ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಿಳಾ ದಿನ ವಿಶೇಷ : ಮಹಿಳೆಯರು ನಿವೃತ್ತಿಯ ನಂತರ ಹೇಗೆ ಹೂಡಿಕೆ ಮಾಡಬಹುದು?

Google Oneindia Kannada News

ಮನುಷ್ಯನಿಗೆ ಹಣ ಎನ್ನುವುದು ಬಹಳ ಪ್ರಮುಖವಾದದ್ದು. ಹಣವಿಲ್ಲದೆ ಜೀವನ ನಡೆಸುವುದು ಕಷ್ಟ. ತಿನ್ನುವ ಆಹಾರ, ಕುಡಿಯುವ ನೀರು, ತೊಡುವ ಬಟ್ಟೆ, ಇರಲು ಮನೆ ಬೇಕು ಎಂದರೆ ಹಣ ಬೇಕು. ಹಣದಿಂದ ಮಾತ್ರ ನಮ್ಮ ಅಗತ್ಯ ವಸ್ತುಗಳನ್ನು ಖರೀದಿಸಲು ಸಾಧ್ಯ. ಹಣವೊಂದಿಲ್ಲ ಎಂದರೆ ಏನನ್ನೂ ಪಡೆಯಲು ಸಾಧ್ಯವಿಲ್ಲ.

ಹಾಗಾಗಿ ನಾವು ದುಡಿಯುವ ಹಣವನ್ನು ಖರ್ಚುಮಾಡುವಾಗ ಸೂಕ್ತ ಚಿಂತನೆ ಹಾಗೂ ಬುದ್ಧಿವಂತಿಕೆ ಇರಬೇಕು. ನಮ್ಮಲ್ಲಿರುವ ಹಣವನ್ನು ಸೂಕ್ತ ಹೂಡಿಕೆಯಲ್ಲಿ ವಿನಿಯೋಗಿಸುವುದು ಹಾಗೂ ಭವಿಷ್ಯಕ್ಕಾಗಿ ಕೂಡಿಡುವುದು ಅತ್ಯಗತ್ಯ. ನಾವು ದುಡಿಯುವ ಹಣವನ್ನು ಹೇಗೆ ಕೂಡಿಡಬೇಕು? ಅದನ್ನು ಮುಂದಿನ ಭವಿಷ್ಯದಲ್ಲಿ ಹೇಗೆ ಉಪಯೋಗಿಸಬೇಕು ಎನ್ನುವುದನ್ನು ತಿಳಿದಿರಬೇಕಾಗುತ್ತದೆ.

ಹಣದುಬ್ಬರದ ದರ ಶೇ.6ರಿಂದ ಶೇ.7ರ ನಡುವೆ ಓಲಾಡುತ್ತಿದ್ದರೆ, ವೈದ್ಯಕೀಯ ಹಣದುಬ್ಬರವು ಶೇ.15ರಷ್ಟು ಹೆಚ್ಚಿದೆ. ಹಾಗಾಗಿ ನಾವು ಕೆಲಸ ಮಾಡುತ್ತಿರಲಿ ಅಥವಾ ಮನೆಯ ಜವಾಬ್ದಾರಿಯನ್ನು ನಿರ್ವಹಿಸುವ ಮಹಿಳೆಯರೇ ಆಗಿರಲಿ, ನಿವೃತ್ತಿಯ ನಂತರದ ಜೀವನದ ಬಗ್ಗೆ ಕೊಂಚ ಯೋಚನೆ ಹಾಗೂ ಯೋಜನೆಯನ್ನು ಹೊಂದಿರಬೇಕಾಗುತ್ತದೆ.

Womens Day Special 2019: How should women plan their retirement?

