ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವದಲ್ಲೇ ಅತಿವೇಗವಾಗಿ ಚಾರ್ಜ್ ಆಗುವ ಬ್ಯಾಟರಿ ತಂತ್ರಜ್ಞಾನ- ಬೆಂಗಳೂರಿನ ಸ್ಟಾರ್ಟಪ್ NORDISCHE ಅಭಿವೃದ್ಧಿ

By ಒನ್‌ಇಂಡಿಯಾ ಡೆಸ್ಕ್
|
Google Oneindia Kannada News

ಬೆಂಗಳೂರು, ಮೇ 28: ಬೆಂಗಳೂರಿನ ಸ್ಟಾರ್ಟ್‌ ಅಪ್‌ ನೋರ್ಡಿಶ್ಚೇ ಟೆಕ್ನಾಲಜೀಸ್‌ (NORDISCHE TECHNOLOGIES) ವಿಶ್ವದಲ್ಲೇ ಅತಿ ವೇಗವಾಗಿ ಚಾರ್ಜ್‌ ಆಗುವ ಹಾಗೂ ಬೆಂಕಿ ಹತ್ತಿಕೊಳ್ಳದ ಅಲೂಮಿನಿಯಂ ಅಯಾನ್ ಗ್ರಾಫೀನ್ ಪೌಚ್ ಸೆಲ್ಸ್ ("Aluminum Ion Graphene Pouch Cells") ತಂತ್ರಜ್ಞಾನವನ್ನು ಸಿದ್ದಪಡಿಸಿದೆ. ಲಿಥಿಯಂ ಇಯಾನ್ ಸೆಲ್‌ಗಿಂತಲೂ 50 ಪಟ್ಟು ಹೆಚ್ಚು ವೇಗದಲ್ಲಿ ಚಾರ್ಜ್‌ ಆಗುವ ಮತ್ತು ಅಷ್ಟೇ ಮಟ್ಟದ ಬ್ಯಾಟರಿ ಸಾಮರ್ಥ್ಯ ಹೊಂದಿರುವ, ನಾನ್‌ ಟಾಕ್ಸಿಕ್ ಮತ್ತು ಅಗ್ನಿನಿರೋಧಕ ತಂತ್ರಜ್ಞಾನವನ್ನು ಇದು ಹೊಂದಿದೆ ಎನ್ನಲಾಗಿದೆ.

ಬ್ಯಾಟರೀ ಕ್ಷೇತ್ರದಲ್ಲಿನ ಈ ವಿನೂತನ ಹಾಗೂ ಕ್ರಾಂತಿಕಾರಿ ತಂತ್ರಜ್ಞಾನವನ್ನು ಆದಿಚುಂಚನಗಿರಿ ಮಹಾಸಂಸ್ಥಾನದ ಮುಖ್ಯಸ್ಥರಾದ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಅವರು ಲೋಕಾರ್ಪಣೆಗೊಳಿಸಿದರು.

ಕರ್ನಾಟಕಕ್ಕೆ ಬರುತ್ತಾ ಓಲಾ ಎಲೆಕ್ಟ್ರಿಕ್ ಕಾರು ತಯಾರಿಕಾ ಘಟಕ?ಕರ್ನಾಟಕಕ್ಕೆ ಬರುತ್ತಾ ಓಲಾ ಎಲೆಕ್ಟ್ರಿಕ್ ಕಾರು ತಯಾರಿಕಾ ಘಟಕ?

