ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಪ್ಲಾನ್ ಖರೀದಿಗಾಗಿ ವಿಪ್ರೋ, ಐಟಿಸಿ, ಕಾಡಿಲಾ ಪೈಪೋಟಿ

By Mahesh
|
Google Oneindia Kannada News

ಮುಂಬೈ, ಆಗಸ್ಟ್ 13: 'ಐಯಾಮ್ ಎ ಕಾಂಪ್ಲಾನ್ ಬಾಯ್, ಐಯಾಮ್ ಎ ಕಾಂಪ್ಲಾನ್ ಗರ್ಲ್' ಎಂಬ ಜಾಹೀರಾತು ಟಿವಿಯಲ್ಲಿ ಬಹುಜನಪ್ರಿಯ. ಕ್ರಾಫ್ಟ್ ಹೈನ್ಜ್ ಇಂಡಿಯಾ ಒಡೆತನದ ಕಾಂಪ್ಲಾನ್ ಉತ್ಪನ್ನ ಸದ್ಯ ಮಾರಾಟಕ್ಕಿಡಲಾಗಿದೆ ಕಾಂಪ್ಲಾನ್ ಬ್ರಾಂಡ್ ಖರೀದಿಗಾಗಿ ವಿಪ್ರೋ ಕನ್ಸುಮರ್ ಕೇರ್ ಅಂಡ್ ಲೈಂಟಿಂಗ್ ಲಿಮಿಟೆಡ್, ಕಾಡಿಯಾ ಹೆಲ್ತ್ ಕೇರ್ ಲಿಮಿಟೆಡ್ ಹಾಗೂ ಐಟಿಸಿ ಲಿಮಿಟೆಡ್ ಸಂಸ್ಥೆಗಳು ಬಿಡ್ಡಿಂಗ್ ಮಾಡಲು ಮುಂದಾಗಿವೆ.

ಸೆಪ್ಟೆಂಬರ್ 15ರೊಳಗೆ ಮೂವರು ಬಿಡ್ಡರ್ ಗಳು ತಮ್ಮ ಅರ್ಜಿ ಸಲ್ಲಿಸುವ ಸಾಧ್ಯತೆಗಳಿವೆ. ಜೆಪಿ ಮಾರ್ಗನ್ ಹಾಗೂ ಲಾಜಾರ್ಡ್ ಈ ಬಿಡ್ಡಿಂಗ್ ನ ಪ್ರಕ್ರಿಯೆಯನ್ನು ನೋಡಿಕೊಳ್ಳುತ್ತಿದೆ.

ವಿಪ್ರೋಗೆ ಜೂನ್ 30ರ ತ್ರೈ ಮಾಸಿಕದಲ್ಲಿ 2,121 ಕೋಟಿ ನಿವ್ವಳ ಲಾಭವಿಪ್ರೋಗೆ ಜೂನ್ 30ರ ತ್ರೈ ಮಾಸಿಕದಲ್ಲಿ 2,121 ಕೋಟಿ ನಿವ್ವಳ ಲಾಭ

ಸರಿ ಸುಮಾರು 700 ರಿಂದ 800 ಮಿಲಿಯನ್ ಡಾಲರ್ ಮೌಲ್ಯದ ವಹಿವಾಟಿನ ನಿರೀಕ್ಷೆಯಿದೆ. ಕ್ರಾಫ್ ಹೈನ್ಜ್ ಸಂಸ್ಥೆಯ ಎದುರಾಳಿ ಗ್ಲಾಸ್ಗೋ ಸ್ಮಿತ್ ಲೈನ್ ಸಂಸ್ಥೆಯು ಹಾರ್ಲಿಕ್ಸ್ ಖರೀದಿಗೆ ಮುಂದಾದ ಬೆನ್ನಲ್ಲೇ ಕಾಂಪ್ಲಾನ್ ಮಾರಾಟಕ್ಕೆ ವೇದಿಕೆ ಸಿದ್ಧವಾಯಿತು.