ನಿವೃತ್ತಿಯ ಜೀವನ ಎಂದರೆ ಸಾಮಾನ್ಯವಾಗಿ ದೇಹದಲ್ಲೂ ಶಕ್ತಿ ಕುಂದಿರುತ್ತದೆ. ಸಾಕಷ್ಟು ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಆದಾಯದ ಮೂಲ ಇಲ್ಲದೆ ಹೋಗುವ ಸಾಧ್ಯತೆ ಇರುತ್ತದೆ. ಹಾಗಾಗಿ ನಂತರದ ಜೀವನಕ್ಕಾಗಿ ನಾವು ಇಂದಿನಿಂದಲೇ ಒಂದಷ್ಟು ಹೂಡಿಕೆ ಹಾಗೂ ಉಳಿತಾಯವನ್ನು ಹೊಂದಿರಬೇಕು. ಆರ್ಥಿಕ ಏರಿಳಿತವನ್ನು ನೋಡುತ್ತಿರುವ ನೀವು ನಿಮ್ಮ ನಿವೃತ್ತಿಯ ಜೀವನದ ಬಗ್ಗೆ ಹೇಗೆ ಯೋಜನೆ ಕೈಗೊಳ್ಳುವುದು? ಎನ್ನುವ ಗೊಂದಲದಲ್ಲಿದ್ದರೆ ಈ ಮುಂದೆ ವಿವರಿಸಲಾದ ವಿವರಣೆಯನ್ನು ಪರಿಶೀಲಿಸಿ.

ಆದಷ್ಟು ಬೇಗ ಆರಂಭಿಸಿ

ನೀವು ನಿಮ್ಮ ನಿವೃತ್ತಿಯ ಜೀವನದ ಬಗ್ಗೆ ಯೋಚಿಸುತ್ತಿದ್ದೀರಿ, ಉಳಿತಾಯದ ಬಗ್ಗೆ ನಿಮಗೆ ಚಿಂತನೆಗಳಿವೆ ಎಂದಾದರೆ ಆದಷ್ಟು ಬೇಗ ನಿರ್ಧಾರ ಹಾಗೂ ಯೋಜನೆಯನ್ನು ಕೈಗೊಳ್ಳುವುದು ಸೂಕ್ತ. ಆದಷ್ಟು ಬೇಗ ಹೂಡಿಕೆ ಮಾಡುವುದರಿಂದ ಹೆಚ್ಚಿನ ಉಳಿತಾಯವನ್ನು ನೀವು ಕೈಗೊಳ್ಳಬಹುದು. ಅಲ್ಲದೆ ಹೂಡಿಕೆಯ ಸಾಮರ್ಥ್ಯವು ಬಲವಾಗಿರುತ್ತದೆ. ಅದರಿಂದಲೂ ಅಧಿಕ ಲಾಭವನ್ನು ಪಡೆದುಕೊಳ್ಳಬಹುದು. ಹಾಗೊಮ್ಮೆ ಗೊಂದಲ, ತಪ್ಪು ಅಥವಾ ಯಾವುದೇ ಅಡೆತಡೆಗಳನ್ನು ಹೊಂದಿದ್ದರೂ ಸಹ ಅದನ್ನು ಸರಿಪಡಿಸಿಕೊಳ್ಳಲು ಒಂದಿಷ್ಟು ಸಮಯ ನಿಮ್ಮ ಕೈಯಲ್ಲಿ ಇರುತ್ತದೆ.

ನೀವು ದುಡಿಯುವಾಗ ಅಥವಾ ಸಂಪಾದನೆಯನ್ನು ಹೊಂದಿರುವಾಗ ನಿಮ್ಮ ವಯಸ್ಸು ಚಿಕ್ಕದಾಗಿರುತ್ತದೆ. ಜೊತೆಗೆ ಹೇಳಿಕೊಳ್ಳುವಂತಹ ಯಾವುದೇ ಜವಾಬ್ದಾರಿ ಇಲ್ಲದೆ ಇರಬಹುದು. ಹಾಗಾಗಿ ಅಂತಹ ಸಮಯದಲ್ಲಿ ಹಣವನ್ನು ಉಳಿಸಲು ಹಾಗೂ ಹೂಡಿಕೆಗೆ ಮುಂದಾಗಲು ಸಹಾಯವಾಗುತ್ತದೆ. ಈ ಹಿನ್ನೆಲೆಯಲ್ಲಿಯೇ ನೀವು ಈಕ್ವಿಟಿಯ (ನೇರ ಅಥವಾ ಎಸ್‍ಐಪಿ) ರೂಪದಲ್ಲಿ ಹೂಡಿಕೆ ಮಾಡುವುದರಿಂದ ದೀರ್ಘಕಾಲದವರೆಗೆ ಉತ್ತಮ ಬಂಡವಾಳದ ಮೆಚ್ಚುಗೆಯನ್ನು ಪಡೆಯಬಹುದು. ನೀವು ಹೂಡಿರುವ ಹಣದಿಂದ ಅಧಿಕ ಲಾಭವನ್ನು ಪಡೆದುಕೊಂಡು, ನಿಮ್ಮ ನಿವೃತ್ತಿಯ ಜೀವನಕ್ಕೆ ಬೇಕಾದ ಉಳಿತಾಯದ ಮಟ್ಟವನ್ನು ಹೆಚ್ಚಿಸಿಕೊಳ್ಳಬಹುದು.

