ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಪಲ್ ನಲ್ಲಿ ಕನ್ನಡ ಕೀಬೋರ್ಡ್ ಬಳಕೆ ಈಗ ಸುಲಭ

ವರ್ಲ್ಡ್ ವೈಡ್ ಡೆವಲಪರ್ಸ್ ಸಮ್ಮೇಳನದಲ್ಲಿ ಆಪಲ್ ಸಂಸ್ಥೆ ತನ್ನ ಹೊಸ ಉತ್ಪನ್ನಗಳು, ಸೌಲಭ್ಯಗಳನ್ನು ಅನಾವರಣಗೊಳಿಸಿದೆ. ಸಿರಿಗೆ ಇನ್ನಷ್ಟುಬಲ ಬಂದಿದೆ. ಕನ್ನಡ ಕೀಬೋರ್ಡ್ ಬಳಕೆ ಈಗ ಸುಲಭ

By Mahesh
|
Google Oneindia Kannada News

ಸ್ಯಾನ್ ಒಸೆ(ಕ್ಯಾಲಿಫೋರ್ನಿಯಾ), ಜೂನ್ 06: ವರ್ಲ್ಡ್ ವೈಡ್ ಡೆವಲಪರ್ಸ್ ಸಮ್ಮೇಳನದಲ್ಲಿ ಆಪಲ್ ಸಂಸ್ಥೆ ತನ್ನ ಹೊಸ ಉತ್ಪನ್ನಗಳು, ಸೌಲಭ್ಯಗಳನ್ನು ಅನಾವರಣಗೊಳಿಸಿದೆ. ಸಿರಿಗೆ ಇನ್ನಷ್ಟುಬಲ ಬಂದಿದೆ.

ಮೆಸೇಜ್ ಗಳನ್ನು ಶೇಖರಿಸುವುದು, ಕನ್ನಡ ಸೇರಿದಂತೆ ವಿವಿಧ ಭಾಷೆಗಳ ಕೀಬೋರ್ಡ್ ಬಳಕೆ ವಿಧಾನ ಇನ್ನಷ್ಟು ಸುಲಭವಾಗಿದೆ. ಐಒಎಸ್ 11ಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಆಪರೇಟಿಂಗ್ ಸಿಸ್ಟಮ್ ಉಚಿತವಾಗಿ ಅಪ್ಗ್ರೇಡ್ ಮಾಡಿಕೊಳ್ಳಲು ಲಭ್ಯವಿದೆ.

ಆಪಲ್ ಸಂಸ್ಥೆಯ ಐಒಎಸ್ ಹಾಗೂ ಉತ್ಪನ್ನಗಳ ಮುಖ್ಯ ಬಲವೆಂದರೆ ಐಕ್ಲೌಡ್ ನಲ್ಲಿ ಬಳಕೆದಾರರ ಸಕಲ ಸರ್ವ ಮಾಹಿತಿ ಶೇಖರಿಸುವುದು, ಆಂಡ್ರಾಯ್ಡ್ ಫೋನ್ ಗಳಿಗೆ ಹೋಲಿಸಿದರೆ ಇದು ಉನ್ನತ ಮಟ್ಟದಲ್ಲಿದೆ. ಮುಖ್ಯವಾಗಿ ಫೋನ್ ಬದಲಾಯಿಸಿ ಮತ್ತೆ ಹಳೆ ಮೆಸೇಜ್, ಸೆಟ್ಟಿಂಗ್ಸ್ ಎಲ್ಲಾ ಪುನರ್ ಸ್ಥಾಪಿಸುವಾಗ ಆಗುವ ಕಿರಿಕಿರಿ ಐಫೋನ್ ನಲ್ಲಿ ಇರಲ್ಲ.

WWDC 2017: Apple iOS 11 Best features Kannada Keyboard

isiriಗೆ ಹೆಚ್ಚಿನ ಬಲ: ಆಪಲ್ ಅಪ್ಲಿಕೇಷನ್ ಗಳಲ್ಲದೆ ಎವರ್ ನೋಟ್ ನಂತ ಇತರೆ ಅಪ್ಲಿಕೇಷನ್ ಕಂಟ್ರೋಲ್ ಗೂ ಸಿರಿಯನ್ನು ಬಳಸಬಹುದು. ಸಿರಿಗೆ ಇನ್ನಷ್ಟು ದನಿ, ಭಾಷೆ ಸೇರ್ಪಡೆಯಾಗಿದೆ. ಗೂಗಲ್ ಅಸಿಸ್ಟೆಂಟ್ ಗೆ ಸೆಡ್ಡು ಹೊಡೆಯಲು ಸಿರಿ ಭರ್ಜರಿಯಾಗಿ ತಯಾರಾಗಿ ಬರುತ್ತಿದ್ದಾಳೆ.

ಇದಲ್ಲದೆ ಟಾನ್ಸ್ ಲೇಷನ್ ಆಯ್ಕೆ ಕೂಡಾ ಇದೆ. ಸದ್ಯಕ್ಕೆ ಇಂಗ್ಲೀಷ್, ಸ್ಪಾನೀಷ್,ಚೈನೀಶ್ ಪಟ್ಟಿಯಲ್ಲಿವೆ. ಕೀಬೋರ್ಡ್ ಆಯ್ಕೆ ಕೂಡಾ ಈಗ ಲಭ್ಯವಿದೆ.

ಉಳಿದಂತೆ ಲಾಕ್ ಸ್ಕ್ರೀನ್, ಮ್ಯಾಪಿಂಗ್, ನ್ಯಾವಿಗೇಷನ್, ಡು ನಾಟ್ ಡಿಸ್ಟರ್ಬ್ (ಡ್ರೈವಿಂಗ್ ಮಾಡುವಾಗ) ಸೌಲಭ್ಯ, ಮಲ್ಟಿ ರೂಮ್ ಪ್ಲೇಬ್ಯಾಕ್(ಗೂಗಲ್ ಕ್ಯಾಸ್ಟ್ ಗೆ ಸ್ಪರ್ಧೆ), ಹೊಸ ಪಾಡ್ ಕಾಸ್ಟ್ ಆಪ್, ಸ್ಕ್ರೀನ್ ಶಾರ್, ಮಾರ್ಕ್ ಅಪ್ ಸೌಲಭ್ಯ, ಸ್ಕ್ರೀನ್ ರೆಕಾರ್ಡಿಂಗ್, ಒನ್ ಹ್ಯಾಂಡೆಡ್ ಮೋಡ್, QR ಕೋಡ್ ಬೆಂಬಲ ಹೀಗೆ ಹತ್ತು ಹಲವು ಹೊಸ ಸೌಲಭ್ಯಗಲು ಐಒಎಸ್ 11ರಲ್ಲಿ ಅಡಕವಾಗಿವೆ.

English summary
WWDC 2017: Apple announced iOS 11 at its annual developers conference. Apple finally included a Native Kannada Keyboard in iOS 11 check out other best features
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X