ಡಾ. ನಿರ್ಮಲಾನಂದನಾಥ ಸ್ವಾಮೀಜಿ ಈ ಸಂದರ್ಭದಲ್ಲಿ ಮಾತನಾಡಿ, "ಈಗ ಬಹುತೇಕ ಎಲ್ಲಾ ಎಲೆಕ್ಟ್ರಾನಿಕ್‌ ಹಾಗೂ ಇವಿ ವಾಹನಗಳಲ್ಲಿ ಬಳಸಲಾಗುತ್ತಿರುವ ಲೀಥಿಯಂ ಬ್ಯಾಟರಿ ತಂತ್ರಜ್ಞಾನದಿಂದ ಬಹಳಷ್ಟು ಸಮಸ್ಯೆಗಳು ಕಂಡುಬರುತ್ತಿವೆ. ವಾಹನಗಳಲ್ಲಿ ಬಳಸಲಾಗಿರುವ ಬ್ಯಾಟರೀಗಳು ಬೆಂಕಿ ಹತ್ತಿಕೊಳ್ಳುವುದು, ಸರಿಯಾದ ಸಾಮರ್ಥ್ಯತೆ ಹೊಂದದೇ ಇರುವುದು. ಇಂತಹ ಹಲವಾರು ಸಮಸ್ಯೆಗಳಿಗೆ ಪರಿಹಾರವೆಂಬಂತೆ 'ಅಲ್ಯೂಮಿನಿಯಂ ಇಯಾನ್ ಗ್ರಾಫೇನ್ ಪೌಚ್‌ ಸೆಲ್‌' ತಂತ್ರಜ್ಞಾನವನ್ನ ಬೆಂಗಳೂರಿನ ಸ್ಟಾರ್ಟ್‌ ಅಪ್‌ ನೋರ್ಡಿಶ್ಚೇ ಟೆಕ್ನಾಲಜೀಸ್‌ - ಸಿಪಿಟ್ (ಸೆಂಟ್ರಲ್‌ ಇನ್ಸಿಟ್ಯೂಟ್ ಆಫ್‌ ಪೆಟ್ರೋಕೆಮಿಕಲ್ ಎಂಜಿನೀಯರಿಂಗ್ & ಟೆಕ್ನಾಲಜಿ) ಯ ಜೊತೆಗೂಡಿ ಸಂಶೋಧಿಸಿದೆ. ರಫ್ತು ಅವಲಂಬಿತ ಲೀಥೀಯಂ ಬ್ಯಾಟರಿ ತಂತ್ರಜ್ಞಾನದಷ್ಟೇ ಸಾಮರ್ಥ್ಯ ಹೊಂದಿರುವ ಈ ತಂತ್ರಜ್ಞಾನ ನಮ್ಮ ದೇಶದ ಆವಿಷ್ಕಾರಗಳಲ್ಲಿ ಬಹಳ ಮಹತ್ವದ್ದು" ಎಂದು ಅಭಿಪ್ರಾಯಪಟ್ಟರು.

Worlds Fastest Charging Battery Tech by Bengaluru Startup Nordische

ಬೆಂಗಳೂರಿನ ಸ್ಟಾರ್ಟ್‌ ಅಪ್‌ ನೋರ್ಡಿಶ್ಚೇ ಟೆಕ್ನಾಲಜೀಸ್‌ನ ಮುಖ್ಯ ತಾಂತ್ರಿಕ ಅಧಿಕಾರಿ ಸಬ್ಯಸಾಚಿ ದಾಸ್‌ ಮಾತನಾಡಿ, "ಕಳೆದ 5 ವರ್ಷಗಳಿಂದ ನಮ್ಮ ಸಂಸ್ಥೆ ನಡೆಸಿದ ಸಂಶೋಧನೆಯ ಫಲವಾಗಿ ಈ ವಿನೂತನ ಅಲ್ಯೂಮಿನಿಯಂ-ಗ್ರಾಫೇನ್‌ ಪೌಚ್‌ ಸೆಲ್‌ ಮತ್ತು ಭವಿಷ್ಯದ ಇಲೆಕ್ಟ್ರಿಕಲ್‌ ವೆಹಿಕಲ್‌ ಬ್ಯಾಟರಿ ತಂತ್ರಜ್ಞಾನವನ್ನು ಸಂಶೋಧಿಸಲಾಗಿದೆ. ಈ ಬ್ಯಾಟರೀಗಳು ಬಹಳಷ್ಟು ಹಗುರ, ವಿಶ್ವದಲ್ಲೇ ಅತಿ ವೇಗವಾಗಿ ಚಾರ್ಜ್‌ ತಂತ್ರಜ್ಞಾನ ಇದಾಗಿದೆ. ಅಲ್ಲದೇ, ಈ ಬ್ಯಾಟರಿ ಕೆಲಸ ಮಾಢುವ ಉಷ್ಣಾಂಶದ ರೇಂಜ್‌ ಬಹಳಷ್ಟಿದ್ದು (-25ಸೆಲ್ಸಿಯಸ್‌ ನಿಂದ 60 ಡಿಗ್ರಿ ಸೆಲ್ಸಿಯಲಸ್) ಬೆಂಕಿ ಹತ್ತಿಕೊಳ್ಳುವುದಿಲ್ಲ. ಹೆಚ್ಚಿನ ಸಾಮರ್ಥ್ಯ ಹೊಂದಿರುವ ಮತ್ತು 5 ರಿಂದ 7 ವರ್ಷಗಳ ಶೆಲ್ಪ ಲೈಪ್‌ ಹೊಂದಿವೆ. ಅಲ್ಲದೇ ಈ ರಿಚಾರ್ಜೆಬಲ್‌ ಬ್ಯಾಟರೀಗಳನ್ನು 3000 ಸಾವಿರ ಸೈಕಲ್‌ ನಷ್ಟು ಬಳಸಬಹುದಾಗಿದೆ. ಈ ತಂತ್ರಜ್ಞಾವನ್ನು ಎಲೆಕ್ಟ್ರಿಕ್‌ ವೆಹಿಕಲ್‌ಗಳಿಗೂ ಬಳಸಬಹುದಾಗಿದೆ" ಎಂದು ಹೇಳಿದರು.