ವಾರ್ಷಿಕವಾಗಿ ನಿಮ್ಮ ಹಣಕಾಸಿನ ಸಂಗ್ರಹವನ್ನು ತೆಗೆದುಕೊಳ್ಳಿ

ನಿಮ್ಮ ಬದುಕಿನ ಘಟ್ಟಗಳ ಆಧಾರದ ಮೇಲೆ ಹಣದ ಆಯ-ವ್ಯಯ ಹಾಗೂ ಹೂಡಿಕೆಯು ನಿರ್ಧಾರವಾಗುತ್ತವೆ. ಮನೆ ಖರೀದಿಸುವುದು, ಮಗುವಿನ ಶಿಕ್ಷಣಕ್ಕೆ ಹಣ ಹೂಡುವುದು, ರಜಾ ದಿನಗಳಲ್ಲಿ ಕುಟುಂಬವನ್ನು ಪ್ರವಾಸಕ್ಕೆ ಕರೆದೊಯ್ಯುವುದು, ಪೋಷಕರಿಗೆ ಹಣಕಾಸಿನ ನೆರವು, ನಿಮ್ಮ ಬಂಧು-ಬಾಂಧವರು ಹಾಗೂ ಸ್ನೇಹಿತರಿಗೆ ಉಡುಗೊರೆ ನೀಡುವುದು, ನಿಮ್ಮ ವೃತ್ತಿ ಜೀವನ ಹಾಗೂ ನಿವೃತ್ತಿ ಜೀವನಕ್ಕೆ ಯೋಜನೆ ಕೈಗೊಳ್ಳುವುದರ ಬಗ್ಗೆ ಜವಾಬ್ದಾರಿಯನ್ನು ವಿಸ್ತರಿಸಿಕೊಳ್ಳಬೇಕಾಗುತ್ತದೆ.

ಹಾಗಾಗಿಯೇ ನಮ್ಮ ಹಣಕಾಸಿನ ಸ್ಥಿತಿಯನ್ನು ವರ್ಷಕ್ಕೆ ಎರಡು ಬಾರಿಯಾದರೂ ಪರಿಶೀಲಿಸಿಕೊಳ್ಳಬೇಕು. ನೀವು ನಿಮ್ಮ ಆದಾಯ, ಖರ್ಚು ಹಾಗೂ ಉಳಿತಾಯದ ಬಗ್ಗೆ ಸೂಕ್ತವಾದ ನಿರ್ಧಾರ ಹಾಗೂ ಮೇಲ್ವಿಚಾರಣೆಯನ್ನು ಹೊಂದಿರಬೇಕಾಗುತ್ತದೆ. ನೀವು ನಿಮ್ಮ ಹಣವನ್ನು ಹೇಗೆ ಖರ್ಚುಮಾಡುತ್ತಿದ್ದೀರಿ? ನಿಮ್ಮ ಖರ್ಚುಗಳಲ್ಲಿ ಅನಿವಾರ್ಯ ಅಥವಾ ಅಗತ್ಯವಾಗಿ ಬೇಕಾದ ಖರ್ಚುಗಳು ಯಾವವು? ಅನಗತ್ಯ ಖರ್ಚುಗಳು ಯಾವವು? ಎನ್ನುವುದನ್ನು ಮೊದಲು ಪರಿಶೀಲಿಸಿ. ಅನಗತ್ಯ ಖರ್ಚುಗಳನ್ನು ಕಡಿತಗೊಳಿಸಿ. ನಿಮ್ಮದೇ ಆದ ಆದಯ ಹಾಗೂ ಬಜೆಟ್ ಅಥವಾ ಯೋಜನೆಯನ್ನು ಕೈಗೊಳ್ಳಿ. ಆಗ ನಿಮಗೆ ಹಣ ಹೂಡಿಕೆ ಹಾಗೂ ಮುಂದಿನ ಯೋಜನೆಗೆ ನಿರ್ಧಾರ ಕೈಗೊಳ್ಳಲು ಸೂಕ್ತ ನಿರ್ಣಯ ದೊರೆಯುವುದು.

