ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ವೃದ್ಧಿ ದರ ಶೇ. 6.5 ಸಾಧ್ಯತೆ; ವಿಶ್ವಬ್ಯಾಂಕ್ ಹೊಸ ಅಂದಾಜು

|
Google Oneindia Kannada News

ವಾಷಿಂಗ್ಟನ್, ಅ. 6: ಈ ಬಾರಿಯ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆಯ ಬೆಳವಣಿಗೆಯ ದರ ನಿರೀಕ್ಷೆಗಿಂತ ಕಡಿಮೆ ಆಗಬಹುದು ಎಂದು ವಿಶ್ವಬ್ಯಾಂಕ್ ಅಭಿಪ್ರಾಯಪಟ್ಟಿದೆ. 2022-23ರ ಹಣಕಾಸು ವರ್ಷದಲ್ಲಿ ಶೇ. 7.5ರಷ್ಟು ಬೆಳವಣಿಗೆ ಆಗಬಹುದು ಎಂದು ಇದೇ ಜೂನ್‌ನಲ್ಲಿ ಅಂದಾಜು ಮಾಡಿದ್ದ ವಿಶ್ವಬ್ಯಾಂಕ್ ಈಗ ಶೇ. 6.5ರ ದರದಲ್ಲಿ ಬೆಳವಣಿಗೆಯಾಗಬಹುದು ಎಂದು ಹೇಳಿದೆ.

ಪ್ರಗತಿಯ ವೇಗ ನಿರೀಕ್ಷೆಗಿಂತ ಕಡಿಮೆಯಾಗಬಹುದಾದರೂ ಬೇರೆ ದೇಶಗಳಿಗೆ ಹೋಲಿಸಿದರೆ ಭಾರತ ಗಣನೀಯವಾಗಿ ಚೇತರಿಸಿಕೊಳ್ಳುತ್ತಿದೆ ಎಂದು ವಿಶ್ವಬ್ಯಾಂಕ್ ಆಶಾದಾಯಕ ಸುದ್ದಿ ತಿಳಿಸಿದೆ. ಹಿಂದಿನ ವರ್ಷದಲ್ಲಿ ಭಾರತ ಶೇ. 8.7ರಷ್ಟು ಆರ್ಥಿಕ ಬೆಳವಣಿಗೆ ಸಾಧಿಸಿತ್ತು.

ಹಬ್ಬದ ಸೀಸನ್‌ನಲ್ಲಿ ಅಮೆಜಾನ್ ಮೀರಿಸಿದ ಮೀಶೋಹಬ್ಬದ ಸೀಸನ್‌ನಲ್ಲಿ ಅಮೆಜಾನ್ ಮೀರಿಸಿದ ಮೀಶೋ

ಆದರೆ, ತಾನು ನಿರೀಕ್ಷಿಸಿದ್ದಕ್ಕಿಂತ ಕಡಿಮೆ ವೇಗದಲ್ಲಿ ಬಾರತದ ಅರ್ಥವೃದ್ಧಿಯಾಗಲು ಅಂತಾರಾಷ್ಟ್ರೀಯ ವಾತಾವರಣ ಕಾರಣ ಎಂಬುದು ವಿಶ್ವಬ್ಯಾಂಕ್ ಅನಿಸಿಕೆ.

World Bank Reduces Indias GDP Growth Forecast, But Situation Better Than Other Countries

"ಅಂತಾರಾಷ್ಟ್ರೀಯ ವಾತಾವರಣ ಭಾರತ ಮಾತ್ರವಲ್ಲ ಎಲ್ಲಾ ದೇಶಗಳಿಗೂ ಬಾಧೆ ತಂದಿದೆ. ಈ ವರ್ಷದ ಮಧ್ಯಭಾಗದಲ್ಲಿ ತಿರುವು ಶುರುವಾಗಿದ್ದು, ವಿಶ್ವಾದ್ಯಂತ ಆರ್ಥಿಕತೆಯ ಬೆಳವಣಿಗೆ ವೇಗ ನಿಧಾನಗೊಂಡಿರುವ ಮೊದಲ ಲಕ್ಷಣಗಳನ್ನು ನಾವು ಗುರುತಿಸಿದ್ದೇವೆ," ಎಂದು ವಿಶ್ವಬ್ಯಾಂಕ್‌ನ ದಕ್ಷಿಣ ಏಷ್ಯಾ ವಿಭಾಗದ ಮುಖ್ಯ ಆರ್ಥಿಕ ತಜ್ಞ ಹಾನ್ಸ್ ಟಿಮ್ಮರ್ ವಿವರಣೆ ನೀಡಿದ್ದಾರೆ.

