ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂತರ್ಜಾಲ ಲೋಕದಲ್ಲಿ ಮಿನುಗುವ ನಕ್ಷತ್ರ ಯುಸಿ ಬ್ರೌಸರ್

|
Google Oneindia Kannada News

ನವದೆಹಲಿ, ನವೆಂಬರ್, 27: ಮೊಬೈಲ್ ಇಂಟರ್ ನೆಟ್ ಬಳಕೆ ಇಂದು ಪ್ರತಿಯೊಬ್ಬರ ಹಕ್ಕು, ಆಸ್ತಿ, ಸ್ವತ್ತು ಎಂಬಂತಾಗಿದೆ. ಇದಕ್ಕೆ ಪೂರಕ ಎಂಬಂತೆ ಮೊಬೈಲ್ ಅಂತರ್ಜಾಲ ಬಳಕೆದಾರರ ಸಂಖ್ಯೆಯೂ ಹೆಚ್ಚುತ್ತಿದೆ. ಅನೇಕ ವರದಿಗಳು ಇದನ್ನು ಸಿದ್ಧಮಾಡಿವೆ.

ಜನರಿಗೆ ಮೊಬೈಲ್ ನಲ್ಲಿ ಇಂಟರ್ ಸೌಲಭ್ಯ ಕಲ್ಪಿಸುವ ಬ್ರೌಸರ್ ಗಳು ಜನಪ್ರಿಯತೆ ಪಡೆದುಕೊಳ್ಳುತ್ತಿವೆ. ಇದೆಲ್ಲವನ್ನು ಮೀರಿ ಯುಸಿ ಬ್ರೌಸರ್ ಮತ್ತೊಂದು ಸಾಧನೆಯ ಮೈಲಿಗಲ್ಲು ಸಾಧಿಸಿದೆ. ಅಲಿಬಾಬಾ ಕಂಪನಿ ಸಂಯೋಜನೆಯ ಬ್ರೌಸರ್ ಪ್ರಪಂಚದ ಎರಡನೇ ಅತಿ ಹೆಚ್ಚು ಜನಪ್ರಿಯ ಬ್ರೌಸರ್ ಎಂಬ ಖ್ಯಾತಿಗೆ ಪಾತ್ರವಾಗಿದೆ.[UC Cricket : ಮೊಬೈಲ್ ಆಪ್ ನಲ್ಲಿ ಕ್ರಿಕೆಟ್ ಲೋಕ ಅನಾವರಣ]

World's No 2 Mobile Browser UC Browser Greets Chrome at Times Square

ಪ್ರಪಂಚದ ಶೇ. 17.42 ರಷ್ಟು ಜನ ಈ ಬ್ರೌಸರ್ ಉಪಯೋಗ ಮಾಡುತ್ತಿದ್ದಾರೆ ಎಂದು ಸ್ವತಂತ್ರ ಸಂಸ್ಥೆ ಸ್ಟಾಟ್ ಕೌಂಟರ್ ತನ್ನ ವರದಿಯಲ್ಲಿ ತಿಳಿಸಿದೆ. ನವೆಂಬರ್ 22, 2015ರಂದು ಈ ಬಗ್ಗೆ ಅಭಿಯಾನವೊಂದನ್ನು ಸಂಸ್ಥೆ ಆರಂಭ ಮಾಡಿದೆ. ಸದ್ಯ ಕ್ರೋಮ್ ಮೊದಲ ಸ್ಥಾನದಲ್ಲಿದೆ.

ಯುಸಿ ಬ್ರೌಸರ್ ಮೊಬೈಲ್ ಬಳಕೆಯಲ್ಲಿ ಅರ್ಥಕ್ಕಿಂತ ಹೆಚ್ಚಿನ ಸಾಧನೆ ದಾಖಲಿಸಿದೆ. ಭಾರತದಲ್ಲಿ ಕಳೆದ ಅಕ್ಟೋಬರ್ ಅಂತ್ಯಕ್ಕೆ ಶೇ. 54, ಇಂಡೋನೇಷಿಯಾದಲ್ಲಿ ಶೇ. 49 ರಷ್ಟು ಜನ ಬಳಕೆದಾರರ ಕೈಯಲ್ಲಿದೆ.[ಮಹಿಳಾ ಸುರಕ್ಷತೆಗೆ ಬಂತು ಹೊಸ ಆಪ್, ಏನಿದರ ವಿಶೇಷ?]