ಆದಾಯ ಉತ್ತಮಗೊಳಿಸಲು ಯೋಗ್ಯ ಹೂಡಿಕೆಯನ್ನು ಮಾಡಿ

ಹೆಚ್ಚಿನ ಆದಾಯವು ಹೆಚ್ಚಿನ ಅಪಾಯಗಳನ್ನು ನೀಡುತ್ತದೆ. ನಿಮ್ಮ ವಯಸ್ಸಿಗೆ ಅನುಗುಣವಾಗಿ ನಿಮ್ಮ ಜವಾಬ್ದಾರಿಗಳು ಬದಲಾಗುತ್ತವೆ. ಯುವ ಹೂಡಿಕೆದಾರರು ಕಡಿಮೆ ಜವಾಬ್ದಾರಿಗಳನ್ನು ಹೊಂದಿರುತ್ತಾರೆ. ಆಗ ಅವರು ಹೆಚ್ಚಿನ ಸವಾಲುಗಳನ್ನು ಎದುರಿಸಲು ಮುಂದಾಗಬಹುದು. ಅಂತಹ ಯುವಕರು ಇಕ್ವಿಟಿ, ಮ್ಯೂಚುವಲ್ ಫಂಡ್ ಹಾಗೂ ಇನ್ನಿತರ ಹೂಡಿಕೆಯಲ್ಲಿ ತೊಡಗಿಕೊಳ್ಳಬಹುದು. ನೀವು ನಿಮ್ಮ ಉದ್ಯೋಗ ಕ್ಷೇತ್ರದಲ್ಲಿ ಹೂಡಿಕೆ ಮಾಡುವ ಇಪಿಎಫ್ ನಿಂದಲೂ ಹೆಚ್ಚಿನ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಇದು ಹೆಚ್ಚಿನ ಆದಾಯ ಹಾಗೂ ಕಡಿಮೆ ಅಪಾಯವನ್ನು ಹೊಂದಿರುತ್ತದೆ. ನಿಮ್ಮ ವಯಸ್ಸು ಹಾಗೂ ಉದ್ಯೋಗದ ಅನುಭವ ಹೆಚ್ಚಿದಂತೆ ಆದಾಯವೂ ಹೆಚ್ಚುತ್ತಾ ಹೋಗುವುದು. ಅದೊಂದಿಗೆ ಇಪಿಎಫ್‍ನಲ್ಲಿ ವಿನಿಯೋಗಿಸುವ ಹಣವು ಹೆಚ್ಚಾಗುತ್ತಾ ಸಾಗುವುದು. ಹಾಗಾಗಿ ಇದನ್ನು ಹೆಚ್ಚಿನ ಆದಾಯ ನೀಡುವ ಹಾಗೂ ಕಡಿಮೆ ಅಪಾಯವನ್ನು ನೀಡುವ ಸೂಕ್ತ ಮಾರ್ಗ ಎಂದು ಹೇಳಲಾಗುವುದು.

