• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಕ್ಸೋಮಿ MI ಹೊಸ 32, 43 ಇಂಚಿನ ಟಿವಿ ಭಾರತದಲ್ಲಿ ಬಿಡುಗಡೆ : ಬೆಲೆ 13,499 ರೂ.

|

ನವದೆಹಲಿ, ಸೆಪ್ಟೆಂಬರ್ 07: ಶಿಯೋಮಿ ಎಕ್ಸೋಮಿ ಇಂದು ಭಾರತದಲ್ಲಿ ಹೊಸ ಎಂಐ ಟಿವಿ 4A Horizan ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಸ್ಮಾರ್ಟ್ ಟಿವಿಯ ಹೊಸ ಆವೃತ್ತಿ 32 ಇಂಚು ಮತ್ತು 43 ಇಂಚಿನ ರೂಪಾಂತರದಲ್ಲಿ ಬರುತ್ತದೆ.

32 ಇಂಚಿನ ಡಿಸ್‌ಪ್ಲೇ ಹೊಂದಿರುವ ಎಂಐ 4A Horizan ಟಿವಿ ಆವೃತ್ತಿಯ ಬೆಲೆ 13,499 ರೂಪಾಯಿ ಆಗಿದೆ. ಈ ಟಿವಿ ಸೆಪ್ಟೆಂಬರ್ 11 ರಿಂದ ಮಧ್ಯಾಹ್ನ 12 ಗಂಟೆಗೆ ಫ್ಲಿಪ್‌ಕಾರ್ಟ್ ಮತ್ತು ಮೈ.ಕಾಂನಲ್ಲಿ ಖರೀದಿಗೆ ಲಭ್ಯವಿದೆ.

ವಿಶ್ವದ ಮೊದಲ ಪಾರದರ್ಶಕ ಟಿವಿ: ಬೆಲೆ ಕೇಳಿದ್ರೆ ದಂಗಾಗ್ತೀರಾ..!

ಎಂಐ 4A Horizan ಆವೃತ್ತಿಯ 43 ಇಂಚಿನ ಟಿವಿಯ ಬೆಲೆ 22,999 ರೂಪಾಯಿ. ಇದು ಸೆಪ್ಟೆಂಬರ್ 15 ರಂದು ಸಂಜೆ 6 ಗಂಟೆಗೆ ಅಮೆಜಾನ್ ಮತ್ತು ಮೈ.ಕಾಂನಲ್ಲಿ ಮಾರಾಟವಾಗಲಿದೆ

32 ಇಂಚು ಮತ್ತು 43 ಇಂಚು ಎರಡೂ ಟಿವಿಗಳು ಎಚ್‌ಡಿ ರೆಸಲ್ಯೂಶನ್ ಪ್ರದರ್ಶನವನ್ನು ಹೊಂದಿದ್ದರೆ, 43 ಇಂಚಿನ ಮಾದರಿಯು ಎಫ್‌ಹೆಚ್‌ಡಿ ರೆಸಲ್ಯೂಶನ್ ಪ್ರದರ್ಶನವನ್ನು ಹೊಂದಿದೆ.

ಸ್ಮಾರ್ಟ್ ಟಿವಿಗಳು ಪ್ಯಾಚ್‌ವಾಲ್ ಯುಐ ಆಧಾರಿತ ಆಂಡ್ರಾಯ್ಡ್ ಟಿವಿ 9 ಸಾಫ್ಟ್‌ವೇರ್‌ನೊಂದಿಗೆ ಬರುತ್ತವೆ.

ಎಂಐ ಟಿವಿ 4A Horizan ಆವೃತ್ತಿಯು 64-ಬಿಟ್ ಆಕ್ಟಾ-ಕೋರ್ ಪ್ರೊಸೆಸರ್ ಆಗಿದ್ದು, 1 ಜಿಬಿ RAM ಮತ್ತು 8 ಜಿಬಿ ಸ್ಟೋರೇಜ್ ಹೊಂದಿದೆ. ಇದರ ಜೊತೆಗೆ, ಮೂರು ಎಚ್‌ಡಿಎಂಐ, 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಅನ್ನು ಒಳಗೊಂಡಿದೆ. ಜೊತೆಗೆ ಇದು Chromecast, ಗೂಗಲ್ ಸಹಾಯಕ ಮತ್ತು ಗೂಗಲ್ ಡೇಟಾ ಸೇವರ್‌ನೊಂದಿಗೆ ಬರುತ್ತದೆ.

ಇನ್ನು ಈ ಟಿವಿಯ ರಿಮೋಟ್‌ನಲ್ಲಿಯೇ ನೇರವಾಗಿ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಗೂಗಲ್ ಅಸಿಸ್ಟೆಂಟ್‌ಗಾಗಿ ಮೀಸಲಾದ ಬಟನ್‌ಗಳೊಂದಿಗೆ ಬರುತ್ತದೆ.

English summary
Xiaomi MI TV 4a horizon edition in 32-inch and 43-inch variants launched in india. Check out the feature, specifications and price.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X