Wipro, ITC, Cadila take lead in race to acquire Complan

ಭಾರತದಲ್ಲಿ ಸರಿ ಸುಮಾರು 5,500 ಕೋಟಿ ರು ಮೌಲ್ಯದ ಪೌಷ್ಟಿಕ ಪೇಯ ಮಾರುಕಟ್ಟೆ ಇದೆ. ಇದರಲ್ಲಿ ಕಾಂಪ್ಲಾನ್ ಶೇ 8ರಷ್ಟು ಪಾಲು ಹೊಂದಿದೆ. ಕಾಂಪ್ಲಾನ್ ಹಾಗೂ ಹಾರ್ಲಿಕ್ಸ್ ಅಲ್ಲದೆ ಕ್ಯಾಡ್ ಬರಿಯ ಬೌರ್ನ್ ವಿಟಾ, ಜಿಎಸ್ ಕೆ ಬೂಸ್ಟ್ ಈ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿವೆ.

ಮಾಲ್ಟ್ ಆಧಾರಿತ ಪೇಯಗಳಾದ ಹಾರ್ಲಿಕ್ಸ್ ಹಾಗೂ ಬೌರ್ನ್ವಿಟಾ 2014ರಲ್ಲಿ ಶೇ 13.2ರಷ್ಟಿತ್ತು ಆದರೆ ಶೇ 2017ರಲ್ಲಿ ಶೇ 8.6ರಷ್ಟು ಕುಸಿತ ಕಂಡಿತು. ವಾಂಡರ್ ಎಜಿ ಸಂಸ್ಥೆಯ ಓವಾಲ್ಟೈನ್ ಹಾಗೂ ಕಾಡಿಲಾದ ಆಕ್ಟ್ ಲೈಫ್ ಎನರ್ಜಿ ಡ್ರಿಂಕ್ ವಿಭಾಗದಲ್ಲಿ ಮುಂಚೂಣಿಗೆ ಬಂದಿವೆ.

ಕ್ರಾಫ್ಟ್ ಹೈನ್ಜ್ ಸಂಸ್ಥೆಯಿಂದ ಕಾಂಪ್ಲಾನ್, ಗ್ಲೂಕಾನ್ ಡಿ, ನೈಸಿಲ್, ಹೈನ್ಜ್, ಸಂಪೃಪ್ತಿ ತುಪ್ಪ ಉತ್ಪನ್ನಗಳು ಮಾರುಕಟ್ಟೆಯಲ್ಲಿವೆ. ಕಾಪ್ರಿ ಸನ್, ಕ್ಲಾಸಿಕೋ, ಜೆಲ್ಲೋ-ಓ, ಕೂಲ್ ಏಡ್, ಮ್ಯಾಕ್ಸ್ ವೆಲ್ ಮುಂತಾದ ಜಾಗತಿಕ ಬ್ರಾಂಡ್ ಗಳ ಜತೆ ಪೈಪೋಟಿ ನಡೆಸಿದೆ. ಸುಮಾರು 1 ಬಿಲಿಯನ್ ಡಾಲರ್ ಮೌಲ್ಯದ ವಿಭಾಗವನ್ನು ಖರೀದಿಸಲು ವಿಪ್ರೋ, ಐಟಿಸಿ, ಕಾಡಿಲಾ ಅಲ್ಲದೆ, ಅಬಾಟ್ ಅಂಡ್ ಇಮಾಮಿ ಕೂಡಾ ಆಸಕ್ತಿ ತೋರಿಸಿವೆ.

English summary
ITC Ltd, Wipro Consumer Care & Lighting Ltd and Cadila Healthcare Ltd are readying to submit binding offers to buy Kraft Heinz India’s popular nutritional drink brand, Complan, two people directly aware of the development said. All three bidders are expected to submit binding bids by 15 September.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X