Worlds Fastest Charging Battery Tech by Bengaluru Startup Nordische

ಅಲ್ಯೂಮಿನಿಯಂ - ಗ್ರಾಫೇನ್ ಪೌಚ್‌ ಸೆಲ್‌ ಬ್ಯಾಟರಿ ತಂತ್ರಜ್ಞಾನದ ವಿಶಿಷ್ಟತೆಗಳು:
• ಹಗುರ ಮತ್ತು ಅತಿವೇಗವಾಗಿ ಚಾರ್ಜ್‌ ಅಗುವ ಸಾಮರ್ಥ್ಯ
• ಹೈ ಎನರ್ಜಿ ಡೆನ್ಸಿಟಿ >150ವ್ಯಾಟ್‌/ಕೆಜಿ
• ಕೈಗೆಟಕುವ ದರ
• ಫ್ಲೆಕ್ಸಿಬಲ್ ಸೋರ್ಸ್‌ ಆಫ್‌ ಎನರ್ಜಿ ಸ್ಟೋರೇಜ್‌
• ಅತೀ ಶೀತಾಂಶದಿಂದ ಹಿಡಿದು ಅಧಿಕ ಉಷ್ಣಾಂಶದವರೆಗೆ ಕಾರ್ಯನಿರ್ವಹಣೆ (From -25C to 60C)
• 5 ರಿಂದ 7 ವರ್ಷಗಳ ಬಾಳಿಕೆ ಅವಧಿ (Shelf Life)
• ಸುಮಾರು >3000 ಬಾರಿ ರಿಚಾರ್ಜ್ ಮಾಡಬಹುದು
• ಎಕೋ ಫ್ರೇಂಡ್ಲಿ - ನಾನ್‌ ಟಾಕ್ಸಿಕ್ ಮತ್ತು ಬೆಂಕಿ ಹತ್ತಿಕೊಳ್ಳದೇ ಇರುವುದು
• ಹೈ ಟೆನ್ಸಿಲ್‌ ಸ್ಟ್ರೇಂಥ್‌

ಸರಕಾರಿ ಡಿಜಿಟಲ್ ಕರೆನ್ಸಿ: ಅಳೆದು ತೂಗುತ್ತಿರುವ ಆರ್‌ಬಿಐಸರಕಾರಿ ಡಿಜಿಟಲ್ ಕರೆನ್ಸಿ: ಅಳೆದು ತೂಗುತ್ತಿರುವ ಆರ್‌ಬಿಐ

ಕಾರ್ಯಕ್ರಮದಲ್ಲಿ ಪುದುಚೆರಿ ಪಿಡ್ಬೂಡಿ ಮತ್ತು ಐಟಿ ಸಚಿವ ಕೆ ಲಕ್ಷ್ಮಿನಾರಾಯಣ, ಕರ್ನಾಟಕ ವಿಧಾನಪರಿಷತ್‌ನ ವಿರೋಧ ಪಕ್ಷದ ಪ್ರಧಾನ ವಿಪ್ ಪ್ರಕಾಶ್‌ ಕೆ. ರಾಥೋಡ್‌ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Recommended Video

IPL ಫೈನಲ್ ಮ್ಯಾಚ್ ಗೂ ಮುನ್ನ ಸ್ಟೇಡಿಯಂನಲ್ಲಿ ಮಾರ್ದನಿಸಿತು KGF ನ ವಯಲೆನ್ಸ್ ಡೈಲಾಗ್ | OneIndia Kannada

English summary
New battery from Nordische Technologies, which is based on Aluminum-Graphene chemistry! This is the world's fastest charging, non-toxic, non-flammable, and non-lithium non-cobalt battery with a long cycle life.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X