• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರ್ನಾಟಕದ ಯಶಸ್ವಿ ಮಹಿಳಾ ಉದ್ಯಮಿಗಳ ಸಮಾವೇಶ

By Prasad
|

ಬೆಂಗಳೂರು, ಮಾರ್ಚ್‍ 1 : ರಾಜ್ಯದ ಮಹಿಳಾ ಉದ್ಯಮಿಗಳಿಗೆ ಉತ್ತೇಜನ ನೀಡುವ ಆಶಯ ಹೊಂದಿರುವ 'ವುಮೆನ್‍ ಆಫ್‍ ವರ್ತ್‍- ಕರ್ನಾಟಕ' ಸಮಾವೇಶವು ನಗರದ ಲಲಿತ್‍ ಅಶೋಕ ಹೋಟೆಲಿನಲ್ಲಿ ಮಾರ್ಚ್‍ 2 ಮತ್ತು 3ರಂದು (ಶುಕ್ರವಾರ ಮತ್ತು ಶನಿವಾರ) ನಡೆಯಲಿದೆ.

ಈ ಸಂದರ್ಭದಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು ಹಾರೋಹಳ್ಳಿ, ಇಮ್ಮಾವು, ಕುಡಿತಿನಿ ಮತ್ತು ಗಾಮನಗಟ್ಟಿ ಕೈಗಾರಿಕಾ ಪ್ರದೇಶಗಳಲ್ಲಿ ಸ್ಥಾಪಿಸಲು ತೀರ್ಮಾನಿಸಿರುವ ಮಹಿಳಾ ಉದ್ಯಮಿಗಳ ಪಾರ್ಕ್‍ಗಳಿಗೆ ಶಂಕುಸ್ಥಾಪನೆ ಕೂಡ ನೆರವೇರಿಸಲಾಗುವುದು.

ವೃದ್ಧರಿಗೆ ಭರವಸೆಯ ಬೆಳಕಾದ ಸುಯೋಗಾಶ್ರಯ: ಲತಿಕಾ ಭಟ್ ಸಂದರ್ಶನ

ಮಾರ್ಚ್ 2ರಂದು ಬೆಳಿಗ್ಗೆ 10 ಗಂಟೆಗೆ ಆರಂಭಗೊಳ್ಳಲಿರುವ ಈ ವಿಶಿಷ್ಟ ಸಮಾವೇಶಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚಾಲನೆ ನೀಡಲಿದ್ದು, ಭಾರೀ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಆರ್‍.ವಿ. ದೇಶಪಾಂಡೆ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ. ನಗರಾಭಿವೃದ್ಧಿ ಸಚಿವ ಆರ್‍.ರೋಷನ್‍ ಬೇಗ್‍ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.

ಮಾರ್ಚ್‍ 3ರಂದು ಮಧ್ಯಾಹ್ನ 12.30ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಸಚಿವರಾದ ಆರ್‍.ವಿ.ದೇಶಪಾಂಡೆ, ಸಣ್ಣ ಕೈಗಾರಿಕೆಗಳ ಸಚಿವೆ ಎಂ.ಸಿ. ಮೋಹನಕುಮಾರಿ, ಐಟಿಬಿಟಿ ಮತ್ತು ಪ್ರವಾಸೋದ್ಯಮ ಸಚಿವ ಪ್ರಿಯಾಂಕ್‍ ಖರ್ಗೆ ಪಾಲ್ಗೊಳ್ಳಲಿದ್ದಾರೆ.

ನಾನು ಅವನಲ್ಲ ಅವಳು... ಆರ್ ಜೆ ಪ್ರಿಯಾಂಕ ಜೀವನ ಪಯಣ

ಹೆಸರಾಂತ ಮಹಿಳಾ ಉದ್ಯಮಿಗಳಾದ ಉಮಾ ರೆಡ್ಡಿ (ವಿ ಕನೆಕ್ಟ್ ಇಂಡಿಯಾ ಐಎನ್‍ಟಿ ಸಮೂಹದ ಪ್ರವರ್ತಕ ನಿರ್ದೇಶಕರು), ಉಮಾ ಗೋಪಾಲನ್‍ (ಅಧ್ಯಕ್ಷರು, ಅವೇಕ್‍), ಲತಾ ಗಿರೀಶ್‍ (ಜಂಟಿ ಕಾರ್ಯದರ್ಶಿ, ಕಾಸಿಯಾ), ಗಾಯತ್ರಿ ಕೇಶವರಾವ್ (ಅಧ್ಯಕ್ಷರು, ವೈಬ್, ಮೈಸೂರು), ರೂಪಾ ಪಾರಣಿ (ಸಂಸ್ಥಾಪಕ ಅಧ್ಯಕ್ಷರು, ಕರ್ನಾಟಕ ಚಾಪ್ಟರ್, ಕೋವೆ), ಆರ್‍.ರಾಜಲಕ್ಷ್ಮಿ (ಅಧ್ಯಕ್ಷರು, ಇಮರ್ಜ್‍, ಬೆಂಗಳೂರು), ರತಿ ಶ್ರೀನಿವಾಸನ್ (ಅಧ್ಯಕ್ಷರು, ಮಹಿಳಾ ಸಮಿತಿ, ಕೆಸಿಸಿಐ, ಹುಬ್ಬಳ್ಳಿ) ಮತ್ತು ಜ್ಯೋತಿ ಕದಡಿ (ಅಧ್ಯಕ್ಷರು, ಕೆಎಲ್‍ಎಎಮ್‍ಪಿಎಸ್‍, ಕಲಬುರಗಿ) ಮುಂತಾದವರು ಸಮಾವೇಶದಲ್ಲಿ ಪಾಲ್ಗೊಳಲಿದ್ದಾರೆ.

ವಾರದ ಸಾಧಕಿ : ಧಾರವಾಡದ ಕಸೂತಿ ಪ್ರವೀಣೆ ಆರತಿ

ಜೊತೆಗೆ, ರಾಜ್ಯ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಿ.ವಿ. ಪ್ರಸಾದ್, ಸರಕಾರದ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ಮತ್ತು ಕೈಗಾರಿಕಾಭಿವೃದ್ಧಿ ಆಯುಕ್ತ ಹಾಗೂ ನಿರ್ದೇಶಕ ದರ್ಪಣ್ ಜೈನ್ ಈ ಸಮಾವೇಶದಲ್ಲಿ ಉಪಸ್ಥಿತರರಿರುತ್ತಾರೆ.

English summary
As the world rejoices International Women's day on 8th March, Government of Karnataka is organizing WoW (Women of Worth) Karnataka 2018, a celebration of women achievements and their worthy contribution in all walks of life, on 2nd and 3rd March at Hotel Lalit Ashok, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X