ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದ ದಾನಿಗಳ ಪೈಕಿ ಪ್ರೇಮ್ ಜೀ ನಂ.1

By Mahesh
|
Google Oneindia Kannada News

ಬೆಂಗಳೂರು, ಜ. 10: ದೇಶದ ಅಭಿವೃದ್ಧಿ ಅದರಲ್ಲೂ ಶಿಕ್ಷಣ ಕ್ಷೇತ್ರಕ್ಕೆ ವಿಪ್ರೋ ಚೇರ್ಮನ್ ಅಜೀಂ ಪ್ರೇಮ್ ಜೀ ಅವರು ನೀಡುತ್ತಿರುವ ಕೊಡುಗೆ ಮತ್ತೊಮ್ಮೆ ಗುರುತಿಸಲ್ಪಟ್ಟಿದೆ. ಸತತವಾಗಿ ಮೂರನೇ ಬಾರಿಗೆ ದೇಶದ ದಾನಿಗಳ ಪೈಕಿ ನಂ.1 ಎನಿಸಿಕೊಂಡಿದ್ದಾರೆ. ಸರಿ ಸುಮಾರು 27,514 ಕೋಟಿ ರು ದಾನ ಮಾಡಿದ್ದಾರೆ ಎಂದು ಹರೂನ್ ಇಂಡಿಯಾ ದಾನಿಗಳ 2015ರ ಪಟ್ಟಿಯಲ್ಲಿ ಹೇಳಲಾಗಿದೆ.

2015ರ ಆರ್ಥಿಕ ವರ್ಷದ ಮಧ್ಯಭಾಗದಲ್ಲಿ ತಮ್ಮ ಬಳಿ ಇದ್ದ ಹೆಚ್ಚುವರಿ ಶೇ18ರಷ್ಟು ಷೇರುಗಳನ್ನು ನೀಡುವುದರ ಮೂಲಕ ಒಟ್ಟಾರೆ ಶೇ 39ರಷ್ಟು ಷೇರುಗಳು (53,284 ಕೋಟಿ ರು ಮೌಲ್ಯ) ಟ್ರಸ್ಟಿನ ಸಾಮಾಜಿಕ, ಶೈಕ್ಷಣಿಕ ಕಾರ್ಯಗಳಿಗೆ ಪ್ರೇಂಜಿ ಅವರು ದಾನ ಮಾಡಿದ್ದರು. ದೇಶದ ಎಂಟು ರಾಜ್ಯಗಳಲ್ಲಿ 3.50 ಲಕ್ಷ ಶಾಲೆಗಳನ್ನು ನಡೆಸುತ್ತಿದ್ದಾರೆ.[ವಿಪ್ರೋ ಅಜೀಂ ಪ್ರೇಮ್‌ಜಿ ದಾನಕ್ಕೆ ಸರಿಸಾಟಿಯಿಲ್ಲ]

Wipro chairman Azim Premji is most generous Indian of the Year Hurun

ಹರೂನ್ ಇಂಡಿಯಾ ಅತ್ಯಂತ ಉದಾರ ವ್ಯಕ್ತಿಗಳ ಪಟ್ಟಿಯಲ್ಲಿ ಸತತ ಎರಡು ವರ್ಷ ಪ್ರೇಂಜಿ ಅಗ್ರಸ್ಥಾನ ಪಡೆದುಕೊಂಡಿದ್ದರು. 70ರ ಹರೆಯದ ಪ್ರೇಮ್‌ಜಿ ಧರ್ಮಾರ್ಥ ಕಾರ್ಯಗಳಿಗಾಗಿ ತಮ್ಮ ಸಂಪತ್ತಿನ ಹೆಚ್ಚಿನ ಭಾಗವನ್ನು ಕೊಡುಗೆಯಾಗಿ ನೀಡುವಂತೆ ವಿಶ್ವದ ಶ್ರೀಮಂತರನ್ನು ಆಹ್ವಾನಿಸುವ, ಬಿಲಿಯಾಧಿಪತಿಗಳಾದ ವಾರೆನ್ ಬಫೆಟ್ ಮತ್ತು ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಅವರು ಪ್ರಾಯೋಜಿಸಿದ್ದ 'ಗಿವಿಂಗ್ ಪ್ಲೆಜ್'ಗೆ ಮೊದಲು ಸಹಿ ಮಾಡಿದ ಭಾರತೀಯರ ಎಂಬುದನ್ನು ಮರೆಯುವಂತಿಲ್ಲ.

ಉಳಿದಂತೆ ಇನ್ಫೋಸಿಸ್ ಸಹ ಸಂಸ್ಥಾಪಕರಾದ ನಂದನ್ ನಿಲೇಕಣಿ ಅವರ ಪತ್ನಿ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಕಳೆದ ವರ್ಷ ನಿಲೇಕಣಿ ದಂಪತಿ 2,404 ಕೋಟಿ ರೂಪಾಯಿ ದಾನ ಮಾಡಿದ್ದಾರೆ. ಇನ್ಫೋಸಿಸ್ ನ ಮತ್ತೊಬ್ಬ ಸಂಸ್ಥಾಪಕ ಎನ್.ಆರ್ ನಾರಾಯಣ ಮೂರ್ತಿ 1,322 ಕೋಟಿ ದಾನ ಮಾಡಿ ಮೂರನೇ ಸ್ಥಾನದಲ್ಲಿದ್ದಾರೆ.

ಇನ್ಫೋಸಿಸ್ ನಿಂದ 2011 ರಲ್ಲಿ ನಿವೃತ್ತರಾದ ಕೆ.ದಿನೇಶ್ ರು. 1,238 ಕೋಟಿ ಕೊಡುಗೆ ನೀಡುವ ಮೂಲಕ ನಾಲ್ಕನೆ ಸ್ಥಾನದಲ್ಲಿದ್ದರೆ, ಎಚ್ ಸಿಎಲ್ ಕಂಪನಿಯ ಶಿವನಾಡರ್ 525 ಕೋಟಿ ಮತ್ತು ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿರುವ ಮುಖೇಶ್ ಅಂಬಾನಿ 345 ಕೋಟಿ ರೂಪಾಯಿ ದಾನ ನೀಡುವ ಮೂಲಕ ಕ್ರಮವಾಗಿ ಐದು ಮತ್ತು ಆರನೇ ಸ್ಥಾನದಲ್ಲಿದ್ದಾರೆ.
ಒಟ್ಟಾರೆ ಈ ವರ್ಷ ಕೇವಲ 36 ವ್ಯಕ್ತಿಗಳು ದಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಕಳೆದ ವರ್ಷ 50 ಜನ ಉದ್ಯಮಿಗಳು ದಾನಿಗಳಾ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. (ಒನ್ ಇಂಡಿಯಾ ಸುದ್ದಿ)

English summary
Wipro chairman Azim Premji(70) is most generous Indian of the Year for the third time in a row, he has donated more than Rs 27,514 Cr says Hurun India Philanthropy List 2015. List also features Rohini Nilekani, Infosys co founder NR Narayana Murthy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X