ಅಪ್ ಸಂಸ್ಥೆಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ.

ಸಾಮಾಜಿಕ ಜಾಲ ತಾಣ ದಿಗ್ಗಜ ಫೇಸ್ ಬುಕ್ ಸಂಸ್ಥೆ ಬೆಂಗಳೂರಿನ ಲಿಟ್ಲ್ ಐ ಲ್ಯಾಬ್ಸ್ ಖರೀದಿಸಿತ್ತು. ಇಂಪರ್ ಮಿಯಂ ಸಂಸ್ಥೆಯನ್ನು ಗೂಗಲ್ ತನ್ನ ತೆಕ್ಕೆಗೆ ಹಾಕಿಕೊಂಡಿತ್ತು. ಈಗ ಬೆಂಗಳೂರು ಮೂಲದ ಬುಕ್ ಪ್ಯಾಡ್ ಸಂಸ್ಥೆಯನ್ನು ಭಾರಿ ಮೊತ್ತಕ್ಕೆ ಯಾಹೂ ಖರೀದಿಸಿರುವ ಸುದ್ದಿ ಬಂದಿದೆ. [ಬೆಂಗಳೂರಿನ ಕಂಪನಿ ಖರೀದಿಸಿದ ಫೇಸ್ ಬುಕ್]

ಐಐಟಿ ಗುವಾಹಟಿಯ ಮೂವರು ಯುವ ಪ್ರತಿಭಾವಂತರು ಬೆಂಗಳೂರಿನಲ್ಲಿ ಬುಕ್ ಪ್ಯಾಡ್ ಸಂಸ್ಥೆ ಆರಂಭಿಸಿ ಇನ್ನೂ ಒಂದು ವರ್ಷ ಕಳೆಯುವುದರೊಳಗೆ ಯಾಹೂ ಸಂಸ್ಥೆ ಕಣ್ಣಿಗೆ ಬಿದ್ದಿರುವುದು ಹೆಮ್ಮೆಯ ವಿಚಾರ. ಮೂಲಗಳ ಪ್ರಕಾರ ಸುಮಾರು 15 ಮಿಲಿಯನ್ ಡಾಲರ್(90 ಕೋಟಿ ರು) ನೀಡಿ ಬುಕ್ ಪ್ಯಾಡ್ ಖರೀದಿಸಿದೆಯಂತೆ.

ಆದರೆ, ನಿಖರವಾಗಿ ಎಷ್ಟಕ್ಕೆ ಡೀಲ್ ಆಗಿದೆ ಎಂಬುದು ಇನ್ನೂ ಬಹಿರಂಗವಾಗಿಲ್ಲ. ಬುಕ್ ಪ್ಯಾಡ್ ಟೆಕ್ ಸಂಸ್ಥೆಯ ಉತ್ಪನ್ನ ಡಾಕ್ ಪ್ಯಾಡ್ ಬಳಕೆ ಇನ್ಮುಂದೆ ಯಾಹೂ ಸಂಸ್ಥೆಗೆ ಸೇರಲಿದೆ.

ಯಾವ ಯಾವ ಡಾಕ್ಯುಮೆಂಟ್ ನೋಡಬಹುದು

ಯಾವ ಯಾವ ಡಾಕ್ಯುಮೆಂಟ್ ನೋಡಬಹುದು

ಡಾಕ್ ಪ್ಯಾಡ್ ಬಳಸಿ ವರ್ಡ್, ಪವರ್ ಪಾಯಿಂಟ್, ಎಕ್ಸೆಲ್, ಪಿಡಿಎಫ್, ಒಡಿಟಿ, ಒಡಿಎಕ್ಸ್, ಇಪಬ್2.0 ಹಾಗೂ ಇನ್ನಿತರ ಇಮೇಜ್ ಎಕ್ಸ್ ಟೇನ್ಷನ್ ಇರುವ ದಾಖಲೆಗಳನ್ನು ಓಪನ್ ಮಾಡಬಹುದಾಗಿದೆ ಹಾಗೂ ಅಭಿವೃದ್ಧಿಪಡಿಸಬಹುದಾಗಿದೆ.

ಯಾರು ಯಾರು ಬುಕ್ ಪ್ಯಾಡ್ ಹಿಂದಿದ್ದಾರೆ

ಯಾರು ಯಾರು ಬುಕ್ ಪ್ಯಾಡ್ ಹಿಂದಿದ್ದಾರೆ

ಐಐಟಿ ಗುವಾಹಟಿಯಿಂದ ಪದವಿ ಪಡೆದುಕೊಂಡಿರುವ ಆದಿತ್ಯಾ ಬಂಡಿ(25), ನಿಕೇತ್ ಸಬ್ಬಿನೇನಿ೯24), ಅಶ್ವಿಕ್ ಬಟ್ಟು(23) ಬುಕ್ ಪ್ಯಾಡ್ ಸ್ಥಾಪಕರಾಗಿದ್ದಾರೆ. ಮೈಕ್ರೋಸಾಫ್ಟ್, ಕಾಂಗ್ನಿಜೆಂಟ್ ಹಾಗೂ ಸಿಮ್ಯಾಂಟೆಕ್ ನಲ್ಲಿ ಕೆಲ ಕಾಲ ದುಡಿದ ಅನುಭವ ಹೊಂದಿದ್ದಾರೆ. ಈ ಮೂವರು ಜೊತೆಗೆ ಬುಕ್ ಪ್ಯಾಡ್ ನ ಇತರೆ 6 ಜನರಿಗೆ ಯಾಹೂ ಭಾಗ್ಯದ ಬಾಗಿಲು ತೆರೆದಿದೆ. ಯಾಹೂ ಸಂಸ್ಥೆ ಷೇರುದಾರರಾಗುವ ಯೋಗವೂ ಸಿಕ್ಕಿದೆ.

