ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಪ್ರೋ ಸಂಸ್ಥೆಯಿಂದ 1.8 ಲಕ್ಷ ಉದ್ಯೋಗಿಗಳಿಗೆ ಸಂಬಳ ಏರಿಕೆ

|
Google Oneindia Kannada News

ಬೆಂಗಳೂರು, ಡಿ. 8: ಬೆಂಗಳೂರು ಮೂಲದ ಸಾಫ್ಟ್ ವೇರ್ ರಫ್ತು ಸಂಸ್ಥೆ ವಿಪ್ರೋ ತನ್ನ ಉದ್ಯೋಗಿಗಳಿಗೆ ಸಂಬಳ ಏರಿಕೆ ಘೋಷಣೆ ಮಾಡಿದ್ದು ನೆನಪಿರಬಹುದು. ಸರಿ ಸುಮಾರು ಶೇ 80ಕ್ಕೂ ಅಧಿಕ ಸಿಬ್ಬಂದಿಗೆ ಡಿಸೆಂಬರ್ 1ಕ್ಕೆ ಬದಲಾಗಿ ಜನವರಿ 1, 2021ರಿಂದ ಸಂಬಳ ಹೆಚ್ಚಳವಾಗಿದೆ. ಉತ್ತಮ ಕಾರ್ಯಕ್ಷಮತೆ ಹೊಂದಿರುವ ಉದ್ಯೋಗಿಗಳಿಗೆ ಈ ಬಾರಿ ಸಂಬಳ ಹೆಚ್ಚಾಗಲಿದೆ ಎಂದು ಎಕಾನಾಮಿಕ್ ಟೈಮ್ಸ್ ವರದಿ ಮಾಡಿದೆ.

ಕೊವಿಡ್19 ಸಂಕಷ್ಟದ ನಡುವೆ ಆರ್ಥಿಕ ಸಂಕಷ್ಟದಿಂದ ಲಕ್ಷಾಂತರ ಸಿಬ್ಬಂದಿಗಳಿಗೆ ಬಡ್ತಿ, ಸಂಬಳ ಏರಿಕೆ ತಡೆ ಹಿಡಿಯಲಾಗಿತ್ತು. ಬೆಂಗಳೂರು ಮೂಲದ ಐಟಿ ಸಂಸ್ಥೆಯಾಗಿರುವ ವಿಪ್ರೋ, ಜಾಗತಿಕ ಮಟ್ಟದಲ್ಲಿ 1.85ಲಕ್ಷ ಸಿಬ್ಬಂದಿ ಹೊಂದಿದ್ದು ಕೊವಿಡ್ 19 ಸಂಕಷ್ಟದ ನಡುವೆ ಉದ್ಯೋಗ ಕಡಿತ ಮಾಡಿರಲಿಲ್ಲ. ಆದರೆ, ಉದ್ಯೋಗದಲ್ಲಿ ಬಡ್ತಿ, ಸಂಬಳ ಏರಿಕೆಯನ್ನು ತಡೆ ಹಿಡಿಯಲಾಗಿತ್ತು.

ಮಾರುಕಟ್ಟೆಯಲ್ಲಿ ಪ್ರತಿಸ್ಪರ್ಧಿಗಳಾದ ಇನ್ಫೋಸಿಸ್ ಹಾಗೂ ಟಿಸಿಎಸ್ ಈಗಾಗಲೇ ತಮ್ಮ ಉದ್ಯೋಗಿಗಳಿಗೆ ಸಂಬಳ ಏರಿಕೆ, ವೇರಿಯಬಲ್ ಪೇ ಹೆಚ್ಚಳ, ಬಡ್ತಿ ಘೋಷಿಸಿದ ಬೆನ್ನಲ್ಲೇ ವಿಪ್ರೋ ಕೂಡಾ ಒಂದಂಕಿಯ ಸಂಬಳ ಏರಿಕೆ ಸುಳಿವು ನೀಡಿದೆ. ವಿಪ್ರೋ ಸಿಬ್ಬಂದಿಗಳಲಿ ಎ ಇಂದ ಇ ತನಕ ವಿಭಾಗಿಸಲಾಗಿದೆ. ಬಿ3 ಮಟ್ಟದಲ್ಲಿ ಸುಮಾರು ಶೇ 80ರಷ್ಟು ಉದ್ಯೋಗಿಗಳಿದ್ದು, ಎಲ್ಲರಿಗೂ ಸಂಬಳ ಏರಿಕೆಯಾಗಲಿದೆ. ಹಾಗೂ ಸಿ1 ಹಾಗೂ ಮೇಲ್ಪಟ್ಟ ಬ್ಯಾಂಡ್ ನಲ್ಲಿರುವವರಿಗೆ ಜೂನ್ 1 ರಿಂದ ಸಂಬಳ ಏರಿಕೆ ಖಾತ್ರಿಯಾಗಿದೆ.

Wipro to roll out pay hikes to over 1.8 Lakh employees

ಎಷ್ಟು ಸಂಬಳ ಏರಿಕೆ?: ಸರಿ ಸುಮಾರು 6 ರಿಂದ 8% ಆಫ್ ಶೋರ್ ಉದ್ಯೋಗಿಗಳಿಗೆ ಹಾಗೂ 3 ರಿಂದ 4% ಆನ್ ಸೈಟ್ ಸಿಬ್ಬಂದಿಗಳಿಗೆ ಸಂಬಳ ಏರಿಕೆಯಾಗಲಿದೆ. ಡಿಸೆಂಬರ್ 1ರಿಂದ ಬಿ3 ಬ್ಯಾಂಡ್ ನಲ್ಲಿರುವವರಿಗೆ ಬಡ್ತಿ ನೀಡಲಾಗುತ್ತಿದೆ. ಸರಿ ಸುಮಾರು 7,000 ಸಿಬ್ಬಂದಿಗೆ ಈ ಬಾರಿ ಬಡ್ತಿ ಸಿಗುತ್ತಿದೆ.

English summary
The Bengaluru-based firm is rolling out hikes for over 1.8 Lakh employees effective January 1.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X