ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವದ ಅತ್ಯಂತ ಪುರಾತನ ಟ್ರಾವೆಲ್ ಏಜೆನ್ಸಿ ಥಾಮಸ್ ಕುಕ್ ದಿವಾಳಿ

|
Google Oneindia Kannada News

ಲಂಡನ್, ಸೆ.23: ವಿಶ್ವದ ಅತ್ಯಂತ ಹಳೆಯ ಹಾಗೂ ಬ್ರಿಟನ್ನಿನ ಅತ್ಯಂತ ಪ್ರತಿಷ್ಠಿತ ಟ್ರಾವೆಲ್ ಬ್ರ್ಯಾಂಡ್ ಥಾಮಸ್ ಕುಕ್ ಪತನವಾಗಿದೆ. ಟ್ರಾವೆಲ್ ಏಜೆನ್ಸಿ ಥಾಮಸ್ ಕುಕ್ ಗ್ರೂಪ್ ದಿವಾಳಿ ಎದ್ದಿದೆ ಎಂದು ಸೋಮವಾರದಂದು ನಾಗರಿಕ ವಿಮಾನಯಾನ ಪ್ರಾಧಿಕಾರ(ಸಿಎಎ) ಅಧಿಕೃತವಾಗಿ ಘೋಷಿಸಿದೆ.

ವಿಶ್ವದ ಸುಮಾರು 16 ದೇಶಗಳಲ್ಲಿ ಥಾಮಸ್ ಕುಕ್ 22 ಸಾವಿರಕ್ಕೂ ಹೆಚ್ಚು ಜನರು ಉದ್ಯೋಗಿಗಳನ್ನು ಹೊಂದಿದ್ದು, ಎಲ್ಲರೂ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಥಾಮಸ್ ಕುಕ್ ಬಳಸಿ ಟ್ರಾವೆಲ್ ಅಂಡ್ ಟೂರ್ ಪ್ಯಾಕೇಜ್ ಬುಕ್ ಮಾಡಿದ್ದ 6,00,000 ಪ್ಯಾಕೇಜ್ ಡೀಲ್ ಗಳು ರದ್ದಾಗಿವೆ. 2012ರಲ್ಲಿ ಕೆನಡಾ ಮೂಲದ ಫೇರ್​ಫ್ಯಾಕ್ಸ್ ಎಂಬ ಸಂಸ್ಥೆಯು ಥಾಮಸ್ ಕುಕ್​ನ ಭಾರತದ ವಿಭಾಗವನ್ನು ಖರೀದಿ ಮಾಡಿದ್ದರಿಂದ ಭಾರತದಲ್ಲಿ ಥಾಮಸ್ ಕುಕ್ ಗೆ ಅಂಥಾ ಹೊಡೆತ ಬಿದ್ದಿಲ್ಲ. ಥಾಮಸ್ ಕುಕ್ ಗ್ರಾಹಕರ ಪೈಕಿ 1,50,000 ಬ್ರಿಟಿಷ್ ಮೂಲದ ಗ್ರಾಹಕರಿದ್ದು, ಸದ್ಯ ತೊಂದರೆಯಲ್ಲಿದ್ದಾರೆ. ಆದರೆ ಥಾಮಸ್ ಕುಕ್​ನ ಗ್ರಾಹಕರಿಗೆ ಸರಕಾರದ ವಿಮೆ ಯೋಜನೆ ಅನ್ವಯವಾಗಲಿದ್ದು, ಎಲ್ಲರಿಗೂ ರಿಟರ್ನ್ ಟಿಕೆಟ್ ಮೂಲಕ ವಾಪಸ್ ಕರೆಸಿಕೊಳ್ಳುವ ವ್ಯವಸ್ಥೆ ಮಾಡಲಾಗಿದೆ.

1841ರಲ್ಲಿ ಥಾಮಸ್ ಕುಕ್ ಎಂಬುವರು ಸ್ಥಾಪಿಸಿದ ಟ್ರಾವೆಲ್ ಏಜೆನ್ಸಿ, ವಿಶ್ವದ ಅತ್ಯಂತ ಹಳೆಯ ಟ್ರಾವೆಲ್ ಏಜೆನ್ಸಿಯಾಗಿದೆ. ಒಂದು ದಿನದ ಪಿಕ್ನಿಕ್ ವ್ಯವಸ್ಥೆ ಮೂಲಕ ಆರಂಭವಾದ ಸಂಸ್ಥೆಯ ಪ್ಯಾಕೇಜ್ ಇಂದು ಯುಎಸ್, ಯುಕೆ, ಯುರೋಪಿನಲ್ಲಿ ದೊಡ್ದ ಮಟ್ಟಿಗೆ ವ್ಯಾಪಿಸಿದೆ.

Worlds oldest tour operator UKs Thomas Cook collapses, declares for bankruptcy

ಸದ್ಯ ಪೀಟರ್ ಫಾನ್ ಕಾಸರ್ ಸಂಸ್ಥೆಯ ಸಿಇಒ ಆಗಿದ್ದು, ಸಂಸ್ಥೆಯ ಸಾಲದ ಹೊತೆ ಸುಮಾರು 11 ಸಾವಿರ ಕೋಟಿ ರುಪಾಯಿ ಮೀರಿದೆ ಎಂದು ಒಪ್ಪಿಕೊಂಡಿದ್ದಾರೆ. 200 ಮಿಲಿಯನ್ ಪೌಂಡ್ ಆರ್ಥಿಕ ನೆರವು ಕೋರಲಾಗಿತ್ತು. ಆದರೆ, ಷೇರುದಾರದ ನಡುವೆ ಮಾತುಕತೆ ಮುರಿದು ಬಿದ್ದಿತ್ತು.

ಸಾಲದ ಹೊರೆ ಹೊತ್ತುಕೊಂಡಿದ್ದ ಥಾಮಸ್ ಕುಕ್ ಸಂಸ್ಥೆಯಲ್ಲಿ ಚೀನಾದ ಸಂಸ್ಥೆಯೊಂದು 900 ಮಿಲಿಯನ್ ಪೌಂಡ್(ಸುಮಾರು 8 ಸಾವಿರ ಕೋಟಿ ರೂಪಾಯಿ) ಹೂಡಿಕೆ ಮಾಡಿತ್ತು. ಆದರೆ, ಮೇ ತಿಂಗಳಿನಲ್ಲಿ 1.25 ಮಿಲಿಯನ್ ಪೌಂಡ್ ಸಾಲದ ಹೊರೆ ತೋರಿಸಿದ ಥಾಮಸ್ ಕುಕ್ ಮತ್ತೆ ಚೇತರಿಸಿಕೊಳ್ಳಲಿಲ್ಲ.

English summary
World's oldest tour operator, United Kingdom's travel giant Thomas Cook has declared for bankruptcy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X