ಗೂಗಲ್ ಡಾಕ್ಸ್ ಗೂ ಡಾಕ್ ಪ್ಯಾಡ್ ಗೂ ವ್ಯತ್ಯಾಸ

ಗೂಗಲ್ ಡಾಕ್ಸ್ ಗೂ ಡಾಕ್ ಪ್ಯಾಡ್ ಗೂ ವ್ಯತ್ಯಾಸ

ಗೂಗಲ್ ಡಾಕ್ಸ್ ಗೂ ಡಾಕ್ ಪ್ಯಾಡ್ ಗೂ ವ್ಯತ್ಯಾಸವಿದೆ. ಅಪ್ಲಿಕೆಂಟ್ ಟ್ರ್ಯಾಕಿಂಗ್ ಸಿಸ್ಟಮ್, ಫೈಲ್ ಷೇರಿಂಗ್ ಅಪ್ಲಿಕೇಷನ್, ಕಾನ್ಫರೆನ್ಸಿಂಗ್ ಸಲ್ಯೂಷನ್ಸ್, ಲರ್ನಿಂಗ್ ಮ್ಯಾನೇಜ್ಮೆಂಟ್ ಸಲ್ಯೂಷನ್ ಇನ್ನಿತರ ಸೌಲಭ್ಯಗಳು ಗೂಗಲ್ ನಿಂದ ಲಭ್ಯವಾಗುವುದಿಲ್ಲ. ಈ ನಿಟ್ಟಿನಲ್ಲಿ ಡಾಕ್ ಪ್ಯಾಡ್ ಅನುಕೂಲಕರ

ಇದು ಯಾರಿಗಾಗಿ ಮಾಡಿದ ಉತ್ಪನ್ನ

ಇದು ಯಾರಿಗಾಗಿ ಮಾಡಿದ ಉತ್ಪನ್ನ

ಡಾಕ್ ಪ್ಯಾಡ್ ಎಲ್ಲರೂ ಡೌನ್ ಲೋಡ್ ಮಾಡಿಕೊಳ್ಳಲು ಆಗುವುದಿಲ್ಲ. ಡೆವಲಪರ್ ಗೆ ಹೇಳಿ ಮಾಡಿಸಿದ ಅಪ್ಲಿಕೇಷನ್ ಇದಾಗಿದ್ದು, ಡಾಕ್ ಪ್ಯಾಡ್ ಬಳಸಿ ಈ ಹಿಂದಿನ ಸ್ಲೈಡ್ ನಲ್ಲಿ ಹೇಳಿದ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಬಹುದಾಗಿದೆ. ಇದು ಗ್ರಾಹಕರಿಗೆ ಮಾಡಿದ ಉತ್ಪನ್ನವಲ್ಲ

ಡೆವಲಪರ್ ಗಳು ಏನು ಮಾಡಬಹುದು

ಡೆವಲಪರ್ ಗಳು ಏನು ಮಾಡಬಹುದು

ಡಾಕ್ ಪ್ಯಾಡ್ ಎಲ್ಲಾ ಆಪರೇಟಿಂಗ್ ಸಿಸ್ಟಮ್ ಹಾಗೂ ಸಾಧನಗಳಲ್ಲಿ ಬಳಸಬಹುದಾಗಿದೆ. ಸುಮಾರು 15ಕ್ಕೂ ಅಧಿಕ ಡಾಕ್ಯುಮೆಂಟ್ ಫಾರ್ಮಾಟ್ ಗಳನ್ನು ಬೆಂಬಲಿಸುತ್ತದೆ. ಕ್ಲೌಡ್ ನಲ್ಲಿ ಸುಮಾರು 53 ಬಿಲಿಯನ್ ಡಾಕ್ಯುಮೆಂಟ್ಸ್ ಇವೆ. ಇನ್ನೆರಡು ವರ್ಷಗಳಲ್ಲಿ ಈ ಸಂಖ್ಯೆ 200 ಬಿಲಿಯನ್ ದಾಟುವ ನಿರೀಕ್ಷೆ ಇದೆ. ಹೀಗಾಗಿ ಇವೆಲ್ಲದರ ಸದುಪಯೋಗ ಮಾಡಿಕೊಳ್ಳಲು ಡಾಕ್ ಪ್ಯಾಡ್ ನಂಥ ಉತ್ಪನ್ನ ಅತ್ಯಗತ್ಯ

English summary
Yahoo has bought Bangalore-based Bookpad, a startup that's barely a year old and founded by three youngsters who passed out of IIT-Guwahati over the past three years. After Facebook and Google acquired Little Eye Labs and Impermium respectively Bangalore startup in news again.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X