ಸ್ಥಿರವಾದ ಆದಾಯದ ಯೋಜನೆಯನ್ನು ಮಾಡಿ

ನಿವೃತ್ತಿಯಾದಾಗ ಮಹಿಳೆಯರಿಗೆ ಸ್ಥಿರವಾದ ಆದಾಯ ಅಗತ್ಯವಾಗಿರುತ್ತದೆ. ಹಾಗಾಗಿ ಮಹಿಳೆಯರು ಸ್ಥಿರ ಠೇವಣಿಯನ್ನು ಹೊಂದುವುದರ ಮೂಲಕ ಅನುಕೂಲವನ್ನು ಪಡೆದುಕೊಳ್ಳಬಹುದು. ನಿಮ್ಮ ಅಂದಾಜಿನಂತೆ ನಿಮ್ಮದೇ ಆದ ಆದಾಯವನ್ನು ಪಡೆದುಕೊಳ್ಳಬೇಕು ಎಂದಾಗಿದ್ದರೆ, ಮಹಿಳೆಯರು ನಿಶ್ಚಿತ ಠೇವಣಿಯನ್ನು ಹೊಂದಬೇಕು. ನಂತರ ನಿಮಗೆ ಅಗತ್ಯವಾದ ಸಂದರ್ಭದಲ್ಲಿ ನಿಶ್ಚಿತ ವರಮಾನವನ್ನು ಹೊಂದಲು ಸಹಾಯವಾಗುವುದು. ಅಲ್ಲದೆ ಹೆಚ್ಚಿನ ಅಪಾಯವನ್ನು ನೀಡುವ ಹೂಡಿಕೆಗಳಿಂದಲೂ ದೂರ ಇರಬಹುದು. ನಿಶ್ಚಿತ ಠೇವಣಿಯ ಆದಾಯವು ನಿಮಗೆ ಖಾತರಿ ಲಾಭವನ್ನು ನೀಡುತ್ತದೆ. ನಿಶ್ಚಿತ ಠೇವಣಿಯಲ್ಲಿ ಸಣ್ಣ ಮೊತ್ತದ ಹೂಡಿಕೆಯಿಂದ ಹಿಡಿದು, ಹೊಡ್ಡ ಮೊತ್ತದ ಹೂಡಿಕೆಯನ್ನು ಸಹ ಮಾಡಬಹುದು. ಇದರಿಂದ ಹೆಚ್ಚುವರಿ ಬಡ್ಡಿಯನ್ನು ಸಹ ಪಡೆಯಬಹುದು. ನಿಮಗೆ ಒಂದು ಸ್ಪಷ್ಟ ಚಿತ್ರಣಕ್ಕಾಗಿ ಕೆಲವು ಉದಾಹರಣೆಯ ಮೂಲಕ ನಿಶ್ಚಿತ ಠೇವಣಿಯ ಹೂಡಿಕೆಯನ್ನು ಪರಿಚಯಿಸಲಾಗಿದೆ.

* ನಿಶ್ಚಿತ ಠೇವಣಿ 1- 27ನೇ ವಯಸ್ಸಿನಲ್ಲಿ ನೀವು 1 ಲಕ್ಷ ರೂಪಾಯಿಯನ್ನು ಐದು ವರ್ಷಗಳ ಅವಧಿಗೆ ನಿಶ್ಚಿತ ಠೇವಣಿಯನ್ನು ಇಟ್ಟರೆ ನಿಮಗೆ ಶೇ.7ರಷ್ಟು ಬಡ್ಡಿ ದರವನ್ನು ನೀಡಲಾಗುತ್ತದೆ. ಅಂದರೆ ನಿಮಗೆ ಪೂರ್ಣಾವಧಿಯಲ್ಲಿ ನೀವು ಒಟ್ಟು 1.4 ಲಕ್ಷ ರೂಪಾಯಿ ಪಡೆದುಕೊಳ್ಳುವಿರಿ.

* ನಿಶ್ಚಿತ ಠೇವಣಿ 2- 29ನೇ ವಯಸ್ಸಿನಲ್ಲಿ ನೀವು 2 ಲಕ್ಷ ರೂಪಾಯಿಯನ್ನು ಏಳು ವರ್ಷಗಳ ಅವಧಿಗೆ ನಿಶ್ಚಿತ ಠೇವಣಿಯನ್ನು ಇಟ್ಟರೆ ನಿಮಗೆ ಶೇ.7.5ರಷ್ಟು ಬಡ್ಡಿ ದರವನ್ನು ನೀಡಲಾಗುತ್ತದೆ. ಅಂದರೆ ನಿಮಗೆ ಪೂರ್ಣಾವಧಿಯಲ್ಲಿ ನೀವು ಒಟ್ಟು 3.3 ಲಕ್ಷ ರೂಪಾಯಿ ಪಡೆದುಕೊಳ್ಳುವಿರಿ.

* ನಿಶ್ಚಿತ ಠೇವಣಿ 3- 32ನೇ ವಯಸ್ಸಿನಲ್ಲಿ ನೀವು 5 ಲಕ್ಷ ರೂಪಾಯಿಯನ್ನು ಏಳು ವರ್ಷಗಳ ಅವಧಿಗೆ ನಿಶ್ಚಿತ ಠೇವಣಿಯನ್ನು ಇಟ್ಟರೆ ನಿಮಗೆ ಶೇ.7.75ರಷ್ಟು ಬಡ್ಡಿ ದರವನ್ನು ನೀಡಲಾಗುತ್ತದೆ. ಅಂದರೆ ನಿಮಗೆ ಪೂರ್ಣಾವಧಿಯಲ್ಲಿ ನೀವು ಒಟ್ಟು 8.4 ಲಕ್ಷ ರೂಪಾಯಿ ಪಡೆದುಕೊಳ್ಳುವಿರಿ.