ಕ್ಲ್ವೌಡ್ ಎನೆಬಲ್ಡ್ ಟೆಕ್ನಾಲಜಿ ಈ ಬ್ರೌಸರ್ ನ ವಿಶೇಷ. ಕಡಿಮೆ ಡಾಟಾ ಬಳಕೆಯಲ್ಲಿ ಅತಿ ಹೆಚ್ಚಿನ ಮಾಹಿತಿ ರವಾನೆ, ಕಡಿಮೆ ಡಾಟಾ ಬಳಕೆ, ವೇಗದ ಬಳಕೆ ಗುಣಗಳನ್ನು ಹೊಂದಿರುವುದರಿಂದ ಜನರಿಗೆನೇರವಾಗಿ ತಲುಪುತ್ತಿದೆ.

ಕ್ಲ್ವೌಡ್ ಕಂಪ್ಯೂಟಿಂಗ್ ಟೆಕ್ನಾಲಜಿಯನ್ನು ಮೊಟ್ಟ ಮೊದಲು ಪರಿಚಯಿಸಿದ ಕೀರ್ತಿ ಯುಸಿ ಬ್ರೌಸರ್ ಗೆ ಸಲ್ಲುತ್ತದೆ. 2014ರಲ್ಲೇ ಯುಸಿ ಬ್ರೌಸರ್ ದಿನವೊಂದಕ್ಕೆ 100 ಮಿಲಿಯನ್ ಆಕ್ಟೀವ್ ಯೂಸರ್ ಗಳನ್ನು ಹೊಂತಿತ್ತು. ಫೇಸ್ ಬುಕ್, ಟ್ವಿಟ್ಟರ್ ಮತ್ತು ಯುಟ್ಯೂಬ್ ನ್ನು ಸಹ ನಿಮಗೆ ಪ್ರಿಯವಾದ ರೀತಿಯಲ್ಲಿ ಇಡುವುದು ಈ ಬ್ರೌಸರ್ ವಿಶೇಷ.

World's No 2 Mobile Browser UC Browser Greets Chrome at Times Square

ಯುಸಿ ವೆಬ್ ಬಗ್ಗೆ ತಿಳಿದುಕೊಳ್ಳಿ
ಮೊಬೈಲ್ ಗಳ ಇಂಟರ್ನೆಟ್ ಯೂಸೆಜ್ ಗೆ ನೆರವಾಗುವ ಯುಸಿ ವೆಬ್ 2004ರಿಂದ ಅಸ್ತಿತ್ವದಲ್ಲಿದೆ. 3 ಸಾವಿರಕ್ಕೂ ಅಧಿಕ ನಮೂನೆಯ ಮೊಬೈಲ್ ಗಳಿಗೆ ಅನುಕೂಲವಾಗುವಂತೆ ಬ್ರೌಸರ್ ತಯಾರುನಾಡಲಾಗಿದೆ.

ಸದ್ಯ ಯುಸಿ ಬ್ರೌಸರ್ 11 ಭಾಷೆಗಳಲ್ಲಿ ಲಭ್ಯವಿದೆ. ಇಂಗ್ಲಿಷ್, ರಷ್ಯನ್, ಇಂಡೋನೇಶಿಯನ್ ಭಾಷೆಯಲ್ಲಿ ಬ್ರೌಸರ್ ಲಭ್ಯವಿದೆ. ಹೆಚ್ಚಿನ ಮಾಹಿತಿಯನ್ನು ಈ ಲಿಂಕ್ ಕ್ಲಿಕ್ ಮಾಡಿ ಪಡೆದುಕೊಳ್ಳಬಹುದು.

English summary
UC Browser, the flagship mobile browser of UCWeb, an Alibaba Group company, has touched a new milestone, becoming the world's second most popular mobile browser with 17.42% monthly page view market share, according to StatCounter - an independent web traffic analytics service. UC Browser has now surpassed Safari to become world's number 2 and has achieved this feat without being the default browser unlike Chrome on Android and Safari on IOS devices.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X