ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರ್ಥಿಕ ಪ್ರಗತಿ : 2016-17ಕ್ಕೆ ಚೀನಾ ಜೊತೆ ಭಾರತ ಹೆಜ್ಜೆ

By Kiran B Hegde
|
Google Oneindia Kannada News

ವಾಷಿಂಗ್ಟನ್, ಜ. 15: 'ನರೇಂದ್ರ ಮೋದಿ ಅಧಿಕಾರಕ್ಕೆ ಬಂದರು ಆದರೆ, ಅಚ್ಚೆ ದಿನ್ ಬರಲಿಲ್ಲ' ಎಂದು ಟೀಕಿಸುತ್ತಿದ್ದವರಿಗೆ ವಿಶ್ವ ಬ್ಯಾಂಕ್ ಉತ್ತರ ನೀಡಿದೆ.

"ಎನ್‌ಡಿಎ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಕೈಗೊಂಡ ಆಡಳಿತ ಸುಧಾರಣೆ ಕ್ರಮಗಳ ಕಾರಣದಿಂದ ಭಾರತದ ಆರ್ಥಿಕ ಪ್ರಗತಿ 2016-17ಕ್ಕೆ ಚೀನಾ ಪ್ರಗತಿಯನ್ನು ಸರಿಗಟ್ಟಲಿದೆ" ಎಂದು ವಿಶ್ವ ಬ್ಯಾಂಕ್ ಮುಖ್ಯ ಆರ್ಥಿಕ ತಜ್ಞ ಹಾಗೂ ಹಿರಿಯ ಉಪಾಧ್ಯಕ್ಷ ಕೌಶಿಕ್ ಬಸು ಹೇಳಿದ್ದಾರೆ. [5 ವರ್ಷದಲ್ಲಿ ಅತಿ ಕಡಿಮೆ ಹಣದುಬ್ಬರ]

gdp

ವಿಶ್ವಬ್ಯಾಂಕ್ ಈಚೆಗಷ್ಟೇ ಬಿಡುಗಡೆ ಮಾಡಿರುವ ವರದಿ 'ಜಾಗತಿಕ ಮೇಲ್ನೋಟ : ಜಾಗತಿಕ ಆರ್ಥಿಕ ಅವಕಾಶಗಳ ಆಧಾರದ ಮೇಲೆ ನಿರಾಸೆಗಳು, ಭಿನ್ನತೆಗಳು ಮತ್ತು ನಿರೀಕ್ಷೆಗಳು' ಕುರಿತು ಅಮೆರಿಕದ ವಾಷಿಂಗ್ಟನ್‌ ನಗರದಲ್ಲಿ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಕೌಶಿಕ್ ಬಸು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. [ಅಧಿಕಾರಿಗಳ ಪಂಚತಾರಾ ಹೋಟೆಲ್ ವಾಸಕ್ಕೆ ಬ್ರೇಕ್]

ಚೀನಾ ಆರ್ಥಿಕ ಅಭಿವೃದ್ಧಿ 2017ರಲ್ಲಿ ಉನ್ನತ ಮಟ್ಟದಲ್ಲಿಯೇ ಇರಲಿದೆ. ಆದರೆ, ಏಷ್ಯಾದ ದೈತ್ಯ ಆರ್ಥಿಕ ಶಕ್ತಿ ಚೀನಾಕ್ಕೆ ಸರಿಸಮನಾಗಿ ಭಾರತ ಎದ್ದು ನಿಲ್ಲುವ ಸೂಚನೆಗಳು ದೊರೆತಿದ್ದು ಇದೇ ಮೊದಲ ಬಾರಿ ಎಂದು ಕೌಶಿಕ್ ಬಸು ಹೇಳಿದ್ದಾರೆ.

ಭಾರತದಲ್ಲಿ ಕೈಗೊಂಡಿರುವ ಸುಧಾರಣೆ ಕ್ರಮಗಳು, ಬಂಡವಾಳ ಹೂಡಿಕೆಗೆ ನಿಯಮ ಸರಳೀಕರಣ ಇನ್ನಿತರ ಕಾರಣಗಳಿಂದ ಜಿಡಿಪಿ ದರ ಶೇ. 6.8 ಕ್ಕೆ ಏರುವ ನಿರೀಕ್ಷೆ ಇದೆ.

English summary
The World Bank has said that India would catch up with China's growth in the year 2016-17. Regional growth is projected to rise to 6.8 per cent by 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X