ನಿಶ್ಚಿತ ಠೇವಣಿಯ ಪೂರ್ಣಾವಧಿ ಮುಗಿದ ನಂತರ ನವೀಕರಿಸುವುದರ ಮೂಲಕ ನೂತನ ಬಡ್ಡಿದರಗಳ ಮೂಲಕ ಬಡ್ಡಿಯನ್ನು ಪಡೆಯಬಹುದು. ಈ ವಿಧಾನವು ನಿಮ್ಮ ನಿವೃತ್ತಿ ಜೀವನಕ್ಕೆ ಅನುವು ಮಾಡಿಕೊಡುವ ಹೂಡಿಕೆ ಎನ್ನಬಹುದು. ಇದು ನಿಮ್ಮ ಪಿಪಿಎಫ್, ಇಪಿಎಫ್ ಮತ್ತು ಎನ್ ಪಿ ಎಸ್ ನಂತಹ ಯೋಜನೆಗಳಂತೆ ಉತ್ತಮ ಲಾಭವನ್ನು ಅಥವಾ ಸಂಪಾದನೆಯನ್ನು ನೀಡುವುದು. ನೀವು ಬಜಾಜ್ ಫೈನಾನ್ಸ್ ನಂತಹ ಸಂಸ್ಥೆಯಲ್ಲಿ ನಿಶ್ಚಿತ ಠೇವಣಿ ಹೂಡಿದರೆ ಶೇ.9.10ರಷ್ಟು ಬಡ್ಡಿದರದ ಅಡಿಯಲ್ಲಿ ಲಾಭವನ್ನು ಪಡೆದುಕೊಳ್ಳಬಹುದು.

ನಿಮ್ಮ ಬಂಡವಾಳ ಹಾಗು ಹೂಡಿಕೆಯ ಬಗ್ಗೆ ಕಾಳಜಿವಹಿಸಿ

ನಿಮ್ಮ ಹಣಕಾಸಿನ ಹೂಡಿಕೆ, ಬಡ್ಡಿದರ, ಮಾರುಕಟ್ಟೆ, ಉಪಕರಣಗಳ ಬಗ್ಗೆ ಹೆಚ್ಚಿನ ಗಮನವನ್ನು ನೀಡಬೇಕು. ಇದರಿಂದ ನಿಮ್ಮ ಫೋಲಿಯೋ ಕಾರ್ಯಕ್ಷಮತೆಯನ್ನು ಮೇಲ್ವಿಚಾರಣೆ ನಡೆಸಲು, ಕಾಲಕಾಲಕ್ಕೆ ಕಾರ್ಯತಂತ್ರದ ನಿರ್ಧಾರಗಳನ್ನು ಅರಿಯಲು ಸಹಾಯವಾಗುತ್ತದೆ. ಉದಾಹರಣೆಗೆ: ನೀವು ನಿರ್ದಿಷ್ಟ ಸ್ಟಾಕ್‍ಅಲ್ಲಿ ಹೂಡಿಕೆ ಮಾಡಿ, ಅದರ ಬಗ್ಗೆ ಸೂಕ್ತ ಗಮನ ನೀಡದೆ ಹೋದರೆ ಲಾಭದಲ್ಲಿ ಏರಿಳಿತವನ್ನು ಪರಿಗಣಿಸಲು ಸಾಧ್ಯವಾಗದೆ ಹೋಗುವುದು. ಹಾಗಾಗಿ ಹೂಡಿಕೆಯು ನಿಮ್ಮ ಸಂಪತ್ತನ್ನು ನಿರ್ಧರಿಸುತ್ತದೆ. ಅದರ ಬಗ್ಗೆ ಸಾಕಷ್ಟು ಮೇಲ್ವಿಚಾರಣೆಯನ್ನು ಆಗಾಗ ನಡೆಸುತ್ತಲೇ ಇರಬೇಕು. ಲಾಭ ಇಳಿಮುಖವಾಗುತ್ತಿದೆ ಎನ್ನುವುದು ನಿಮ್ಮ ಗಮನಕ್ಕೆ ಬಂದರೆ ನೀವು ಅದನ್ನು ಬೇರೆ ಹೂಡಿಕೆಯಲ್ಲಿ ತೊಡಗಿಸುವುದರ ಮೂಲಕವೂ ಲಾಭ ಪಡೆಯಬಹುದು. ಹಾಗಾಗಿ ಹಣಕಾಸಿನ ಹೂಡಿಕೆಯ ಬಗ್ಗೆ ಸೂಕ್ತ ಕಾಳಜಿ ಹಾಗೂ ಗಮನವನ್ನು ಸದಾ ಇಟ್ಟಿರಬೇಕು ಎಂದು ತಜ್ಞರು ಹೇಳುತ್ತಾರೆ.

