ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಪ್ರೋ ಲಾಭ, ಆದಾಯ ಕುಸಿತ, ಹೂಡಿಕೆದಾರರಿಗೆ ಆತಂಕ

By Mahesh
|
Google Oneindia Kannada News

ಬೆಂಗಳೂರು, ಏಪ್ರಿಲ್ 26: ದೇಶದ ಮೂರನೇ ಅತಿದೊಡ್ಡ ಸಾಫ್ಟ್‌ವೇರ್ ಸೇವಾ ರಫ್ತು ಸಂಸ್ಥೆಯಾಗಿರುವ ವಿಪ್ರೊ, ಮಾರ್ಚ್‌ ತ್ರೈಮಾಸಿಕದಲ್ಲಿ 1,800 ಕೋಟಿ ರುಗಳಷ್ಟು ನಿವ್ವಳ ಲಾಭ ಗಳಿಸಿದ್ದು, ವರ್ಷದಿಂದ ವರ್ಷಕ್ಕೆ ಹೋಲಿಸಿದರೆ ಶೇ 20.5ರಷ್ಟು ಲಾಭ ಕುಸಿದಿದೆ.

ಜತೆಗೆ ಮಾರುಕಟ್ಟೆಯ ನಿರೀಕ್ಷೆಗಿಂತ ಕಡಿಮೆ ಇದೆ. ಕಳೆದ ವರ್ಷ ಇದೇ ಅವಧಿಯಲ್ಲಿ 2,267 ಕೋಟಿ ರು ನಿವ್ವಳ ಲಾಭ ಗಳಿಸಿತ್ತು. ಸಂಸ್ಥೆಯ ಎರಡು ಗ್ರಾಹಕ ಸಂಸ್ಥೆಗಳು ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿವೆ. ಇದರಿಂದ ಎದುರಾಗಬಹುದಾದ ಸವಾಲು ಎದುರಿಸಲು ಹೆಚ್ಚುವರಿ ಹಣ ತೆಗೆದು ಇರಿಸಲಾಗಿದೆ. ಹೀಗಾಗಿ ನಿವ್ವಳ ಲಾಭ ಕುಸಿದಿದೆ ಎಂದು ವಿಪ್ರೋ ಹೇಳಿದೆ.

Wipros Q4 2018 Results Investors worry as Dip in Net Profit YoY Basis By 20.5%

ಆದರೆ, ಗುರುವಾರದಂದು ವಿಪ್ರೋ ಸಂಸ್ಥೆ ಷೇರುಗಳು ಶೇ 4ರಷ್ಟು ಕುಸಿತ ಕಂಡಿದ್ದು, ಬಂಡವಾಳ ಹೂಡಿಕೆದಾರರು ಆತಂಕಗೊಂಡಿದ್ದಾರೆ. ಒಟ್ಟಾರೆ, ಈ ದಿನ 281.35 ರು ನಂತೆ ಶೇ 5.80ರಷ್ಟು ಕುಸಿತ ಕಂಡಿದೆ.

ಟೆಲಿಕಾಂ ಗ್ರಾಹಕ ಸಂಸ್ಥೆಯೊಂದು ನಷ್ಟಕ್ಕೆ ಗುರಿಯಾಗಿ ಸಾಲ ವಸೂಲಾತಿ ‍ಪ್ರಕ್ರಿಯೆಗೆ ಒಳಪಟ್ಟಿದೆ. ಇದರಿಂದ ಈ ಬಾರಿ ಲಾಭವು ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಬಿಎಸ್ಇ ಗೆ ವಿಪ್ರೋ ತಿಳಿಸಿತ್ತು.

'ಸೆಪ್ಟೆಂಬರ್‌ ತ್ರೈಮಾಸಿಕದ 1,930 ಕೋಟಿ ರು ಲಾಭಕ್ಕೆ ಹೋಲಿಸಿದರೆ, ಮಾರ್ಚ್‌ ತ್ರೈಮಾಸಿಕದಲ್ಲಿನ ಲಾಭದ ಕುಸಿತವು ಶೇ 7ರಷ್ಟಾಗಲಿದೆ. ಈ ಬಾರಿ ನಿವ್ವಳ ಲಾಭ ಕುಸಿತದ ಬಗ್ಗೆ ಆತಂಕ ಬೇಡ' ಎಂದು ಸಂಸ್ಥೆಯ ಸಿಇಒ ಅಬಿದಾಲಿ ನೀಮೂಚವಾಲಾ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಈ ತ್ರೈಮಾಸಿಕ(Q4) ಅವಧಿಯ ಒಟ್ಟು ಆದಾಯ 14,304.6 ಕೋಟಿ ರು ಕೋಟಿಗಳಷ್ಟಾಗಿದ್ದು, ಹಿಂದಿನ ವರ್ಷದ ಇದೇ ಅವಧಿಯಲ್ಲಿನ 15,045.5 ಕೋಟಿ ರು ಗಳಿಷ್ಟಿತ್ತು. 2017ಕ್ಕೆ ಹೋಲಿಸಿದರೆ ಶೇ 5ರಷ್ಟು ಕಡಿಮೆಯಾಗಿದೆ.

ಒಟ್ಟು 900 ಉದ್ಯೋಗಿಗಳನ್ನು 8 ಡೇಟಾ ಕೇಂದ್ರ ಹಂಚಿಕೆಗೆ ಎನ್ಸೊನೊ ಸಂಸ್ಥೆ ಜತೆ ಒಪ್ಪಂದ ಮಾಡಿಕೊಂಡಿದೆ. ವಿಪ್ರೋ ಸಂಸ್ಥೆಯ ಹೆಲ್ತ್ ಕೇರ್ ಹಾಗೂ ಲೈಫ್ ಸೈನ್ಸ್ ವ್ಯವಹಾರ ಕುಂಠಿತವಾಗಿದೆ. ಎರಡು ಸಬ್ಸಿಡಿ ಸಂಸ್ಥೆ ಮುಚ್ಚಲು ಬೋರ್ಡ್ ನಿರ್ಧರಿಸಿದೆ.

English summary
India's third-largest software services exporter reported a 20.5% fall in the fourth quarter net profit at ₹1,800 crore when compared to the corresponding quarter in the previous fiscal. The fall was primarily due to provisions it made for two insolvent customers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X