ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಪ್ರೋ ಕಂಪನಿ ಸಿಇಒ ಸಂಬಳ 79.80 ಕೋಟಿ ರುಪಾಯಿ

|
Google Oneindia Kannada News

ನವದೆಹಲಿ, ಜೂನ್ 10; ದೇಶದ ಅತ್ಯುತ್ತಮ ಐಟಿ ಕಂಪನಿಗಳಲ್ಲಿ ವೇತನ ಪ್ರಮಾಣ ಚೆನ್ನಾಗಿಯೇ ಇರುತ್ತದೆ. ವಿಶ್ವದ ಅಗ್ರ ಕಂಪನಿಗಳು ಅರ್ಹ ಅಭ್ಯರ್ಥಿಗಳಿಗೆ ಲಕ್ಷ ಲಕ್ಷ ಸಂಬಳ ಕೊಟ್ಟು ನೇಮಿಸಿಕೊಳ್ಳುವ ಸುದ್ದಿಗಳು ವರದಿಯಾಗುತ್ತಲೇ ಇರುತ್ತವೆ.

ಆದರೆ ನಮ್ಮ ದೇಶದ ವಿಪ್ರೋ ಕಂಪನಿ ಸಿಇಒಗೆ ಕೋಟಿ ಕೋಟಿ ಸಂಬಳ ಕೊಡುತ್ತಿದೆ. ಆದ್ದರಿಂದಲೇ ಭಾರತದ ಇತರೆ ಐಟಿ ಕಂಪನಿಗಳ ಸಿಇಒಗಳಿಗಿಂತ ಹೆಚ್ಚಿನ ವೇತನ ಪಡೆಯುವ ಸಿಇಒ ಇವರಾಗಿದ್ದಾರೆ.

ಬೋರ್ ಅಂತ 3.5 ಕೋಟಿ ಸಂಬಳ ಬರೋ ಕೆಲಸ ಬಿಟ್ಟ ‍ಇಂಜಿನಿಯರ್ಬೋರ್ ಅಂತ 3.5 ಕೋಟಿ ಸಂಬಳ ಬರೋ ಕೆಲಸ ಬಿಟ್ಟ ‍ಇಂಜಿನಿಯರ್

ಬೆಂಗಳೂರು ಮೂಲದ ಕಂಪನಿ ವಿಪ್ರೋ ಸಿಇಒ ಥಿಯೆರಿ ಡೆಲಾಪೋರ್ಟ್ 79.80 ಕೋಟಿ ರುಪಾಯಿ ವಾರ್ಷಿಕ ವೇತನ ಪಡೆಯುವ ಮೂಲಕ ಭಾರತದ ಐಟಿ ವಿಭಾಗದಲ್ಲಿ ಅತಿ ಹೆಚ್ಚು ಸಂಬಳ ಪಡೆಯುವ ಸಿಇಒ ಎನಿಸಿಕೊಂಡಿದ್ದಾರೆ.

ಯುಎಸ್ ಬಂಡವಾಳ ಮಾರುಕಟ್ಟೆಗಳ ನಿಯಂತ್ರಕ ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಕಮಿಷನ್ (SEC) ಗೆ ಕಂಪನಿ ವಾರ್ಷಿಕ ವರದಿ ಸಲ್ಲಿಸಿದೆ. ಈ ವರದಿ ಪ್ರಕಾರ 2022ರ ಮಾರ್ಚ್ 31ಕ್ಕೆ ಕೊನೆಗೊಂಡ ಹಣಕಾಸು ವರ್ಷಕ್ಕೆ ಥಿಯೆರಿ ಡೆಲಾಪೋರ್ಟ್ ವೇತನ 10.51 ಮಿಲಿಯನ್ ಡಾಲರ್ (79.80 ಕೋಟಿ) ಎಂದು ಹೇಳಿದೆ.

ಶೀಘ್ರವೇ ಹೆಚ್ಚಾಗಲಿದೆ ಸರ್ಕಾರಿ ನೌಕಕರ ಸಂಬಳ!ಶೀಘ್ರವೇ ಹೆಚ್ಚಾಗಲಿದೆ ಸರ್ಕಾರಿ ನೌಕಕರ ಸಂಬಳ!

ಈ ಮೂಲಕ ಪ್ರತಿಸ್ಪರ್ಧಿ ಕಂಪನಿಗಳಾದ ಇನ್ಫೋಸಿಸ್, ಟಿಸಿಎಸ್‌ ಸಿಇಒಗಳಿಗಿಂತ ಅತಿ ಹೆಚ್ಚು ಸಂಭಾವನೆ ಪಡೆಯುವ ಸಿಇಒ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಭಾರತದ ಐಟಿ ವಲಯದಲ್ಲಿ ಅತಿ ಹೆಚ್ಚಿನ ಸಂಬಳ

ಭಾರತದ ಐಟಿ ವಲಯದಲ್ಲಿ ಅತಿ ಹೆಚ್ಚಿನ ಸಂಬಳ

1.74 ಮಿಲಿಯನ್ ಡಾಲರ್ (13.2 ಕೋಟಿ ರು.) ಸಂಬಳ ಮತ್ತು ಭತ್ಯೆ, 2.55 ಮಿಲಿಯನ್ ಡಾಲರ್ (19.3 ಕೋಟಿ ರು.) ಕಮಿಷನ್ ಮತ್ತು ವೇರಿಯಬಲ್ ಪೇ, ಇತರೆ ಪ್ರಯೋಜನಗಳು 4.2 ಮಿಲಿಯನ್ ಡಾಲರ್ (31.8 ಕೋಟಿ ರು) ಒಳಗೊಂಡಿದೆ.

