ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವದ ಅತಿ ದುಬಾರಿಯಾದ ಈ ಫೋನ್ ನ ಬೆಲೆ 2.3 ಕೋಟಿ!

439 ಮಾಣಿಕ್ಯಗಳನ್ನು ಹಾಗೂ ಚಿನ್ನದ ಲೇಪನಗಳನ್ನು ಹೊಂದಿರುವ ಫೋನ್ ಅನ್ನು ವೆರ್ಟೋ ಕಂಪನಿ ಬಿಡುಗಡೆಗೊಳಿಸಿದ್ದು, ಇದು ವಿಶ್ವದ ಅತ್ಯಂತ ದುಬಾರಿ ಫೋನ್ ಎನಿಸಿದೆ.

|
Google Oneindia Kannada News

ನವದೆಹಲಿ, ಮೇ 24: ಐಶಾರಾಮಿ ಫೋನ್ ಗಳನ್ನು ತಯಾರಿಸುವ ಕಂಪನಿಯಾದ ವೆರ್ಟು, ಬುಧವಾರ ಹೊಸತೊಂದು ಫೋನ್ ಬಿಡುಗಡೆಗೊಳಿಸಿದೆ. ಅದರ ಬೆಲೆ 3 ಲಕ್ಷದ 60 ಸಾವಿರ ಅಮೆರಿಕನ್ ಡಾಲರ್ ಎಂದು ಹೇಳಲಾಗಿದೆ. ಅಂದರೆ, ಭಾರತೀಯ ಕರೆನ್ಸಿಯಲ್ಲಿ ಇದರ ಬೆಲೆ 2 ಕೋಟಿ 30 ಲಕ್ಷ ರು.!

ಹಾವಿನ ಡಿಸೈನ್ ಇರುವ ಈ ಫೋನ್ ನ ಪೂರ್ತಿ ಹೆಸರು ವೆರ್ಟು ಸಿಗ್ನೇಚರ್ ಕೋಬ್ರಾ. ಈ ಪ್ರತಿ ಫೋನ್ ನಲ್ಲಿ 439 ಮಾಣಿಕ್ಯಗಳನ್ನು ಉಪಯೋಗಿಸಲಾಗಿಯಂತೆ. ಕೋಬ್ರಾ ಹಾವಿನ ಮಾದರಿಯಲ್ಲೇ ಫೋನ್ ನ ಕೇಸ್ ರಚಿಸಲಾಗಿದ್ದು, ಹಾವಿನ ಕಣ್ಣುಗಳನ್ನು ಹೋಲುವ ವಿಶೇಷ ಬಟನ್ ಗಳನ್ನು ಚಿನ್ನದ ಲೇಪನವುಳ್ಳ ಫ್ರೇಮ್ ನಲ್ಲಿ ಅಳವಡಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.[ONLINEನಲ್ಲಿ ದೊರೆಯುತ್ತಿರುವ ತೆಂಡೂಲ್ಕರ್ ಹೆಸರಿನ ಫೋನ್ ಹೇಗಿದೆ?]

World's most expensive feature phone launched at Rs. 2.3 crore

ಅಂದಹಾಗೆ, ಈ ಮೊಬೈಲ್ ಕೊಳ್ಳುವವರು ಚೀನಾದ ಆನ್ ಲೈನ್ ಜಾಲತಾಣ ಜೆಡಿ.ಕಾಮ್ ನಲ್ಲಿ ಖರೀದಿ ಮಾಡಬಹುದು.

ಇನ್ನು, ತಾಂತ್ರಿಕತೆ ವಿಚಾರಕ್ಕೆ ಬಂದರೆ, ಈ ಮೊಬೈಲ್ ಕೇವಲ 2 ಇಂಚು ಅಳತೆಯ ಕ್ಯುವಿಜಿಎ ಪರದೆ ಹೊಂದಿದ್ದು, 240X320 ಟಿಎಫ್ ಟಿ ಎಲ್ ಸಿಡಿ ತಂತ್ರಜ್ಞಾನ ಹೊಂದಿದೆ. 2 ಜಿಬಿ RAM ಹೊಂದಿರುವ ಇದು 16 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ ಹೊಂದಿದೆ.

ಬೇರ್ಪಡಿಸಬಹುದಾದ ಬ್ಯಾಟರಿಯನ್ನು ಹೊಂದಿರುವ ಇದು ಒಮ್ಮೆ ಚಾರ್ಜ್ ಮಾಡಿದರೆ, ಟಾಕ್ ಟೈಮ್ ಮೋಡ್ ನಲ್ಲಿ ಐದೂವರೆ ಗಂಟೆಗಳ ಕಾಲ ಸೇವೆ ನೀಡಬಲ್ಲದಂತೆ.

English summary
Luxury phone maker Vertu has officially launch its new Phone called Verty Singnature Cobra with 439 rubies and costs about Rs. 2.3 crores.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X