ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಪ್ರೋಗೆ ನಿರೀಕ್ಷೆಗೆ ತಕ್ಕ ಲಾಭ, ರಿಷಬ್ ಗೆ ಉನ್ನತ ಸ್ಥಾನ

By Mahesh
|
Google Oneindia Kannada News

ಬೆಂಗಳೂರು, ಏ.22: ವಿಪ್ರೋ ನಾಲ್ಕನೇ ತ್ತೈಮಾಸಿಕ ಫ‌ಲಿತಾಂಶ ಪ್ರಕಟಿಸಿದ್ದು, ನಿರೀಕ್ಷೆಗೆ ತಕ್ಕ ಲಾಭ ಪಡೆದುಕೊಂಡಿದೆ. ಮಾ.31ಕ್ಕೆ ಕೊನೆಗೊಂಡ ತ್ರೈಮಾಸಿಕದಂತೆ ಸಂಸ್ಥೆಗೆ ಸುಮಾರು 2,272 ಕೋಟಿ ರು ನಿವ್ವಳ ಲಾಭ ಸಿಕ್ಕಿದೆ. ಸಂಸ್ಥೆಯ ಆದಾಯ ಶೇ 0.7ರಷ್ಟು ಏರಿಕೆ ಕಂಡಿದೆ.

ಡಿಸೆಂಬರ್ ತ್ರೈಮಾಸಿಕಕ್ಕೆ ಹೋಲಿಸಿದರೆ ಆದಾಯ ತುಸು ಹೆಚ್ಚಿದ್ದು, ಒಟ್ಟಾರೆ ಆದಾಯ 12,142 ಕೋಟಿ ರು ಬಂದಿದೆ. ನಿರೀಕ್ಷಿತ ಮಟ್ಟದಲ್ಲೇ ಡಾಲರ್ ಅದಾಯ ಬಂದಿದೆ. 1774.5 ಮಿಲಿಯನ್ ಡಾಲರ್ ನಷ್ಟಿದೆ. [ಟಿಸಿಎಸ್ ಹಿರಿಯ ಉದ್ಯೋಗಿ ಈಗ ವಿಪ್ರೋ ಸಿಒಒ]

ಇನ್ಫೋಸಿಸ್ (0.8%) ಹಾಗೂ ಟಿಸಿಎಸ್ ಡಾಲರ್ ಆದಾಯ ಪ್ರಗತಿಗೆ ಹೋಲಿಸಿದರೆ ವಿಪ್ರೋ ಪ್ರಗತಿ ಶೇ 1.3ರಷ್ಟಿದ್ದು ಮುನ್ನಡೆ ಸಾಧಿಸಿದೆ.ಐಟಿ ಸೇವೆಯಲ್ಲಿ ಶೇ. 6ರಷ್ಟು ಪ್ರಗತಿಯಾಗಿದ್ದು, ನಿರ್ವಹಣಾ ಆದಾಯವು 2,477.7 ಕೋಟಿ ರೂ. ತಲುಪಿದೆ.

Wipro Q4 Net Profits At Rs 2272 Crores; Meets Estimates

ಅಜೀಂ ಪ್ರೇಮ್ ಜಿ ಪುತ್ರ ಬೋರ್ಡಿಗೆ: ವಿಪ್ರೋ ದಿಗ್ಗಜ ಅಜೀಂ ಪ್ರೇಂಜಿ ಅವರ ಪುತ್ರ ರಿಷಬ್ ಅಜೀಮ್ ಪ್ರೇಂಜಿ ಅವರನ್ನು ಫುಲ್ ಟೈಂ ಸಂಸ್ಥೆಯ ನಿರ್ದೇಶಕರಾಗಿ ನೇಮಿಸಲಾಗಿದೆ. ಮೇ.1.2015ರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಸಂಸ್ಥೆಯ ಸಿಇಒ ಟಿ.ಕೆ ಕುರಿಯನ್ ಹೇಳಿದರು.['ಅನಂದ' ಕಳೆದುಕೊಂಡ ವಿಪ್ರೋ ಸಂಸ್ಥೆ ]

ವೆಸ್ಲಿಯಾನ್ ವಿವಿಯಲ್ಲಿ ಎಕಾನಾಮಿಕ್ಸ್ ಪದವಿ, ಹಾರ್ವರ್ಡ್ ವಿವಿಯಿಂದ ಎಂಬಿಎ ಪಡೆದಿರುವ ರಿಷಬ್ 2007ರಲ್ಲಿ ವಿಪ್ರೋ ಸೇರಿದರು. ಬಿಸಿನೆಸ್ ಮ್ಯಾನೇಜರ್, ಬ್ಯಾಂಕಿಂಗ್ ವಿಭಾಗದ ಹೊಣೆ ಹೊತ್ತಿದ್ದ ರಿಷಬ್ ನಂತರ ಮುಖ್ಯ ತಾಂತ್ರಿಕ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ವಿಪ್ರೋ ಸೇರುವ ಮೊದಲು ಜಿಇ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು. ವಿಪ್ರೋ ಸಂಸ್ಥೆಯಲ್ಲಿ ಅಜೀಂ ಪ್ರೇಂಜಿ ಅವರು ಶೇ 73.39ರಷ್ಟು ಪಾಲು ಹೊಂದಿದ್ದು, ಪ್ರೇಂಜಿ ಅವರ ಸ್ಥಾನವನ್ನು ಮಗ ರಿಷಬ್ ತುಂಬಲಿದ್ದಾರೆ.

ಆಟ್ರೀಷನ್ ದರ: ಶೇ 16.5ರಷ್ಟಿದ್ದು, ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಆಟ್ರೀಷನ್ ದರ ಇಳಿಕೆಯಾಗಿದ್ದು, ಸಂಸ್ಥೆಗೆ ಶುಭ ಸೂಚನೆಯಾಗಿದೆ. (ಒನ್ ಇಂಡಿಯಾ ಸುದ್ದಿ)

English summary
IT major Wipro reported net profits of Rs 2272 crores for the quarter ending March 31, 2015, largely in line with estimates.Wipro appoints Rishad Premji to its board
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X