• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಪ್ರೋದಿಂದ ಕರ್ನಾಟಕದಲ್ಲಿ ಟೆಕ್ ನೇಮಕಾತಿ ಹೆಚ್ಚಳ!

By Mahesh
|

ಬೆಂಗಳೂರು, ಫೆ. 04: ಭಾರತದ ಪ್ರಮುಖ ಸಾಫ್ಟ್ ವೇರ್ ಕಂಪನಿ ವಿಪ್ರೋ ಪ್ರಸಕ್ತ ವರ್ಷ ಹೊಸ ನೇಮಕಾತಿ ಬಗ್ಗೆ ಘೋಷಣೆ ಹೊರಡಿಸಿದೆ. ಕರ್ನಾಟಕದಲ್ಲಿ ಸುಮಾರು 25,000 ಹೆಚ್ಚುವರಿ ಟೆಕ್ ಉದ್ಯೋಗ ಅವಕಾಶ ಕಲ್ಪಿಸುವ ಭರವಸೆಯನ್ನು ವಿಪ್ರೋ ಚೇರ್ಮನ್ ಅಜೀಂ ಪ್ರೇಮ್ ಜಿ ನೀಡಿದ್ದಾರೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದಿರುವ ಮೂರು ದಿನಗಳ(ಫೆಬ್ರವರಿ 3 ರಿಂದ 5) ಜಾಗತಿಕ ಹೂಡಿಕೆದಾರರ ಸಮಾವೇಶ- ಇನ್ವೆಸ್ಟ್ ಕರ್ನಾಟಕ 2016 ಸಮಾರಂಭದಲ್ಲಿ ಮಾತನಾಡುತ್ತಾ ಮಹಾದಾನಿ ಅಜೀಂ ಪ್ರೇಮ್ ಜಿ ಅವರು ಈ ಘೋಷಣೆ ಮಾಡಿದ್ದಾರೆ.[ಇನ್ವೆಸ್ಟ್ ಕರ್ನಾಟಕ 2016 : ಉದ್ಯಮಿಗಳು ಹೇಳಿದ್ದೇನು?]

ವಿಪ್ರೋ ಈಗ ಕರ್ನಾಟಕದಲ್ಲಿ ತನ್ನ ಘಟಕಗಳನ್ನು ವಿಸ್ತರಿಸುವ ಯೋಜನೆ ಹಾಕಿಕೊಂಡಿದೆ. ಬೇರೆಡೆಗೆ ಹೋಲಿಸಿದರೆ ಇಲ್ಲಿನ ಹವಾಮಾನ ಉತ್ತಮವಾಗಿದೆ. ಆದರೆ, ಮೂಲ ಸೌಕರ್ಯ ಕೊರತೆ ಎಲ್ಲೆಡೆ ಎದ್ದು ಕಾಣುತ್ತಿದೆ. ಈ ಬಗ್ಗೆ ಕರ್ನಾಟಕ ಸರ್ಕಾರ ಗಮನ ಹರಿಸಿ ಸೂಕ್ತ ಕ್ರಮ ಕೈಗೊಂಡರೆ, ಹೆಚ್ಚುವರಿ ತಂತ್ರಜ್ಞಾನ ಉದ್ಯೋಗ ಅವಕಾಶಗಳ ಸೃಷ್ಟಿ ಸಾಧ್ಯವಿದೆ ಎಂದು ಪ್ರೇಮ್ ಜಿ ಹೇಳಿದ್ದಾರೆ.[ಕರ್ನಾಟಕದ ರಸ್ತೆ ಅಭಿವೃದ್ಧಿಗೆ 1 ಲಕ್ಷ ಕೋಟಿ ರು ಅನುದಾನ]

ಕರ್ನಾಟಕದಲ್ಲಿ ವಿಪ್ರೋ ಸಂಸ್ಥೆಯ ಸಾಫ್ಟ್ ವೇರ್ ಹಾಗೂ ಹಾರ್ಡ್ ವೇರ್ ಘಟಕಗಳಿದ್ದು, ಸುಮಾರು 55,000 ಉದ್ಯೋಗಿಗಳಿದ್ದಾರೆ.

English summary
IT major Wipro will add around 25,000 tech jobs in Karnataka. The announcement was made by Wipro Chairman Azim Premji during the ceremony of ‘Invest Karnataka 2016’at Bengaluru. At present, the company employs around 55,000 people in the State.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X