ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Q3 ತ್ರೈಮಾಸಿಕ ವರದಿ: ಅಚ್ಚರಿಯ ಕುಸಿತ ಕಂಡ ವಿಪ್ರೋ

By Mahesh
|
Google Oneindia Kannada News

ಬೆಂಗಳೂರು, ಜನವರಿ 19: ಬೆಂಗಳೂರು ಮೂಲದ ದೇಶದ ಪ್ರಮುಖ ಐಟಿ ರಫ್ತು ಸಂಸ್ಥೆ ವಿಪ್ರೋ ಸಂಸ್ಥೆ ತನ್ನ ತೈಮಾಸಿಕ ವರದಿಯಲ್ಲಿ ಅಚ್ಚರಿಯ ಕುಸಿತ ಕಂಡಿದೆ.

ನಿವ್ವಳ ಲಾಭ 1,931 ಕೋಟಿ ರು ನಷ್ಟವಾಗಿದೆ. ಮೂರನೇ ತೈಮಾಸಿಕ ಅವಧಿಗೆ ಮಾರುಕಟ್ಟೆ ವಿಶ್ಲೇಷಕರ ನಿರೀಕ್ಷೆ 2,158 ಕೋಟಿ ರು ನಷ್ಟಿದೆ.

ಡಿಸೆಂಬರ್ ಅಂತ್ಯಕ್ಕೆ ಕೊನೆಗೊಂಡ ತ್ರೈಮಾಸಿಕ ವರದಿಯಂತೆ ಐಟಿ ಸೇವೆಯಿಂದ ಆದಾಯ ಸ್ವಲ್ಪ ಏರಿಕೆ ಕಂಡು 13,235 ಕೋಟಿ ರು (2.08 ಡಾಲರ್ ಬಿಲಿಯನ್) ಗಳಿಸಿದೆ.

Wipro posts surprise fall in Q3 profit on higher costs

ಒಟ್ಟಾರೆ, ಖರ್ಚುವೆಚ್ಚ ಶೇ 2.2ರಷ್ಟು ಏರಿಕೆ ಕಂಡು 118.30 ಬಿಲಿಯನ್ ರುಪಾಯಿಯಷ್ಟಾಗಿದೆ. ಶುಕ್ರವಾರದಂದು ಷೇರುಪೇಟೆಯಲ್ಲಿ ವಿಪ್ರೋ ಷೇರುಗಳು ಬಿಎಸ್ಇಯಲ್ಲಿ 328.45 ರು ನಂತೆ ಶೇ 0.74ರಷ್ಟು ಏರಿಕೆ ಕಂಡಿತ್ತು. ಸೆನ್ಸೆಕ್ಸ್ 0.71% ನಂತೆ 35,511.58 ಅಂಕಗಳೊಂದಿಗೆ ಅಂತ್ಯ ಕಂಡಿತು.

ವಿಪ್ರೋ ಸಂಸ್ಥೆಯ ಪ್ರತಿಸ್ಪರ್ಧಿಗಳಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ತೈಮಾಸಿಕ ವರದಿಯಲ್ಲಿ ಲಾಭ ಇಳಿಕೆಯಾಗಿತ್ತು. ದೇಶದ ನಂ.2 ಸಾಫ್ಟ್ ವೇರ್ ಸಂಸ್ಥೆ ಇನ್ಫೋಸಿಸ್ ತಕ್ಕಮಟ್ಟಿನ ಲಾಭ ಕಂಡಿದೆ.

English summary
IT firm Wipro Ltd posted a surprise fall in third-quarter profit as higher costs weighed.Net profit fell to Rs1,931 crore. That lagged analysts’ average estimates for profit of Rs2,158 crore, Thomson Reuters data showed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X