ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಸರ್ಕಾರಕ್ಕೆ ಹಿತ ಸುದ್ದಿ: ಜಿಡಿಪಿ ಪ್ರಗತಿಯಲ್ಲಿ ಫ್ರಾನ್ಸ್ ಹಿಂದಿಕ್ಕಿದ ಭಾರತ!

By Mahesh
|
Google Oneindia Kannada News

ಬೆಂಗಳೂರು, ಜುಲೈ 11: ಅಪನಗದೀಕರಣ, ಸರಕು ಸೇವಾ ತೆರಿಗೆ(ಜಿಎಸ್​ಟಿ) ಹಾಗೂ ಹಲವು ಆರ್ಥಿಕ ವ್ಯವಸ್ಥೆ ಬದಲಾವಣೆಗಳ ಮೂಲಕ ಮೋದಿ ಸರ್ಕಾರ ಪ್ರಗತಿಯತ್ತ ಸಾಗುತ್ತಿದೆ ಎಂಬುದನ್ನು ವಿಶ್ವಬ್ಯಾಂಕ್ ಕೂಡಾ ದೃಢಪಡಿಸಿದೆ.

ದೇಶದ ಆರ್ಥಿಕತೆ ಬಗ್ಗೆ, ಕೇಂದ್ರ ಸರ್ಕಾರದ ಕ್ರಮಗಳ ಬಗ್ಗೆ ಇನ್ನೂ ಪ್ರಶ್ನೆ, ಗೊಂದಲಗಳಿವೆ. ಈ ನಡುವೆ. 2017ರ ರಾಷ್ಟ್ರೀಯ ತಲಾ ಆದಾಯ(ಜಿಡಿಪಿ)ಯಲ್ಲಿ ಭಾರತ ಪ್ರಗತಿ ಕಂಡಿದ್ದು, ಫ್ರಾನ್ಸ್ ಹಿಂದಿಕ್ಕಿ 6ನೇ ಸ್ಥಾನಕ್ಕೇರಿದೆ ಎಂದು ವಿಶ್ವಬ್ಯಾಂಕಿನ ವರದಿ ಹೇಳಿದೆ.

World Bank says India beat France to become sixth largest economy: Report

ವಿಶ್ವ ಬ್ಯಾಂಕ್​ ನೀಡಿರುವ ಅಂಕಿ ಅಂಶಗಳ ಪ್ರಕಾರ, 2017ರ ಅಂತ್ಯಕ್ಕೆ ಭಾರತದ ಜಿಡಿಪಿ ಒಟ್ಟಾರೆ 2.597 ಟ್ರಿಲಿಯನ್​ ಡಾಲರ್​ ತಲುಪಿತ್ತು. ಆದರೆ, ಫ್ರಾನ್ಸ್​​ನ ​​ಜಿಡಿಪಿ ಮೊತ್ತ 2.582 ಟ್ರಿಲಿಯನ್​ ಡಾಲರ್ ಆಗಿತ್ತು.

ಆರ್ಥಿಕ ಪ್ರಗತಿ: ಚೀನಾವನ್ನು ಹಿಂದಿಕ್ಕಿದ ಭಾರತ!ಆರ್ಥಿಕ ಪ್ರಗತಿ: ಚೀನಾವನ್ನು ಹಿಂದಿಕ್ಕಿದ ಭಾರತ!

ಫ್ರಾನ್ಸ್​​ನ ಜನ ಸಂಖ್ಯೆ ಇರುವುದು ಕೇವಲ 6.7 ಕೋಟಿ ಮಾತ್ರ. ಭಾರತದ ಒಬ್ಬ ವ್ಯಕ್ತಿಯ ತಲಾವಾರು ಜಿಡಿಪಿಗೆ ಲೆಕ್ಕ ಹಾಕಿದರೆ, ಫ್ರಾನ್ಸ್​ ನಮ್ಮ ದೇಶದ 20 ಪಟ್ಟು ಹೆಚ್ಚಿನ ತಲಾದಾಯ ಹೊಂದಿದೆ. ಭಾರತದ ಜನಸಂಖ್ಯೆ 134 ಕೋಟಿ ಮೀರುತ್ತಿದೆ.

ಸುಮಾರು 134 ಕೋಟಿ ಜನ ಸಂಖ್ಯೆಯನ್ನು ಹೊಂದಿರುವ ಭಾರತ, ವಿಶ್ವದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿದೆ.

ಆರ್ಥಿಕತೆಯಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದ್ದರೆ, ಚೀನಾ, ಜಪಾನ್​ ಮತ್ತು ಜರ್ಮನಿ ನಂತರದ ಸ್ಥಾನಗಳಲ್ಲಿವೆ. 2.622 ಟ್ರಿಲಿಯನ್​ ಡಾಲರ್ ಮೊತ್ತದೊಂದಿಗೆ ಬ್ರಿಟನ್​ ಐದನೇ ಸ್ಥಾನದಲ್ಲಿದೆ.

ಮೋದಿ ಸರಕಾರದ ಸುಧಾರಣಾ ಕ್ರಮಗಳಿಗೆ ವಿಶ್ವಬ್ಯಾಂಕ್ ಮೆಚ್ಚುಗೆಮೋದಿ ಸರಕಾರದ ಸುಧಾರಣಾ ಕ್ರಮಗಳಿಗೆ ವಿಶ್ವಬ್ಯಾಂಕ್ ಮೆಚ್ಚುಗೆ

ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಶೇ 7.7ರಷ್ಟು ಆರ್ಥಿಕ ಪ್ರಗತಿ ಕಂಡಿರುವ ಭಾರತ, 2017-18ರದಲ್ಲಿ ಶೇ 6.7ರಷ್ಟಿತ್ತು. 2019ಕ್ಕೆ ಶೇ7.8ರಷ್ಟು ಪ್ರಗತಿ ಸಾಧಿಸಬಹುದು ಎಂದು ಐಎಂಎಫ್ ಹೇಳಿದೆ.

English summary
World Bank figures for 2017 show that India is now the world's sixth-biggest economy, having muscled past France, which was pushed to the seventh spot, news agency AFP reported on Wednesday
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X