ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರೆಜಿಲ್ ಸಂಸ್ಥೆಯನ್ನು ಖರೀದಿಸಿದ ವಿಪ್ರೋ, ಷೇರುಗಳ ಮೌಲ್ಯ ಏರಿಕೆ!

|
Google Oneindia Kannada News

ಬೆಂಗಳೂರು, ಆ. 17: ಭಾರತದ ಪ್ರಮುಖ ಐಟಿ ರಫ್ತು ಸಂಸ್ಥೆ ವಿಪ್ರೋ ಷೇರುಗಳು ಇಂದು ಶೇ 3.54ರಷ್ಟು ಏರಿಕೆ ಕಂಡಿವೆ. ಬ್ರೆಜಿಲ್ ಸಂಸ್ಥೆಯೊಂದನ್ನು ಖರೀದಿಸಲು ಒಪ್ಪಂದಕ್ಕೆ ಸಹಿ ಹಾಕಿದ ಸುದ್ದಿ ಬೆನ್ನಲ್ಲೇ ಷೇರುಪೇಟೆಯಲ್ಲಿ ವಿಪ್ರೋ ಭರ್ಜರಿ ವಹಿವಾಟು ನಡೆಸಿದೆ.

ಬ್ರೆಜಿಲ್ ಸಂಸ್ಥೆ ಐವಿಐಎ ಸರ್ವಿಯೋಸ್ ಡಿ ಇನ್ಫಾರ್ಮಿಟಿಕಾ ಲಿಮಿಟೆಡ್ ಖರೀದಿಸಿದೆ. ಇದರಿಂದ ಬಿಎಸ್ಇಯಲ್ಲಿ ವಿಪ್ರೋ ಷೇರುಗಳು 286.3 ರು ನಂತೆ ಶೇ 3.54ರಷ್ಟು ಏರಿಕೆ ಕಂಡಿವೆ. ಮಾರುಕಟ್ಟೆ ಮುಕ್ತಾಯದ ಅವಧಿಗೆ 282.35 ರು ನಂತೆ ವಹಿವಾಟು ಅಂತ್ಯಗೊಳಿಸಿದೆ. ಎನ್ ಎಸ್ ಇಯಲ್ಲಿ ಇದೇ ಸಮಯಕ್ಕೆ 281. 95 ರು ನಂತೆ ವಹಿವಾಟು ನಡೆಸಿದೆ.

ವಿಪ್ರೋ ಉದ್ಯೋಗಿಗಳ ಕೆಲಸಕ್ಕೆ ಕತ್ತರಿಯಿಲ್ಲ: ಸ್ಪಷ್ಟನೆವಿಪ್ರೋ ಉದ್ಯೋಗಿಗಳ ಕೆಲಸಕ್ಕೆ ಕತ್ತರಿಯಿಲ್ಲ: ಸ್ಪಷ್ಟನೆ

ಜುಲೈ ತಿಂಗಳಿನಲ್ಲಿ ಬ್ರೆಜಿಲ್ ಸಂಸ್ಥೆ ಐವಿಐಎಯನ್ನು 22.4 ಮಿಲಿಯನ್ ಡಾಲರ್ (ಸುಮಾರು 169 ಕೋಟಿ ರು) ನೀಡಿ ಖರೀದಿಸುತ್ತಿರುವುದಾಗಿ ವಿಪ್ರೋ ಘೋಷಿಸಿತ್ತು. ಇಂದು ಈ ಕುರಿತಂತೆ ಪ್ರಕ್ರಿಯೆ ಅಂತಿಮಗೊಂಡಿದೆ.

Wipro Completes Acquisition Of Brazilian IT Firm, Share price rises 3.54 percent

ಹಾಗೆ ನೋಡಿದರೆ ಕಳೆದ ಐದು ದಿನಗಳಿಂದ ವಿಪ್ರೋ ಸಂಸ್ಥೆ ಷೇರುಗಳು ಏರುಮುಖದಲ್ಲೇ ಸಾಗಿವೆ. ವರ್ಷಾರಂಭದಲ್ಲಿ ಶೇ 14.56ರಷ್ಟು ಏರಿಕೆ ಕಂಡ ವಿಪ್ರೋ ಷೇರುಗಳು ಇಳಿಮುಖವಾಗಿಲ್ಲ. ಒಟ್ಟಾರೆ 4.32 ಲಕ್ಷ ಷೇರುಗಳು ಕೈ ಕೈ ಬದಲಾಯಿಸಿಕೊಂಡು ವಿಪ್ರೋ ಸಂಸ್ಥೆ ಮಾರುಕಟ್ಟೆ ಮೌಲ್ಯ 1.61 ಲಕ್ಷ ಕೋಟಿ ರುಗೇರುವಂತೆ ಮಾಡಿವೆ.

ಐವಿಐಎ ಮಾನವ ಸಂಪನ್ಮೂಲ ಬಳಸಿಕೊಂಡು ಬ್ರೆಜಿಲ್ ನಲ್ಲಿ ತನ್ನ ಅಸ್ತಿತ್ವ ಹೊಂದಲು ವಿಪ್ರೋಗೆ ಈ ಒಪ್ಪಂದ ಸಹಕಾರಿಯಾಗಲಿದೆ. ಏಪ್ರಿಲ್ -ಜೂನ್ ತ್ರೈಮಾಸಿಕದಲ್ಲಿ ವಿಪ್ರೋ ಆದಾಯ 15, 571. 4 ಕೋಟಿ ರು ನಷ್ಟಿತ್ತು. ಕಳೆದ ವರ್ಷ ಅದೇ ತ್ರೈಮಾಸಿಕ ಅವಧಿಯಲ್ಲಿ 15, 566.6 ಕೋಟಿ ರು ಗಳಿಸಿತ್ತು.

English summary
Wipro announced it has completed the acquisition of Brazilian IT firm IVA Servicios de informatica Ltd. Company Share price of Wipro rose 3.54% to Rs 286.3 on BSE.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X