• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಾರ್ಷಿಕ 10 ಲಕ್ಷ ನಗದು ವಿತ್ ಡ್ರಾ ಮಾಡಿದ್ರೆ ತೆರಿಗೆ?

|

ನವದೆಹಲಿ, ಜೂನ್ 11: ಕೇಂದ್ರ ಬಜೆಟ್ ಸಿದ್ಧತೆಯಲ್ಲಿರುವ ವಿತ್ತ ಸಚಿವಾಲಯವು ಸರಕು ಸೇವಾ ತೆರಿಗೆ(ಜಿ.ಎಸ್.ಟಿ) ದರದಲ್ಲಿ ಬದಲಾವಣೆ ತರುವ ನಿರೀಕ್ಷೆಯಿದೆ. ಈ ನಡುವೆ ವಾರ್ಷಿಕ 10 ಲಕ್ಷ ರು ವಿತ್ ಡ್ರಾ ಮಾಡಿದರೆ ಶೇ 3 ರಿಂದ 5 ರಷ್ಟು ತೆರಿಗೆ ಕಟ್ಟಬೇಕು ಎಂಬ ಪ್ರಸ್ತಾವನೆ ಬಂದಿದೆ ಎಂಬ ಸುದ್ದಿಯಿದೆ.

ಉಳಿದಂತೆ, ಉದ್ಯಮ ವಲಯದ ಚೇತರಿಕೆಗಾಗಿ ಕೆಲವು ಪದಾರ್ಥಗಳ ಮಲೆ ಜಿ.ಎಸ್.ಟಿ. ದರ ಇಳಿಕೆ ಮಾಡುವ ಚಿಂತನೆ ನಡೆಸಲಾಗಿದೆ.

ಕೇಂದ್ರ ಬಜೆಟ್ 2019 : ಮೋದಿ ಕನಸಿನ ಬಜೆಟ್ ವಿನ್ಯಾಸದಲ್ಲಿ ನಿರ್ಮಲಾ ಹಾಗೂ ತಂಡ

ನಗದು ವ್ಯವಹಾರ ಕಡಿಮೆ ಮಾಡಿ ಡಿಜಿಟಲ್ ವ್ಯವಹಾರಕ್ಕೆ ಹೆಚ್ಚಿನ ಉತ್ತೇಜನ ನೀಡುವ ನಿಟ್ಟಿನಲ್ಲಿ ಮೋದಿ ಸರ್ಕಾರ ಮಹತ್ವದ ಬದಲಾವಣೆಯನ್ನು ಜಾರಿಗೆ ತರುವ ನಿರೀಕ್ಷೆಯಿದೆ. ಮಿತಿ ಮೀರಿದ ನಗದು ವಿತ್ ಡ್ರಾ ಮಾಡುವವರ ಮೇಲೆ ತೆರಿಗೆ ವಿಧಿಸುವ ಚಿಂತನೆ ನಡೆದಿದೆ.

ವರದಿ ಪ್ರಕಾರ, ವ್ಯಾಪಾರಸ್ಥರಿಗೆ ವರ್ಷಕ್ಕೆ 10 ಲಕ್ಷ ನಗದು ವಿತ್ ಡ್ರಾ ಮಾಡುವ ಅವಶ್ಯಕತೆಯಿರುವುದಿಲ್ಲ ಇದಕ್ಕಾಗಿ 30 ರಿಂದ 50 ಸಾವಿರ ನೀಡುವುದು ನಷ್ಟವಾಗಲಿದೆ. ಹೀಗಾಗಿ ಡಿಜಿಟಲ್ ಪೇಮೆಂಟ್ ಬಳಕೆಗೆ ಉತ್ತೇಜನ ನೀಡಲಾಗುವುದು.

ಇತ್ತೀಚೆಗೆ ಎನ್ ಇ ಎಫ್ ಟಿ ಹಾಗೂ ಆರ್ ಟಿ ಜಿಎಸ್ ಮೂಲಕ ಹಣ ರವಾನೆಗೆ ವಿಧಿಸುತ್ತಿದ್ದ ಶುಲ್ಕವನ್ನು ಆರ್ ಬಿಐ ರದ್ದುಪಡಿಸಿದೆ. 2005 ರಿಂದ 2008ರ ಅವಧಿಯಲ್ಲಿ ಯುಪಿಎ ಸರ್ಕಾರವಿದ್ದಾಗ 50 ಸಾವಿರಕ್ಕೂ ಅಧಿಕ ಮೊತ್ತವನ್ನು ಕರೆಂಟ್ ಖಾತೆಯಿಂದ ವಿತ್ ಡ್ರಾ ಮಾಡಿದರೆ ತೆರಿಗೆ ಕಟ್ಟ ಬೇಕಾಗಿತ್ತು.

2017ರಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದ ಚಂದ್ರಬಾಬು ನಾಯ್ಡು ನೇತೃತ್ವದ ಸಮಿತಿ, 50,000 ರೂಪಾಯಿ ನಗದು ಡ್ರಾ ಮಾಡುವವರ ವಿರುದ್ಧ banking cash transaction tax (BCTT) ತೆರಿಗೆ ವಿಧಿಸುವಂತೆ ಪ್ರಧಾನಿ ಮೋದಿ ಅವರಿಗೆ ಶಿಫಾರಸ್ಸು ಮಾಡಿತ್ತು.

ಪ್ರಸ್ತುತ 50 ಸಾವಿರ ರೂಪಾಯಿ ಜಮಾ ಮಾಡಲು ಪಾನ್ ಕಾರ್ಡ್ ಅನಿವಾರ್ಯವಾಗಿದೆ. ಅಲ್ಲದೆ ಒಂದು ದಿನದಲ್ಲಿ 2 ಲಕ್ಷಕ್ಕೂ ಅಧಿಕ ಮೊತ್ತವನ್ನು ನಗದು ರೂಪದಲ್ಲಿ ಬಳಕೆ ಮಾಡುವುದು ಕಷ್ಟಕರ. ಈ ಮಿತಿಯನ್ನು ಏರಿಕೆ ಮಾಡುವಂತೆ ಬೇಡಿಕೆ ಇದ್ದೇ ಇದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Withdrawing a cumulative Rs 10 lakh a year can attract 3-5 per cent tax if a proposal going around in the Finance Ministry takes shape in the Budget to track high value cash deals and make digital payments mandatory.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more