ವೇತನವು ಜುಲೈ 2020 ರಲ್ಲಿ ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಕಂಪನಿಯ ಷೇರುದಾರರು ಅನುಮೋದಿಸಿದ ನಗದು ಪ್ರಶಸ್ತಿಯನ್ನು ಒಳಗೊಂಡಿದೆ.

ವಿಪ್ರೋ ಕಂಪನಿಯಲ್ಲಿ ಸಿಇಒ ಆಗಿ ನೇಮಕವಾಗುವುದಕ್ಕೆ ಮೊದಲು, ಡೆಲಾಪೋರ್ಟ್ ಕ್ಯಾಪ್ಜೆಮಿನಿಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಗ್ರೂಪ್ ಎಕ್ಸಿಕ್ಯೂಟಿವ್ ಬೋರ್ಡ್‌ನ ಸದಸ್ಯ ಸೇರಿದಂತೆ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದರು.

ಕಳೆದ ವರ್ಷ ಕೂಡ ಅತಿಹೆಚ್ಚು ವೇತನ

ಕಳೆದ ವರ್ಷ ಕೂಡ ಅತಿಹೆಚ್ಚು ವೇತನ

ಜುಲೈ 2020 ರಲ್ಲಿ ಡೆಲಾಪೋರ್ಟ್ ವಿಪ್ರೋ ಕಂಪನಿಗೆ ಸೇರಿದ್ದರು. 2020-21ರಲ್ಲಿ 9 ತಿಂಗಳ ಅವಧಿಗೆ ಡೆಲಾಡ್‌ಪೋರ್ಟೆ ತಮ್ಮ ಸೇವೆಗಾಗಿ 8.7 ಮಿಲಿಯನ್ ಡಾಲರ್ (64.3 ಕೋಟಿ ರು) ವೇತನ ಪಡೆದಿದ್ದರು.

ಬಂಪರ್ ವೇತನ ಪ್ಯಾಕೇಜ್‌ನೊಂದಿಗೆ, ವಿಪ್ರೋದ ಸಿಇಒ ಭಾರತದ ಐಟಿ ವಲಯದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಕಾರ್ಯನಿರ್ವಾಹಕ ಎನಿಸಿಕೊಂಡಿದ್ದಾರೆ.

ಎರಡನೇ ಸ್ಥಾನದಲ್ಲಿ ಇನ್ಫೋಸಿಸ್

ಎರಡನೇ ಸ್ಥಾನದಲ್ಲಿ ಇನ್ಫೋಸಿಸ್

ಇನ್ನು ಭಾರತದ ಇತರೆ ಐಟಿ ಕಂಪನಿಗಳ ಮುಖ್ಯಕಾರ್ಯನಿರ್ವಾಹಕ (ಸಿಇಒ) ಕೂಡ ಉತ್ತಮ ವೇತನ ಪಡೆಯುತ್ತಾರೆ. ಇನ್ಫೋಸಿಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಲೀಲ್ ಪರೇಖ್ ವೇತನ 2021-22 ರ ಹಣಕಾಸು ವರ್ಷದಲ್ಲಿ ಶೇಕಡಾ 43% ಹೆಚ್ಚಾಗಿದ್ದು, 71 ಕೋಟಿ ರುಪಾಯಿ ಪಡೆದಿದ್ದಾರೆ.

ಟಿಸಿಎಸ್ ಸಿಇಒ ಸಂಬಳ ಹೆಚ್ಚಳ

ಟಿಸಿಎಸ್ ಸಿಇಒ ಸಂಬಳ ಹೆಚ್ಚಳ

ಟಾಟಾ ಕನ್ಸಲ್ಟೆನ್ಸಿ ಸರ್ವಿಸ್ (ಟಿಸಿಎಸ್) ಸಿಇಒ ರಾಜೇಶ್ ಗೋಪಿನಾಥನ್ 2021-22ನೇ ಹಣಕಾಸು ವರ್ಷದಲ್ಲಿ25.77 ಕೋಟಿ ರುಪಾಯಿ ವೇತನ ಪಡೆದಿದ್ದಾರೆ. ಮೇ ತಿಂಗಳಲ್ಲಿ ಬಿಡುಗಡೆಯಾದ ಕಂಪನಿಯ ವಾರ್ಷಿಕ ವರದಿಯ ಪ್ರಕಾರ ಗೋಪಿನಾಥನ್ ವೇತನ ಶೇಕಡಾ 27ರಷ್ಟು ಹೆಚ್ಚಾಗಿದೆ.

ವಿಪ್ರೋ ಅಧ್ಯಕ್ಷ ಪ್ರೇಮ್‌ಜಿ ವೇತನ ಕಳೆದ ವರ್ಷದಲ್ಲಿ 1.62 ಮಿಯನ್ ಡಾಲರ್ (11.8 ಕೋಟಿ ರು.) ಇದ್ದು, 2021-22ರ ಹಣಕಾಸು ವರ್ಷದಲ್ಲಿ 1.8 ಮಿಲಿಯನ್‌ ಡಾಲರ್ (13.8 ಕೋಟಿ ರು.)ಗೆ ಏರಿಕೆಯಾಗಿದೆ.

English summary
Wipro CEO Thierry Delaporte Get Highest annual salary compensation was Rs 79.80 crore. Know Other CEO Salary Details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X