ಈ ಕ್ಯಾಲೆಂಡರ್ ವರ್ಷದ ಎರಡನೇ ಭಾಗದಲ್ಲಿ, ಅಂದರೆ ಜುಲೈನಿಂದ ಡಿಸೆಂಬರ್‌ವರೆಗಿನ ಅವಧಿಯಲ್ಲಿ ಭಾರತದಲ್ಲಿ ಮಾತ್ರವಲ್ಲ ವಿಶ್ವದ ಹಲವು ದೇಶಗಳಲ್ಲಿ ಆರ್ಥಿಕ ಬೆಳವಣಿಗೆ ಕುಂಠಿತಗೊಂಡಿದೆ. ಇದಕ್ಕೆ ಎರಡು ಅಂಶಗಳು ಕಾರಣ. ಹೆಚ್ಚು ಶ್ರೀಮಂತ ದೇಶಗಳ ಆರ್ಥಿಕ ವೃದ್ಧಿ ದರ ನಿಧಾನಗೊಂಡಿರುವುದು ಒಂದು ಅಂಶ ಎಂದು ವಿಶ್ವ ಬ್ಯಾಂಕ್ ಆರ್ಥಶಾಸ್ತ್ರಜ್ಞ ಟಿಮ್ಮರ್ ಅಭಿಪ್ರಾಯಪಟ್ಟಿದ್ಧಾರೆ.

20 ವರ್ಷಕ್ಕೆ ಗೃಹಸಾಲ ಪಡೆದು 24 ವರ್ಷ ಇಎಂಐ ಕಟ್ಟುವ ದೌರ್ಭಾಗ್ಯ..!20 ವರ್ಷಕ್ಕೆ ಗೃಹಸಾಲ ಪಡೆದು 24 ವರ್ಷ ಇಎಂಐ ಕಟ್ಟುವ ದೌರ್ಭಾಗ್ಯ..!

ಭಾರತಕ್ಕೆ ಆಶಾದಾಯಕ ಸ್ಥಿತಿ

ಈ ಹಣಕಾಸು ವರ್ಷದಲ್ಲಿ ಶೇ. 7.5 ರಷ್ಟು ಭಾರತದ ಆರ್ಥಿಕತೆ ಬೆಳವಣಿಗೆ ಸಾಧಿಸಬಹುದು ಎಂದು ವಿಶ್ವಬ್ಯಾಂಕ್ ಮಾಡಿದ್ದ ನಿರೀಕ್ಷೆ ಈಗ 6.5ಕ್ಕೆ ಇಳಿದಿದೆ. ಆದರೂ ಕೂಡ ಭಾರತದ ಆರ್ಥಿಕತೆ ದಕ್ಷಿಣ ಏಷ್ಯಾದ ಇತರ ಕೆಲ ದೇಶಗಳಿಗೆ ಹೋಲಿಸಿದರೆ ಉತ್ತಮವಾಗಿ ಅಭಿವೃದ್ಧಿ ಹೊಂದುತ್ತಿದೆ ಎಂದು ಹೇಳಿದೆ.

World Bank Reduces Indias GDP Growth Forecast, But Situation Better Than Other Countries

"ಕೋವಿಡ್‌ನ ಮೊದಲ ಹಂತದಲ್ಲಿ ಭಾರೀ ಹಿನ್ನಡೆ ಹೊಂದಿದ್ದ ಭಾರತದ ಆರ್ಥಿಕತೆ ಈಗ ಗಮನಾರ್ಹವಾಗಿ ತಿರುಗಿ ಬೆಳೆದಿದೆ. ದಕ್ಷಿಣ ಏಷ್ಯಾದ ಇತರ ದೇಶಗಳಿಗೆ ಹೋಲಿಸಿದರೆ ಉತ್ತಮ ಪ್ರಗತಿ ಸಾಧಿಸಿದೆ. ಭಾರತಕ್ಕೆ ಅನುಕೂಲ ಪರಿಸ್ಥಿತಿ ಎಂದರೆ ಬಾಹ್ಯ ಸಾಲದ ಪ್ರಮಾಣ ಹೆಚ್ಚು ಇಲ್ಲದಿರುವುದು. ಹಾಗೆಯೇ, ಭಾರತದ ವಿತ್ತ ನೀತಿಯನ್ನೂ ಉತ್ತಮವಾಗಿ ರೂಪಿಸಲಾಗುತ್ತಿದೆ" ಎಂದು ಹಾನ್ಸ್ ಟಿಮ್ಮರ್ ಹೇಳಿದ್ದಾರೆ.