ಠೇವಣಿ ಬಡ್ಡಿಯ ದರಗಳು ರೆಪೋ ದರಗಳಿಗೆ ಅನುಗುಣವಾಗಿ ಚಲಿಸುತ್ತವೆ ಎಂಬ ಅಂಶವನ್ನು ಗಮನಿಸಿ. ಆದ್ದರಿಂದ, ಬಡ್ಡಿದರದ ಹೆಚ್ಚಳ ಮತ್ತು ನೀವು ಅದರ ಬಗ್ಗೆ ತಿಳಿದಿದ್ದರೆ, ನಿಮ್ಮ ಹಣವನ್ನು ಕಡಿಮೆ ಲಾಭದಾಯಕ ಮಾರ್ಗಗಳನ್ನು ಮರು-ನಿಯೋಜಿಸಿ ಉತ್ತಮಗೊಳಿಸಬಹುದು. ತೆರಿಗೆ ನಿಯಮಗಳ ಮೇಲೆ ಟ್ಯಾಬ್ ಇರಿಸುವುದರಿಂದ ನಿಮಗೆ ವಿನಾಯಿತಿ ಮತ್ತು ವಿನಾಯತಿಗಳಿಂದ ಲಾಭವಾಗುತ್ತದೆ. ಉದಾಹರಣೆಗೆ, ಮಧ್ಯಂತರ ಬಜೆಟ್ 2020 ಬ್ಯಾಂಕ್ ಮತ್ತು ಪೋಸ್ಟ್ ಆಫೀಸ್ ಎಫ್ಡಿ ಆಸಕ್ತಿಯನ್ನು ಟಿಡಿಎಸ್ ಕಡಿತ ಮಿತಿಯನ್ನು ರೂ. 40,000ಕ್ಕೆ ಏರಿಸಲು ಪ್ರಸ್ತಾಪಿಸಿದೆ. ಅಂತಹ ಮಾಹಿತಿಯ ಆಧಾರದ ಮೇಲೆ, ನಿಮ್ಮ ಎಫ್ಡಿ ಹೂಡಿಕೆಗಳನ್ನು ಹೆಚ್ಚಿಸಬಹುದು ಮತ್ತು ತೆರಿಗೆ ವಿನಾಯಿತಿಗಳಿಂದ ಹೆಚ್ಚಿನ ಆದಾಯದ ಮೇಲೆ ಲಾಭ ಪಡೆಯಬಹುದು. ಕೆಲವೊಮ್ಮೆ ಇತರ ಗುರಿಗಳನ್ನು ಪೂರೈಸುವ ಹಸಿವಿನಲ್ಲಿ, ನಿಮ್ಮ ನಿವೃತ್ತಿ ಉಳಿತಾಯವು ಹಿಂಬದಿ ಸ್ಥಾನವನ್ನು ತೆಗೆದುಕೊಳ್ಳಬಹುದು. ಆದರೆ ದೊಡ್ಡ ಚಿತ್ರವನ್ನು ಕೇಂದ್ರೀಕರಿಸಲು ಮರೆಯಬೇಡಿ. ಕೇವಲ ನಂತರ, ನೀವು ಒಂದು ಆರಾಮದಾಯಕವಾದ ನಿವೃತ್ತಿ ಆನಂದಿಸಬಹುದು ಮತ್ತು ನಿಮ್ಮ ನಿವೃತ್ತಿ ಜೀವನವನ್ನು ಪೂರ್ಣವಾಗಿ ಆನಂದಿಸಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X