ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಪ್ರೋ ಸಂಸ್ಥೆ ಸಿಬ್ಬಂದಿ ಖಾತೆಗೆ ಕನ್ನ? ಆತಂಕದಲ್ಲಿ ಐಟಿ ಕ್ಷೇತ್ರ

|
Google Oneindia Kannada News

ಬೆಂಗಳೂರು, ಏಪ್ರಿಲ್ 17: ಬೆಂಗಳೂರು ಮೂಲದ ಐಟಿ ಸಂಸ್ಥೆ ವಿಪ್ರೋಗೆ ಸೇರಿರುವ ಪ್ರಮುಖ ಸಿಬ್ಬಂದಿಯೊಬ್ಬರ ಖಾತೆಗೆ ಕನ್ನ ಹಾಕಲಾಗಿದೆ. ಆನ್ ಲೈನ್ ನಲ್ಲಿ ಫಿಶಿಂಗ್ ಅಭಿಯಾನ ಜಾರಿಯಲ್ಲಿದ್ದು, ದೊಡ್ಡ ಕಂಪನಿಗಳನ್ನು ಹ್ಯಾಕರ್ಸ್ ಈಗ ಗುರಿಯನ್ನಾಗಿಸಿಕೊಂಡಿದ್ದಾರೆ ಎಂಬ ಮಾಹಿತಿಯಿದೆ. ಈ ಕುರಿತಂತೆ ತನಿಖೆ ಕೈಗೊಂಡಿರುವುದಾಗಿ ವಿಪ್ರೋ ಹೇಳಿದೆ.

ಸೈಬರ್ ಸುರಕ್ಷತಾ ಬ್ಲಾಗ್ ಕ್ರೆಬ್ಸ್ ಆನ್ ಸೆಕ್ಯುರಿಟಿ ವರದಿಯಂತೆ ವಿಪ್ರೋ ಸಿಸ್ಟಮ್ ನ ಮುಖ್ಯ ಖಾತೆಯೊಂದನ್ನು ಹ್ಯಾಕ್ ಮಾಡಲಾಗಿದ್ದು, ವಿಪ್ರೋ ಸಂಸ್ಥೆಯ ಕ್ಲೈಂಟ್ ಗಳನ್ನು ಗುರುತಿಸಿ ದಾಳಿ ನಡೆಸಲು ಯೋಜಿಸಲಾಗಿದೆ ಎಂಬ ಸುದ್ದಿಯಿದೆ. ಸರಿ ಸುಮಾರು 12ಕ್ಕೂ ಅಧಿಕ ಕ್ಲೈಂಟ್ ಗಳು ಭೀತಿಯಲ್ಲಿದ್ದಾರೆ.

Wipro employee accounts may have been hacked, investigation on

52,500 ಕೋಟಿ ರುಪಾಯಿ ದಾನಕ್ಕೆ ಮುಂದಾದ ಅಜೀಂ ಪ್ರೇಮ್ ಜೀ52,500 ಕೋಟಿ ರುಪಾಯಿ ದಾನಕ್ಕೆ ಮುಂದಾದ ಅಜೀಂ ಪ್ರೇಮ್ ಜೀ

ಕೆಲವು ಉದ್ಯೋಗಿಗಳ ಖಾತೆಗಳಲ್ಲಿ ವ್ಯತ್ಯಾಸ ಕಂಡು ಬಂದಿದ್ದು, ನಮ್ಮ ಜಾಲದಲ್ಲಿನ ಎಲ್ಲಾ ಖಾತೆಗಳನ್ನು ಪರೀಕ್ಷೆಗೊಳಪಡಿಸಲಾಗುತ್ತಿದೆ ಎಂದು ವಿಪ್ರೋ ಸಂಸ್ಥೆ ಹೇಳಿದೆ. ವಿಪ್ರೋ ಸಂಸ್ಥೆಯ 4ನೇ ತ್ರೈಮಾಸಿಕ ವರದಿ ಪ್ರಕಟವಾಗುವುದಕ್ಕೂ ಮುನ್ನ ಈ ರೀತಿ ಸುದ್ದಿ ಬಂದಿರುವುದು ಹಲವು ಅನುಮಾನಕ್ಕೆ ದಾರಿ ಮಾಡಿಕೊಟ್ಟಿದೆ.

English summary
Indian IT services firm Wipro Ltd said on Tuesday some of its employee accounts may have been hacked due to an advanced phishing campaign and that the company had launched an investigation to contain any potential impact.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X