ಭಾರತದಲ್ಲಿ ಸದ್ಯ ಸರ್ವಿಸ್ ವಲಯ ಉತ್ತಮವಾಗಿ ಚೇತರಿಸಿಕೊಂಡಿದೆ. ಅದರಲ್ಲೂ ಈ ವಲಯದ ರಫ್ತು ಹೆಚ್ಚಾಗಿರುವುದು ಗಮನಾರ್ಹ. ವಿಶ್ವದ ಇತರ ದೇಶಗಳಿಗಿಂತ ಭಾರತ ಉತ್ತಮ ಸ್ಥಿತಿಯಲ್ಲಿದೆ. ಆರ್‌ಬಿಐನಲ್ಲಿರುವ ಮೀಸಲು ನಿಧಿ ಸೇರಿದಂತೆ ಭಾರತಕ್ಕೆ ಹಲವು ರೀತಿಯ ಬಫರ್ (ಹಿನ್ನಡೆ ತಡೆದುಕೊಳ್ಳಬಲ್ಲ ಮಾರ್ಗಗಳು) ಗಳಿವೆ. ಇದು ಭಾರತಕ್ಕೆ ಸಹಾಯಕವಾಗಿದೆ ಎಂದು ಭಾರತದ ಆರ್ಥಿಕ ಚೇತರಿಕೆಗೆ ಪ್ರಮುಖ ಕಾರಣವನ್ನು ಟಿಮ್ಮರ್ ಬಿಚ್ಚಿಟ್ಟಿದ್ದಾರೆ.

"ಬೇರೆ ದೇಶಗಳಿಗೆ ಇರುವ ದೌರ್ಬಲ್ಯ ಭಾರತಕ್ಕೆ ಇಲ್ಲ. ಆದರೂ ಕೂಡ ಭಾರತಕ್ಕೆ ಈಗಿನ ಪರಿಸ್ಥಿತಿ ಸವಾಲಿನದ್ದಾಗಿದೆ. ಹೆಚ್ಚು ಋಣಾತ್ಮಕ ಅಂಶಗಳು ಸದ್ಯದಲ್ಲಿ ಇವೆ. ಭಾರತ ಬೆಲೆ ಏರಿಕೆ ಸಮಸ್ಯೆಯನ್ನು ನಿವಾರಿಸಬೇಕು" ಎಂದು ವಿಶ್ವಬ್ಯಾಂಕ್ ಅರ್ಥಜ್ಞರು ಸಲಹೆ ನೀಡಿದ್ದಾರೆ.

ಆದರೆ, ಭಾರತದ ವಿದೇಶಿ ವಿನಿಯಮ ನಿಧಿ ಫೋರೆಕ್ಸ್ ದಿನೇ ದಿನೇ ಸಂಕುಚಿತಗೊಳ್ಳುತ್ತಿದೆ. ಡಾಲರ್ ಎದುರು ರುಪಾಯಿ ಮೌಲ್ಯ ದೊಡ್ಡ ಮಟ್ಟದಲ್ಲಿ ಕುಸಿಯುವುದನ್ನು ತಪ್ಪಿಸಲು ಆರ್‌ಬಿಐ ಫೋರೆಕ್ಸ್ ಬೊಕ್ಕಸ ಬರಿದು ಮಾಡುತ್ತಿದೆ. ಭಾರತ ಮಾತ್ರವಲ್ಲ ವಿಶ್ವದ ಬಹುತೇಕ ದೇಶಗಳ ಫೋರೆಕ್ಸ್ ಪ್ರಮಾಣ ಕಡಿಮೆ ಆಗುತ್ತಿದೆ ಎಂಬುದು ಸಮಾಧಾನ ಅಷ್ಟೇ.

(ಒನ್ಇಂಡಿಯಾ ಸುದ್ದಿ)

English summary
World Bank has slashed India's growth forecast in 2022-23 fiscal year to 6.5%, due to global deteriorating environment. But, the situation is good compared to many other global nations, it said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X